Homeಕರ್ನಾಟಕನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

ನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

- Advertisement -
- Advertisement -

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ಸರಕಾರ ರಚನೆಯಾದ ಒಂದೇ ವಾರಕ್ಕೆ ಸಕ್ಕರೆ ಕಾರ್ಖಾನೆಗೆ ಐವತ್ತು ಕೋಟಿ ಹಣ ಬಿಡುಗಡೆ ಮಾಡಿಸಿ ತಾವೊಬ್ಬ ಸಮರ್ಥ ಮಂತ್ರಿ ಎಂಬ ಭರವಸೆಯನ್ನು ಮೂಡಿಸುವತ್ತ ಮುಂದಡಿಯಿಟ್ಟಿದ್ದಾರೆ!

ಮಂಡ್ಯ ಜಿಲ್ಲಾಪಂಚಾಯ್ತಿಗೆ ಆಯ್ಕೆಯಾಗುವುದರ ಮುಖಾಂತರ ರಾಜಕೀಯ ಪ್ರವೇಶ ಪಡೆದ ಚಲುವರಾಯಸ್ವಾಮಿ ಅಂದು ಜಿಲ್ಲಾ ಮಂತ್ರಿಯಾಗಿದ್ದ ಎಸ್.ಡಿ ಜಯರಾಮರ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ನಾಗಮಂಗಲ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನಪ್ರಿಯತೆ ಗಳಿಸತೊಡಗಿದರು. ಸಹಜವಾಗಿ ಅಂದಿನ ಶಾಸಕರು ಮತ್ತು ಬಿಡಿಎ ಛೇರ್ಮನ್ ಆಗಿದ್ದ ಶಿವರಾಮೇಗೌಡರು ತನ್ನ ಪ್ರತಿಸ್ಪರ್ಧಿಯ ವಿಷಯವಾಗಿ ಹೆಚ್ಚು ಪ್ರಚಾರ ಕೊಡತೊಡಗಿದರು; ಅದಾಗಲೇ ವಕೀಲ ಮತ್ತು ಪತ್ರಕರ್ತ ಗಂಗಾಧರಮೂರ್ತಿ ಕೊಲೆ ಆಪಾದನೆಯಿಂದ ಬಿಡುಗಡೆಯಾಗಿದ್ದ ಶಿವರಾಮೇಗೌಡರು ಹೊಸ ಹುಮ್ಮಸ್ಸಿನಿಂದ ನಾನು ಅಂತಹವನಲ್ಲ ಎಂದು ಸಾಬೀತುಮಾಡುವ ಭರದಲ್ಲಿ ಚಲುವರಾಯಸ್ವಾಮಿಗೇ ಹೆಚ್ಚು ಪ್ರಚಾರಕೊಟ್ಟರು. ಜನಕ್ಕೆ ಚಲುವರಾಯಸ್ವಾಮಿ ಹೇಗಿರಬಹುದೆಂಬ ಕುತೂಹಲ ಜಾಸ್ತಿಯಾಗಿ ತಮ್ಮ ಊರಿನ ಹಬ್ಬ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರೆಯತೊಡಗಿದರು; ಆಗ ಜನರಿಗೆ ತಮ್ಮ ನಾಯಕನಾಗಲು ಈತನೇ ಸರಿ ಅನ್ನಿಸತೊಡಗಿತು. ಮುಂದೆ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶೀವರಾಮೇಗೌಡರ ಎದುರು 16 ಸಾವಿರ ಮತಗಳ ಮುನ್ನಡೆಯಿಂದ ಗೆದ್ದರು. ಆಗ ಕುಮಾರಸ್ವಾಮಿ ದೇವೇಗೌಡರಾದಿಯಾಗಿ ಸೋತು ಹೋಗಿದ್ದರಿಂದ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಗುರುತಿಸುವ ನಾಯಕರಾಗಿ ಬೆಳೆಯತೊಡಗಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡೇ ಎಸ್‌ಎಂ ಕೃಷ್ಣರ ಸರಕಾರದಿಂದ ತಾಲೂಕಿಗೆ ಬೇಕಾದ ಕೆಲಸ ಮಾಡುತ್ತ ಐದು ವರ್ಷ ತುಂಬಿಸಿದಾಗ ಮತ್ತೆ ಚುನಾವಣೆ ಬಂತು. 2004ರಲ್ಲಿ ಮತ್ತೆ ಗೆದ್ದ ಚಲುವರಾಯಸ್ವಾಮಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾದರು. ಆಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದುದಲ್ಲದೆ ನಾಗಮಂಗಲದ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಸುಮಾರು ಐದು ಊರುಗಳಿಗೆ ಪ್ರಾಥಮಿಕ ಆರೋಗ್ಯದ ಘಟಕಗಳನ್ನು ತಂದರು. ಇದರ ಜೊತೆಗೆ ರಾಜ್ಯದ ಇನ್ನಿತರ ಕಡೆಯ ಜವಾಬ್ದಾರಿಯನ್ನು ನೋಡಬೇಕಿದ್ದುದರಿಂದ ಆರೋಗ್ಯ ಇಲಾಖೆಯನ್ನು ಸುಸ್ಥಿತಿಗೆ ತರುವ ಸಮಯದಲ್ಲಿ ಸಮ್ಮಿಶ್ರ ಸರಕಾರವೇ ಹೈಜಾಕಾದಂತಾಗಿ ಧರ್ಮಸಿಂಗ್ ಮನೆಗೆ ಹೋದರು. ಬಹುಶಃ ಕರ್ನಾಟಕದ ರಾಜಕಾರಣ ತನ್ನ ಪಥವನ್ನು ಬದಲಿಸಿಕೊಂಡು ಪತನದ ಹಾದಿ ಹಿಡಿಯಲು ಇದೇ ಕಾರಣ. ಕುಮಾರಸ್ವಾಮಿಯವರು ಬಿಜೆಪಿಗಳೊಟ್ಟಿಗೆ ಸರಕಾರ ಮಾಡಿದರು.

ದೇವೇಗೌಡ

ಆಗ ಕುಮಾರಸ್ವಾಮಿ ಸುತ್ತ ಸಮರ್ಥರ ದಂಡೇ ನೆರೆದಿತ್ತು; ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಹೀಗೆ; ಇವರೆಲ್ಲಾ ತಮ್ಮ ಮಗನನ್ನು ಮೀರಿಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ ಕಂಡಿದ್ದರಿಂದ ಆತಂಕಗೊಂಡ ದೇವೇಗೌಡರು ಮಗನೊಂದಿಗೆ ರಾಜಿಯಾಗಿ ಅಧಿಕಾರದ ಸೂತ್ರ ಕೈಗೆ ತೆಗೆದುಕೊಳ್ಳತೊಡಗಿದರು. ಚಲುವರಾಯಸ್ವಾಮಿ ಆಗ ಸಾರಿಗೆ ಸಚಿವರಾಗಿದ್ದರು. ಆಗಾಗಲೇ ನಾಗಮಂಗಲಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ತಂದು ಆರ್‌ಟಿಓ ಆಫೀಸ್ ತೆರೆದಿದ್ದರು ಮತ್ತು ಬಸ್ಸನ್ನೇ ನೋಡದಂತಹ ಹಳ್ಳಿಗಳಿಗೂ ಬಸ್ಸು ಹೋಗಿ ಬರುವಂತೆ ಮಾಡಿದ್ದರು. ಕೆ.ಇ.ಬಿಯ ಇ.ಇ ಆಫೀಸು (ಎಕ್ಸೆಕ್ಯುಟಿವ್ ಇಂಜಿನಿಯರ್ ಆಫೀಸು) ಪಾಂಡವಪುರದಲ್ಲಿತ್ತು. ಅದನ್ನು ನಾಗಮಂಗಲಕ್ಕೂ ತಂದರು.

ಆಗ ಅಸಿಸ್ಟೆಂಟ್ ಕಮೀಷನರ್ ಕಚೇರಿ ಪಾಂಡವಪುರದಲ್ಲಿದ್ದು ನಾಗಮಂಗಲ ಪ್ರಾಂತ್ಯದ ಜನ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಪಾಂಡವಪುರಕ್ಕೆ ಅಲೆಯಬೇಕಾಗಿತ್ತು. ಚಲುವರಾಯಸ್ವಾಮಿಯವರು ಎ.ಸಿ. ಕಚೇರಿಯೇ ವಾರಕ್ಕೊಮ್ಮೆ ನಾಗಮಂಗಲಕ್ಕೆ ಬಂದು ಕೆಲಸ ಮಾಡುವಂತೆ ಮಾಡಿದರು. ಅಲ್ಲದೆ ತಾಲೂಕಿನ ದೊಡ್ಡ ಊರುಗಳಿಗೆ ಹೈಸ್ಕೂಲು ತಂದರು. ಅಷ್ಟರಲ್ಲಿ ಇವರುಗಳ ಇಲಾಖೆಯ ಕೆಲಸಗಳಿಗೆ ಅಡೆತಡೆಗಳು ಶುರುವಾದವು. ಗೌಡರಿಗೆ ಚಲುವರಾಯಸ್ವಾಮಿ ಎಲ್ಲೋ ತಮ್ಮ ಮಗನನ್ನೇ ಒವರ್‌ಟೇಕ್ ಮಾಡುವಂತೆ ಕಂಡಿತು; ಹಾಗಾಗಿ ದೇವೇಗೌಡರ ಅಭಿಮಾನಿಗಳು ಮತ್ತು ರೇವಣ್ಣನ ಹಿಂಬಾಲಕರು ಮುಂದಿನ 2008ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತು ಜನಜನಿತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಮುಂದೆ ಪಹರೆ ವಾಹನದ ನಡುವೆ ಸೈರನ್ ಮೊಳಗಿಸಿಕೊಂಡು ಹೋಗುವ ಮಂತ್ರಿ ಬಗ್ಗೆ ನಿಷ್ಕಾರಣದ ತಾತ್ಸಾರ ಬೆಳೆದುಕೊಂಡಿದ್ದು ಒಂದು ಕಾರಣವಾಗಿ ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋತರು. ಇಷ್ಟೊಂದು ಕೆಲಸ ಮಾಡಿಯೂ ಜನ ಸೋಲಿಸಿದರಲ್ಲಾ ಎಂಬ ನಿರಾಶೆಗೆ ಚಲುವರಾಯಸ್ವಾಮಿ ಒಳಗಾಗಿದ್ದರು. ಬೇರೆ ಕಾರಣಗಳೂ ಇದ್ದವು. ಆ ಕಾರಣಗಳು ಮುಂದೆ ಬೃಹದಾಕಾರವಾಗಿ ಎದ್ದುನಿಂತು ದೇವೇಗೌಡರು ನಾಗಮಂಗಲ ಕ್ಷೇತ್ರದ ದೇವಸ್ಥಾನ ಉದ್ಘಾಟನೆ, ತಿಥಿ, ಮದುವೆಗೆಲ್ಲಾ ಬಂದು ಚಲುವರಾಯಸ್ವಾಮಿಯನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಆಗ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆ ನೌಕರರ ವಸತಿ ನಿರ್ಮಾಣದ ಸೊಸೈಟಿಯಲ್ಲಿ ಹೆಸರು ಮಾಡಿದ್ದ ಸುರೇಶ್‌ಗೌಡರು ಬಂದು ಚಲುವರಾಯಸ್ವಾಮಿ ಎದುರು ನಿಂತು ಗೆದ್ದರು. 2013ರಲ್ಲಿ ಚಲುವರಾಯಸ್ವಾಮಿ ಮತ್ತೆ ಜೆಡಿಎಸ್‌ನಿಂದ ಗೆದ್ದರೂ ಆಗ ಕಾಂಗ್ರೆಸ್ ಸರ್ಕಾರ ಬಂತು. ಮುಂದೆ ಅದುಲುಬದಲಾಗಿ ಸುರೇಶ್‌ಗೌಡ ಜನತಾದಳಕ್ಕೆ ಹೋದರೆ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಹೋದರು.

ಇದನ್ನೂ ಓದಿ: ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಂತರ 2018ರ ಚುನಾವಣೆಯಲ್ಲಿ ಸುರೇಶ್‌ಗೌಡರು ದಾಖಲೆಯ ನಲವತ್ತೇಳುವರೆ ಸಾವಿರ ಲೀಡನಲ್ಲಿ ಗೆದ್ದರು. ಚಲುವರಾಯಸ್ವಾಮಿ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ಸಿಗೆ ಹೋದರೆಂದು ದೇವೇಗೌಡರ ಕಡೆಯವರು ಮತದಾರರನ್ನು ಕೆರಳಿಸಿ ಗೆಲುವು ಸಾಧಿಸಿದ್ದರು. ಮುಂದೆ ಸಮ್ಮಿಶ್ರ ಸರಕಾರ ಬಂತು; 80 ಸೀಟು ಗೆದ್ದಿದ್ದ ಕಾಂಗ್ರೆಸ್ ಮೂವತ್ತು ಚಿಲ್ಲರೆ ಸೀಟು ಗೆದ್ದಿದ್ದ ದಳಕ್ಕೆ ಸಪೋರ್ಟಟು ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಚಲುವರಾಯಸ್ವಾಮಿಯವರನ್ನು ಮೂಲೆಗುಂಪು ಮಾಡಿ ಮಂಡ್ಯವನ್ನು ಕೈಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ ದೇವೇಗೌಡರು ಮತ್ತು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರು. ಅವರಗೂ ಓಟು ಕೇಳುವಂತಹ ಸ್ಥಿತಿ ಚಲುವರಾಯಸ್ವಾಮಿಗೆ ಬಂತು. ಆದರೆ ಮಂಡ್ಯದ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯಾದ ನಿಖಿಲ್‌ಗೆ ಕೆಲಸ ಮಾಡುವುದರ ಬದಲು ಸುಮಲತಾಗೆ ವರ್ಕ್ ಮಾಡಿದ್ದರಿಂದ ನಿಖಿಲ್ ಒಂದೂಕಾಲು ಲಕ್ಷದ ಅಂತರದಿಂದ ಸೋತರು. ಇದರಲ್ಲಿ ಚಲುವರಾಯಸ್ವಾಮಿ ಶ್ರಮವೂ ಇತ್ತು.

ಸುರೇಶ್‌ಗೌಡ

ಮುಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಾಗಮಂಗಲದ ಮುಖಾಂತರ ಹಾದುಹೋಗುವಾಗ ಅದರ ಜವಾಬ್ದಾರಿ ಚಲುವರಾಯಸ್ವಾಮಿ ಮೇಲೆ ಬಿತ್ತು. ಈ ಐತಿಹಾಸಿಕ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಚಲುವರಾಯಸ್ವಾಮಿ ರಾಹುಲಗಾಂಧಿಗೆ ಹತ್ತಿರವಾದರು.

ಈ ಬಾರಿ ಚಲುವರಾಯಸ್ವಾಮಿ ಎದುರಿಸಿದ ನಾಗಮಂಗಲದ ಚುನಾವಣೆ ಹಿಂದಿಗಿಂತಲೂ ಬಿರುಸಾಗಿತ್ತು. ಗೆಲ್ಲುವ ಎಲ್ಲ ಸೂಚನೆಗಳಿದ್ದರೂ ಕಡೆ ಗಳಿಗೆಯಲ್ಲಿ ನಾಗಮಂಗಲಕ್ಕೆ ಬಂದು ರೋಡ್‌ಶೋ ಮಾಡಿದ ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲು ಕರೆಕೊಟ್ಟಿದ್ದಲ್ಲದೆ, ಗದ್ಗರಿತವಾಗಿ ಕೇಳಿಕೊಂಡರು. ಅವರ ಸಭೆಗೆ ಸೇರಿದ್ದ ಜನಸ್ತೋಮ ನೋಡಿದ ಜನರು ಸುರೇಶ್‌ಗೌಡರ ಗೆಲುವಿನ ಬಗ್ಗೆ ಯಾವ ಸಂಶಯವನ್ನು ಇಟ್ಟುಕೊಳ್ಳದೆ ಮನಸ್ಸಿಗೆ ಬಂದಷ್ಟು ಬೆಟ್ ಕಟ್ಟಿ ಸೋತುಹೋದರು. ಬೆಳ್ಳೂರು, ನಾಗಮಂಗಲ ಮತ್ತು ಕೊಪ್ಪ ಹೋಬಳಿ ಚಲುವರಾಯಸ್ವಾಮಿಯವರ ಕೈಹಿಡಿದಿದ್ದರಿಂದ ಅವರು ನಾಲ್ಕುವರೆ ಸಾವಿರ ವೋಟುಗಳ ಅಂತರದಲ್ಲಿ ಗೆದ್ದರು. ಈಗ ಎಲ್ಲ ಅಡೆತಡೆಗಳನ್ನು ನಿಭಾಯಿಸಿಕೊಂಡು ಗೆದ್ದು ಸಚಿವರಾಗಿರುವ ಮಂಡ್ಯ ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿಯನ್ನು ಮಂಡ್ಯದ ಕರ್ನಾಟಕ ಸಂಘ ಸನ್ಮಾನಿಸಿದೆ. ಕೃಷಿ ಸಮಾಜದಿಂದ ಬಂದ ಭೈರೇಗೌಡರ ನಂತರ ಚಲುವರಾಯಸ್ವಾಮಿ ಆ ಇಲಾಖೆಗೆ ಜೀವ ನೀಡಬೇಕಾಗಿದೆ. ನಾಗಮಂಗಲದ ಶಾಸಕರಾಗಿದ್ದ ಚಲುವರಾಯಸ್ವಾಮಿ ಈಗ ಕೃಷಿಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ, ಮಂಡ್ಯದಲ್ಲಿ ನಿರ್ವಹಣೆಯಿಲ್ಲದೆ ಹಾಳುಬಿದ್ದಿರುವ ರೈತ ಸಭಾಂಗಣ, ಕಲಾಮಂದಿರ ಇತ್ಯಾದಿ ಸಾಂಸ್ಕೃತಿಕ ವಲಯಗಳ ಪುನಶ್ಚೇತನಕ್ಕೆ ಕೆಲಸ ಮಾಡಿ, ಮಂಡ್ಯವನ್ನು ಅದರ ಗತಕಾಲದ ವೈಭವಕ್ಕೆ ಮರಳಿ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...