Homeಮುಖಪುಟದ್ವೇಷವನ್ನು ಸೋಲಿಸುವ ಮೂಲಕ 'ಮೊಹಬ್ಬತ್ ಕಿ ದುಕಾನ್' ತೆರೆಯಿರಿ: ರಾಹುಲ್ ಗಾಂಧಿ

ದ್ವೇಷವನ್ನು ಸೋಲಿಸುವ ಮೂಲಕ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ: ರಾಹುಲ್ ಗಾಂಧಿ

- Advertisement -
- Advertisement -

ಇಂದಿನಿಂದಆರಂಭವಾಗುತ್ತಿರುವ 2024ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆಮೂಲೆಗಳಲ್ಲಿ ‘ಪ್ರೀತಿಯ ಅಂಗಡಿ’ (ಮೊಹಬ್ಬತ್ ಕಿ ದುಕಾನ್) ತೆರೆಯುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

“ಇಂದು ಮೊದಲ ಹಂತದ ಮತದಾನವಾಗಿದೆ! ನೆನಪಿಡಿ, ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾಪ್ರಭುತ್ವ ಮತ್ತು ಅದರ ತಲೆಮಾರುಗಳ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಪೋಸ್ಟ್‌ ಮಾಡಿದ್ದಾರೆ.

‘ಕಳೆದ 10 ವರ್ಷಗಳಲ್ಲಿ ದೇಶದ ಆತ್ಮಕ್ಕೆ ಉಂಟಾದ ಗಾಯದ ಮೇಲೆ ನಿಮ್ಮ ಮತದ ಮುಲಾಮು ಹಚ್ಚಿ ಪ್ರಜಾಪ್ರಭುತ್ವವನ್ನು ಬಲಪಡಿಸಿ. ದ್ವೇಷವನ್ನು ಸೋಲಿಸುವ ಮೂಲಕ ದೇಶದ ಮೂಲೆ ಮೂಲೆಯಲ್ಲಿ ‘ಮೊಹಬ್ಬತ್ ಕಿ ದುಕಾನ್’ ತೆರೆಯಿರಿ’ ಎಂದು ಮನವಿ ಮಾಡಿದ್ದಾರೆ.

‘ಅಪ್ರೆಂಟಿಸ್‌ಶಿಪ್ ಹಕ್ಕು, ಎಂಎಸ್‌ಪಿಯ ಕಾನೂನು ಖಾತರಿ ಮತ್ತು ರಾಷ್ಟ್ರವ್ಯಾಪಿ ಜಾತಿಗಣತಿ ಸೇರಿದಂತೆ ಪ್ರಮುಖ ಕಾಂಗ್ರೆಸ್ ಖಾತರಿಗಳ’ ಗ್ರಾಫಿಕ್ ಅನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.

2024ರ ಲೋಕಸಭಾ ಚುನಾವಣೆಯು ಶುಕ್ರವಾರ ಪ್ರಾರಂಭವಾಯಿತು, ಮೊದಲ ಹಂತದ ಮತದಾನವು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 102 ಸ್ಥಾನಗಳಿಗೆ ನಿಗದಿಯಾಗಿದೆ.

ಕಣದಲ್ಲಿರುವವರಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಸರ್ಬನಾದ ಸೋನೋವಾಲ್ ಮತ್ತು ಭೂಪೇಂದ್ರ ಯಾದವ್, ಕಾಂಗ್ರೆಸ್‌ನ ಗೌರವ್ ಗೊಗೊಯ್, ಡಿಎಂಕೆಯ ಕನಿಮೋಳಿ ಮತ್ತು ಬಿಜೆಪಿಯ ಕೆ ಅಣ್ಣಾಮಲೈ ಸೇರಿದ್ದಾರೆ.

ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭೆ ಚುನಾವಣೆಗಳು ಸಹ ಏಕಕಾಲದಲ್ಲಿ ನಡೆಯುತ್ತಿವೆ.

ಇದನ್ನೂ ಓದಿ; ಸಂವಿಧಾನ-ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟ ಇಂದಿನಿಂದ ಆರಂಭ: ಮಲ್ಲಿಕಾರ್ಜುನ ಖರ್ಗೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...