Homeಕರ್ನಾಟಕಮಹಿಳಾ ದಿನಾಚರಣೆಯಂದು ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು: ಮಹೇಶ ಜೋಶಿಯಿಂದ ಸರ್ವಾಧಿಕಾರತ್ವ ಪ್ರದರ್ಶನ

ಮಹಿಳಾ ದಿನಾಚರಣೆಯಂದು ನಿರ್ಮಲಾ ಎಲಿಗಾರ್ ಕಸಾಪ ಸದಸ್ಯತ್ವ ರದ್ದು: ಮಹೇಶ ಜೋಶಿಯಿಂದ ಸರ್ವಾಧಿಕಾರತ್ವ ಪ್ರದರ್ಶನ

- Advertisement -
- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ ಅವರು ವಿಶ್ವ ಮಹಿಳಾ ದಿನಾಚರಣೆಯ ದಿನದಂದು ದೂರದರ್ಶನದ ಸಹಾಯಕ ನಿರ್ದೇಶಕಿ ನಿರ್ಮಲಾ ಎಲಿಗಾರ್ ಅವರನ್ನು ಕಸಾಪ ಸದಸ್ಯತ್ವದಿಂದ ಅಮಾನತು ಮಾಡುವ ಮೂಲಕ ಸರ್ವಾಧಿಕಾರತ್ವ ಪ್ರದರ್ಶಿಸಿದ್ದಾರೆ.

ರಾಜ್ಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಕೋಲಾರದ ಸಂಸದ ಎಸ್‌.ಮುನಿಸ್ವಾಮಿ ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸುವ ಮೂಲಕ ತನ್ನ ಅಜ್ಞಾನ ಮತ್ತು ಸ್ತ್ರೀ ದ್ವೇಷದ ನಡೆಯನ್ನು ತೋರಿದ್ದಾರೆ. ಮತ್ತೊಂದೆಡೆ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ ಜೋಶಿ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಲೇಖಕಿಯರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದನ್ನು ಪ್ರಶ್ನಿಸಿದ್ದಕ್ಕೆ ನಿರ್ಮಲಾ ಎಲಿಗಾರ್ ಅವರ ಸದಸ್ಯತ್ವವನ್ನು ಮಹಿಳಾ ದಿನಾಚರಣೆಯಂದು ರದ್ದುಗೊಳಿಸುವ ಮೂಲಕ ಪ್ರಶ್ನಿಸುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಹಾವೇರಿಯಲ್ಲಿ ನಡೆದ 8ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಮಲಾ ಸಿ. ಎಲಿಗಾರ್ ಅವರು, ವಸತಿ ಸೌಲಭ್ಯಕ್ಕೆ ಸಂಬಂಧಿಸಿದಂತೆ ಪರಿಷತ್ತಿನ ಅಧ್ಯಕ್ಷರೊಂದಿಗೆ ಬಹಿರಂಗವಾಗಿಯೇ ಮಾತಿನ ಚಕಮಕಿ ನಡೆಸಿದ್ದರು. ಅಷ್ಟೇ ಅಲ್ಲದೇ ದೂರದರ್ಶನದಲ್ಲಿ ಕಸಾಪ ವಿರುದ್ಧ ಒಂದು ನಿಮಿಷದ ಮೌನಾಚರಣೆ ಮಾಡಿದ್ದರು. ಇದು ಮಹೇಶ್ ಜೋಶಿಯವರ ಕಣ್ಣು ಕೆಂಪಾಗಲು ಕಾರಣವಾಗಿದೆ.

ಜೋಶಿ ನೇತೃತ್ವದ ಕಸಾಪ ಕಾರ್ಯಕಾರಿ ಸಮಿತಿಯು, ‘ಪರಿಷತ್ತಿನ ಘನತೆ ಗೌರವ ಮತ್ತು ಧ್ಯೇಯೋದೇಶಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಿದ್ದಾರೆ’ ಎಂದು ಪರಿಷತ್ತಿನ ನಿಯಮ 8) 7) ಅಡಿಯಲ್ಲಿನ ಅಧಿಕಾರ ಬಳಸಿ ನಿರ್ಮಲಾ ಸಿ. ಎಲಿಗಾರ್ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸಿದೆ. ಇದೇ ವೇಳೆ 2022ನೇ ಸಾಲಿನಲ್ಲಿ ನಿರ್ಮಲಾ ಎಲಿಗಾ‌ರ್‌ ಅವರಿಗೆ ನೀಡಲಾಗಿದ್ದ ‘ಪಂಕಜಶ್ರೀ ಸಾಹಿತ್ಯ ಪ್ರಶಸ್ತಿ’ಯನ್ನೂ ಹಿಂಪಡೆದಿದ್ದಾರೆ.

ಏಕಾಏಕಿ ಸದ್ಯಸತ್ವದ ಅಮಾನತು ಮತ್ತು ಪ್ರಶಸ್ತಿ ಹಿಂಪಡೆಯುವಿಕೆಯು ಕಸಾಪ ಇತಿಹಾಸದಲ್ಲಿ ಎಂದೂ ನಡೆದಿರಲಿಲ್ಲ. ಕಳೆದ ಒಂದು ವರ್ಷದಿಂದ ಹಲವು ನಡೆಗಳಲ್ಲಿ ವಿವಾದಕ್ಕೀಡಾಗಿರುವ ಕಸಾಪ, ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಕಸಾಪ ನೂತನ ಅಧ್ಯಕ್ಷರಾದ ಮಹೇಶ್‌ ಜೋಶಿ ಬಿಜೆಪಿ ಬೆಂಬಲಿತರು ಎಂಬುದಕ್ಕೆ ಇಲ್ಲಿದೆ ಪುರಾವೆ!

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರ ಸರ್ವಧಿಕಾರದ ಈ ನಡೆಯನ್ನು ಪ್ರಶ್ನಿಸಿ ಕವಿ, ಹೋರಾಟಗಾರ ಬಸವರಾಜ ಸೂಳಿಬಾವಿ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

”ಸರ್ವಾಧಿಕಾರಿಯೇ ಕಸಾಪಕ್ಕೆ ಅಧ್ಯಕ್ಷ.. ವಿಶ್ವ ಮಹಿಳಾ ದಿನಾಚರಣೆಯ ದಿನವೇ ರಾಜ್ಯದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ ಜೋಶಿ ಅವರು, ನಿರ್ಮಲಾ ಎಲಿಗಾರ ಅವರ ಸದಸ್ಯತ್ವ ರದ್ದುಗೊಳಿಸಿ ಅವರು ಪುರಸ್ಕೃತರಾದ ಪ್ರಶಸ್ತಿಯೊಂದನ್ನು ಹಿಂಪಡೆವ ಆದೇಶ ಹೊರಡಿಸಿ ತಮ್ಮ ಸರ್ವಾಧಿಕಾರವನ್ನು ಡಾಳಾಗಿ ಪ್ರದರ್ಶನ ಮಾಡಿದ್ದಾರೆ. ಪ್ರಾಯಶಃ ಇಷ್ಟು ದಿನದವರೆಗೆ ಎಂಥೆಂಥವರನ್ನೋ ಅಧ್ಯಕ್ಷರಾಗಿ ಕಂಡ ಕಸಾಪ ಇಂಥ ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿಯನ್ನು ಕಂಡಿರಲಿಲ್ಲ. ಇದರಿಂದ ಸಮಸ್ತ ಸಾಹಿತ್ಯ ವಲಯವನ್ನು ಅವಮಾನಿಸುವ ಕೆಲಸ ನಡೆಯುತ್ತಿವೆ. ನಾವಿದನ್ನು ತೀವ್ರವಾಗಿ ವಿರೋಧಿಸದಿದ್ದರೆ ಕಸಾಪ ಶಾಶ್ವತವಾಗಿ ಮುಳುಗಿಯೇ ಹೋಗುತ್ತದೆ.”

”ದೂರದರ್ಶನದ ನಿರ್ದೇಶಕರಾದ ಒಂದಷ್ಟು ಬರವಣಿಗೆ ಮಾಡಿರುವ ನಿರ್ಮಲಾ ಎಲಿಗಾರ ಅವರು ಹಾವೇರಿ ಸಮ್ಮೇಳನದಲ್ಲಿ ಆಹ್ವಾನಿತರಾಗಿದ್ದರು. ಉತ್ತರ ಕರ್ನಾಟಕದ ಈ ಜವಾರಿ ಹೆಣ್ಣುಮಗಳು ತಮಗೆ ಸರಿಯಾದ ವಸತಿ ವ್ಯವಸ್ಥೆ ಮಾಡದಿರುವುದು ಮಹಿಳೆಯೊಬ್ಬಳಿಗಾದ ಅವಮಾನ ಎಂದೇ ಪ್ರತಿಭಟಿಸಿದ್ದರು. ತಮಗಾದ ಈ ಅನ್ಯಾಯವನ್ನು ಮುಕ್ತವಾಗಿಯೇ ಸಮ್ಮೇಳನದ ಸಂದರ್ಭದಲ್ಲಿ ಹೊರಹಾಕಿದ್ದರು. ಅವರ ಈ ಪ್ರತಿಭಟನೆ ಪ್ರಜಾಸತ್ತಾತ್ಮಕವಾಗಿಯೇ ಇತ್ತು. ಅದನ್ನೇ ನೆಪ ಮಾಡಿಕೊಂಡು, ಅವರ ಆಜೀವ ಸದಸ್ಯತ್ವವನ್ನು ಅಧ್ಯಕ್ಷ ಮಹೇಶ ಜೋಶಿ ರದ್ದು ಮಾಡಿದ್ದಾರಲ್ಲದೆ ಅವರಿಗೆ ದೊರತ ಪ್ರಶಸ್ತಿಯೊಂದನ್ನು ಹಿಂಪಡೆದಿದ್ದಾರೆ. ಆ ಮೂಲಕ ಕಸಾಪದ ಸಂವಿಧಾನವನ್ನೇ ಅವಮಾನಿಸಿ ಪ್ರಜಾಪ್ರಭುತ್ವದ ವಿರೋಧಿತನ ತೋರಿಸಿದ್ದಾರೆ. ಇದು ಖಂಡನೀಯ. ಅಮಾನತ್ತು ಆದೇಶವನ್ನು ಹಿಂಪಡೆದು ಕ್ಷಮೆ ಯಾಚಿಸುವಂಥ ವಾತಾವರಣವನ್ನು ನಾಡಿನ ಸಾಹಿತಿಗಳು ವಿಚಾರವಂತರು ಮಾಡಬೇಕಿದೆ” ಎಂದು ಹೇಳಿದ್ದಾರೆ.

”ಇದೇ ರವಿವಾರ 12 ರಂದು ಬೆಂಗಳೂರಿನಲ್ಲಿ ಕಸಾಪದ ವಿವಿಧ ದತ್ತಿ ಪ್ರಶಸ್ತಿಗಳ ಪ್ರದಾನ ಸಮಾರಂಭ ಇದೆ. ಅನೇಕ ಜನ ವಿವೇಕವುಳ್ಳ ಮಹಿಳಾ ಸಾಹಿತಿಗಳು ಪುರುಷರು ಪ್ರಶಸ್ತಿ ಸ್ವೀಕರಿಸಲು ಹೋಗಲಿದ್ದಾರೆ. ಅವರಲ್ಲಿ ಜಾಗೃತ ಮನಸಿನ ಕೆಲವರಾದರೂ ಈ ಸರ್ವಾಧಿಕಾರವನ್ನು ಪ್ರತಿಭಟಿಸಬಹುದೆ?” ಎಂದು ಕೇಳಿದ್ದಾರೆ.

”ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಾರಂಭದಲ್ಲಿ ನಾವು ಇಷ್ಟು ವರ್ಷ ಬಂಡಾಯದ ಸಾಕ್ಷಿ ಪ್ರಜ್ಞೆ ಎಂದು ಹೇಳಿಕೊಂಡು ಬರಲಾದ ಕಾಳೇಗೌಡ ನಾಗವಾರ ಅವರ ಹೆಸರು ಪ್ರಶಸ್ತಿ ಪ್ರದಾನ ಮಾಡುವಲ್ಲಿ ಇದೆ. ಸಂವೇದನಾಶೀಲ ಕಾಳೇಗೌಡ ನಾಗವಾರ ಅವರು ಯಾವ ನಿರ್ಧಾರ ತಗೋಬಹುದು? ಎನ್ನುವ ಬಗ್ಗೆ ನನಗೆ ಕುತೂಹಲ ಇದೆ. ಬಹುಶಃ ಅವರ ಬದುಕಿನಲ್ಲಿ ಇಂಥ ಸರ್ವಾಧಿಕಾರಿಯನ್ನು ಸಹಿಸಿದ ಚರಿತ್ರೆ ಇಲ್ಲ. ಈಗ ನೋಡಬೇಕು, ಸರ್ವಾಧಿಕಾರಿ ತೊಲಗಲು ಕೂಗು ಹಾಕಿಯಾರೆ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮಹೇಶ ಜೋಶಿ ಅವರ ಈ ನಡಾವಳಿ ಹಾಗೂ ಪ್ರಜಾಪ್ರಭುತ್ವ ವಿರೋಧಿತನವನ್ನು ವಿರೋಧಿಸಿ ಬಂಡಾಯದ ಮನಸುಗಳು ಜನ ಸಾಹಿತ್ಯ ಸಮಾವೇಶವನ್ನು ಇತ್ತೀಚಿಗಷ್ಟೇ ಮಾಡಿದ ನೆನಪು ಇನ್ನು ಹಸಿರಾಗಿರುವಾಗಲೇ ಇಂತಹ ಸರ್ವಾಧಿಕಾರಿ ನಡೆ ಜೋಶಿ ತೋರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕರ್ನಾಟಕ ಸರ್ಕಾರ ಸಾಮಾಜಿಕ ನ್ಯಾಯ ನಿರಾಕರಿಸುತ್ತಿದೆ’: ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆಗೆ ಹೋರಾಟಗಾರರ ಖಂಡನೆ

ಕಳೆದ 35 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಯಾಗುವ ಭರವಸೆಯನ್ನು ಒಳಮೀಸಲಾತಿ ಹೋರಾಟಗಾರರು ಹೊಂದಿದ್ದರು.  ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರ ಎರಡು ವರ್ಷಗಳಿಂದ ನಿರಂತರವಾಗಿ...

ನೇಪಾಳದ ನೂತನ ಪ್ರಧಾನಿಯಾಗಿ 35ವರ್ಷದ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ

ಕಠ್ಮಂಡು: 'ಬಾಲೆನ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು, ಹಿಮಾಲಯನ್ ರಾಷ್ಟ್ರದಲ್ಲಿ ಉನ್ನತ ಕಾರ್ಯಕಾರಿ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ನಾಯಕರಾಗಿ ಬಾಲೆನ್...

ಶಿವನ ಅವತಾರ ಎಂದು ಹೇಳಿಕೊಳ್ಳುತ್ತಿದ್ದ ಋುಷಿಕೇಶ್ ವೈದ್ಯ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಎಫ್‌ಐಆರ್ ನಂತರ ದೇವಮಾನವ ಪರಾರಿ

ವಸಾಯಿ: ಶಿವನ ಅವತಾರ ಎಂದು ಹೇಳಿಕೊಂಡು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಋಷಿಕೇಶ್ ವೈದ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಘಟನೆ ವಸಾಯಿ-ವಿರಾರ್ ಪ್ರದೇಶ...

ಜ್ಯೋತಿಷಿ ಅಶೋಕ್ ಖರತ್ ಲೈಂಗಿಕ ದೌರ್ಜನ್ಯ; ಸಂತ್ರಸ್ತರ ವಿಡಿಯೋ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್: ದೇವೇಂದ್ರ ಫಡ್ನವೀಸ್

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯರ ಅಶ್ಲೀಲ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ...

ಕ್ಷಿಪಣಿಗಳ ಮೇಲೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಧನ್ಯವಾದ ಸಂದೇಶ ಬರೆದ ಇರಾನ್

ಯುನೈಟೆಡ್ ಸ್ಟೇಟ್ಸ್-ಇಸ್ರೇಲ್ ವಿರುದ್ಧದ ಯುದ್ಧದ ಮಧ್ಯೆ ಇರಾನ್‌ನೊಂದಿಗೆ ಒಗ್ಗಟ್ಟನ್ನು ತೋರಿಸಿದ ರಾಷ್ಟ್ರಗಳಿಗೆ ಇರಾನ್‌ ತನ್ನ ಕ್ಷಿಪಣಿಗಳು ಕೃತಜ್ಞತಾ ಸಂದೇಶ ಬರೆದಿದೆ. ಕ್ಷಿಪಣಿಗಳ ಮೇಲೆ ಬರೆಯಲಾದ ಸಂದೇಶಗಲ್ಲಿ "ಭಾರತದ ಜನರಿಗೆ ಧನ್ಯವಾದಗಳು" ಎಂದು ಕಂಡುಬಂದಿದೆ. ಜೊತೆಗೆ,...

ಬಿಜೆಪಿಗೆ ಉಳಿದೆಲ್ಲಾ ಪಕ್ಷಗಳಿಗಿಂತ 10 ಪಟ್ಟು ಹೆಚ್ಚು ದೇಣಿಗೆ: ವರದಿ

2024–25ರ ಆರ್ಥಿಕ ವರ್ಷದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ( ಬಿಜೆಪಿ ) ಇತರ ಎಲ್ಲಾ ರಾಷ್ಟ್ರೀಯ ಪಕ್ಷಗಳು ಒಟ್ಟು ಸೇರಿಸಿ ಪಡೆದ ದೇಣಿಗೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚು ದೇಣಿಗೆ ಪಡೆದಿದೆ...

ವಿಶಾಖಪಟ್ಟಣ| ಕುಡಿದ ಮತ್ತಿನಲ್ಲಿ ಎಪಿಎಸ್‌ಆರ್‌ಟಿಸಿ ಬಸ್‌ ಅಪಹರಿಸಿದ ವ್ಯಕ್ತಿ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಎಪಿಎಸ್‌ಆರ್‌ಟಿಸಿ ಬಸ್ಸನ್ನು ಅಪಹರಿಸಿ ಸುಮಾರು ಒಂದು ಕಿಲೋಮೀಟರ್ ಅಜಾಗರೂಕತೆಯಿಂದ ಚಲಾಯಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆಘಾತಕಾರಿ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಪ್ರತ್ಯಕ್ಷ್ಯದರ್ಶಿಗಳ ಪ್ರಕಾರ, ಮಾರ್ಚ್ 26 ರ ಗುರುವಾರ ಬಸ್...

ಕರ್ನಾಟಕ ವಿಧಾನಸಭೆಯಲ್ಲಿ ಐಪಿಎಲ್ ಟಿಕೆಟ್ ವಿವಾದ; ಶಾಸಕರನ್ನು ಟೀಕಿಸಿದ ತೇಜಸ್ವಿ ಸೂರ್ಯ ವಿರುದ್ಧ ಡಿಕೆಶಿ ವಾಗ್ದಾಳಿ

ಶಾಸಕರಿಗೆ ಐಪಿಎಲ್ 2026 ಟಿಕೆಟ್ ಹಂಚಿಕೆ ವಿವಾದದ ನಡುವೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ  ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳಿಗೆ ವಿಐಪಿ ಟಿಕೆಟ್‌ಗಳಿಗೆ...

ವಿಚಾರಣೆಯ ನಂತರವೂ 8 ಲಕ್ಷ ಮತದಾರರ ಹೆಸರು ಅಳಿಸಲಾಗಿದೆ; ಬಂಗಾಳದಲ್ಲಿ ಎನ್.ಆರ್.ಸಿ ಇಲ್ಲ: ಮಮತಾ ಬ್ಯಾನರ್ಜಿ

ಮೊದಲ ಪೂರಕ ಮತದಾರರ ಪಟ್ಟಿ ಪ್ರಕಟವಾದ ನಂತರ ಎಂಟು ಲಕ್ಷ ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ರಾಜ್ಯದಲ್ಲಿ ಚುನಾವಣಾ ಪಾರದರ್ಶಕತೆಯ ಬಗ್ಗೆ ಗಂಭೀರ...

ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಜಾಗತಿಕ ತೈಲ ಬೆಲೆಗಳ ಏರಿಕೆಯ ಪರಿಣಾಮವನ್ನು ತಗ್ಗಿಸುವ ಪ್ರಯತ್ನದಲ್ಲಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಕಡಿಮೆ ಮಾಡಿದೆ, ಇದರಿಂದಾಗಿ ಪೆಟ್ರೋಲ್‌ಗೆ 3 ರೂ.ಗಳಷ್ಟು...