ನ್ಯಾಯ ನೀಡುವಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಆದರೆ ಹತ್ರಾಸ್ ಘಟನೆಯನ್ನು ತನಿಖೆ ನಡೆಸುತ್ತಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ತಂಡದಲ್ಲಿ SC/ST/OBC ಸಮುದಾಯಗಳನ್ನು ಪ್ರತಿನಿಧಿಸುವ ಯಾವೊಬ್ಬ ಸದಸ್ಯರೂ ಇಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಬುಧವಾರ ಆರೋಪಿಸಿದ್ದಾರೆ.
“ಈ ಪ್ರಕರಣವನ್ನು ಎಸ್‌ಸಿ-ಎಸ್‌ಟಿ ಕಾಯ್ದೆಯಡಿ ದಾಖಲಿಸಲಾಗಿದೆ. ಆದರೂ ಹತ್ರಾಸ್ ಪ್ರಕರಣದ ತನಿಖೆ ನಡೆಸುತ್ತಿರುವ CBI ತಂಡದಲ್ಲಿ ಒಬ್ಬ ಹಿರಿಯ ಅಧಿಕಾರಿ ಕೂಡ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಲ್ಲ. CBI ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಾನು ಮೋದಿಜಿಯನ್ನು ವಿನಂತಿಸುತ್ತೇನೆ, ತನಿಖಾ ತಂಡವನ್ನು ಏಕಪಕ್ಷೀಯವನ್ನಾಗಿ ಮಾಡಬಾರದು. ನ್ಯಾಯದಲ್ಲಿ ಪಾರದರ್ಶಕತೆ ಬಹಳ ಮುಖ್ಯ” ಎಂದು ಚಂದ್ರಶೇಖರ್ ಆಜಾದ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸುಳ್ಳು, ಇದು ಕಾಂಗ್ರೆಸ್ ಪಿತೂರಿ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ!
हाथरस केस की जाँच करने वाली CBI टीम में एक भी SC, ST, OBC, माइनॉरिटी का उच्चस्तरीय अफ़सर नहीं है। जबकि केस SC-ST एक्ट के तहत दर्ज हुआ है। CBI केंद्र सरकार के अधीन काम करती है, मैं मोदी जी से अनुरोध करता हूँ कि जाँच टीम को एकपक्षीय न बनाये। न्याय में पारदर्शिता बहुत जरूरी है।
— Chandra Shekhar Aazad (@BhimArmyChief) October 14, 2020
ಇದನ್ನೂ ಓದಿ: ನಿಮ್ಮ ಸ್ವಂತ ಮಗಳ ಅಂತ್ಯಕ್ರಿಯೆ ಹೀಗೆ ಮಾಡುತ್ತೀರಾ..? ಹತ್ರಾಸ್ ಡಿಸಿಗೆ ಲಕ್ನೋ ಪೀಠ ಪ್ರಶ್ನೆ
ಹಿಂದಿನ ದಿನ CBI, ಸಂತ್ರಸ್ತೆಯ ತಂದೆ ಮತ್ತು ಇಬ್ಬರು ಸಹೋದರರನ್ನು ವಿಚಾರಣೆಗೆ ಕರೆಸಿತು. ಮಂಗಳವಾರವೂ ಅವರನ್ನು ಪ್ರಶ್ನಿಸಿದೆ.
ಸೆಪ್ಟೆಂಬರ್ 30 ರಂದು ಹತ್ರಾಸ್‌ನಲ್ಲಿ ಚಿತ್ರಹಿಂಸೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯನ್ನು ಅಂತ್ಯಕ್ರಿಯೆ ಮಾಡಿದ ಸ್ಥಳದಿಂದ ಸಿಬಿಐ ತಂಡ ಮಂಗಳವಾರ ಮಾದರಿಗಳನ್ನು ಸಂಗ್ರಹಿಸಿದೆ.
ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಯುವತಿ ಸಾವನ್ನಪ್ಪಿದ್ದಳು.
ಇದನ್ನೂ ಓದಿ: ಪ್ರಕರಣವನ್ನು ದೆಹಲಿ ಅಥವಾ ಮುಂಬೈಗೆ ವರ್ಗಾಹಿಸಲು ಹತ್ರಾಸ್ ಸಂತ್ರಸ್ತ ಕುಟುಂಬದ ಒತ್ತಾಯ


