Homeಮುಖಪುಟಉಕ್ರೇನ್ ನಿರಾಶ್ರಿತ ಮಕ್ಕಳ ನೆರವಿಗೆ ನೊಬೆಲ್ ಪ್ರಶಸ್ತಿ ಹರಾಜಿಗಿಟ್ಟ ರಷ್ಯಾ ಪತ್ರಕರ್ತ

ಉಕ್ರೇನ್ ನಿರಾಶ್ರಿತ ಮಕ್ಕಳ ನೆರವಿಗೆ ನೊಬೆಲ್ ಪ್ರಶಸ್ತಿ ಹರಾಜಿಗಿಟ್ಟ ರಷ್ಯಾ ಪತ್ರಕರ್ತ

- Advertisement -
- Advertisement -

ರಷ್ಯಾದ ಸ್ವತಂತ್ರ ಪತ್ರಿಕೆಯಾದ ‘ನೊವಾಯಾ ಗೆಜೆಟಾ’ದ ಸಂಪಾದಕರು ತಮಗೆ ದೊರೆತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹರಾಜು ಹಾಕಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ಹರಾಜು ಹಾಕಲು ಮುಂದಾಗಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.

ಉಕ್ರೇನ್ ಮೇಲಿನ ಆಕ್ರಮಣದ ನಂತರದಲ್ಲಿ ಸಾಕಷ್ಟು ಸವಾಲುಗಳ ನಡುವೆ ವ್ಲಾಡಿಮಿರ್ ಪುಟಿನ್ ಅವರ ಸರ್ಕಾರವನ್ನು ಟೀಕಿಸುವ ಕೊನೆಯ ಪ್ರಮುಖ ಸ್ವತಂತ್ರ ಮಾಧ್ಯಮವನ್ನು ಡಿಮಿಟ್ರಿ ಮುರಾಟೋವ್ ಮುನ್ನಡೆಸಿದ್ದರು.

ಕಳೆದ ಅಕ್ಟೋಬರ್‌ನಲ್ಲಿ ಮುರಾಟೋವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ತಮಗೆ ದೊರೆತ 500,000 ಡಾಲರ್‌ ಬಹುಮಾನದ ಹಣವನ್ನು ನಿರಾಶ್ರಿತ ಮಕ್ಕಳ ಭವಿಷ್ಯ ರೂಪಿಸಲು ಚಾರಿಟಿಗೆ ದಾನ ಮಾಡುವುದಾಗಿ ಘೋಷಿಸಿದರು. 23-ಕ್ಯಾರಟ್ ಚಿನ್ನದ ನೊಬೆಲ್ ಪದಕವನ್ನು ನ್ಯೂಯಾರ್ಕ್‌ನಲ್ಲಿ ಸೋಮವಾರ ಸಂಜೆ 7 ಗಂಟೆಗೆ ವಿಶ್ವ ನಿರಾಶ್ರಿತರ ದಿನದಂದು ಮಾರಾಟ ಮಾಡಲಿದ್ದಾರೆ. ಹರಾಜಿನಲ್ಲಿ ಬರುವ ಎಲ್ಲಾ ಹಣವೂ ಯುನಿಸೆಫ್‌ಗೆ ನೀಡಲಾಗುತ್ತಿದೆ. ಉಕ್ರೇನ್‌ನ ನಿರಾಶ್ರಿತ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ.

ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮುರಾಟೋವ್ ಮಾತನಾಡುತ್ತಾ, ರಷ್ಯಾದ ಆಕ್ರಮಣದಿಂದ ಸ್ಥಳಾಂತರಗೊಂಡ 14 ಮಿಲಿಯನ್ ಉಕ್ರೇನಿಯನ್ನರ ಪರ ಒಲವು ತೋರಿಸಿದರು. ಈ ಸ್ಥಳಾಂತರವನ್ನು “ದುರಂತ” ಎಂದು ಕರೆದಿದ್ದರು.

“ನಿರಾಶ್ರಿತರ ಸಂಖ್ಯೆಯನ್ನು ನೋಡಿದರೆ, ನಾವು ಮೂಲತಃ ಮೂರನೇ ಮಹಾಯುದ್ಧದಲ್ಲಿದ್ದೇವೆ. ಇದು ಸ್ಥಳೀಯವಾದ ಸಂಘರ್ಷವಲ್ಲ” ಎಂದಿದ್ದರು. “ಪ್ರಮಾದವಾಗಿದೆ. ನಾವು ಅದನ್ನು ಕೊನೆಗೊಳಿಸಬೇಕಾಗಿದೆ” ಎಂದಿದ್ದರು.

ಸೋವಿಯತ್ ಒಕ್ಕೂಟದ ವಿಭಜನೆಯ ನಂತರ 1993 ರಲ್ಲಿ ಸ್ಥಾಪಿತವಾದ ನೊವಾಯಾ ಗೆಜೆಟಾ, ರಷ್ಯಾದ ಒಳಗೆ ಮತ್ತು ಹೊರಗೆ ಭ್ರಷ್ಟಾಚಾರವನ್ನು ಹೊರಗೆಳೆಯಿತು. ಚೆಚೆನ್ಯಾದಲ್ಲಿ ಸುದೀರ್ಘ ಯುದ್ಧಗಳ ಕುರಿತು ತನಿಖಾ ವರದಿ ಮಾಡಿತು. ಮುರಾಟೋವ್ ಅವರು ನೊಬೆಲ್‌ ಪ್ರಶಸ್ತಿಯನ್ನು ತಮ್ಮ ಕೆಲಸದ ಕೆಲಸದ ಕಾರಣಕ್ಕೆ ಹತ್ಯೆಯಾದ ಪತ್ರಿಕೆಯ ಆರು ಪತ್ರಕರ್ತರಿಗೆ ಅರ್ಪಿಸಿದರು.

“ನಾನು ಉಕ್ರೇನ್‌ನಿಂದ ಬರೆಯುತ್ತಿದ್ದೇನೆ. ನಾನು ಕಳೆದ ಆರು ತಿಂಗಳಿಂದ ಅಲ್ಲಿದ್ದೇನೆ. ಸಂಘರ್ಷದ ನಿರ್ಮಾಣ ಮತ್ತು ಯುದ್ಧದ ಕಠೋರ ವಾಸ್ತವತೆಯ ಬಗ್ಗೆ ವರದಿ ಮಾಡಿದ್ದೇನೆ. ಇದು ನನ್ನ 30 ವರ್ಷಗಳ ವೃತ್ತಿಜೀವನದ ಅತ್ಯಂತ ತೀವ್ರವಾದ ಸಮಯ. ಡಿಸೆಂಬರ್‌ನಲ್ಲಿ ನಾನು ಉಕ್ರೇನಿಯನ್ ಸೈನ್ಯದೊಂದಿಗೆ ಡೊನೆಟ್ಸ್‌ಕ್ನ ಪ್ರದೇಶಗಳಿವೆ ಭೇಟಿ ಮಾಡಿದ್ದೇನೆ. ಜನವರಿಯಲ್ಲಿ ನಾನು ಮರಿಯುಪೋಲ್ಗೆ ಹೋದೆ. ನಂತರ ಕ್ರೈಮಿಯಾಗೆ ಬಂದೆ. ಫೆಬ್ರವರಿ 24 ರಂದು ರಷ್ಯಾದ ಬಾಂಬ್‌ಗಳು ಬಿದ್ದಾಗ ನಾನು ಉಕ್ರೇನಿಯನ್ ರಾಜಧಾನಿಯಲ್ಲಿ ಇತರ ಸಹೋದ್ಯೋಗಿಗಳೊಂದಿಗೆ ಇದ್ದೆ” ಎಂದಿದ್ದರು.

“1945ರ ನಂತರದಲ್ಲಿ ಯುರೋಪಿನಲ್ಲಿ ನಡೆದ ಅತಿ ದೊಡ್ಡ ಯುದ್ಧವಾಗಿದೆ. ಇದು ಉಕ್ರೇನಿಯನ್ನರಿಗೆ ಅಸ್ತಿತ್ವದ ಹೋರಾಟವಾಗಿದೆ. ಈ ಯುದ್ಧವು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಅದನ್ನು ಕವರ್ ಮಾಡಲು ನಮ್ಮ ವರದಿಗಾರರು ಮತ್ತು ಸಂಪಾದಕೀಯ ತಂಡವು ಉದ್ದೇಶಿಸಿದೆ. ಯುದ್ಧದಲ್ಲಿ ಸಿಕ್ಕಿಬಿದ್ದವರ ಕಥೆಗಳನ್ನು, ಅಂತಾರಾಷ್ಟ್ರೀಯ ಆಯಾಮವನ್ನು ಹೇಳಲು ನಾವು ಬದ್ಧರಾಗಿದ್ದೇವೆ” ಎಂದಿದ್ದರು ಮುರಾಟೋವ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...