ಬಹುಭಾಷಾ ನಟಿ ಸಾವಿತ್ರಿಯವರ ಜೀವನ ಚರಿತ್ರೆ ಆಧರಿಸಿದ ಮಹಾನಟಿ ಚಿತ್ರದ ಯಶಸ್ಸು ಸಾಲು ಸಾಲು ಬಯೋಪಿಕ್‌ಗಳ ನಿರ್ಮಾಣಕ್ಕೆ ಕಾರಣವಾಗಿದೆ. ಈಗ ಟಾಲಿವುಡ್‌ನಿಂದ ಮತ್ತೊಂದು ಬಯೋಪಿಕ್ ನಿರ್ಮಾಣದ ಸುದ್ದಿ ಹೊರಬಿದ್ದಿದೆ.

ನಟಿ ದಿವಂಗತ ಸೌಂದರ್ಯ ಅವರ ಜೀವನಚರಿತ್ರೆ ಕುರಿತು ಚಿತ್ರ ಆರಂಭವಾಗುವ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಈಗ ಅವರ ಪಾತ್ರವನ್ನು ನ್ಯಾಚೂರಲ್ ಬ್ಯೂಟಿ ಸಾಯಿಪಲ್ಲವಿ ನಿರ್ವಹಿಸುವ ಕುರಿತು ವದಂತಿಗಳು ಬಂದಿವೆ. ಈಗಾಗಲೇ ಚಿತ್ರತಂಡ ಸಾಯಿಪಲ್ಲವಿ ಅವರನ್ನು ಸಂಪರ್ಕಿಸಿದ್ದು, ಅಂದುಕೊಂಡಂತೆ ಎಲ್ಲಾ ನಡೆದರೆ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ನಿರ್ಮಾಣ ಆರಂಭವಾಗಲಿದೆ.

ಸದ್ಯ ಸಾಯಿ ಪಲ್ಲವಿ ತಮಿಳಿನ ಸೂಪರ ಹಿಟ್ ಚಿತ್ರ ವೇದಾಲಂನ ತೆಲುಗು ರಿಮೇಕ್‌ನಲ್ಲಿ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ನಟಿಸಲಿರುವುದರಿಂದ ಡೇಟ್ಸ್ ಹೊಂದಿಕೆ ಮಾಡಿಕೊಳ್ಳಬೇಕಾಗಿದೆ. ಸಾಯಿ ಪಲ್ಲವಿ ಕೂಡ ಸೌಂದರ್ಯ ಅವರ ಬಯೋಪಿಕ್‌ನಲ್ಲಿ ನಟಿಸಲು ಆಸಕ್ತಿ ಹೊಂದಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಲಿವುಡ್ ಡ್ರಗ್ ಮಾಫಿಯಾ: ಜಯಾ ಬಚ್ಚನ್ ಪರ ನಿಂತ ನಟಿ, ಬಿಜೆಪಿ ಸಂಸದೆ ಹೇಮಾ ಮಾಲಿನಿ

ಜುಲೈ 18, 1972 ರಲ್ಲಿ ಜನಿಸಿದ ನಟಿ ಸೌಂದರ್ಯ ತಮ್ಮ 20 ನೇ ವಯಸ್ಸಿನಲ್ಲಿ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.  ಒಂದು ದಶಕದ ಅವಧಿಯಲ್ಲಿ ಹಲವಾರು ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿದರು. ದಕ್ಷಿಣ ಭಾರತದ ಎಲ್ಲ ಪ್ರಮುಖ ನಟರೊಂದಿಗೂ ತೆರೆ ಹಂಚಿಕೊಂಡ ಖ್ಯಾತಿ ಅವರದ್ದು. ಹಿಂದಿ ಚಿತ್ರರಂಗದ ಖ್ಯಾತ ನಟ ಅಮಿತಾಬಚ್ಚನ್‌ ಜೊತೆ ಸೂರ್ಯವಂಶಂನಲ್ಲಿ ನಟಿಸಿದ್ದರು.

ಬಹುಭಾಷಾ ನಟಿಯಾಗಿದ್ದ ಸೌಂದರ್ಯ ಅವರ ಬಯೋಪಿಕ್ ಕೂಡ ಬಹುಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಸುಂದರ ನಟಿ, ನಿರ್ಮಾಪಕಿ, ಸೌಂದರ್ಯ ಇನ್ನೂ ಕಿರುವಯಸ್ಸಿನಲ್ಲಿ ಜನಪ್ರಿಯತೆಯ ತುತ್ತ ತುದಿಯಲ್ಲಿದ್ದಾಗಲೇ ಚುನಾವಣಾ ಪ್ರಚಾರದ ಸಮಯದಲ್ಲಿ ಅವರು ಪಯಣಿಸುತ್ತಿದ್ದ ಕಿರು ವಿಮಾನದ ಅಪಘಾತದಲ್ಲಿ ದುರ್ಮರಣಕ್ಕೀಡಾದರು.


ಇದನ್ನೂ ಓದಿ: ನಟಿ, ನೃತ್ಯಗಾರ್ತಿ ಜೊಹ್ರಾ ಸೆಹಗಲ್‌ಗೆ ಗೂಗಲ್ ಡೂಡಲ್ ನಮನ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here