Homeಮುಖಪುಟ’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್'

’ಮರ್ಯಾದೆ’ ಮತ್ತು ಮನುಷ್ಯತ್ವದ ಕಂದರವನ್ನು ಶೋಧಿಸುವ ’ಪಾವ ಕದೈಗಳ್’

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

- Advertisement -
- Advertisement -

ಭಾರತದ ಮುಖ್ಯವಾಹಿನಿ ಸಿನಿಮಾಗಳು ಬಹುತೇಕ ಜಾತಿಯ ಬಗ್ಗೆ ಚರ್ಚಿಸಲು ಹಿಂದೇಟು ಹಾಕುವುದೇ ಹೆಚ್ಚು. ಪಾತ್ರಗಳನ್ನು ಹೆಸರಿಸುವುದರಲ್ಲೂ ಕೂಡಾ ಜಾತಿ ಗೊತ್ತಾಗಬಾರದೆಂಬಂತೆ ಜಾಗ್ರತೆ ವಹಿಸಲಾಗುತ್ತೆ. ಆದರೆ ಅವೇ ಸಿನಿಮಾಗಳಲ್ಲಿ ಮೇಲ್ಜಾತಿಗಳ ಬಗ್ಗೆ ಈ ಧೋರಣೆ ತಳೆಯುವುದು ಕಡಿಮೆ. ಬ್ರಾಹ್ಮಣಿಕೆಯ ಪ್ರದರ್ಶನಕ್ಕೆ ಇದು ಅಡ್ಡಿಯೇ ಆಗುವುದಿಲ್ಲ. ಕನ್ನಡದ ಹಲವು ಸಿನಿಮಾಗಳಲ್ಲಿ ’ಗೌಡರ ಗತ್ತಿ’ನೂ ಕಮ್ಮಿಯಿಲ್ಲ. ಇಂತದಕ್ಕೆ ಅತ್ತ ತಮಿಳಿನಲ್ಲಿ ಥೇವರ್ ಮಗನ್‌ನಂತಹ ಚಿತ್ರಗಳೂ ಬಂದಿವೆ. ಆದರೆ ಇದೇ ಮಾತನ್ನು ತಳವರ್ಗಗಳ ಬಗ್ಗೆ ಹೇಳಲು ಬರುವುದಿಲ್ಲ. ಇದಕ್ಕೆ ಭಿನ್ನವಾಗಿ ಇಂದು ತಮಿಳು ಸಿನಿಮಾ ಮಾತ್ರ ಜಾತಿಯ ಪ್ರಶ್ನೆಯನ್ನು ನಿಜವಾಗಿ ಚರ್ಚಿಸುತ್ತಿದೆ ಅನ್ನಿಸುತ್ತೆ.

ರಜನೀಕಾಂತ್ ನಾಯಕನಾಗಿದ್ದ ’ಕಬಾಲಿ’ ಸಿನೆಮಾವನ್ನು ಪ. ರಂಜಿತ್ ನಿರ್ದೇಶಿಸುವುದರೊಂದಿಗೆ ಗಟ್ಟಿಯಾದ ದಲಿತ ಧ್ವನಿಯೊಂದು ಹುಟ್ಟಿಕೊಂಡಿತು. ಕಾಲಾ, ಪರೆಯೇರುಂ ಪೆರುಮಾಳ್, ಅಸುರನ್ ಅಂತಹ ಚಿತ್ರಗಳು ಇವತ್ತು ಜಾತಿಯ ಪ್ರಶ್ನೆಯನ್ನು ಪೊಲಿಟಿಕಲ್ ಪ್ರಶ್ನೆಯಾಗಿಯೇ ಚರ್ಚಿಸಿವೆ. ಅತ್ತ ತೆಲುಗಿನಲ್ಲಿ ’ಪಲಾಸ 1976’ ಎಂಬ ಸಿನಿಮಾ ಸಹ ದಲಿತ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಯಲಸೀಮೆಯ ಫ್ಯೂಡಲ್ ಹಿಂಸೆಯನ್ನು ನೋಡಿತ್ತು. ಇದೆಲ್ಲದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮರ್ಯಾದೆಗೇಡು ಹತ್ಯೆಗಳನ್ನು ಸಮರ್ಥಿಸುವ ದನಿಯಿದ್ದ ’ದ್ರೌಪದಿ’ ಚಿತ್ರವೂ ತಮಿಳಿನಲ್ಲಿ ಬಂತು. ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಾಲ್ಕು ಚಿತ್ರಗಳ ಗುಚ್ಛ ’ಪಾವ ಕದೈಗಳ್ ಅನ್ನು ತಮಿಳು ಚಿತ್ರರಂಗದಲ್ಲಿ ನಡೆಯುತ್ತಿರುವ ಈ ಜಾತಿ ಪ್ರಶ್ನೆಯ ಚರ್ಚೆಯ ಹಿನ್ನೆಲೆಯಲ್ಲಿ ನೋಡಬೇಕಿದೆ.

’ಪಾವ ಕದೈಗಳ್‌ನ ನಾಲ್ಕು ಚಿತ್ರಗಳೂ “ಮರ್ಯಾದೆ”ಯ ಪ್ರಶ್ನೆಯ ಸುತ್ತಲೇ ಗಿರಕಿ ಹೊಡೆಯುತ್ತದೆ. ಈ ಮರ್ಯಾದೆ ಪ್ರಶ್ನೆಯಲ್ಲಿ ಹೇಗೆ ಜಾತಿ ಮತ್ತು ಹೆಣ್ಣು ಎರಡೂ ಪ್ರಮುಖ ಎಂಬುದನ್ನು ಈ ನಾಲ್ಕೂ ಚಿತ್ರಗಳು ಅತ್ಯಂತ ಶಕ್ತಿಯುತವಾಗಿ ಕಟ್ಟಿಕೊಡುತ್ತವೆ. ಈ ನಾಲ್ಕರಲ್ಲಿ ಎರಡು ಕಥೆಗಳು ತಮಿಳುನಾಡಿನಲ್ಲಿ ನಡೆದ ನೈಜ ಘಟನೆಗಳಿಂದ ಪ್ರೇರಣೆ ಪಡೆದವು – ಗೌತಂ ಮೆನನ್ ಅವರು ನಿರ್ದೇಶಿಸಿರುವ ’ವಾನ್ಮಗಳ್, ಪೊಲ್ಲಾಚಿ ಸೆಕ್ಸ್ ಹಗರಣದಿಂದ ಮತ್ತು ವೆಟ್ರಿಮಾರನ್ ನಿರ್ದೇಶಿಸಿರುವ ’ಊರ್ ಇರುವು’ ತಮಿಳುನಾಡಿನಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯೊಂದರ ಪ್ರೇರಣೆಯಿಂದ ಹೆಣೆದಿರುವ ಕಥೆಗಳು. ಹಾಗಾಗಿಯೇ ಈ ಚಿತ್ರಗಳಲ್ಲಿ ಪತ್ರಿಕಾ ವರದಿಯ ಛಾಯೆಯಿದೆ ಮತ್ತು ಹಾಗಾಗಿಯೇ ಅವು ಅಷ್ಟು ಪರಿಣಾಮಕಾರಿ ಅಲ್ಲ ಎಂದು ಕೆಲವರು ಆಕ್ಷೇಪಿಸಿದ್ದಾರಾದರೂ, ಈ ಚಿತ್ರಗಳು ನೀಡುವ ಒಳನೋಟ ಮತ್ತು ಮೂಡಿಸುವ ತಲ್ಲಣ ಆಳವಾದದ್ದು. ಈ ಚಿತ್ರಗಳ ವಿಶೇಷತೆಯೆಂದರೆ “ಮರ್ಯಾದೆ” ಉಳಿಸಿಕೊಳ್ಳಲು ಹಿಂಸೆಗೆ ಇಳಿಯುವ ತಲೆಮಾರಿನ ಬಗ್ಗೆಯೇ ಈ ಕಥೆಗಳ ಫೋಕಸ್ ಇದ್ದು, ಹಿಂಸೆಗೆ ಒಳಗಾದ ಯುವಕರ ಬಗ್ಗೆ ಮಾತ್ರ ಅಲ್ಲ ಎನ್ನಬಹುದು. ಈ ತಲೆಮಾರುಗಳ ನಡುವಿನ ಅಂತರ ಮತ್ತು ತಲ್ಲಣಗಳನ್ನು ಈ ಚಿತ್ರಗಳು ಶಕ್ತವಾಗಿ ಹಿಡಿದುಕೊಡುತ್ತವೆ.

ಗಾಂಧಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತಾ, ಪಾಶ್ಚಿಮಾತ್ಯ ನಾಗರಿಕತೆಯು ಕ್ರೈಸಿಸ್‌ನಲ್ಲಿದ್ದು, ಅವರಿಗಾಗಿಯೂ ನಾನು ಹೋರಾಡುತ್ತಿದ್ದೇನೆ ಎಂದೇ ತಿಳಿದಿದ್ದರು. ಈ ಚಿತ್ರಗಳಲ್ಲೂ “ಮರ್ಯಾದೆ” ಎಂಬುದು ಹೇಗೆ ಒಂದು ಸಾಮಾಜಿಕ ಸಂರಚನೆಯಾಗಿದ್ದು ಅದನ್ನು ಒಳಗೊಳ್ಳಲು ಸಮಾಜವು ಹೇಗೆ ಒಬ್ಬನ ಮೇಲೆ ನಿರಂತರ ಒತ್ತಡ ಹೇರುತ್ತದೆ ಮತ್ತು ಅನೇಕ ಮರ್ಯಾದೆಗೇಡು ಹತ್ಯೆಗಳ ಹಿಂದೆ ಇಂಥದೊಂದು ಒತ್ತಡವು ಕೆಲಸ ಮಾಡುತ್ತದೆ, ಮತ್ತು ಸ್ವಂತ ಮಕ್ಕಳನ್ನೇ ಕೊಲ್ಲುವ ಹಂತಕ್ಕೆ ಹೋಗುವ ಜನ ಕೂಡ ಹೇಗೆ ಒಂದು ರೀತಿಯಲ್ಲಿ ಈ ವ್ಯವಸ್ಥೆಯ ವಿಕ್ಟಿಂಗಳು ಮತ್ತು ಅವರಿಗೂ ಈ ಉಸಿರುಕಟ್ಟುವ ವ್ಯವಸ್ಥೆಯಿಂದ ಬಿಡುಗಡೆ ಬೇಕಾಗಿದೆ ಎಂಬ ದನಿಯಲ್ಲಿ ಈ ಚಿತ್ರಗಳಿವೆ. ವಿಗ್ನೇಶ್ ಶಿವನ್ ನಿರ್ದೇಶನದ ’ಲವ್ ಪಣ್ಣಾ ಉತ್ರಾಣಮ್ ಮತ್ತು ’ಊರ್ ಇರುವು’ ಚಿತ್ರಗಳಲ್ಲಿ ಅವರ ಮಕ್ಕಳನ್ನು ಕೊಲ್ಲಲು ಆ ಜಾತಿ ಸಮಾಜದಿಂದ ಇರುವ ಒತ್ತಡ ಸ್ಪಷ್ಟ. ಈ ತಂದೆಯರ ತೊಳಲಾಟವು ವಿದಿತ. ಆದರೆ ಅವರು ಕಡೆಗೆ ತಮ್ಮ ಮಕ್ಕಳನ್ನು ಕೊಲ್ಲುತ್ತಾರೆ. ಶಿವನ್ ಅವರ ಚಿತ್ರದಲ್ಲಿ ಒಬ್ಬ ಮಗಳನ್ನು ಕೊಲ್ಲುವ ತಂದೆ ಕೊನೆಗೆ ಮತ್ತೊಬ್ಬ ಮಗಳನ್ನು ಹಳ್ಳಿಯಿಂದ ತಪ್ಪಿಸಿಕೊಳ್ಳಲು ಬಿಡುವುದಷ್ಟೇ ಅಲ್ಲದೆ, ತಾನೂ ಹಳ್ಳಿಯಿಂದ ತಪ್ಪಿಸಿಕೊಂಡು ಮಗಳ ಜೊತೆ ಫ್ರಾನ್ಸ್‌ನಲ್ಲಿ ಅವಳ ಜೊತೆ ವಾಸ ಮಾಡುತ್ತಾನೆ.

PC : Only kollywood

’ಊರ್ ಇರುವು’ ಚಿತ್ರದಲ್ಲಿ ಮನೆಯಿಂದ ಓಡಿಹೋದ ಮಗಳು ಬಹುಶಃ ದಲಿತ ಹುಡುಗನೊಬ್ಬನನ್ನು ಮದುವೆ ಆಗಿ ಬೆಂಗಳೂರಲ್ಲಿ ನೆಲೆಸಿದ್ದಾಳೆ. ಗರ್ಭಿಣಿ. ಆಕೆಯನ್ನು ಹುಡುಕಿಕೊಂಡು ಬರುವ ತಂದೆ ಅಳಿಯ ಕೊಟ್ಟ ನೀರು ಮುಟ್ಟಲೂ ಅಂಜುವವನು. ಮೊಮ್ಮಗುವನ್ನು ಬಿಟ್ಟು ಇರಕ್ಕಾಗಲ್ಲ, ಮಗಳನ್ನು ಕರಕೊಂಡು ಹೋಗಿ ಸೀಮಂತ ಮಾಡ್ತೀನಿ ಅಂದಾಗ ಅಳಿಯ ’ನಾನು ಕೊಟ್ಟ ನೀರನ್ನೇ ಕುಡಿಯದ ನಿಮ್ಮನೆಗೆ ನಾನು ಹೇಗೆ ಬರಲಿ’ ಅಂತ ಕೇಳ್ತಾನೆ. ನನಗೆ ಹೇಳದೆಯೇ ಯಾಕೆ ಓಡಿ ಹೋದೆ ಎಂದು ಕೇಳಿದ್ದಕ್ಕೆ ಮಗಳು ’ಇದೇ ರೀತಿ ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದಕ್ಕೆ ಊರಲ್ಲಿ ಏನು ಮಾಡಿದರು, ನೀನೂ ಸುಮ್ಮನಿದ್ದೆಯಲ್ಲ ಎಂದು ಕೇಳುತ್ತಾಳೆ, ತಂದೆಯಲ್ಲಿ ಉತ್ತರವಿಲ್ಲ. ಒಂದು ಬಾರಿ ಆಕೆಯನ್ನು ಬಿಟ್ಟು ಹೊರಟುಹೋಗಲು ಅನುವಾಗುತ್ತಾನೆ ಕೂಡಾ. ಆದರೆ ಮಗಳೇ ತಡೆಯುತ್ತಾಳೆ. ತಂದೆ ಮಗಳಿಗೆ ಹೇಳ್ತಾನೆ: “ಈ ಜೀವನವನ್ನು ನೀನು ಕಟ್ಟಿಕೊಂಡಿದ್ದೀಯ. ಇದರ ಮೇಲೆ ಯಾರಿಗೂ ಹಕ್ಕಿಲ್ಲ ಎಂದು. ಅತ್ತ ಈಕೆಯ ಅಕ್ಕನನ್ನು ಗಂಡ ಬಿಟ್ಟುಬಿಟ್ಟಿದ್ದಾನೆ. ಕಾರಣ ದಲಿತರ ಹುಡುಗನೊಬ್ಬನಿಗೆ ಹುಟ್ಟುವ ಮಗುವಿನ ಮನೆಯ ಹುಡುಗಿ ಅಂತ! ಇನ್ನೂ ಒಬ್ಬಳು ಮಗಳಿದ್ದಾಳೆ, ಅವಳಿಗೆ ಓದು ಬಿಡಿಸಿದ್ದಾನೆ ಅಪ್ಪ. ಮಗಳನ್ನು ಊರಿಗೆ ಕರಕೊಂಡು ಬಂದು ಸೀಮಂತಕ್ಕೆ ಎಲ್ಲ ತಯಾರಿ ನಡೆದಿದೆ. ಜಾತಿಯ ಹುಡುಗರು ಬಂದು ಇದಕ್ಕೆ ಆಕ್ಷೇಪಿಸುತ್ತಾರೆ. ಬೇರೆಯವರಿಗೊಂದು ನ್ಯಾಯ ತನ್ನ ಮಗಳಿಗೊಂದು ನ್ಯಾಯವಾ ಎಂಬುದು ಅವರ ಪ್ರಶ್ನೆ.

ಲವ್ ಪಣ್ಣಾ ಉತ್ರಾಣುಂ

ಶಿವನ್ ಅವರ ’ಲವ್ ಪಣ್ಣಾ ಉತ್ರಾಣುಂ’ ಚಿತ್ರದಲ್ಲಿ ಸ್ವತಃ ಜಾತಿಯನ್ನು ಉಳಿಸಲು ಅಂತರಜಾತಿ ವಿವಾಹಗಳಾಗುತ್ತಿರುವ ಯುವಕರನ್ನು ಕೊಲ್ಲುತ್ತಿರುವ ತಂದೆಗೆ ಆತನ ಬಂಟ ಕೇಳುವುದೂ ಅದೇ ಪ್ರಶ್ನೆ. ಈ ಪಾತ್ರವು ’ಪರೆಯೇರುಂ ಪೆರುಮಾಳ್ ಚಿತ್ರದಲ್ಲಿ ಹೀಗೆ ಉಚ್ಛಜಾತಿಯ ಹುಡುಗಿಯರನ್ನು ಪ್ರೇಮಿಸುವ ಹುಡುಗರನ್ನು ಕೊಲ್ಲುವುದೇ ಕಾಯಕ ಮಾಡಿಕೊಂಡ ಮುದುಕನ ಪಾತ್ರ ನೆನಪಿಸುತ್ತದೆ. ’ಊರ್ ಇರುವು’ನಲ್ಲಿ ಸೀಮಂತದ ಹಿಂದಿನ ರಾತ್ರಿ ಮಗಳಿಗೆ ಅಪ್ಪನೇ ವಿಷ ಹಾಕಿ ಸಾಯಿಸುತ್ತಾನೆ. “ನಿನ್ನನ್ನು ನಾನು ಬಿಡಲಾಗುವುದಿಲ್ಲ. ನನಗೆ ಇನ್ನೂ ಬೇರೆ ಮಕ್ಕಳಿದ್ದಾರೆ. ಅವರ ಒಳತಿಗಾಗಿ…”, ಎಂಬ ಆತನ ವಾದ ಹುಚ್ಚು ಎನಿಸಿದರೂ ಆ ಹಳ್ಳಿಯಲ್ಲಿ (ಎಲ್ಲೆಲ್ಲೂ) ಜಾತಿ ಸಮಾಜದಲ್ಲಿ ಅದು ವಾಸ್ತವೂ ಹೌದು ಎಂಬುದು ನಮ್ಮನ್ನು ತಟ್ಟುತ್ತದೆ. ಇದೇ ಮಾತನ್ನು ಸುಧಾ ಕೊಂಗಾರಾ ಅವರ ನಿರ್ದೇಶನದ ’ತಂಗಮ್ ಎಂಬ ಚಿತ್ರದಲ್ಲಿ ತಾಯಿ ತನ್ನ ತೃತೀಯ ಲಿಂಗ ಮಗ ಸತ್ತಾರ್‌ನಿಗೆ ಹೇಳುತ್ತಾಳೆ: ’ನಿನ್ನ ತಂಗಿ, ತಮ್ಮಂದಿರಿಗಾಗಿ ನೀನು ಸತ್ತು ಹೋಗು’ ಎಂದು.

ಇನ್ನು ’ವಾನ್ಮಗಳ್ ಚಿತ್ರದಲ್ಲಿ ಹನ್ನೆರಡು ವರ್ಷದ ಹುಡುಗಿಯನ್ನು ಕೆಲವು ಹುಡುಗರು ರೇಪ್ ಮಾಡಿದ್ದಾರೆ. ಅದಕ್ಕೆ ಆ ಹುಡುಗಿಯ ಕುಟುಂಬ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಚಿತ್ರ ಕಟ್ಟಿಕೊಡುತ್ತದೆ. ತಂದೆಗೆ ಮಗಳನ್ನು ಮಾತಾಡಿಸಲೇ ಆಗುತ್ತಿಲ್ಲ, ಆಕೆಯನ್ನು ಆತ ತಪ್ಪಿಸುತ್ತಿದ್ದಾನೆ, ಮಗನ ಸ್ನೇಹಿತರೇ ಈ ಕೃತ್ಯ ಎಸಗಿದ್ದು ಅದು ತಿಳಿದು ಪೊಲೀಸರಿಗೆ ದೂರು ನೀಡೋಣ ಎಂದು ಮಗ ತಂದೆಯನ್ನು ಕರೆಯುತ್ತಾನೆ. ಆದರೆ ತಾಯಿ ಪೊಲೀಸರಿಗೆ ದೂರು ನೀಡಿದರೆ ಮರ್ಯಾದೆ ಹೋಗುತ್ತದೆ ಬೇಡ ಎಂದು ತಡೆಯುತ್ತಾಳೆ. ಮಗ ಹೋಗಿ ತನ್ನ ತಂಗಿಯನ್ನು ಅಬ್ಯೂಸ್ ಮಾಡಿದ ಹುಡುಗನ ಶಿಶ್ನ ಕತ್ತರಿಸುತ್ತಾನೆ. ಆದರೆ ಈ ಕುಟುಂಬದಲ್ಲಿ ಅತ್ಯಂತ ಹೆಚ್ಚು ಪಿತೃಪ್ರಧಾನ್ಯವಾಗಿ ಯೋಚಿಸುವುದು, ತಳಮಳಕ್ಕೆ ಒಳಗಾಗುವುದು ತಾಯಿ. ಹಿರಿಯ ಮಗಳು ದೊಡ್ಡವಳಾದಾಗ ಮನೆಯ ಗೌರವ ಹೆಣ್ಣಿನ ದೇಹ, ನಡತೆಯಲ್ಲಿರುತ್ತದೆ ಎಂದು ಪಾಠ ಮಾಡುವ ಈ ತಾಯಿಗೆ ತನ್ನ ಕಿರಿಯ ಮಗಳನ್ನು ಯಾರೋ ಹುಡುಗರು ಬಲಾತ್ಕಾರ ಮಾಡಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲೇ ಆಗುವುದಿಲ್ಲ. ಆ ಮಗುವಿಗೆ ಪದೇ ಪದೇ ಸ್ನಾನ ಮಾಡಿಸುತ್ತಾ ಆ ಘಾತವನ್ನು ತೊಳೆದುಬಿಡಬೇಕೆಂಬಂತೆ ಮೈಉಜ್ಜುತ್ತಲೇ ಇರುವ ತಾಯಿಗೆ, ಆ ಮಗುವನ್ನೇ ಕೊಂದುಬಿಡುವ ಯೋಚನೆ! ಕೂಡಲೇ ಎಚ್ಚೆತ್ತುಕೊಳ್ಳುವ ಆಕೆ ತನ್ನ ಮಗಳನ್ನೇ ಕೊಂದುಬಿಡುವ ಯೋಚನೆ ನನಗೆ ಮೂಡಿಸಿದ ಈ “ಮರ್ಯಾದೆ”ಗೆ ಬೆಂಕಿ ಹಾಕ, ನನ್ನ ಮಗಳು ಬೆಳೆದು ದೊಡ್ಡವಳಾಗಿ ಅಂತರಿಕ್ಷದಲ್ಲಿ ಪ್ರಯಾಣಿಸುತ್ತಿದ್ದಾಗ ಮರ್ಯಾದೆ ಎಂದು ಮುಂದಿನ ಜೀವನಕ್ಕೆ ಅಣಿಯಾಗುತ್ತಾಳೆ. ನಾವಿರುವ ಜಾತಿ ಸಮಾಜದಲ್ಲಿ ಇಂತಹ ಯೋಚನೆಗಳೂ ನಮಗೂ ಬರಬಹುದು, ಆದರೆ ಇಂಥ ಒಂದು ಕ್ಷಣದ ಎಚ್ಚರ, ಯಾವುದು ಮರ್ಯಾದೆ ಎಂಬ ಒಂದು ಸಣ್ಣ ಪ್ರಶ್ನೆ ನಮ್ಮನ್ನು ಮನುಷ್ಯರಾಗೇ ಉಳಿಸಬಲ್ಲದು.

ವಾನ್ಮಗಳ್

’ತಂಗಮ್ ಚಿತ್ರದಲ್ಲಿ ಓಡಿಹೋಗಿ ಮದುವೆಯಾಗಿರುವ ದಂಪತಿ (ಇಲ್ಲಿ ಒಂದು ಸಂಕೀರ್ಣ ಪ್ರೇಮಕಥೆಯೂ ಅಡಗಿದೆ. ಸತ್ತಾರ್ ತನ್ನ ಪ್ರಿಯಕರ ಶರವಣನಿಗೆ ಅವನ ಬಯಕೆಯಂತೆ ತನ್ನ ತಂಗಿ ಸಾಯಿರಾ ಜೊತೆ ಓಡಿಹೋಗಿ ಅಂತರಧರ್ಮೀಯ ಮದುವೆ ಮಾಡಿಕೊಳ್ಳಲು ಸಹಕರಿಸುತ್ತಾರೆ) ಹಿಂದಿರುಗಿದಾಗ, ಅವರನ್ನು ಒಪ್ಪಿಕೊಳ್ಳಲು ಎರಡೂ ಕುಟುಂಬದವರು ಸಿದ್ಧರಿದ್ದರೂ, ಸತ್ತಾರ್‌ನನ್ನು ಮನೆಯಿಂದ ಹೊರದಬ್ಬಿ ಅವನ ಸಾವಿಗೆ ಕಾರಣವಾಗಿರುವ ತಮ್ಮ ಕುಟುಂಬದ ಸದಸ್ಯರ ಬಗ್ಗೆ, ಊರ ಜನರ ಬಗ್ಗೆ ಆ ದಂಪತಿ ತಳೆಯುವ, ಸಿಟ್ಟು, ಹತಾಶೆ, ಆಕ್ರೋಶ ಎಲ್ಲವೂ ಪ್ರೇಕ್ಷಕನದ್ದೂ ಆಗುತ್ತದೆ.

ತಂಗಮ್

ಇನ್ನೂ ಬದಲಾಗದ ವ್ಯವಸ್ಥೆಯ ಬಗ್ಗೆ ನೋಡುಗನಿಗೆ ಸ್ವಲ್ಪವಾದರೂ ತಟ್ಟಿ ಚಿಂತಿಸುವಂತೆ ಮಾಡಬಲ್ಲ ಈ ನಾಲ್ಕು ಕಥೆಗಳ ಗುಚ್ಛ ನಮ್ಮ ಪ್ಯಾಟ್ರಿಯಾರ್ಕಲ್ ಮನಸ್ಥಿತಿಯನ್ನು, ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ಮತ್ತು ಇವುಗಳಿಂದ ಹುಟ್ಟಿರುವ ’ಮರ್ಯಾದೆ’ಯ ಕಲ್ಪನೆಯನ್ನು ಅಲ್ಲಾಡಿಸುತ್ತದೆ.

ಒರು ಇರವು

ಇದನ್ನೂ ಓದಿ: ಮರ್ಯಾದಾಹೀನ ಹತ್ಯೆ: ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ ಯುವತಿಯ ಕುಟುಂಬ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...