Homeಚಳವಳಿಜಿಂದಾಲ್‌‌ ಯೋಜನೆ ವಿರುದ್ಧ ಸಂತ್ರಸ್ತರನ್ನು ಬೆಂಬಲಿಸಿದ ‘O.P. ಜಿಂದಾಲ್ ಗ್ಲೋಬಲ್ ವಿವಿ’ ವಿದ್ಯಾರ್ಥಿಗಳು

ಜಿಂದಾಲ್‌‌ ಯೋಜನೆ ವಿರುದ್ಧ ಸಂತ್ರಸ್ತರನ್ನು ಬೆಂಬಲಿಸಿದ ‘O.P. ಜಿಂದಾಲ್ ಗ್ಲೋಬಲ್ ವಿವಿ’ ವಿದ್ಯಾರ್ಥಿಗಳು

- Advertisement -
- Advertisement -

ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಜಿಂದಾಲ್ ಸ್ಟೀಲ್‌ ವರ್ಕ್ಸ್‌(JSW)ನ ಗ್ರೂಪ್‌‌ನ ಉದ್ದೇಶಿತ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್‌ನಿಂದ ಉಂಟಾಗುವ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರದ ಪರಿಣಾಮಗಳ ಕುರಿತ, ‘ತುರ್ತು ಸಂವಾದ’ದಲ್ಲಿ ತೊಡಗಿಸಿಕೊಳ್ಳಲು ಸೋನಿಪತ್‌ನ O.P. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗ್ರೂಪ್‌ನ ಸಂಸ್ಥಾಪಕ ಸಜ್ಜನ್ ಜಿಂದಾಲ್‌ಗೆ ಪತ್ರ ಬರೆದಿದ್ದಾರೆ.

ತಮ್ಮ ಭೂಮಿ ಮತ್ತು ಜೀವನೋಪಾಯದ ಉಳಿಯುವಿಗಾಗಿ ಧಿಂಕಿಯಾ ಗ್ರಾಮ ಜನತೆಯು ಕಂಪೆನಿಯ ಈ ಯೋಜನೆಯ ವಿರುದ್ದ ಹೋರಾಡುತ್ತಿದ್ದಾರೆ. ಇದರ ವಿರುದ್ದ ಇರುವ ಗ್ರಾಮಸ್ಥರನನ್ನು ರಾಜ್ಯ ಪ್ರೇರಿತ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದು, ಹಿಂಸಾತ್ಮಕ ದಾಳಿಗಳನ್ನು ಸಂಘಟಿಸಿ, ಬಲವಂತದ ಭೂ ಸ್ವಾಧೀನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಒಡಿಶಾ: ಜಿಂದಾಲ್ ಸ್ಟೀಲ್ ವರ್ಕ್ಸ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ- ಪೊಲೀಸರಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು ಮೂಲದ ಪರಿಸರ ಹಕ್ಕುಗಳ ಕಾನೂನು ಹೋರಾಟ ಸಂಸ್ಥೆಯಾದ ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ (ESG) ಮತ್ತು ಹರಿಯಾಣದ ಸೋನಿಪತ್‌‌‌ O.P. ಜಿಂದಾಲ್‌ ಗ್ಲೋಬಲ್‌ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪು ಗ್ರಾಮಸ್ಥರ ಈ ಹೋರಾಟಕ್ಕೆ ಬೆಂಬಲಿಸಿದ್ದು, “ಪರಿಸರ ನ್ಯಾಯಕ್ಕಾಗಿ ವಿದ್ಯಾರ್ಥಿಗಳು” ಎಂಬ ಅಭಿಯಾನದ ವೇದಿಕೆಯನ್ನು ರಚಿಸಿದ್ದಾರೆ.

ವೇದಿಕೆಯು, JSW ಗ್ರೂ‌‌ಪ್‌‌ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪರಿಸರವನ್ನು ನಾಶ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ JSW ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಜ್ಜನ್ ಜಿಂದಾಲ್ ಅವರನ್ನು “ತುರ್ತು ಸಂವಾದದಲ್ಲಿ ತೊಡಗಿಸಿಕೊಳ್ಳಲು” ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಜಿಂದಾಲ್‌ ಮುಂದೆ ಬಿಜೆಪಿ ಸರ್ಕಾರ ಏಕಾಏಕಿ ಮಂಡಿಯೂರಲೂ ಕಾರಣವಿದೆ:ಎಚ್.ಡಿ. ಕುಮಾರಸ್ವಾಮಿ

ಇಷ್ಟೇ ಅಲ್ಲದೆ, ಪರಿಸರ ಮತ್ತು ಬಡಜನರ ವಿರುದ್ಧ ಶ್ರೀಮಂತರು ಮತ್ತು ಶಕ್ತಿಶಾಲಿಗಳು ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ನಿಲ್ಲುವಂತೆ  ವೇದಿಕೆಯು ಇತರ ವಿದ್ಯಾರ್ಥಿಗಳಿಗೂ ಮನವಿ ಮಾಡಿದೆ. ಸಜ್ಜನ್ ಜಿಂದಾಲ್ ಅವರಿಗೆ ಬರೆದಿರುವ ಬಹಿರಂಗ ಪತ್ರಕ್ಕೆ ಸಹಿ ಹಾಕುವ ಮೂಲಕ ಆಂದೋಲನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳನ್ನು ವೇದಿಕೆಯು ಕೇಳಿಕೊಂಡಿದೆ.

ಈ ಬಗ್ಗೆ ಮಾತನಾಡಿದ O.P. ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಜಾಗತಿಕ ವ್ಯವಹಾರಗಳ ವಿದ್ಯಾರ್ಥಿನಿ ದೇವಯಾನಿ, “ನಾವು ಜಿಂದಾಲ್ ಗುಂಪಿನ ಭಾಗವಾಗಿರುವುದರಿಂದ, ವಿದ್ಯಾರ್ಥಿಗಳಾದ ನಾವು ಇದರ ಬಗ್ಗೆ ಮಾತನಾಡಬೇಕಾಗುತ್ತದೆ. ಹೀಗಾಗಿ ಮಾನವೀಯತೆ ಮತ್ತು ಪರಿಸರವನ್ನು ನಿರ್ಲಕ್ಷಿಸುವುದರ ವಿರುದ್ಧ ನಾವು ನಿಲುವು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇವೆ. ನಮ್ಮ ಅಭಿಯಾನವು ಪ್ರಾರಂಭವಾದಾಗ ಸುಮಾರು 25 ಜನರು ಗುಂಪಿನಲ್ಲಿದ್ದರು. ಆದರೆ ಕಳೆದ ಕೆಲವು ದಿನಗಳಲ್ಲಿ ಇದು ಬೆಳೆದಿದ್ದು, ಸುಮಾರು 500 ವಿದ್ಯಾರ್ಥಿಗಳು ಮನವಿಗೆ ಸಹಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: 490 ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಜಿಂದಾಲ್: ನಾವೆಲ್ಲಿಗೆ ಹೋಗಬೇಕೆಂದು ಕಾರ್ಮಿಕರ ಅಳಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ವಿದ್ಯಾರ್ಥಿಗಳು ಅನ್ಯಾಯ ಕಂಡು, ಸಿಡಿದೆದ್ದು ನೊಂದವರ ಪರ ನಿಂತು, ಅನ್ಯಾಯ ದ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ನಡುಕಟ್ಟಿ ನಿಂತಿರುವುದು
    ತುಂಬಾ ಸಂತೋಷ,
    ಈ ನಿಮ್ಮ ಹೋರಾಟ ಕೋಮು ವಾದಿ ಸಂಘಟನೆ ಗಳಿಗೆ ಬಲಿಯಾಗದೆ, ನಿಜವಾದ ಹೋರಾಟಕ್ಕೆ ಸಜ್ಜಾಗಿ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ,

    ನಿಜವಾದ ಹೋರಾಟಗಾರರೆಲ್ಲರಿಗೂ ನಮಸ್ಕಾರ,

LEAVE A REPLY

Please enter your comment!
Please enter your name here

- Advertisment -

ಮುಂಬೈ: 2 ದಿನಗಳಿಂದ ಹೊತ್ತಿ ಉರಿಯುತ್ತಿರುವ ಪೊವೈ ಬೆಟ್ಟಗಳು: ನಿವಾಸಿಗಳಿಂದ ಅಧಿಕಾರಿಗಳ ನಿಷ್ಕ್ರಿಯತೆಯ ಆರೋಪ 

ಮುಂಬೈನ ಪೊವೈ ಬೆಟ್ಟಗಳ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಕಳೆದ ಎರಡು ದಿನಗಳಿಂದ ಉರಿಯುತ್ತಿದೆ ಎಂದು ವರದಿಯಾಗಿದೆ. ನಿವಾಸಿಗಳು ಬೆಂಕಿಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ನಾಗರಿಕ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆಯು ಸಿಕ್ಕಿಲ್ಲ...

‘ದಲಿತ ಕ್ರೈಸ್ತ’ರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು: ಮಾನವ ಹಕ್ಕುಗಳ ಕಾರ್ಯಕರ್ತ ವಿನ್ಸೆಂಟ್ ಕಥಿರ್

"ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಬೇಕು, ಇದರಿಂದಾಗಿ ಜಾತಿ ಹಿಂಸಾಚಾರದ ಬಲಿಪಶುಗಳು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳ ಪ್ರಕಾರ ಸರ್ಕಾರದಿಂದ ಪರಿಹಾರವನ್ನು ಪಡೆಯಬಹುದು" ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ...

ಪಶ್ಚಿಮ ಏಷ್ಯಾ ಬಿಕ್ಕಟ್ಟು : ಇರಾನ್ ವಿದೇಶಾಂಗ ಸಚಿವರ ಜೊತೆ ಜೈಶಂಕರ್ ಚರ್ಚೆ

ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು...

ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ಆರೋಪ : ನೌಕಾಪಡೆಯ ಲ್ಯಾನ್ಸ್ ನಾಯಕ್ ಆದರ್ಶ್ ಕುಮಾರ್ ಬಂಧನ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ 24 ವರ್ಷದ ಭಾರತೀಯ ನೌಕಾಪಡೆಯ ಲ್ಯಾನ್ಸ್ ನಾಯಕ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ (ಮಾ.10)...

ಅಮೆರಿಕದ ತೈಲ ಸಂಸ್ಕರಣಾ ಘಟಕಕ್ಕೆ ರಿಲಯನ್ಸ್ ಹೂಡಿಕೆ : ಟ್ರಂಪ್ ಘೋಷಣೆ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಹೂಡಿಕೆಯ ಸಹಾಯದಿಂದ 50 ವರ್ಷಗಳಲ್ಲಿ ಅಮೆರಿಕ ತನ್ನ ಮೊದಲ ಹೊಸ ತೈಲ ಸಂಸ್ಕರಣಾಗಾರವನ್ನು ಪಡೆಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 'ಅಮೆರಿಕ ಫಸ್ಟ್ ರಿಫೈನಿಂಗ್ ಸಂಸ್ಥೆ'ಯು ಟೆಕ್ಸಾಸ್‌ನ...

ಭಾರತೀಯರ ಅಡುಗೆ ಮನೆ ತಲುಪಿದ ಯುದ್ಧದ ಪರಿಣಾಮ : ದೇಶದಾದ್ಯಂತ ಎಲ್‌ಪಿಜಿ ಕೊರತೆ ಉಲ್ಬಣ

ಅಮೆರಿಕ, ಇಸ್ರೇಲ್, ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸಂಘರ್ಷದಿಂದ ಭಾರತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ದೇಶ ಪ್ರಧಾನಿ ಮೋದಿಯವರ ಕೈಯಲ್ಲಿ ಭದ್ರವಾಗಿದೆ ಎಂದು ಒಂದಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುತ್ತಿರುವಾಗಲೇ,...

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...