Homeಮುಖಪುಟಭಾರತದಾದ್ಯಂತ ಕೇಂದ್ರೀಯ ವಿ.ವಿಗಳಲ್ಲಿ ಕೇವಲ 9 ಒಬಿಸಿ ಪ್ರಾಧ್ಯಾಪಕರು! 304 ಕೋಟಾ ಖಾಲಿ

ಭಾರತದಾದ್ಯಂತ ಕೇಂದ್ರೀಯ ವಿ.ವಿಗಳಲ್ಲಿ ಕೇವಲ 9 ಒಬಿಸಿ ಪ್ರಾಧ್ಯಾಪಕರು! 304 ಕೋಟಾ ಖಾಲಿ

ಜನವರಿ 1, 2020 ರಿಂದ ಜವಾಹರಲಾಲ್‌ ವಿಶ್ವವಿದ್ಯಾಲಯ (ಜೆಎನ್‌ಯು), ದೆಹಲಿ ವಿವಿ,  ಬನಾರಸ್ ಹಿಂದೂ ವಿವಿ, ಅಲಹಾಬಾದ್ ವಿವಿ ಸೇರಿದಂತೆ ಹಲವು ವಿವಿಗಳಲ್ಲಿ ಒಬ್ಬರೇ ಒಬ್ಬರು ಒಬಿಸಿ ಪ್ರಾಧ್ಯಾಪಕರನ್ನು ನೇಮಿಸಿಕೊಂಡಿಲ್ಲ.

- Advertisement -
- Advertisement -

ಭಾರತದಾದ್ಯಂತ ಇರುವ ಕೇಂದ್ರೀಯ ವಿವಿಗಳಲ್ಲಿ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರಾತಿನಿಧ್ಯ ತೀರಾ ಕಡಿಮೆಯಿದೆ. ಅವರಿಗಾಗಿಯೇ ಮೀಸಲಾದ ಪ್ರಾತಿನಿಧ್ಯದಲ್ಲಿ ಅಲ್ಪ ಪ್ರಮಾಣ ಮಾತ್ರ ತುಂಬಿದ್ದು ಉಳಿದಿದ್ದು ಖಾಲಿ ಬಿದ್ದಿದೆ.

ಪ್ರಾಧ್ಯಾಪಕ ಹುದ್ದೆಗಳಲ್ಲಿ ಓಬಿಸಿ ಕೋಟಾದಡಿ ಒಟ್ಟು ಮಂಜೂರಾದ 313 ಹುದ್ದೆಗಳಲ್ಲಿ ಕೇವಲ 09 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇನ್ನೂ 304 ಹುದ್ದೆಗಳು ಖಾಲಿ ಬಿದ್ದಿವೆ. ಅಂದರೆ ಕೇವಲ ಶೇ. 2.8 ಮಾತ್ರ ತುಂಬಿದೆ ಎಂದು ಯುಜಿಸಿ ಬಿಡುಗಡೆ ಮಾಡಿದ ಅಂಕಿ ಅಂಶಗಳು ಹೇಳಿವೆ.

ಜನವರಿ 1, 2020 ರಿಂದ ಜವಾಹರಲಾಲ್‌ ವಿಶ್ವವಿದ್ಯಾಲಯ (ಜೆಎನ್‌ಯು), ದೆಹಲಿ ವಿವಿ,  ಬನಾರಸ್ ಹಿಂದೂ ವಿವಿ, ಅಲಹಾಬಾದ್ ವಿವಿ ಸೇರಿದಂತೆ ಹಲವು ವಿವಿಗಳಲ್ಲಿ ಒಬ್ಬರೇ ಒಬ್ಬರು ಒಬಿಸಿ ಪ್ರಾಧ್ಯಾಪಕರನ್ನು ನೇಮಿಸಿಕೊಂಡಿಲ್ಲ ಎಂದು ದಿ ಪ್ರಿಂಟ್ ವರದಿ  ಮಾಡಿದೆ.

ಸಹ ಪ್ರಾಧ್ಯಾಪಕರ ಹುದ್ದೆಗಳ ವಿಷಯಕ್ಕೆ ಬಂದರೆ ಒಬಿಸಿ ಕೋಟಾದಡಿ ಮಂಜೂರಾದ ಹುದ್ದೆಗಳಲ್ಲಿ ಕೇವಲ ಶೇ. 5.17 ರಷ್ಟನ್ನು ಮಾತ್ರ ತುಂಬಲಾಗಿದೆ. 735 ಹುದ್ದೆಗಳಲ್ಲಿ 38 ಹುದ್ದೆಗಳು ಭರ್ತಿಯಾಗಿವೆ.

ಸಹಾಯಕ ಪ್ರಾಧ್ಯಾಪಕ ಹುದ್ದೆಗಳಲ್ಲಿ ಮಾತ್ರ ಸಮಾಧಾನಕರ ಅಂಶ ಎದ್ದುಕಾಣುತ್ತಿದೆ. ಈ ವಿಭಾಗದಲ್ಲಿ ಸುಮಾರು 60% ಒಬಿಸಿ ಹುದ್ದೆಗಳು ಭರ್ತಿಯಾಗಿವೆ. ಒಟ್ಟು ಮಂಜೂರಾದ 2232 ಹುದ್ದೆಗಳಲ್ಲಿ 1327 ಹುದ್ದೆಗಳು ಭರ್ತಿಯಾಗಿವೆ.

ಇದನ್ನೂ ಓದಿ: ಒಬಿಸಿ ಅಭ್ಯರ್ಥಿಗಳಿಗೆ ನೀಟ್ ಮೀಸಲಾತಿಯಲ್ಲಿ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಆದಾಯದ ಮಿತಿಯನ್ನು ನಿರ್ಧರಿಸಲು ಸಂಬಳವನ್ನು ಒಂದು ಅಂಶವಾಗಿ ಸೇರಿಸುವ ಮೂಲಕ ಒಬಿಸಿ ಮೀಸಲಾತಿಯಲ್ಲಿನ “ಕೆನೆ ಪದರ” ದ ವ್ಯಾಖ್ಯಾನವನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿರ್ಧಾರಕ್ಕೆ ಬಿಜೆಪಿಯಲ್ಲಿನ ಕೆಲವ ಒಬಿಸಿ ಸಂಸದರು ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಅಪಸ್ವರ ಎತ್ತಿವೆ. ಈಗಾಗಲೇ ಒಬಿಸಿ ಸಮುದಾಯದ ಕಡಿಮೆ ಪ್ರಾತಿನಿಧ್ಯವಿದ್ದು, ಕೇಂದ್ರದ ಈ ನಡೆ ಅದನ್ನು ಮತ್ತಷ್ಟು ಕಡಿಮೆಗೊಳಿಸುತ್ತದೆ ಎಂದು ಆರೋಪಿಸಿವೆ.

ಕಳೆದ ತಿಂಗಳ ಸಭೆಯೊಂದರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಒಬಿಸಿ ಪ್ರಾತಿನಿಧ್ಯದ ಕುರಿತು ಮಾಹಿತಿ ಒದಗಿಸುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶಿಸಿದ್ದರು. ತದನಂತರದ ಪರಿಶೀಲನೆಯಲ್ಲಿ ಈ ಮೇಲಿನ ಅಂಶಗಳು ಬೆಳಕಿಗೆ ಬಂದಿವೆ.

ಕಾರಣವೇನು?

2016 ಸುಪ್ರೀಂ ಕೋರ್ಟ್‌ನ ಆದೇಶದಂತೆ ಯುಜಿಸಿಯು ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗಳಲ್ಲಿ ಒಬಿಸಿ ಸಮುದಾಯಕ್ಕಿದ್ದ 27% ಮೀಸಲಾತಿಯನ್ನು ರದ್ದುಗೊಳಿಸಿತ್ತು. 27% ಮೀಸಲಾತಿಯನ್ನು ಕೇವಲ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮಾತ್ರ ಸೀಮಿತಗೊಳಿಸಿತ್ತು.

ನಂತರ 2019 ರಲ್ಲಿ ಸರ್ಕಾರವು ಕೇಂದ್ರ ಶಿಕ್ಷಣ ಸಂಸ್ಥೆಗಳು (ಶಿಕ್ಷಕರ ಹುದ್ದೆಗಳಲ್ಲಿ ಮೀಸಲಾತಿ) ಸುಗ್ರೀವಾಜ್ಞೆಯನ್ನು ತಂದಿತು. ಆದ್ದರಿಂದ ಎಸ್‌ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಕೇಂದ್ರ ಸರ್ಕಾರದಿಂದ ತೆರೆಯಲ್ಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಮೀಸಲಾತಿಯನ್ನು ಮತ್ತೆ ಒದಗಿಸಿತು.

ಆದರೂ ಸಾಕಷ್ಟು ಪ್ರಚಾರದ ಕೊರತೆಯಿಂದಾಗಿ ಉನ್ನತ ಭೋದನಾ ಹುದ್ದೆಗಳಲ್ಲಿ ಒಬಿಸಿಗಳ ಸಮುದಾಯದ ಪ್ರಾತಿನಿಧ್ಯತೆ ಹೆಚ್ಚಾಗಿಲ್ಲ. ಸರ್ಕಾರವು ಸಮರ್ಥ ಪರಿಣಿತರು ಸಿಗುತ್ತಿಲ್ಲ ಎಂದು ವಾದಿಸುತ್ತಿದೆ. ಇಷ್ಟು ದೊಡ್ಡ ದೇಶದಲ್ಲಿ ಒಬಿಸಿ ಸಮುದಾಯದ ಪ್ರಾಧ್ಯಾಪಕರಿಲ್ಲವೇ ಎಂಬ ಪ್ರಶ್ನೆಯನ್ನು ಇದು ಮುನ್ನೆಲೆಗೆ ತಂದಿದೆ.

ವಿವಿಗಳಲ್ಲಿ ಮೀಸಲಾತಿ ನೀಡಲು ಸರ್ಕಾರಕ್ಕೆ ಮನಸ್ಸಿಲ್ಲ

ಒಬಿಸಿಗಳ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಿಸಿಕೊಳ್ಳಲು ಯಾವುದೇ ಜಾಹೀರಾತು ನೀಡುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ನೇಮಕ ಮಾಡಿಕೊಳ್ಳುವ ಮನಸ್ಸಿಲ್ಲ ಎಂದು ನೇಮಕಾತಿ ಸಮಿತಿಯ ಭಾಗವಾಗಿರುವ ದೆಹಲಿ ವಿವಿಯ ಮಹಾರಾಜ ಆಗ್ರಾಸೆನ್ ಕಾಲೇಜಿನ ಭೋದಿಸುವ ಸುಬೋಧ್ ಕುಮಾರ್ ಹೇಳುತ್ತಾರೆ.

ಯಾವುದೇ ವಿವಿಯ ಉಪಕುಲಪತಿಗಳ ಹುದ್ದೆಯಲ್ಲಿ ಮೇಲ್ಜಾತಿಯವರಿರುತ್ತಾರೆ. ಅವರು ಮೇಲ್ಜಾತಿಯವರಿಗೆ ಹೆಚ್ಚಿನ ಅವಕಾಶ ನೀಡುತ್ತಾರೆ. ಮೇಲ್ಜಾತಿ ಸಂಸ್ಕೃತಿಯೇ ಬೇರೂರಿದೆ ಎಂದು ಅವರು ಆರೋಪಿಸಿದ್ದಾರೆ.

ನೇಮಕಾತಿ ವಿಧಾನವೂ ತೀರಾ ನಿಧಾನವಾಗಿದೆ. ಅಲ್ಲದೇ ಸರ್ಕಾರಿ ಸಂಸ್ಥೆಗಳಲ್ಲಿ ಒಬಿಸಿಗಳ ಮೀಸಲಾತಿ ಜಾರಿಯೂ ಸಹ ವಿಳಂಬವಾಗುತ್ತದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿರ್ದಿಷ್ಠ ಸಿದ್ದಾಂತಕ್ಕೆ ಬದ್ಧರಾಗಿಲ್ಲದಿದ್ದರೆ ನಿಮ್ಮ ನೇಮಕಾತಿ ತೀರಾ ಕಷ್ಟವಾಗುತ್ತದೆ. ಈ ಮೂರು ಕಾರಣಗಳು ಒಬಿಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಉನ್ನತ ಭೋದನಾ ಹುದ್ದೆಗಳಲ್ಲಿ ಇಲ್ಲದಿರುವುದಕ್ಕೆ ಕಾರಣ ಎಂದು ಜೆಎನ್‌ಯುವಿನ ಪ್ರೊ.ನರೇಂದ್ರ ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ: NEET ಪರೀಕ್ಷೆಯಲ್ಲಿ OBC ಮೀಸಲಾತಿ ನೀಡಿ, ಸಾಮಾಜಿಕ ನ್ಯಾಯ ಪಾಲಿಸಿ: ಪ್ರಿಯಾಂಕಾ ಗಾಂಧಿ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿವಾಸದಲ್ಲಿ ನಗದು ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ

ತಮ್ಮ ನಿವಾಸದಲ್ಲಿ ನಗದು ಪತ್ತೆ ಆರೋಪದ ಕೇಂದ್ರಬಿಂದುವಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಕಳೆದ ವರ್ಷ ಏಪ್ರಿಲ್ 5...

ಆಂಧ್ರಪ್ರದೇಶ: ಬೇಸಿಗೆ ವಿಹಾರಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಮುಳುಗಿ ಸಾವು 

ಅನಂತಗಿರಿ: ಬೇಸಿಗೆ ವಿಹಾಕ್ಕೆಂದು ತೆರಳಿದ್ದ ಮೂವರು ಅಪ್ರಾಪ್ತ ಬಾಲಕಿಯರು ಅನಂತಗಿರಿ ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲೂರಿ ಸೀತಾರಾಮರಾಜು ಮೂಲಗುಮ್ಮಿ ಗ್ರಾಮದಲ್ಲಿ ನಾಲ್ವರು...

ಶಬರಿಮಲೆ ತುಪ್ಪ ಮಾರಾಟ ಹಗರಣ: ತನಿಖೆ ಪೂರ್ಣಗೊಳಿಸಲು ವಿಎಸಿಬಿಗೆ 30 ದಿನ ಕಾಲಾವಕಾಶ ನೀಡಿದ ಕೇರಳ ಹೈಕೋರ್ಟ್ 

ಕೊಚ್ಚಿ: ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ಭಕ್ತರಿಗೆ ಮಾರಾಟವಾಗುವ ಪವಿತ್ರ ನೈವೇದ್ಯ 'ಆದಿಯ ಸಿಷ್ಟಂ ತುಪ್ಪ' ಮಾರಾಟಕ್ಕೆ ಸಂಬಂಧಿಸಿದಂತೆ ಟಿಡಿಬಿ ನೌಕರರು ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದ ತನಿಖೆಯನ್ನು ಪೂರ್ಣಗೊಳಿಸಲು ಕೇರಳ ಹೈಕೋರ್ಟ್ ಜಾಗೃತ...

ಧಾರ್ಮಿಕ ಆಚರಣೆ ಹೆಸರಿನಲ್ಲಿ ನರ್ಮದಾ ನದಿಗೆ 11,000 ಲೀಟರ್ ಹಾಲು ಸುರಿದ ಭಕ್ತರು

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ನರ್ಮದಾ ನದಿ ದಂಡೆಯಲ್ಲಿ ಬುಧವಾರ ನಡೆದ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ 11,000 ಲೀಟರ್ ಹಾಲು ನರ್ಮದಾ ನದಿಗೆ ಸುರಿಯಲಾಗಿದ್ದು, ಇದು ನಂಬಿಕೆ ಮತ್ತು ಪರಿಸರ ಹಾನಿಯ ಕುರಿತು ಚರ್ಚೆಗೆ...

ಪಶ್ಚಿಮ ಬಂಗಾಳ: ಹುಮಾಯೂನ್ ಕಬೀರ್ ಪಕ್ಷದೊಂದಿಗಿನ ಮೈತ್ರಿ ಹಿಂತೆಗೆದುಕೊಂಡ ಎಐಎಂಐಎಂ; ಸ್ವತಂತ್ರ ಸ್ಪರ್ಧೆ ಘೋಷಣೆ

ಮುಂಬರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹುಮಾಯೂನ್ ಕಬೀರ್ ನೇತೃತ್ವದ ಪಕ್ಷದೊಂದಿಗಿನ ಮೈತ್ರಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಘೋಷಿಸಿದೆ. ಕಬೀರ್ ಅವರ ಹೇಳಿಕೆಗಳು ಮತ್ತು ಬಹಿರಂಗಪಡಿಸುವಿಕೆಗಳು "ಮುಸ್ಲಿಮರ ಸಮಗ್ರತೆ"ಯ ಬಗ್ಗೆ...

ಏಕನಾಥ್ ಶಿಂಧೆ ಕುರಿತ ಹೇಳಿಕೆ ವಿವಾದ; ‘ಕ್ಷಮೆಯಾಚಿಸುವುದಿಲ್ಲ’ ಎಂದ ಕುನಾಲ್ ಕಮ್ರಾ

ಕೋಮುವಾದಿ ರಾಜಕಾರಣವನ್ನು ವಿರೋಧಿಸುತ್ತಾ ಬಲಪಂಥೀಯ ರಾಜಕೀಯವನ್ನು ವಿಡಂಬನೆ ಮಾಡುವ ಭಾರತದ ಖ್ಯಾತ 'ಸ್ಟಾಂಡಪ್‌ ಕಾಮಿಡಿಯನ್' ಕುನಾಲ್ ಕಮ್ರಾ ಗುರುವಾರ ಮಹಾರಾಷ್ಟ್ರ ಶಾಸಕಾಂಗ ಸಮಿತಿಯ ಮುಂದೆ ಹಾಜರಾದರು. "ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿಕೊಂಡು...

ಪಶ್ಚಿಮ ಏಷ್ಯಾ ಬಿಕ್ಕಟ್ಟು| ’10 ಅಂಶಗಳ ಪ್ರಸ್ತಾವನೆಯ ಮೂರು ಷರತ್ತುಗಳನ್ನು ಉಲ್ಲಂಘಿಸಲಾಗಿದೆ’: ‘ಕದನ ವಿರಾಮ’ದ ಮರುದಿನ ಇರಾನ್ ಹೇಳಿಕೆ

ಮಂಗಳವಾರ ಒಪ್ಪಿಕೊಂಡ ಕದನ ವಿರಾಮದ ನಿಯಮಗಳನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ ಗಾಲಿಬಾಫ್ ಬುಧವಾರ ಆರೋಪಿಸಿದ್ದಾರೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ  X ನಲ್ಲಿ ಈಬರೆದಿರುವ ಗಾಲಿಬಾಫ್, ಅಮೆರಿಕದ ಬಗ್ಗೆ...

ಬಂಗಾಳ ಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಆರ್‌ಜಿ-ಕರ್ ಸಂತ್ರಸ್ತೆ ತಾಯಿ

ಕರ್ತವ್ಯದಲ್ಲಿರುವಾಗಲೇ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಆರ್‌ಜಿಕರ್ ಆಸ್ಪತ್ರೆಯ ವೈದ್ಯೆಯ ತಾಯಿ ರತ್ನಾ ದೇಬ್ನಾಥ್ ಅವರು ಪಾಣಿಹತಿಯ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ...

‘ಮುಸ್ಲಿಮರನ್ನು ಮರುಳು ಮಾಡುವುದು ಸುಲಭ’: ಹುಮಾಯೂನ್ ಕಬೀರ್ ವಿಡಿಯೋ ವಿವಾದ: ತನಿಖೆಗೆ ಟಿಎಂಸಿ ಒತ್ತಾಯ

ಪಶ್ಚಿಮ ಬಂಗಾಳದಲ್ಲಿ ಗುರುವಾರ ರಾಜಕೀಯ ವಿವಾದ ಭುಗಿಲೆದ್ದಿದ್ದು, ಹುಮಾಯೂನ್ ಕಬೀರ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಹಿರಿಯ ಬಿಜೆಪಿ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...

ಲೆಬನಾನ್ ಮೇಲೆ ‘ಅಗತ್ಯವಿರುವಲ್ಲೆಲ್ಲಾ’ ದಾಳಿ ಮುಂದುವರಿಸುವುದಾಗಿ ಘೋಷಿಸಿದ ನೆತನ್ಯಾಹು; ಹಿಜ್ಬೊಲ್ಲಾದ ಉನ್ನತ ಅಧಿಕಾರಿ ಹತ್ಯೆ 

ಇಸ್ರೇಲ್, ಲೆಬನಾನ್ ಮೇಲೆ ದಾಳಿ ಮಾಡಿದ ಮರುದಿನ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ, ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮೇಲೆ "ಅಗತ್ಯವಿರುವಲ್ಲೆಲ್ಲಾ" ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಇಸ್ರೇಲಿ ಸೇನೆಯು ಗುರುವಾರ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು...