Homeಚಳವಳಿತಾನು ಮಾಡಿದ ಕೆಲಸದ ವರದಿಯನ್ನು ತನ್ನ ಕ್ಷೇತ್ರದ 78ಸಾವಿರ ಮನೆಗೆ ತಲುಪಿಸಿದ ಶಾಸಕ!!

ತಾನು ಮಾಡಿದ ಕೆಲಸದ ವರದಿಯನ್ನು ತನ್ನ ಕ್ಷೇತ್ರದ 78ಸಾವಿರ ಮನೆಗೆ ತಲುಪಿಸಿದ ಶಾಸಕ!!

- Advertisement -
- Advertisement -

| ನಾನುಗೌರಿ ಡೆಸ್ಕ್ |

ನೀವು ಯಾವುದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಆಗಾಗ್ಗೆ ನಿಮ್ಮ ಕೆಲಸದ ವರದಿಯನ್ನು ಮ್ಯಾನೇಜರ್ ರವರಿಗೆ ಸಲ್ಲಿಸಬೇಕು. ಅದೇ ರೀತಿ ನಮ್ಮ ಎಂಪಿ, ಎಂಎಲ್‍ಎಗಳು ಸಹ ಎಷ್ಟು ಕೆಲಸ ಮಾಡಿದ್ದೇವೆ, ಮಾಡಿಲ್ಲ ಎಂಬುದರ ಕುರಿತು ಸಮಯಕ್ಕೆ ಸರಿಯಾಗಿ ತಮ್ಮ ವರದಿಯನ್ನು ಸಲ್ಲಿಸಬೇಕಲ್ಲವೆ? ಇದಕ್ಕೆ ಚುನಾವಣಾ ಆಯೋಗ ಒಂದು ವೆಬ್ ಸೈಟ್ ಅನ್ನು ಶುರು ಮಾಡಬೇಕು. ಅದೇನೂ ದೊಡ್ಡ ಕೆಲಸವಲ್ಲ. ದೇಶದ ಎಲ್ಲಾ ಎಂಪಿ, ಎಂ.ಎಲ್.ಎಗಳು ಅಲ್ಲಿ ತಮ್ಮ ವಾರ್ಷಿಕ ವರದಿಯನ್ನು ಅಪ್ ಲೋಡ್ ಮಾಡಬೇಕು. ಆ ವರದಿಯಲ್ಲಿ ಏನು ಬರೆದಿದೆ, ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸುವ ಅಗತ್ಯವಿಲ್ಲ. ಆ ಕೆಲಸವನ್ನು ದೇಶದ ಜನತೆ ಮತ್ತು ಮಾಧ್ಯಮಗಳು ಮಾಡಲಿ.

ಹೇಗಿದೆ ಐಡಿಯಾ? ಇದನ್ನು ನಮ್ಮ ಪೇಟ್ರಿಯಾನ್‍ನ ಮೆಂಬರ್ ಸೂಚಿಸಿದ್ದಾರೆ. ಇದು ಚೆನ್ನಾಗಿದೆ. ನಮ್ಮ ರಾಜಕಾರಣಿಗಳ ಅಕೌಂಟಬಲಿಟಿ ತಿಳಿಯಲು ಇದೊಂದು ಶಕ್ತಿಶಾಲಿ ವಿಧಾನವಾಗಿದೆ. ಹಾಗಾಗಿ ಈ ಪಿಟಿಷನ್‍ಗೆ ಸಹಿ ಮಾಡಿ, ವೋಟ್ ಮಾಡಿ, ಷೇರ್ ಮಾಡಿ ಎಲೆಕ್ಷನ್ ಕಮಿಷನ್ ತಲುಪುವ ರೀತಿ ಮಾಡೋಣ.

ಈ ರೀತಿ ಹೇಳಿದವರು ಜನಪ್ರಿಯ ಯೂಟ್ಯೂಬ್ ಹೀರೋ, ಯುವ ಚಿಂತಕ ಧೃವ್ ರಾಠೀ. ಅವರು ಈ ವಿಡಿಯೋವನ್ನು ಟ್ವಿಟ್ಟರ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಎಂದಿನಂತೆ ಈ ವಿಡಿಯೋಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅಷ್ಟು ಮಾತ್ರವಲ್ಲ ಅದಕ್ಕೆ ಕೆಲ ಎಂ.ಎಲ್.ಎ ಗಳು ಪ್ರತಿಕ್ರಿಯೆ ನೀಡುವ ಮೂಲಕ ವಿಷಯಕ್ಕೆ ಮತ್ತಷ್ಟು ಗಂಭೀರತೆಯನ್ನು ತಂದುಕೊಟ್ಟಿದ್ದಾರೆ.

ಡಿಎಂಕೆ ಪಕ್ಷದಿಂದ ಮಧುರೈನ ಶಾಸಕರಾಗಿರುವ ಡಾ.ಪಿ ತ್ಯಾಗರಾಜನ್‍ರವರು “ಚುನಾವಣಾ ಪ್ರಚಾರದಲ್ಲಿ ಕೊಟ್ಟ ಭರವಸೆಯಂತೆ, ಒಬ್ಬ ಶಾಸಕನಾಗಿ ಪ್ರತಿ ಆರು ತಿಂಗಳಿಗೊಮ್ಮೆ ನಾನು ವರದಿಯನ್ನು ಪ್ರಕಟಿಸುತ್ತಿದ್ದೇನೆ. ಈಗಾಗಲೇ 5 ವರದಿಗಳು (6, 12, 18, 24, 30) ಆನ್‍ಲೈನ್‍ನಲ್ಲಿ ಪ್ರಕಟವಾಗಿವೆ. ಜೊತೆಗೆ ನನ್ನ ಕ್ಷೇತ್ರದ 78,000 ಮನೆಗಳಿಗೆ ವರದಿಯನ್ನು ತಲುಪಿಸಿದ್ದೇವೆ. ಆರನೇಯ ವರದಿ ತಯಾರಿ ಹಂತದಲ್ಲಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಆ ವರದಿಯ ಲಿಂಕ್ ಅನ್ನು ಸಹ ಪ್ರಕಟಿಸಿದ್ದಾರೆ. ಇದಕ್ಕೆ ಬಹಳಷ್ಟು ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಡಾ.ಪಿ ತ್ಯಾಗರಾಜನ್‍ರವರ ವರದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿಯ ತಿಲಕ್ ನಗರದ ಆಮ್ ಆದ್ಮಿ ಪಕ್ಷದ ಶಾಸಕರಾದ ಜರ್ನೈಲ್ ಸಿಂಗ್ ರವರು “ ನಿಮ್ಮ ಪ್ರಸ್ತಾಪಕ್ಕೆ 100% ನಮ್ಮ ಒಪ್ಪಿಗೆ ಇದೆ. ನಾವು ಈಗಾಗಲೇ ನಮ್ಮ ಆಮ್ ಆದ್ಮಿ ಪಕ್ಷಕ್ಕೆ ಈ ಕುರಿತು ವರದಿ ತಯಾರಿಸಲು ಸೂಚಿಸಿದ್ದೇವೆ, ಪ್ರತಿ ವರ್ಷವೂ ಸಾರ್ವಜನಿಕರ ಮುಂದೆ ಇದನ್ನು ಚರ್ಚಿಸುತ್ತೇವೆ ಎಂದು ರೀಟ್ವೀಟ್ ಮಾಡಿದ್ದಾರೆ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Plz update my court system in India present population case’s present valuable time for any badi like fragment women, old age people police& related officers etc court starting timing also modified whole day concentrate for case shortage of judges, govt lawyers ,court hall , no expire date of any case’s so many genius senior judges are theare think some time plz you write this related articles

LEAVE A REPLY

Please enter your comment!
Please enter your name here

- Advertisment -

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಟಿಎಂಸಿ ಬೆಂಬಲ

ಮಾರ್ಚ್ 9 ರ ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಪುನರಾರಂಭವಾದಾಗ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಮಂಡಿಸಲಾಗುವ ಅವಿಶ್ವಾಸ ನಿರ್ಣಯಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬೆಂಬಲ ನೀಡಲಿದೆ ಎಂದು ಪಕ್ಷದ ನಾಯಕರು...

ಹೊಸ ರಾಜ್ಯಪಾಲ ರವಿ ಬಿಜೆಪಿ ಕೇಡರ್, ಆದರೆ ಬಂಗಾಳ ಟಫ್ ಟರ್ಫ್ : ಮಮತಾ ಬ್ಯಾನರ್ಜಿ

ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು 'ಬಿಜೆಪಿ ಕೇಡರ್' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ 'ನಬನ್ನಾ' ಮತ್ತು ರಾಜ್ಯಪಾಲರ ನಿವಾಸ...

ಕರ್ನಾಟಕ ಬಜೆಟ್ 2026| ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಹಂಚಿಕೆ ನಿರಾಶದಾಯಕ

ಶಿಕ್ಷಣಕ್ಕೆ 47,224 ಕೋಟಿ (ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು...

ಕೇರಳ : ಪ್ರಧಾನಿ ಮೋದಿ ‘ದೇಶದ್ರೋಹಿ’ ಎಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ನರೇಂದ್ರ ಮೋದಿ 'ದೇಶದ್ರೋಹಿ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಹಾಕಿದ ಆರೋಪದ ಮೇಲೆ ಕೇರಳದ ಕಣ್ಣೂರಿನ ಶ್ರೀಕಂಡಪುರಂ ಪೊಲೀಸರು ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹಿಂದೂ ಶನಿವಾರ (ಮಾ.7) ವರದಿ...

ಕೋಲ್ಕತ್ತಾ| ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರೆಸಿದ ಮಮತಾ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೇ ದಿನವಾದ ಶನಿವಾರವೂ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಅವರು ಅಹೋರಾತ್ರಿ ಧರಣಿ ಸ್ಥಳದಲ್ಲಿ ರಾತ್ರಿ ಕಳೆದರು. ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ "ಬಂಗಾಳದ ಮತದಾರರ...

ಇಂಡೋನೇಷ್ಯಾ | ನಾಲ್ವರು ಪ್ರಮುಖ ಹೋರಾಟಗಾರರು ಖುಲಾಸೆ : ಪ್ರತಿಭಟನೆಯ ಹಕ್ಕಿಗೆ ಹೊಸ ಭರವಸೆ ಎಂದ ಆಮ್ನೆಸ್ಟಿ

2025ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ನಾಲ್ವರು ಪ್ರಮುಖ ಹೋರಾಟಗಾರರನ್ನು ಇಂಡೋನೇಷ್ಯಾದ ಕೇಂದ್ರ ಜಕಾರ್ತಾ ಜಿಲ್ಲಾ ನ್ಯಾಯಾಲಯವು ಶುಕ್ರವಾರ (ಮಾ.6) ಖುಲಾಸೆಗೊಳಿಸಿದೆ. ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ...

‘ಆಕ್ರಮಣ ಮಾಡುವ ಉದ್ದೇಶವಿಲ್ಲ..’; ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷರು

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ನೆರೆಯ ರಾಷ್ಟ್ರಗಳಿಗೆ ಶನಿವಾರ ಕ್ಷಮೆಯಾಚಿಸಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪ್ರಾದೇಶಿಕ ಸಂಘರ್ಷಕ್ಕೆ ಸಂಬಂಧಿಸಿದ ಇತ್ತೀಚಿನ ದಾಳಿಗಳಿಗೆ ಟೆಹ್ರಾನ್ ಇತರ ರಾಷ್ಟ್ರಗಳನ್ನು ಆಕ್ರಮಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಇರಾನ್ ಸಾರ್ವಜನಿಕರನ್ನು...

ತೈಲ ಆಮದು ವಿಚಾರದಲ್ಲಿ ಅಮೆರಿಕದ ಒಪ್ಪಿಗೆ ಪಡೆಯುವುದು ‘ಅತಿರೇಕದ’ ಸಂಗತಿ: ಪಿಣರಾಯಿ ವಿಜಯನ್

ತೈಲ ಆಮದುಗಳಂತಹ ನಿರ್ಧಾರಗಳಿಗೆ ಭಾರತವು ಅಮೆರಿಕದ ಅನುಮೋದನೆಯನ್ನು ಪಡೆಯುವಂತೆ ಬಿಂಬಿತವಾಗುತ್ತಿರುವುದು 'ಅತಿರೇಕದ' ಸಂಗತಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶುಕ್ರವಾರ ಹೇಳಿದ್ದಾರೆ. ಭಾರತದ ಸಾರ್ವಭೌಮತ್ವವು ವಿದೇಶಿ ಅನುಮತಿಗೆ ಒಳಪಡುವುದಿಲ್ಲ ಎಂದು ವಿಜಯನ್ ಸಾಮಾಜಿಕ...

ಪತ್ರಕರ್ತನ ಹತ್ಯೆ ಪ್ರಕರಣ : ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಖುಲಾಸೆ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಸಿರ್ಸಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ಅನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ (ಮಾ.7) ಖುಲಾಸೆಗೊಳಿಸಿರುವುದಾಗಿ livelaw.in ಎಂದು ವರದಿ...

ಗೃಹ ಬಳಕೆಯ ಎಲ್‌ಪಿಜಿ ದರ 60 ರೂ. ಹೆಚ್ಚಳ : 11 ತಿಂಗಳಲ್ಲಿ ಎರಡನೇ ಬಾರಿ ಬೆಲೆ ಏರಿಕೆ

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಮಾ.7) ದೇಶದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕ್ರಮವಾಗಿ ರೂ. 60 ಮತ್ತು ರೂ. 115 ಹೆಚ್ಚಿಸಿವೆ. ಈ ಹೆಚ್ಚಳದ ನಂತರ ರಾಷ್ಟ್ರ ರಾಜಧಾನಿ...