Homeನ್ಯಾಯ ಪಥಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

ಮತ್ತೊಮ್ಮೆ ಬಯಲಾದ ಚಕ್ರವರ್ತಿ ಸೂಲಿಬೆಲೆ*ಯ ಅಸಲೀಯತ್ತು : ದಿನೂ ಸ.ಚಂ

- Advertisement -
- Advertisement -

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಹೈದರಾಬಾದ್‍ನ ಪಶುವೈದ್ಯೆ ‘ದಿಶಾ’ರ ಅತ್ಯಾಚಾರ ಮತ್ತು ಕೊಲೆ ಇಡೀ ದೇಶದ ಆತ್ಮಸಾಕ್ಷಿಯನ್ನು ಅಲುಗಾಡಿಸಿಬಿಟ್ಟಿದೆ. ಚಿಂತಕುಂಟ ಚನ್ನಕೇಶವುಲು, ಜೊಲ್ಲು ಶಿವ, ಮಹಮದ್ ಆರಿಫ್ ಮತ್ತು ಜೊಲ್ಲುನವೀನ್ ಎಂಬ ನಾಲ್ವರು ಶಾದ್‍ನಗರದಲ್ಲಿ ನವೆಂಬರ್ 27ರಂದು ದಿಶಾಗೆ ನೆರವು ನೀಡುವ ನೆಪದಲ್ಲಿ ಅಪಹರಿಸಿ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಂದು, ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ದೇಶದಲ್ಲಿ ದಿನನಿತ್ಯ ನೂರಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಆದರೆ ಕೆಲವು ಘಟನೆಗಳ ಭೀಕರತೆ ಇಡೀ ದೇಶದ ಗಮನ ಸೆಳೆಯುತ್ತವೆ, ಜನಾಕ್ರೋಶಕ್ಕೆ ಕಾರಣವಾಗುತ್ತವೆ. ದಿಶಾ ಪ್ರಕರಣದ ಭೀಕರತೆ ಇಡೀ ನಾಗರಿಕ ಪ್ರಪಂಚವನ್ನು ಅಲುಗಾಡಿಸಿಬಿಟ್ಟಿದೆ. ದೆಹಲಿಯ ನಿರ್ಭಯಾ ಪ್ರಕರಣ, ಕಥುವಾದ ಆಸಿಫಾ ಪ್ರಕರಣಗಳು ನಡೆದಾಗಲೂ ಇದೇ ರೀತಿಯ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

ದಿಶಾ ಕೊಲೆಗಡುಕರಿಗೆ ನಡುರಸ್ತೆಯಲ್ಲಿ ನೇಣು ಹಾಕಬೇಕು, ಕಲ್ಲು ಹೊಡೆದು ಸಾಯಿಸಬೇಕು, ಬೆಂಕಿ ಹಚ್ಚಿ ಕೊಲ್ಲಬೇಕು, ಮರ್ಮಾಂಗವನ್ನು ಕತ್ತರಿಸಬೇಕು ಎಂದು ಸಾಮಾನ್ಯ ಜನರು ಅಭಿಪ್ರಾಯಪಡುತ್ತಿದ್ದಾರೆ. ಈ ತರದ ಯಾವುದೇ ಶಿಕ್ಷಾವಿಧಾನ ನಮ್ಮಲ್ಲಿಲ್ಲ. ಆದರೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಜನರ ಆಕ್ರೋಶ ದಿನೇದಿನೇ ಹೆಚ್ಚುತ್ತಲಿದೆ ಮತ್ತು ಅತ್ಯಾಚಾರದಂಥ ಪ್ರಕರಣಗಳನ್ನು ಸರ್ಕಾರ ಮತ್ತು ನ್ಯಾಯವ್ಯವಸ್ಥೆ ನಿರ್ವಹಿಸುತ್ತಿರುವ ಸ್ಥಿತಿಯ ಕುರಿತು ಅವರಿಗೆ ತೀವ್ರವಾದ ಅಸಮಾಧಾನವಿದೆ.

ದಿಶಾ ಸಾವು ಹೀಗೆ ದೇಶವನ್ನು ಕಂಗೆಡಿಸಿದ್ದರೆ, ಕೆಲವು ಅಮಾನವೀಯ ಮತ್ತು ಲಜ್ಜೆಗೇಡಿ ಶಕ್ತಿಗಳು ತಮ್ಮ ಹುನ್ನಾಕ್ಕೆ ಬಳಸಿಕೊಳ್ಳಲು ಅನುವಾದರು. ಇವು ಹೆಣ ಬೀಳುವುದನ್ನೇ ಕಾಯುವ ರಣಹದ್ದುಗಳು. ಇವರಿಗೆ ನೈತಿಕತೆಯ ಯಾವ ಗಡಿಗುರುತುಗಳು ಇಲ್ಲ, ಮಾನವೀಯತೆಯೆಂಬುದರ ಅರ್ಥವೂ ತಿಳಿದಿಲ್ಲ. ಅವರಿಗೆ ತಮ್ಮ ಅಜೆಂಡಾಗಳು ಕಾರ್ಯರೂಪಕ್ಕೆ ಬರಬೇಕು ಅಷ್ಟೆ.

‘ನನ್ನ ಹೆಸರು ಮಹಮದ್, ನಾನೊಬ್ಬ ಅತ್ಯಾಚಾರಿ’ ಎಂದು ಬರೆದ, ಶಾದ್‍ನಗರದ  ದುಷ್ಕೃತ್ಯದ ಒಬ್ಬ ಆರೋಪಿಯ ಫೋಟೋ ಇರುವ ಪೋಸ್ಟರ್ ಒಂದನ್ನು ಚಕ್ರವರ್ತಿ ಸೂಲಿಬೆಲೆ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದರು. ಅವರ ಉದ್ದೇಶ ಸ್ಪಷ್ಟವಾಗಿತ್ತು. ಪಶುವೈದ್ಯೆ ದಿಶಾರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಹುಟ್ಟಿಕೊಂಡ ಜನಾಕ್ರೋಶವನ್ನು ಒಂದು ಸಮುದಾಯದ ಮೇಲಿನ ದ್ವೇಷಕ್ಕಾಗಿ ಬಳಸಿಕೊಳ್ಳುವುದು.

ಇದಕ್ಕಿಂತ ಹೀನ ಆಲೋಚನೆಯೂ ಈ ಟ್ವೀಟ್ ಹಿಂದೆ ಕೆಲಸ ಮಾಡಿದೆ. ಮಹಮದ್ ಆರಿಫ್ ಎಂಬ ಆರೋಪಿಯ ಪೂರ್ಣ ಹೆಸರು ಬರೆಯದೆ ಮಹಮದ್ ಎಂದಷ್ಟೇ ಬರೆಯಲಾಗಿದೆ. ಈ ಮೂಲಕ ಮುಸ್ಲಿಮರನ್ನು ಕೆರಳಿಸುವುದು, ಅವರ ಉದ್ದೇಶ. ಆದರೆ ಅವರ ಲೆಕ್ಕಾಚಾರ ತಪ್ಪಿಹೋಯಿತು. ಈ ಕುಚೇಷ್ಟೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವತ್ರಿಕ ಟೀಕೆ ವ್ಯಕ್ತವಾಯಿತು.

ಅತ್ಯಾಚಾರವಾಗಿರುವುದು ನಿಜ, ಎಲ್ಲರಿಗೂ ತಮ್ಮ ಸಿಟ್ಟು ತೋಡಿಕೊಳ್ಳುವ ಹಕ್ಕು ಇದೆ. ಆದರೆ ಸೂಲಿಬೆಲೆಯವರಿಗೆ ಯಾಕೆ ಈ ಸೆಲೆಕ್ಟಿವ್ ಸಿಟ್ಟು? ಆರಿಫ್ ಹೊರತುಪಡಿಸಿ ಇನ್ನುಳಿದ ಮೂವರ ಮೇಲೆ ಯಾಕೆ ಮಮಕಾರ? ಆರಿಫ್‍ನನ್ನು ನೇಣಿಗೇರಿಸಬೇಕು, ಉಳಿದ ಶಿವ, ನವೀನ, ಚನ್ನಕೇಶವರನ್ನು ಏನು ಮಾಡಬೇಕು? ಇದೇ ಪ್ರಶ್ನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಉಳಿದ ಮೂವರು ರೇಪಿಸ್ಟರನ್ನು ನಿಮ್ಮ ನಮೋ ಬ್ರಿಗೇಡ್‍ಗೆ ಸೇರಿಸಿಕೊಳ್ಳುತ್ತೀರಾ ಸೂಲಿಬೆಲೆಯವರೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಆ ಮೂವರು ನಿಮ್ಮ ರಕ್ತಸಂಬಂಧಿಗಳಿರಬಹುದು, ಅದಕ್ಕೆ ಅವರಿಗೆ ನೇಣುಶಿಕ್ಷೆ ಕೇಳುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಇದು ಸೂಲಿಬೆಲೆ ಒಬ್ಬಾತನ ಪ್ರಶ್ನೆಯಲ್ಲ. ಇದೇ ಥರ ಯೋಚಿಸುವ ಹಿಂಡುಹಿಂಡೇ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ದಿಶಾ ಅತ್ಯಾಚಾರ-ಕೊಲೆ ನಡೆದಿರುವುದು ಶಾದ್‍ನಗರದಲ್ಲಿ ಎಂದು ಗೊತ್ತಾಗುತ್ತಿದ್ದಂತೆ ಅದು ಮುಸ್ಲಿಂ ಬಾಹುಳ್ಯದ ಪ್ರದೇಶ, ಅದಕ್ಕೆ ರೇಪ್ ನಡೆದಿದೆ ಎಂದು ಕೆಲವರು ಬರೆದುಕೊಂಡರು. ಪೋಸ್ಟ್ ಕಾರ್ಡ್ ಎಂಬ ದ್ವೇಷಜನಕರು ಆರೋಪಿಗಳಲ್ಲಿ ಒಬ್ಬನಾದ ಜೊಲ್ಲು ನವೀನನ ಹೆಸರನ್ನು ಬೇಕೆಂದೇ ಅನ್ವರ್ ನವೀನ್ ಎಂದು ತಿದ್ದಿ ಪೋಸ್ಟ್ ಗಳನ್ನು ಹಾಕಿದರು.

ಬಲಪಂಥೀಯ ಪೇಜ್‍ಗಳಲ್ಲಿ ಮಹಮದ್ ಆರಿಫ್ ಮತ್ತು ಮೂವರು ಸಂಗಡಿಗರು ಎಂದೇ ಬರೆಯಲಾಯಿತು, ಉಳಿದ ಮೂವರ ಹೆಸರುಗಳನ್ನು ಪ್ರಜ್ಞಾಪೂರ್ವಕವಾಗಿ ಮುಚ್ಚಿಡಲಾಯಿತು. ಸಾರ್ವಜನಿಕರ ಆಕ್ರೋಶವೆಲ್ಲ ಒಂದು ಸಮುದಾಯದ ಮೇಲೆ ಕೇಂದ್ರೀಕರಣವಾಗಲಿ ಎಂಬುದು ಇವರೆಲ್ಲರ ಸ್ಪಷ್ಟ ಹುನ್ನಾರವಾಗಿತ್ತು.  ಎಷ್ಟೋ ಬಾರಿ ಈ ತಂಡಗಳು ಜನರನ್ನು ದಾರಿ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದವು, ಆದರೆ ಈ ಬಾರಿ ಹಾಗೆ ಆಗಲಿಲ್ಲ. ದಿಶಾ ಪ್ರಕರಣವನ್ನು ಮುಸ್ಲಿಮರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವ ಇವರ ದುಷ್ಟಯತ್ನ ವಿಫಲವಾಗಿದ್ದಷ್ಟೇ ಅಲ್ಲ, ತಾವೇ ಸಾರ್ವಜನಿಕ ನಿಂದನೆಗೆ ಗುರಿಯಾಗುವಂತೆ ಆಯಿತು. ಸ್ವತಃ ಚಕ್ರವರ್ತಿ ಸೂಲಿಬೆಲೆಯವರ ಅನುಯಾಯಿಗಳೇ ಈ ಬಾರಿ ತಿರುಗಿಬಿದ್ದು ಪ್ರಶ್ನಿಸತೊಡಗಿದರು.

ಚಕ್ರವರ್ತಿ ಸೂಲಿಬೆಲೆಯನ್ನು ಚಿಂತಕ, ವಾಗ್ಮಿ ಇತ್ಯಾದಿ ಹೆಸರಿನಿಂದ ಗುರುತಿಸಲಾಗುತ್ತದೆ.ಯಾವಾಗ ನರೇಂದ್ರ ಮೋದಿ ಭಾರತ ರಾಜಕಾರಣದ ಮುಖ್ಯಭೂಮಿಕೆಗೆ ಬಂದರೋ, ಆಗ ಸೂಲಿಬೆಲೆಯಂಥ ಪೇಯ್ಡ್ ಭಾಷಣಕಾರರ ಅಗತ್ಯವಿತ್ತು. ಸೂಲಿಬೆಲೆ ತಡಮಾಡದೆ ನಮೋ ಬ್ರಿಗೇಡ್ ಕಟ್ಟಿದರು. ಊರೂರು ಸುತ್ತಿದರು. ನರೇಂದ್ರ ಮೋದಿ ಚಹಾ ಮಾರುತ್ತಿದ್ದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದರು. ದೇಶದ ಸೈನಿಕರಿಗೆ ಬಾಲನರೇಂದ್ರ ಪುಕ್ಕಟೆಯಾಗಿ ಚಹಾ ನೀಡಿದ್ದರಿಂದ ಹಿಡಿದು, ಹಿಮಾಲಯದಲ್ಲಿ ತಪಸ್ಸು ಮಾಡಲು ಹೋದ ಅನುಭವಗಳವರೆಗೆ ಸ್ವತಃ ನರೇಂದ್ರ ಮೋದಿಯವರೇ ನಾಚಿಕೊಳ್ಳುವಂತೆ ಕಥೆಗಳನ್ನು ಕಟ್ಟಿ ಹೇಳತೊಡಗಿದರು. ಆಗ ಹುಟ್ಟಿಕೊಂಡಿದ್ದೇ ಸೂಲಿಬೆಲೆ-ಗುರುಮೂರ್ತಿ ಜೋಡಿಯ ಚಿನ್ನದ ರಸ್ತೆಯ ಥಿಯರಿಗಳು.

ಬರೀ ಅಷ್ಟೇ ಆಗಿದ್ದರೆ ಪರವಾಗಿಲ್ಲ. ಮುಸ್ಲಿಂ ದ್ವೇಷವನ್ನು ಹಬ್ಬಿಸುವುದನ್ನೇ ಕಾಯಕವಾಗಿಸಿಕೊಂಡರು.  ಪೋಸ್ಟ್ ಕಾರ್ಡ್ ಪೇಜ್‍ಗಳನ್ನು ಗಮನಿಸಿ. ಅದರ ತುಂಬೆಲ್ಲ ಮುಸ್ಲಿಂ ದ್ವೇಷದ ಪೋಸ್ಟ್ ರುಗಳು, ಬರಹಗಳೇ ಕಣ್ಣಿಗೆ ರಾಚುತ್ತವೆ. ಮುಸ್ಲಿಂ ಸಮುದಾಯದ ಹೆಸರಿನವರು ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಕಾಣಿಸಿಕೊಂಡರೆ ಇವರಿಗೆ ಹಬ್ಬ. ಹುಡುಹುಡುಕಿ ಅಂಥವನ್ನು ತಂದು ಪ್ರಚೋದನೆಯ ಧಾಟಿಯಲ್ಲಿ ಬರೆಯಲಾಯಿತು. ಸೂಲಿಬೆಲೆಯಂಥವರ ಬಾಯಿಗಳಿಗೆ ಬಿಡುವಿಲ್ಲದ ಕೆಲಸ. ಅರ್ನಾಬ್ ಗೋಸ್ವಾಮಿಯಂಥ ಪೇಯ್ಡ್ ಪತ್ರಕರ್ತರ ಪ್ರೈಂ ಟೈಮ್ ಡಿಬೇಟುಗಳಿಗೆ ಬೇರೆ ವಿಷಯಗಳೇ ಬೇಡವಾದವು.

ದಿಶಾ ಪ್ರಕರಣದಲ್ಲೂ ಇದನ್ನೇ ಮಾಡಲು ಹೋಗಿ ಚಕ್ರವರ್ತಿ ಸೂಲಿಬೆಲೆ ಸಿಕ್ಕಿಬಿದ್ದಿದ್ದಾರೆ. ಸೂಲಿಬೆಲೆಯವರೇ, ನೀವು ನಿಜವಾದ ಹಿಂದುತ್ವವಾದಿಯಾಗಿದ್ದರೆ, ದೇವಸ್ಥಾನದ ಆಸ್ತಿ ಉಳಿಸಲು ಹೊರಟ ಮಂಗಳೂರಿನ ವಿನಾಯಕ ಬಾಳಿಗರ ಕೊಲೆಗಡುಕರ ಬೆಂಬಲಕ್ಕೆ ನಿಲ್ಲುತ್ತಿರಲಿಲ್ಲ ಎಂದು ಅವರ ಅಭಿಮಾನಿಗಳೇ ವಿಡಿಯೋ ಮಾಡಿ ಜಾಡಿಸುತ್ತಿದ್ದಾರೆ.

ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ, ಸತ್ತ ವ್ಯಕ್ತಿ ಹಿಂದೂವಾಗಿದ್ದರಿಂದ ಸಂಸದ (ಹಾಲಿ ಬಿಜೆಪಿಯ ರಾಜ್ಯ ಅಧ್ಯಕ್ಷ) ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೊಲೆಯನ್ನು ಮುಸ್ಲಿಮರೇ ಮಾಡಿದ್ದೆಂದು ಸಾರಿದ ಕಟೀಲ್ ಇದರಿಂದ ಮಂಗಳೂರಿಗೆ ಬೆಂಕಿ ಹಚ್ಚಿ ಉರಿಸಲಾಗುತ್ತದೆ ಎಂದು ಗುಡುಗಿದರು. ನಂತರ ಕೊಲೆಗಾರ್ತಿ ಮೃತ ವ್ಯಕ್ತಿಯ ತಂಗಿ ಮತ್ತು ಕಟೀಲ್ ನೇತೃತ್ವದ ಪ್ರತಿಭಟನೆಯಲ್ಲೇ ಪಾಲ್ಗೊಂಡಿದ್ದಳು ಎಂದು ಪೊಲೀಸರು ಬಂಧಿಸಿದರು! ಇಂತಹ ಹತ್ತಾರು ಪ್ರಕರಣಗಳು ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿ ನಡೆದಿವೆ. ಅದೇ ಸಂದರ್ಭದಲ್ಲಿ ಭೀಕರವಾದ ಕೊಲೆ ಅಥವಾ ಅತ್ಯಾಚಾರಕ್ಕೊಳಗಾದ ವ್ಯಕ್ತಿಗಳು ಮುಸ್ಲಿಮರಾಗಿದ್ದರೆ ಈ ಪರಿವಾರವು ಉಸಿರೆತ್ತುವುದೇ ಇಲ್ಲ. ಬದಲಿಗೆ ಕಥುವಾ ಪ್ರಕರಣದಲ್ಲಿ ಅತ್ಯಂತ ಭೀಕರವಾದ ಅತ್ಯಾಚಾರಕ್ಕೊಳಗಾದ ಬಾಲೆಯ ಪ್ರಕರಣದ ಆರೋಪಿಗಳ ಪರ ಧರ್ಮರಕ್ಷಕರು ನಿಂತಿದ್ದರು! ಇನ್ನೂ ಹೇಳಬೇಕೆಂದರೆ, ಹಿಂದೂ ಪುರುಷರಿಂದ ಹಿಂದೂ ಹುಡುಗಿಯರು ಅತ್ಯಾಚಾರಕ್ಕೆ ಒಳಗಾದಾಗಲೂ ಅದಿವರಿಗೆ ಸಮಸ್ಯೆಯೂ ಅಲ್ಲ, ದನಿಯೇಳುವುದು ಇಲ್ಲ.

ಸೂ.ರಂ. ರಾಮಯ್ಯನವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಸೂಲಿಬೆಲೆ ಗ್ರಾಮ ಹೊಸಕೋಟೆ ತಾಲೂಕಿನ ವಿಶಿಷ್ಟ ಹಳ್ಳಿ. ಮಿಥುನ್ ಚಕ್ರವರ್ತಿ ಎಂಬ ವಿಕೃತ ವ್ಯಕ್ತಿಯ ಅನ್ವರ್ಥವಾಗಿ ಅದು ಬಳಕೆಯಲ್ಲಿರುವುದರಿಂದ ಗುರುತಿಗಾಗಿ ಬಳಸಿದ್ದೇವೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ಅದು ಏನು ಅಂತ ಸುದ್ದಿ ಮಾಡ್ತಿರ್ರಿ ಅದು ದಿಶಾ ಅಲ್ಲ ಪ್ರಿಯಾಂಕಾ ರೆಡ್ಡಿ, ಅದು ಸರಿಯಾಗಿ ಗೊತ್ತಿಲ್ಲ , ನೀವು ಮತ್ತೊಬ್ಬರ ಬಗ್ಗೆ ಹೇಳ್ತೀರಾ?

    • ಭಾರತದ ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತೆಯ ಮೂಲ ಹೆಸರು, ಫೋಟೊ ಇತ್ಯಾದಿಗಳನ್ನು ಪ್ರಕಟಿಸಬಾರದು. ಹಾಗಾಗಿ ಹೆಸರು ಬದಲಿಸಿದ್ದೇವೆ.

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...