ಒಡಿಶಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಕಟಕ್‌ನ ವಿಶೇಷ ಪೋಕ್ಸೊ ನ್ಯಾಯಾಲಯವು ಆರೋಪಿ ದಂಪತಿಗೆ ಶಿಕ್ಷೆ ವಿಧಿಸಿದೆ. ಆರೋಪಿ ವ್ಯಕ್ತಿಗೆ ಕಠಿಣ ಜೀವಾವಧಿ ಶಿಕ್ಷೆ (ಸಾಯುವವರೆಗೂ ಜೈಲಿನಲ್ಲಿರುವುದು) ಮತ್ತು ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಯ ಪತ್ನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಜುಲೈ 18, 2019 ರಂದು ಈ ದಂಪತಿ ಕಟಕ್‌ನ ಬಿದನಾಸಿ ಪೊಲೀಸ್ ವ್ಯಾಪ್ತಿಯ ಸತಿ ಚೌರಾ ಪ್ರದೇಶದಿಂದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದರು. ಆಕೆಯನ್ನು ಮಾರಾಟ ಮಾಡುವ ಉದ್ದೇಶದಿಂದ ಟಾಟಾ ಜಮ್ಶೆಡ್‌ಪುರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಆರೋಪಿ ಅಮಿತ್ ಬಿಂಧನಿ 10 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 8 ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ. ಈ ಅಪರಾಧದಲ್ಲಿ ಆತನ ಪತ್ನಿ ಆಶಾ ಲೋಹರ್ ಪತಿಗೆ ಸಹಾಯ ಮಾಡಿದ್ದಾರೆ. ಪೊಲೀಸರು ಬಾಲಕಿಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಿದ್ದರು.
ಆರೋಪಿ ದಂಪತಿ ಸತಿಚೌರಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು, ಅಪ್ರಾಪ್ತ ಬಾಲಕಿ ಪಕ್ಕದ ಸ್ಲಮ್‌ನಲ್ಲಿ ವಾಸಿಸುತ್ತಿದ್ದರು. ದಂಪತಿ ಅಪ್ರಾಪ್ತೆಗೆ ಅಮಲು ಪದಾರ್ಥ ನೀಡಿ ಕಿಡ್ನಾಪ್ ಮಾಡಿದ್ದರು. ವಿಚಾರಣೆ ನಡೆಸಿದ ಪೊಲೀಸರಿಗೆ ಟಾಟಾ ಸಂಸ್ಥೆಯಲ್ಲಿಯೂ ದಂಪತಿ ವಿರುದ್ಧ ಇಂತಹ ಆರೋಪಗಳಿವೆ ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ವೈವಾಹಿಕ ಅತ್ಯಾಚಾರ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅತಿದೊಡ್ಡ ರೂಪ: ದೆಹಲಿ ಹೈಕೋರ್ಟ್‌ಗೆ ಅರ್ಜಿದಾರರು
ಈ ಪ್ರಕರಣದ ತೀರ್ಪನ್ನು ಪ್ರಕಟಿಸಿದ ಕಟಕ್ ಪೋಕ್ಸೊ ನ್ಯಾಯಾಲಯವು ಅಮಿತ್ ಜೀವಾವಧಿ ಶಿಕ್ಷೆ (ಸಾಯುವವರೆಗೂ ಜೈಲಿನ್ಲಿರುವುದು) ಮತ್ತು ಆತನ ಪತ್ನಿ ಆಶಾಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಲ್ಲದೆ, ದಂಡವನ್ನು ಪಾವತಿಸದಿದ್ದಲ್ಲಿ ಅಪರಾಧಿ ಮಹಿಳೆಗೆ ಹೆಚ್ಚುವರಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ.
ಮತ್ತೊಂದೆಡೆ, ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ. ಇದನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೀಡಲಾಗುತ್ತದೆ. ಈ ಪೈಕಿ ಸಂತ್ರಸ್ತ ಬಾಲಕಿಯ ಹೆಸರಿನಲ್ಲಿ ರೂ 3 ಲಕ್ಷವನ್ನು ಸ್ಥಿರ ಠೇವಣಿಯಾಗಿ ಇರಿಸಲಾಗುವುದು. ಉಳಿದ ರೂ 2 ಲಕ್ಷವನ್ನು ಆಕೆಯ ಪೋಷಕರಿಗೆ ನೀಡಲು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ 10 ವರ್ಷ ಜೈಲು



ಶಿಕ್ಷೆಯ ಪ್ರಮಾಣ ಸರಿಯಾಗಿದೆ. ಆದರೆ ದಂಡದ ಮೊತ್ತವನ್ನು ನ್ಯಾಯಾಲಯ ಮರು ಪರಿಶೀಲನೆ ಮಾಡಬೇಕು ಎಂದು ಕೋರುತ್ತೇವೆ