ಮರ್ಯಾದಾಹೀನ ಹತ್ಯೆ: ಸಿನಿಮಾ ಶೈಲಿಯಲ್ಲಿ ಕಥೆ ಕಟ್ಟಿದ ಯುವತಿಯ ಕುಟುಂಬಸ್ಥರು!

ದಲಿತ ಹುಡುಗನನ್ನು ಪ್ರೀತಿಸುತ್ತಿದ್ದಳು ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಆಕೆಯ ತಂದೆ ಮತ್ತು ತಮ್ಮ ಸೇರಿ ಹತ್ಯೆ ಮಾಡಿರುವ ಹೀನ ಘಟನೆ ರಾಮನಗರದ ಕುದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತನಿಖೆಯ ನಂತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಳಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ, ಅದನ್ನು ಸಹಿಸಿಕೊಳ್ಳದ ಕುಟುಂಬದವರು ಮಾಡಿರುವ ಈ ದುಷ್ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ನಾನುಗೌರಿ.ಕಾಂಗೆ ವಿಶ್ವಾಸಾರ್ಹ ಮೂಲಗಳಿಂದ ದೊರಕಿದ ಮಾಹಿತಿಯ ಪ್ರಕಾರ, “ಹೇಮಲತ ಎನ್ನುವ 21 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ತಮ್ಮ ಸೇರಿ ಕೊಲೆ ಮಾಡಿದ ನಂತರ ಇದನ್ನು ಸಿನಿಮಾ ಶೈಲಿಯಲ್ಲಿ ಮುಚ್ಚಿಹಾಕಲು ಅಥವಾ ಪ್ರಕರಣದ ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಾರೆ” ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯುವತಿ ಅನುಮಾನಾಸ್ಪದ ಸಾವು!: ಮರ್ಯಾದಾಹೀನ ಹತ್ಯೆಯೋ-ನಿರ್ಲಕ್ಷ್ಯತೆಯಿಂದಾದ ಹತ್ಯೆಯೋ?

ಅಕ್ಟೋಬರ್ 8, ಗುರುವಾರದಂದು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಎಲ್ಲಾ ಕಡೆ ಹುಡುಕಾಡಿದ ನಂತರ, ಯುವತಿಯ ತಂದೆ ಕೃಷ್ಣಪ್ಪ ಎಂಬುವವರು, ಪೊಲೀಸ್ ಠಾಣೆಗೆ ಅಕ್ಟೋಬರ್ 9 ರಂದು ದೂರು ನೀಡಿದ್ದರು. ಅದರಲ್ಲಿ, ಪುನಿತ್ ಎಂಬ ಹುಡುಗನನ್ನು ನಮ್ಮ ಮಗಳು ಪ್ರೀತಿಸುತ್ತಿದ್ದಳು ಎಂದು ಹೇಳಿದ್ದಾರೆ. ಆ ದಿನ ನಮ್ಮ ಊರಿನಲ್ಲಿ ಒಂದು ಸಾವಾಗಿತ್ತು, ಮನೆಯವರೆಲ್ಲಾ ಅಲ್ಲಿಗೆ ಹೋಗಿದ್ದೆವು. ಈ ಸಮಯದಲ್ಲಿ ಆತನೆ ನಮ್ಮ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದೂ ದೂರು ನೀಡಿರುತ್ತಾರೆ.

ನಂತರ ಮಾರನೆಯ ದಿನ (ಅಕ್ಟೋಬರ್ 10), ಕುಟುಂಬದವರೇ ಪೊಲೀಸ್‌ಗೆ ಕರೆ ಮಾಡಿ, ನಮ್ಮ ಹೊಲದಲ್ಲಿ, ಯಾರನ್ನೋ ಎಳೆದಾಡಿರುವ ಗುರುತು ಇದೆ. ಅದನ್ನು ಹಿಂಬಾಲಿಸಿದಾಗ ನಮ್ಮ ಮಗಳ ಒಂದು ಚಪ್ಪಲಿ ಸಿಕ್ಕಿದ್ದು, ಇನ್ನೂ ಮುಂದೆ ಹೋದಾಗ ಆಕೆಯ ಒಳ ಉಡುಪು ಸಿಕ್ಕಿದೆ. ಪಕ್ಕದಲ್ಲಿಯೇ ಹೂತಿರುವ ಶವದ ಬೆರಳು ಮಾತ್ರ ಕಾಣಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಾತಿಕಾರಣ: ಗ್ರಾಮಪಂಚಾಯಿತಿ ಅಧ್ಯಕ್ಷೆಯನ್ನು ನೆಲದ ಮೇಲೆ ಕೂರಿಸಿದ ಸದಸ್ಯರು!

ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ಹೊರತೆಗೆದಿದ್ದಾರೆ. ನಂತರ “ನಮ್ಮ ಮಗಳನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿದೆ” ಎಂದು ಕುಟುಂಬದವರೇ ಆರೋಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ತಮ್ಮ ಮಗಳದ್ದೇ ಒಳ ಉಡುಪನ್ನು ಸಾಕ್ಷಿಯಾಗಿ ತೋರಿಸಿದ್ದಾರೆ. ಆದರೆ ಶವ ಹೊರತೆಗೆದಾಗ ಅಲ್ಲಿಯೂ ಅದೇ ಬ್ರಾಂಡ್‌ನ ಒಳಉಡುಪನ್ನು ಯುವತಿ ಧರಿಸಿದ್ದಳು!? ಹೀಗಿರುವಾಗ ಹೊರಗಡೆ ಮತ್ತೊಂದು ಒಳ ಉಡುಪು ಸಿಗಲು ಹೇಗೆ ಸಾಧ್ಯ ಎಂದು ಪೊಲೀಸರು ಅನುಮಾನಕ್ಕೆ ಒಳಗಾಗಿದ್ದಾರೆ. ಮೇಲು ನೋಟಕ್ಕೆ ಅತ್ಯಾಚಾರದ ಯಾವುದೇ ಗುರುತುಗಳು ಕಂಡುಬಂದಿಲ್ಲವಾದ್ದರಿಂದ, ಪೊಲೀಸರು ಈ ಪ್ರಕರಣವನ್ನು ಗೌಪ್ಯವಾಗಿ ತನಿಖೆ ಮಾಡಲು ಪ್ರಾರಂಭಿಸಿದ್ದಾರೆ.

ಯುವತಿ ಪ್ರೀತಿಸುತ್ತಿದ್ದ ಹುಡುಗನನ್ನು ವಿಚಾರಿಸಿದಾಗ, ತಾವು 3 ವರ್ಷಗಳಿಂದ ಪ್ರೀತಿಸುತ್ತಿದ್ದೆವೆಂದು ಒಪ್ಪಿಕೊಂಡಿದ್ದಾನೆ. ಆದರೆ ಈ ಘಟನೆಯ ಬಗ್ಗೆ ನನಗೆ ಗೊತ್ತಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ತಾನು ಮೈಸೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ, ಈ ವಿಷಯ ತಿಳಿದು ಆಘಾತಗೊಂಡು ತಾನೂ ಕೂಡಾ ಎಲ್ಲಾ ಕಡೆ ಹುಡುಕುತ್ತಿರುವುದಾಗಿಯೂ ಪೊಲೀಸರಿಗೆ ತಿಳಿಸಿದ್ದಾನೆ.

ಇದಾದ ನಂತರ ಕುಟುಂಬದವರನ್ನು ತೀವ್ರವಾಗಿ ವಿಚಾರಿಸಿದಾಗ ನಿಜ ಬಾಯಿ ಬಿಟ್ಟಿದ್ದಾರೆ ಎಂದು ಪೊಲಿಸರು ತಿಳಿಸಿದರು.

“ಈ ಹಿಂದೆಯೇ ಎರಡು-ಮೂರು ಬಾರಿ ಇವರ ಪ್ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಪೋಷಕರು ಬೆದರಿಕೆ ಹಾಕಿದ್ದರೂ ಯುವತಿ ಅದನ್ನು ಕಡೆಗಣಿಸಿದ್ದಳು. ಅ. 8 ರ ಹಿಂದಿನ ರಾತ್ರಿ ಬೆಳಿಗ್ಗೆ 4 ಗಂಟೆಯ ತನಕ ಹೇಮಲತ ಆನ್‌ಲೈನ್‌ನಲ್ಲಿ ಆ ಹುಡುಗನೊಂದಿಗೆ ಚಾಟ್ ಮಾಡುತ್ತಿದ್ದಳು. ಇದನ್ನು ಸಹಿಸದ ಯುವತಿಯ ತಂದೆ ಮತ್ತು ಆಕೆಯ ದೊಡ್ಡಪ್ಪನ ಮಗ ಚೇತನ್, ಮಾರನೆಯ ದಿನ (ಅ. 8) ಆಕೆಯನ್ನು ತಮ್ಮ ಜಮೀನಿನ ಬಳಿ ಕರೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಚೇತನ್ ದೊಣ್ಣೆಯಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಯುವತಿ ಸ್ಥಳದಲ್ಲೇ ಮತಪಟ್ಟಿದ್ದಾಳೆ. ಇದರಿಂದ ಭಯಭಿತರಾದ ಆರೋಪಿಗಳು, ಶವವನ್ನು ಅಲ್ಲಿಯೇ ಬಿಟ್ಟುಹೋಗಿದ್ದಾರೆ. ಈ ವಿಷಯವನ್ನು ತಮ್ಮ ಮತ್ತೊಬ್ಬ ಸಂಬಂಧಿಗೆ ತಿಳಿಸಿದಾಗ, ಈ ಮೊದಲೇ ಹೇಳಿರುವ ಕಟ್ಟುಕಥೆಯನ್ನು ಆಧರಿಸಿ, ಶವವನ್ನು ಇವರೇ ಹೂತುಹಾಕಿ, ನಂತರ ಮಾರನೆದಿನ (ಅ.9) ದೂರು ನೀಡಿ, ಒಂದು ದಿನ ಕಳೆದ ನಂತರ (ಅ.10) ಇವರೇ ಪೊಲೀಸರಿಗೆ ಕರೆ ಮಾಡಿ, ಪೂರ್ವಯೋಜಿತ ಕಥೆಯನ್ನು ಹೇಳಿದ್ದಾರೆ” ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ತನ್ನ ಜಾತಿಯವರನ್ನು ರಕ್ಷಿಸಲು ಆದಿತ್ಯನಾಥ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ: ಚಂದ್ರಶೇಖರ್ ಆಜಾದ್

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂತ್ರಸ್ತೆಯ ತಂದೆ ಕಷ್ಣಪ್ಪ ಮತ್ತು ಆತನ ಸೋದರನ ಮಗ ಚೇತನ್‌ ಹಾಗೂ ಅವನ ಅಪ್ರಾಪ್ತ ಸ್ನೇಹಿತನನ್ನು ಬಂಧಿಸಲಾಗಿದ್ದು, ಎಫ್ಐಆರ್ ದಾಖಲಾಗಿದೆ. ಹಾಗಾಗಿ ನಿರ್ದಿಷ್ಟವಾಗಿ ಇದು ಮರ್ಯಾದಾಹೀನ ಹತ್ಯೆ ಎಂದು ತಿಳಿದುಬಂದಿದೆ.

ಇಂತಹ ಯಾವುದೋ ಒಂದೋ ಎರಡೋ ಮರ್ಯಾದಾಹೀನ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತವೆ. ಆದರೆ ಸಾವಿರಾರು ಪ್ರಕರಣಗಳು ಈ ಯುವತಿಯ ಶವದಂತೆಯೇ ಮಣ್ಣಿನಲ್ಲಿ ಮುಚ್ಚಿಹೋಗುತ್ತವೆ. ಇವುಗಳನ್ನೂ ಸಮರ್ಥಿಸಿಕೊಳ್ಳುವ ಕೊಳಕು ಮನಸ್ಥಿತಿಗಳು ನಮ್ಮ ನಡುವೆಯೇ ಇವೆ. ಇಂತಹವುಗಳನ್ನು ನೋಡಿದರೆ ನಮ್ಮ ಸಮಾಜ ತನ್ನ ಆಂತರ್ಯದಲ್ಲಿ ಇನ್ನೂ ಎಂತಹ ಕ್ರೂರತೆಯನ್ನು ಉಳಿಸಿಕೊಂಡಿದೆ ಎಂಬುದು ತಿಳಿಯುತ್ತದೆ.

ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದ್ದ ತನಿಷ್ಕ್ ಜಾಹೀರಾತಿನಲ್ಲಿ ಹಿಂದೂ ಯುವತಿ ಮುಸ್ಲಿಂ ಕುಟುಂಬಕ್ಕೆ ವಿವಾಹವಾಗಿದ್ದಾಳೆ ಎಂಬುದನ್ನೇ ಅರಗಿಸಿಕೊಳ್ಳದ ನೀಚ ಮನಸ್ಥತಿಗಳೇ ಇಂತಹ ಹೀನ ಕೃತ್ಯಗಳಿಗೆ ಕಾರಣವಾಗುತ್ತವೆ. ಮೀಸೆ ಬಿಟ್ಟಿದ್ದಕ್ಕೆ, ಕುದುರೆ ಏರಿದ್ದಕ್ಕೆ, ನೀರು ಮುಟ್ಟಿದ್ದಕ್ಕೆ ಕೊಲ್ಲುವ ಮನಸ್ಥಿತಿಗಳು ನಮ್ಮ ನಡುವೆ ಕೊರೊನಾ ವೈರಸ್‌ಗಿಂತಲೂ ಅಪಾಯಕಾರಿಯಾಗಿ ಬೆಳೆಯುತ್ತಿವೆ.

ಇಷ್ಟಿದ್ದರೂ ನಮ್ಮ ಸಮಾಜದಲ್ಲಿ ಜಾತಿ ಪದ್ದತಿಯೇ ಇಲ್ಲ ಎಂದೂ, ಜಾತ್ಯಾತೀತತೆಯ ಬಗ್ಗೆ ಮಾತನಾಡುವವರೆಲ್ಲಾ ‘ಸೂಡೋ ಸೆಕ್ಯಲರಿಸ್ಟ್’ ಎಂಬ ಅಪಮಾನಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಸಾವಿರಾರು ಪ್ರಕರಣಗಳು ದಿನನಿತ್ಯ ದಾಖಲಾಗುತ್ತಿದ್ದರೂ, ಸರ್ಕಾರವಾಗಲೀ ನಾಗರೀಕರಾಗಲೀ ಇವುಗಳ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ.


ಇದನ್ನೂ ಓದಿ: ತಮಿಳುನಾಡು ಶಾಸಕನ ಅಂತರ್ಜಾತಿ ವಿವಾಹದ ವಿಡಿಯೋ ವೈರಲ್: ಯುವತಿಯ ತಂದೆ ಆತ್ಮಹತ್ಯೆಗೆ ಯತ್ನ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here