ಬೆಳಗಿನ ಪ್ರಾರ್ಥನೆಯ ನಂತರ ತನ್ನ ಪಾದಕ್ಕೆ ಬೀಳದ 31 ವಿದ್ಯಾರ್ಥಿಗಳನ್ನು ಸಹಾಯಕ ಶಿಕ್ಷಕಿಯೊಬ್ಬರು ಥಳಿಸಿರುವ ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಬಳಿಕ ಅವರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ.
ಸೆಪ್ಟೆಂಬರ್ 11 ರಂದು ಖಂಡದೇವುಲಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಸುಕಾಂತಿ ಕರ್ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ವರದಿಯ ಪ್ರಕಾರ, 6, 7 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳು ಬೆಳಗಿನ ಪ್ರಾರ್ಥನೆ ಮುಗಿಸಿ ತರಗತಿಗಳಿಗೆ ಹಾಜರಾಗಲು ಹೊರಟಾಗ, ಶಿಕ್ಷಕಿ ಅವರ ಕೋಣೆಗಳಿಗೆ ಪ್ರವೇಶಿಸಿ ತನ್ನ ಪಾದಗಳನ್ನು ಮುಟ್ಟದಿದ್ದಕ್ಕಾಗಿ ಅವರನ್ನು ಥಳಿಸಿದ್ದಾರೆ.
ಸ್ಥಳೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ನಡೆಸಿದ ವಿಚಾರಣೆಯ ನಂತರ ಬೆಟ್ನೋಯ್ ಬ್ಲಾಕ್‌ನ ಬ್ಲಾಕ್ ಶಿಕ್ಷಣ ಅಧಿಕಾರಿ (ಬಿಇಒ) ಬಿಪ್ಲಪ್ ಕರ್ ಪ್ರಕರಣದ ನ್ಯಾಯವ್ಯಾಪ್ತಿಯನ್ನು ವಹಿಸಿಕೊಂಡರು.
“ಗೌರವಾರ್ಥವಾಗಿ ವಿದ್ಯಾರ್ಥಿಗಳು ತನ್ನ ಪಾದಗಳನ್ನು ಮುಟ್ಟದ ಕಾರಣ ಕರ್ ಬಹುಶಃ ಮನನೊಂದಿದ್ದರು. ನಂತರ ಅವರು 6, 7 ಮತ್ತು 8 ನೇ ತರಗತಿಗಳಿಗೆ ಹೋದರು, ಯಾರು ಪಾದ ಸ್ಪರ್ಶಿಸಿಲ್ಲ ಎಂದು ಕೇಳಿದ್ದಾರೆ. ಎದ್ದು ನಿಂತ ವಿದ್ಯಾರ್ಥಿಗಳಿಗೆ ಸಾಲಾಗಿ ನಿಲ್ಲಲು ಆದೇಶಿಸಲಾಯಿತು” ಎಂದು ಅಧಿಕಾರಿಯನ್ನು ಉಲ್ಲೂಖಿಸಿ ‘ದಿ ಹಿಂದೂ’ ವರದಿ ಮಾಡಿದೆ.
ಶಿಕ್ಷಕರು ಬಿದಿರಿನ ಕೋಲಿನಿಂದ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದು, ಅವರಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ತಿಳಿದ ಕೂಡಲೇ ಪೋಷಕರು ಶಾಲೆಗೆ ಧಾವಿಸಿ ಕರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
“ಹಲವು ಮಕ್ಕಳ ಕೈಗಳಲ್ಲಿ ಮೂಗೇಟು ಆಗಿರುವುದುನ್ನೇ ಖುದ್ದು ನಾನೇ ಕಂಡುಕೊಂಡೆ. ಒಂದು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಬೇಕಾಯಿತು, ಒಬ್ಬ ಹುಡುಗಿ ಸ್ವಲ್ಪ ಸಮಯದವರೆಗೆ ಪ್ರಜ್ಞೆ ಕಳೆದುಕೊಂಡಳು” ಎಂದು ಬಿಇಒ ಹೇಳಿದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಬೆಟ್ನೋಯ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಕೇರಳ| 16 ವರ್ಷದ ಬಾಲಕನಿಗೆ 2 ವರ್ಷಗಳಿಗೂ ಹೆಚ್ಚು ಕಾಲ ಹಲ್ಲೆ; ಆರೋಪಿಗಳ ವಿರುದ್ಧ ಪೋಕ್ಸೊ ಪ್ರಕರಣ ದಾಖಲು


