Homeಮುಖಪುಟನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು...

ನಾನೇನು ಮಾಡಬೇಕು ಎಂಬ ಅಧಿಕಾರ ಜನ ನೀಡಿದ್ದಾರೆ, ಮೋದಿ ಮಾತು ಯಾಕೆ ಕೇಳಬೇಕು: ತಮಿಳುನಾಡು ಹಣಕಾಸು ಸಚಿವ

ನಿಮ್ಮ ಮಾತು ಕೇಳಬೇಕು ಎಂಬುವುದಕ್ಕೆ ಸಾಂವಿಧಾನಿಕ ಆಧಾರವಿಲ್ಲ, ನೀವು ಆರ್ಥಿಕ ತಜ್ಞರಲ್ಲ, ನಿಮಗೆ ನೊಬೆಲ್ ಪ್ರಶಸ್ತಿ ಬಂದಿಲ್ಲ, ನೀವು ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿಲ್ಲ, ಆದರೂ ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು? ಎಂದು ಅವರು ಹೇಳಿದ್ದಾರೆ

- Advertisement -
- Advertisement -

“ನಾನು ಇನ್ನೊಬ್ಬರ ದೃಷ್ಟಿಕೋನವನ್ನು ಯಾಕೆ ತೆಗೆದುಕೊಳ್ಳಬೇಕು? ನಾನು ಏನು ಮಾಡಬೇಕು ಎಂಬ ಅಧಿಕಾರವನ್ನು ಚುನಾವಣೆ ಮೂಲಕ ನನಗೆ ನೀಡಲಾಗಿದೆ. ನನ್ನ ಮುಖ್ಯಮಂತ್ರಿ ನನಗೆ ಕೆಲಸ ಕೊಟ್ಟಿದ್ದಾರೆ, ನಾನು ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ. ನಾನು ಒಕ್ಕೂಟ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ. ನಾವು ಒಕ್ಕೂಟ ಸರ್ಕಾರದ ಖಜಾನೆಯ ದೊಡ್ಡ ಕೊಡುಗೆದಾರರಾಗಿದ್ದೇವೆ. ನಮ್ಮಿಂದ ನಿಮಗೆ ಇನ್ನೇನು ಬೇಕು? ನಾನು ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು?” ಎಂದು ತಮಿಳುನಾಡು ಹಣಕಾಸು ಸಚಿವ ಡಾ.ಪಿ. ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂಡಿಯಾ ಟುಡೆ ಮಾಧ್ಯಮದಲ್ಲಿ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರಿಗೆ ಉಚಿತ ಸವಲತ್ತುಗಳು ನೀಡುವುದನ್ನು ‘ಪುಕ್ಕಟೆ ಕೊಡುಗೆ’ಗಳು ಎಂದು ಹೇಳುತ್ತಿರುವ ಮೋದಿ ನೇತೃತ್ವದ ಸರ್ಕಾರದ ನಿಲುವಿನ ಬಗ್ಗೆ ಅವರು ಮಾಡಿರುವ ವಾಗ್ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರಾಜ್ಯ ಸರ್ಕಾರಗಳು ಏನು ಮಾಡಬಹುದು ಎಂಬುದನ್ನು ಒಕ್ಕೂಟ ಸರ್ಕಾರ ಯಾಕೆ ನಿರ್ಧರಿಸಬೇಕು ಎಂದು ತ್ಯಾಗ ರಾಜನ್ ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ತ್ಯಾಗ ರಾಜನ್, “ನೀವು ಹೇಳಿದ್ದನ್ನು ನಾವು ಕೇಳಬೇಕು ಎಂದು ಹೇಳುವುದಕ್ಕೆ ಒಂದೋ ನೀವು ಸಾಂವಿಧಾನಿಕ ಆಧಾರವನ್ನು ಹೊಂದಿರಬೇಕು ಅಥವಾ ನೀವು ವಿಷಯದಲ್ಲಿ ಪರಿಣತಿ ಹೊಂದಿದ್ದರೆ ಅಥವಾ ಅರ್ಥಶಾಸ್ತ್ರದಲ್ಲಿ ಡಬ್ಬಲ್ ಪಿಎಚ್‌ಡಿ ಹೊಂದಿದ್ದರೆ, ನೋಬೆಲ್ ಪ್ರಶಸ್ತಿ ಪಡೆದಿದ್ದರೆ, ನಮಗಿಂತ ಚೆನ್ನಾಗಿ ನೀವು ಕೆಲಸ ಮಾಡುತ್ತಿದ್ದರೆ, ನೀವು ಆರ್ಥಿಕತೆಯನ್ನು ಬೆಳೆಸಿದ್ದೀರಿ ಎಂದಾದರೆ, ಸಾಲವನ್ನು ಕಡಿಮೆ ಮಾಡಿದ್ದೀರಿ ಎಂದಾದರೆ, ನೀವು ಉದ್ಯೋಗಗಳನ್ನು ಸೃಷ್ಟಿಸಿದ್ಧೀರಿ ಎಂದು ತೋರಿಸುವ ಕೆಲವು ಕಾರ್ಯಕ್ಷಮತೆಯ ಹಿನ್ನಲೆಯನ್ನು ನೀವು ಹೊಂದಿದ್ದರೆ ನಾವು ನೀವು ಹೇಳುವುದನ್ನು ಕೇಳುತ್ತೇವೆ. ಆದರೆ ಇದು ಯಾವುದೂ ಇಲ್ಲದೆ, ನಾವು ಯಾಕೆ ಇನ್ನೊಬ್ಬರ ಅಭಿಪ್ರಾಯವನ್ನು ಕೇಳಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎಐಎಡಿಎಂಕೆ ಅಧಿಕಾರ ಕಿತ್ತಾಟ: ಇ.ಪಳನಿಸ್ವಾಮಿಗೆ ಸುಪ್ರೀಂಕೋರ್ಟ್‌ನಲ್ಲಿ ಭಾರೀ ಹಿನ್ನಡೆ

ತಮಿಳುನಾಡು ಸರ್ಕಾರವು ಒಕ್ಕೂಟ ಸರ್ಕಾರದ ಸಾಧನೆಗಿಂತ ಹೆಚ್ಚಿನ ಸಾಧನೆ ಮಾಡಿದೆ ಎಂದು ತ್ಯಾಗ ರಾಜನ್ ಅವರು ಪ್ರತಿಪಾದಿಸಿದ್ದಾರೆ.

“ನಾನು ಯಾರದೊ ದೃಷ್ಟಿಕೋನವನ್ನು ಯಾಕೆ ತೆಗೆದುಕೊಳ್ಳಬೇಕು? ಅದು ದೇವರ ವಾಕ್ಯವೇ? ನಾನು ದೇವರನ್ನು ನಂಬುತ್ತೇನೆ, ಆದರೆ ಮನುಷ್ಯನೊಬ್ಬ ದೇವರು ಎಂದು ನಾನು ನಂಬುವುದಿಲ್ಲ. ಇನ್ನೊಬ್ಬರ ದೃಷ್ಟಿಕೋನವನ್ನು ನಾನು ಯಾಕೆ ತೆಗೆದುಕೊಳ್ಳಬೇಕು? ನಾನು ಏನು ಮಾಡಬೇಕು ಎಂಬ ಅಧಿಕಾರವನ್ನು ಚುನಾವಣೆ ಮೂಲಕ ನನಗೆ ನೀಡಲಾಗಿದೆ. ನನ್ನ ಮುಖ್ಯಮಂತ್ರಿ ನನಗೆ ಕೆಲಸ ಕೊಟ್ಟಿದ್ದಾರೆ, ಅದನ್ನು ಚೆನ್ನಾಗಿ ಮಾಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

“ನಾನು ಒಕ್ಕೂಟ ಸರ್ಕಾರಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದೇನೆ. ಮುಂದಿನ ಮೂರು ವರ್ಷವೂ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂಬುವುದನ್ನು ಖಚಿತಪಡಿಸುತ್ತೇನೆ. ನಾವು ಒಕ್ಕೂಟ ಸರ್ಕಾರದ ಖಜಾನೆಗೆ ದೊಡ್ಡ ಕೊಡುಗೆದಾರರಾಗಿದ್ದು, ಅದಕ್ಕೆ ದೊಡ್ಡ ಮೊತ್ತವನ್ನು ನೀಡುತ್ತಿದ್ದೇವೆ. ಉದಾಹರಣೆಗೆ ಒಂದು ರುಪಾಯಿ ನಾವು ಒಕ್ಕೂಟ ಸರ್ಕಾರಕ್ಕೆ ನೀಡಿದರೆ ಅದು ನಮಗೆ 33-35 ಪೈಸೆ ಅಷ್ಟೆ ವಾಪಾಸು ನೀಡುತ್ತಿದೆ. ಇನ್ನೂ ನಮ್ಮಿಂದ ನಿಮಗೆ ಏನು ಬೇಕು?” ಎಂದು ಅವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

“ಇಷ್ಟೆಲ್ಲಾ ಆಗಿಯೂ ನಾನು ಯಾಕೆ ನಿಮ್ಮ ಮಾತನ್ನು ಪಾಲಿಸಬೇಕು? ನಿಮ್ಮ ಮಾತನ್ನು ನಾನು ಪಾಲಿಸಬೇಕು ಎಂಬುವುದಕ್ಕೆ ಯಾವ ಆಧಾರವಿದೆ? ಸಾಂವಿಧಾನಿಕ ಆಧಾರವಿಲ್ಲ, ನೀವು ಆರ್ಥಿಕ ತಜ್ಞರಲ್ಲ, ನಿಮಗೆ ನೊಬೆಲ್ ಪ್ರಶಸ್ತಿ ಬಂದಿದೆಯೆ? ನೀವು ನಮಗಿಂತ ಚೆನ್ನಾಗಿ ಕೆಲಸ ಮಾಡುತ್ತಿಲ್ಲ. ಆದರೂ ನಿಮಗಾಗಿ ನನ್ನ ನೀತಿಯನ್ನು ಯಾವ ಆಧಾರದ ಮೇಲೆ ಬದಲಾಯಿಸಬೇಕು? ದೇವಲೋಕದಿಂದ ಹೆಚ್ಚುವರಿ ಸಾಂವಿಧಾನಿಕ ಆದೇಶಗಳೇನಾದರೂ ಬರುತ್ತಿದೆಯೆ? ನೀವು ಏನು ಹೇಳುತ್ತಿದ್ದೀರಿ?” ಎಂದು ಡಾ.ಪಿ. ತ್ಯಾಗ ರಾಜನ್ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಉಚಿತ ಕೊಡುಗೆ’ ಸಂಸ್ಕೃತಿಯ ಚರ್ಚೆ ಇತ್ತೀಚೆಗೆ ರಾಜಕೀಯ ಚರ್ಚೆಯನ್ನು ಪಡೆದುಕೊಂಡಿದೆ. ಕಳೆದ ವಾರದ ಆರಂಭದಲ್ಲಿ ಒಕ್ಕೂಟ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯ ಸರ್ಕಾರದ ಹಣಕಾಸಿನ ಬಲವನ್ನು ಪರೀಕ್ಷಿಸಿ ಅದಕ್ಕೆ ಅನುಗುಣವಾಗಿ ಬಜೆಟ್ ನಿಬಂಧನೆಗಳನ್ನು ಮಾಡಿ ‘ಪುಕ್ಕಟೆ ಕೊಡುಗೆ’ಗಳ ನೀಡುವಂತೆ ರಾಜ್ಯಗಳಿಗೆ ಕೇಳಿಕೊಂಡಿದ್ದರು.

ಈ ಮಧ್ಯೆ, ಹಲವಾರು ಉನ್ನತ ರಾಜಕೀಯ ನಾಯಕರು ‘ಉಚಿತ ಕೊಡುಗೆ’ ನೀತಿಯನ್ನು ಬೆಂಬಲಿಸಿದ್ದು, ಇದು ಜನ ಕಲ್ಯಾಣಕ್ಕಾಗಿ ನೀಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಉದ್ಯಮಿಗಳ ಸಾಲ ಮನ್ನಾ ಮಾಡುವುದನ್ನು ಕೂಡಾ ಉಚಿತ ಕೊಡುಗೆ ಎಂದು ಪರಿಗಣಿಸಿ: ಸುಪ್ರೀಂಗೆ ತಮಿಳುನಾಡು ಸಿಎಂ ಸ್ಟಾಲಿನ್ 

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಉಚಿತ ಶಿಕ್ಷಣ ಮತ್ತು ಆರೋಗ್ಯ ‘ಉಚಿತ ಕೊಡುಗೆ’ಯಲ್ಲ ಎಂದು ಪ್ರತಿಪಾದಿಸಿದ್ದು, ಇವುಗಳು ಜನರಿಗೆ ಸಿಕ್ಕರೆ ಭಾರತವು ವಿಶ್ವದ ಅಗ್ರ ರಾಷ್ಟ್ರವಾಗಬಹುದು ಎಂದು ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...