Homeಅಂಕಣಗಳುಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

ಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ನಾಯಕರು ಮೀಸಲಾತಿ ಹೋರಾಟ ಸಮಿತಿ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಈಗ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಇರುವ ಈ ಉಪಜಾತಿ 2ಎಗೆ ಸೇರಬೇಕು ಎನ್ನುವುದು ಅವರ ಆಗ್ರಹ.

ಶೇ.5 ಮೀಸಲು ಸೌಲಭ್ಯ ಇರುವ 3ಬಿ ಗುಂಪಿನಲ್ಲಿ ವೀರಶೈವ ಲಿಂಗಾಯತದ ಎಲ್ಲ ಉಪಜಾತಿಗಳು ಸೇರಿದಂತೆ ಸುಮಾರು 6 ಜಾತಿಗಳು ಹಾಗೂ ಹಾಗೂ ಅವುಗಳ ಸರಿಸಮಾನ ಜಾತಿಗಳು ಇವೆ. ಶೇ.15 ಮೀಸಲು ಇರುವ 2ಎ ಪ್ರವರ್ಗದಲ್ಲಿ 102 ಜಾತಿಗಳು ಹಾಗೂ ಅವುಗಳ ಸಮಾನಾಂತರ ಜಾತಿಗಳು ಇವೆ.

ಪ್ರತಿ ಗುಂಪಿನಲ್ಲೂ ಮೀಸಲು ಸೌಲಭ್ಯ ಸಮಾನವಾಗಿ ಹಂಚಿಕೆ ಆಗುತ್ತದೆ ಅಂದುಕೊಳ್ಳುವುದಾದರೆ ಈಗ ಪಂಚಮಶಾಲಿಗಳಿಗೆ ಶೇಕಡಾ 0.83 ಸೌಲಭ್ಯ ದೊರೆಯುತ್ತದೆ. ಆದರೆ ಅದನ್ನು 2ಎನಲ್ಲಿ ಸೇರಿಸಿದರೆ ಆ ಜಾತಿಯ ಅಭ್ಯರ್ಥಿಗಳಿಗೆ ಶೇ.0.14 ಸೌಲಭ್ಯ ದೊರೆಯುತ್ತದೆ. (ಬೇರೆಬೇರೆ ಸಮುದಾಯಗಳ ಜನಸಂಖ್ಯೆ ಹೆಚ್ಚುಕಮ್ಮಿಯುರುತ್ತದೆ ಎಂಬುದನ್ನು ಸದ್ಯಕ್ಕೆ ಬದಿಗಿರಿಸಿ ನೋಡಿದಾಗಲೂ 2ಎನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ.) ಎಲ್ಲಾ ಜಾತಿ ಸಮುದಾಯಗಳು ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವಾಗ ಈ ಪಂಚಮಸಾಲಿ ಕಮಿಟಿ ಅಂದಾಜು ಎಂಟು ಪಟ್ಟು ಕಮ್ಮಿ ಸೌಲಭ್ಯಕ್ಕೆ ಹಾತೊರೆಯುತ್ತಿರುವುದೇಕೆ?

ಇದಕ್ಕೆ ಸಮುದಾಯದ ಅಭಿವೃದ್ಧಿ ಹೊರತಾಗಿ ಪಕ್ಷ ರಾಜಕಾರಣವೂ ಸೇರಿದಂತೆ ಇತರ ಕಾರಣಗಳು ಇರಬಹುದೇ? ಇದು ಇಡೀ ಪಂಚಮಸಾಲಿ ಸಮಾಜದ ಹೋರಾಟವೇ ಅಥವಾ ಆ ಜಾತಿಯ ಕೆಲ ರಾಜಕೀಯ ನಾಯಕರ ಅಸ್ತಿತ್ವದ ಹೋರಾಟವೇ? ಇದರಿಂದ ಸಮಾಜಕ್ಕೆ ಸಿಗುವುದು ಏನು? ಪುಢಾರಿಗಳಿಗೆ ದೊರೆಯುವುದು ಏನು? ಇದರ ಬಗ್ಗೆ ಸಮಾಜಕ್ಕಾಗಲೀ, ಮುಖಂಡರಿಗಾಗಲೀ ಸ್ಪಷ್ಟತೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ದೊರೆಯುತ್ತಿಲ್ಲ.

ಮೇಲುನೋಟಕ್ಕೆ ಇದು ರಾಜಕೀಯ ಹೋರಾಟದಂತೆ ಕಾಣುತ್ತದೆ.

ಬಸನಗೌಡ ಪಾಟೀಲ ಯತ್ನಾಳ್

ಇದನ್ನು ಎರಡು ರೀತಿ ನೋಡಬಹುದು. ಬಸನಗೌಡ ಯತ್ನಾಳ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಗಲಿಲ್ಲ ಎನ್ನುವುದಕ್ಕೋ ಅಥವಾ ತಮ್ಮ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕೋ ಅಥವಾ ತಾವು ತಮ್ಮ ಸಮುದಾಯದಲ್ಲಿ ಪ್ರಶ್ನಾತೀತ ನಾಯಕರರಾಗಬೇಕು ಎನ್ನುವುದಕ್ಕೋ ಮನೆ-ಮಠ ಬಿಟ್ಟು ಬೀದಿಗೆ ಇಳಿದಂತೆ ಕಾಣುತ್ತದೆ.

ರಾಜ್ಯಮಟ್ಟದ ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ಹೋಗಿ ಸೌಹಾರ್ದ ಸಹಕಾರಿ ಸಂಘಟನೆಯ ದ್ವೇಷ ಕಟ್ಟಿಕೊಂಡ ಯತ್ನಾಳ್ ಅವರು ಬಿಜೆಪಿಯ ಮತ್ತು ಸಂಘ ಪರಿವಾರದ ಎಲ್ಲರ ಜೊತೆ ಸೌಹಾರ್ದ ಸಂಬಂಧಗಳನ್ನೇನು ಇಟ್ಟುಕೊಂಡಿಲ್ಲ. ಹಾಗೆಂದು ಬಿಜೆಪಿ ಯತ್ನಾಳ್‌ಗೌಡರಂತಹ ಬೇಫಿಕರ್ ಭಾಷಣಕಾರರನ್ನು ಕಳೆದುಕೊಳ್ಳಲು ತಯಾರಿಲ್ಲ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್ ಅವರ ಮನೆಗೆ ಹೋಗಿ ತಾವು ನಮ್ಮ ಚುನಾವಣೆಯಲ್ಲಿ ‘ತಾರಾ ಪ್ರಚಾರಕ’ರಾಗಿ ಸೇವೆ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಹಿಂದಿನದೆಲ್ಲಾ ಮರೆತು ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾಗಿ ಯತ್ನಾಳ್ ನೋವುನುಂಗಿ ನಗು ಮುಖ ತೋರಿದ ಸ್ಥಿತಿಯಲ್ಲಿ ಘೋಷಿಸಿದ್ದಾರೆ.

ಇವರಿಗೆ ತಮ್ಮದೇ ಪಕ್ಷದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿಟ್ಟಿದೆ. ಇದರ ಬಗ್ಗೆ ಕೇಳಿರಲಾರದವರು ಯಾರೂ ಇರಲಾರರು. ಇನ್ನು ಯತ್ನಾಳ್‌ರ ಮೇಲಿನ ಸಿಟ್ಟಿನಿಂದ ಒಂದಲ್ಲ ಎರಡಲ್ಲ ಐದು ಮಠ ಕಟ್ಟುತ್ತೇನೆ ಎಂದು ಹೇಳಿರುವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ರಾಜಕೀಯ ವಿರೋಧಿಗಳು ಎನ್ನುವುದು ಕೂಟ ಅಷ್ಟೇ ಸಾಮಾನ್ಯ ತಿಳಿವಳಿಕೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಯತ್ನಾಳ್ ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಇರುವವರು ಬಿಜೆಪಿ ಹೊರತುಪಡಿಸಿ ಇತರ ಪಕ್ಷದಲ್ಲಿ ಇರುವ ಅವರ ಕುಲಬಾಂಧವರೇ. ರಾಜ್ಯದ ಅನೇಕ ಕಡೆ ಪಂಚಮಸಾಲಿ ಪ್ರತಿಭಟನೆಗಳನ್ನು ನೋಡಿದರೆ ಯತ್ನಾಳ್‌ರಿಗೆ ಬಿಜೆಪಿಯ ಮೇಲೆ ಪ್ರೀತಿ ಇದ್ದರೂ ಕೆಲ ಪ್ರತಿಸ್ಪರ್ಧಿಗಳ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಅನ್ನಿಸದೆ ಇರದು.

ಆದರೆ ರಾಜ್ಯದ ಸಾಮಾಜಿಕ ರಚನೆಯನ್ನು ಬಲ್ಲವರು, ಜಾತಿ-ಉಪಜಾತಿ ರಾಜಕಾರಣದ ಒಳಪಟ್ಟುಗಳನ್ನು ಬಲ್ಲವರು ಇದು ಮೇಲೆ ಕಾಣುವಷ್ಟು ಸರಳವಾಗಿಲ್ಲ ಎನ್ನುತ್ತಾರೆ. ಇದು ರಾಜಕೀಯೋ-ಸಾಮಾಜಿಕ ತಂತ್ರ ಎಂದು ಅವರ ಅನಿಸಿಕೆ. 3ಬಿ ಪ್ರವರ್ಗದಲ್ಲಿ ವೀರಶೈವ-ಲಿಂಗಾಯತ ಜಾತಿ ಪಂಗಡಗಳು ಇದ್ದು ಪಂಚಮಸಾಲಿ ಜನಾಂಗಕ್ಕೆ ತಮ್ಮವರೊಡನೆ ಸ್ಪರ್ಧೆ ಇಷ್ಟವಿಲ್ಲ. ಇನ್ನು 2ಎ ಪ್ರವರ್ಗದಲ್ಲಿ ಲಿಂಗಾಯತರ ಬಣಜಿಗ ಉಪ ಜಾತಿಯನ್ನು ಜಗದೀಶ್ ಶೆಟ್ಟರ್ ಅವರು ತಮ್ಮ ಕಾಲದಲ್ಲಿ ಗದ್ದಲ ಇಲ್ಲದೆ ಸೇರಿಸಿಬಿಟ್ಟರು. ಬಣಜಿಗರು ಪಂಚಮಸಾಲಿಗಳಿಗೆ ಹೋಲಿಸಿದರೆ ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿತು. ಇನ್ನು ಲಿಂಗಾಯತ ಪ್ರಾತಿನಿಧ್ಯ ಎನ್ನುವ ಹೆಸರಿನಲ್ಲಿ ಕೇವಲ ಬಣಜಿಗರು ಎಲ್ಲ ಸೌಲಭ್ಯ ಬಾಚಿಕೊಂಡರು, ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವ ದುಃಖ ಯತ್ನಾಳ್ ಮತ್ತು ಇತರ ನಾಯಕರಿಗೆ ಇದ್ದಂತೆ ಇದೆ.

ಇನ್ನು 3ಬಿ ಗುಂಪಿನಲ್ಲಿ ಮರಾಠಾ ಸಮುದಾಯ ಇದ್ದು, 2ಎನಲ್ಲಿ ಕುರುಬ ಜನಾಂಗ ಇದೆ. ಮರಾಠರೊಂದಿಗೆ ಸ್ಪರ್ಧೆ ಮಾಡುವುದಕ್ಕಿಂತ ಕುರುಬ ಜನಾಂಗದ ಜೊತೆ ಸ್ಪರ್ಧೆ ಅನುಕೂಲ ಎನ್ನುವ ಲೆಕ್ಕಾಚಾರ ಇಂತಹ ನಾಯಕರಿಗೆ ಇದ್ದಂತೆ ಇದೆ.

ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕದಾದ್ಯಂತ ಹಬ್ಬಿರುವ ಪಂಚಮಸಾಲಿ ಜನಾಂಗ ತಲೆತಲಾಂತರದಿಂದ ಭೂಮಾಲೀಕತ್ವ ಹೊಂದಿದೆ. ಅವರನ್ನು ಹಳ್ಳಿಗಳಲ್ಲಿ ಗೌಡರು-ಬಿರಾದಾರ, ಪಾಟೀಲ್ ಎಂದು ಕರೆಯುತ್ತಾರೆ. ಇವರ ಎದುರು ಇತರ ಹಿಂದುಳಿದ ಜಾತಿಯವರು ಸ್ಪರ್ಧೆ ಮಾಡಲು ಸಾಧ್ಯ ಇಲ್ಲ. ಉದಾಹರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಾನ 2ಎಗೆ ಮೀಸಲು ಎಂತಾದರೆ ಪಂಚಮಸಾಲಿಗಳ ಎದುರು ಇತರ ಹಿಂದುಳಿದ ಜಾತಿಯ ಯಾವುದೇ ಅಭ್ಯರ್ಥಿ ನಿಲ್ಲಲು ಸಾಧ್ಯ ಇಲ್ಲ. ಆದರೆ 3ಬಿನಲ್ಲಿ ಇದ್ದರೆ ಇವರು ಇತರ ಲಿಂಗಾಯತರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು 2ಎಗೆ ಬದಲಾವಣೆಗೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಕೆಲವರ ಅನಿಸಿಕೆ.

ಈ ಪಿಸುಮಾತುಗಳನ್ನು ತಳ್ಳಿಹಾಕಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಮಗೆ ರಾಜಕೀಯ ಮೀಸಲಾತಿ ಬೇಡ. ಅದನ್ನು ನಾವು ಬರೆದುಕೊಟ್ಟಿದ್ದೇವೆ ಎನ್ನುವ ಮಾತು ಹೇಳಿದ್ದಾರೆ. ಇದು ಸಮಸ್ಯೆಯನ್ನು ಸರಳವಾಗಿಸುವ ಬದಲಾಗಿ ಇನ್ನೂ ನಿಗೂಢವಾಗಿಸುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮಾತ್ರ ಕೆಲವು ಹಂತಗಳಲ್ಲಿ ರಾಜಕೀಯ ಮೀಸಲಾತಿ ಇದೆ.

ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಚಿಸಿದಂತೆ ಆರ್ಥಿಕ ಹಿಂದುಳಿದವರ (ಇಡಬ್ಲೂಎಸ್) ಶೇ.10ರ ಕೋಟಾದಿಂದ ಒಂದು ಭಾಗವನ್ನು ಪಂಚಮಸಾಲಿಯವರಿಗೆ ಕೊಡಬಹುದು. ಇದಕ್ಕೆ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸು ಅಗತ್ಯವಿಲ್ಲ. ಆದರೆ ಈ ಗುಂಪಿಗೆ ರಾಜಕೀಯ ಮೀಸಲಾತಿ ಇಲ್ಲ. ಕೂಡಲ ಸಂಗಮ ಸ್ವಾಮೀಜಿ ಅವರಿಗೆ ಈ ಸೂಚನೆ ಮೊದಲೇ ಸಿಕ್ಕಿತ್ತೇ?

ಆದರೆ ಇದು ಸುಲಭವಲ್ಲ. ಜಯಶ್ರೀ ಪಾಟೀಲ್ ಮತ್ತು ಇತರರು ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮರಾಠಾ ಜನಾಂಗಕ್ಕೆ ಕೊಟ್ಟಿದ್ದ 16 ಶೇಕಡಾ ಮೀಸಲಾತಿಯನ್ನು ತಳ್ಳಿಹಾಕಿದೆ. ಶೇ.50ರ ಮಿತಿಮೀರಿವುದು ಒಂದು ಕಾರಣವಾದರೆ ಆಯೋಗದ ಶಿಫಾರಸ್ಸು ಇರಲಿಲ್ಲ ಎನ್ನುವ ಕಾರಣ ಇನ್ನೊಂದು.

ತಮ್ಮ ರಾಜಕೀಯ ಚಾಣಾಕ್ಷ ತನಕ್ಕೆ ಹೆಸರಾದ ಬಸವರಾಜ ಬೊಮ್ಮಾಯಿ ಅವರು, ’ನೋಡಪ್ಪ ನಾನಂತೂ ಕೊಟ್ಟೆ, ಕೋರ್ಟ್‌ನವರು ಕೊಡದೇ ಹೋದರೆ ನಾನು ಏನು ಮಾಡಲಿ’ ಎನ್ನುವ ಮಾತಾಡಿ ಕೈಚೆಲ್ಲಬಹುದು. ’ಇನ್ನೊಂದು ಬಾರಿ ಅಧಿಕಾರ ಕೊಟ್ಟರೆ ನಾನು ಏನಾದರೂ ಮಾಡಿಯೇನು’ ಎನ್ನುವ ಆಶ್ವಾಸನೆ ಕೊಡಬಹುದು. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ ಅವರಿಗೆ ಆಣೆ ಪ್ರಮಾಣ ಮಾಡಿದರೋ ಏನೋ? ಇದ್ದರೂ ಇರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...