Homeಮುಖಪುಟಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎರಡು ತಿಂಗಳಲ್ಲಿ ಶೇ.10 ರಷ್ಟು ಹೆಚ್ಚಳ!

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎರಡು ತಿಂಗಳಲ್ಲಿ ಶೇ.10 ರಷ್ಟು ಹೆಚ್ಚಳ!

- Advertisement -
- Advertisement -

ಹಲವು ರಾಜ್ಯಗಳಲ್ಲಿ ಶತಕದ ಗಡಿ ದಾಟಿರುವ ಪೆಟ್ರೋಲ್, ಡೀಸೆಲ್ ದರ ಭಾನುವಾರವು ಮತ್ತೆ ಹೆಚ್ಚಾಗಿದೆ. ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು 35 ಪೈಸೆ ಮತ್ತು ಡೀಸೆಲ್ ಅನ್ನು 18 ಪೈಸೆ ಹೆಚ್ಚಿಸಿವೆ. ಇದರ ಪರಿಣಾಮವಾಗಿ ಕಳೆದ ಎರಡು ತಿಂಗಳಲ್ಲಿ (ಮೇ 4 ರಿಂದ) ಪೆಟ್ರೋಲ್, ಡೀಸೆಲ್‌ ಬೆಲೆಯಲ್ಲಿ 10% ಕ್ಕಿಂತ ಹೆಚ್ಚಳ ಕಂಡಿದೆ.

ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಭಾನುವಾರ (ಜುಲೈ 4) ದಂದು ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿವೆ. 100 ರೂಪಾಯಿ ಗಡಿ ದಾಟದ ಮೆಟ್ರೋ ನಗರಗಳಾದ ದೆಹಲಿ ಹಾಗೂ ಕೋಲ್ಕತಾದಲ್ಲಿಯೂ ನೂರರ ಹತ್ತಿರ ಬೆಲೆ ಬಂದು ನಿಂತಿದೆ.

ಇತ್ತೀಚಿನ ಏರಿಕೆಯೊಂದಿಗೆ, ದೆಹಲಿ ಮತ್ತು ಕೋಲ್ಕತ್ತಾದ ಪೆಟ್ರೋಲ್ ದರಗಳು ಲೀಟರ್‌ಗೆ ₹ 100 ಕ್ಕೆ ತಲುಪಿದ್ದು ಕ್ರಮವಾಗಿ ಒಂದು ಲೀಟರ್‌ಗೆ ರೂ. 99.51 ಮತ್ತು ರೂ. 99.45 ಕ್ಕೆ ತಲುಪಿದೆ. ಹೊಸ ಡೀಸೆಲ್ ದರಗಳು ದೆಹಲಿ ಲೀಟರ್‌ಗೆ ರೂ. 89.36 ಮತ್ತು ಕೋಲ್ಕತ್ತಾದಲ್ಲಿ ರೂ.92.27 ಆಗಿದೆ.

ಇದನ್ನೂ ಓದಿ: ಪೆಟ್ರೋಲ್-ಡಿಸೇಲ್ GST ವ್ಯಾಪ್ತಿಗೆ ಚರ್ಚೆ: ಬಿಜೆಪಿ-ಕಾಂಗ್ರೆಸ್ ವಿರುದ್ಧ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಮುಂಬೈ, ಚೆನ್ನೈ ಮತ್ತು ಬೆಂಗಳೂರು ಎಂಬ ಮೂರು ಮಹಾನಗರಗಳಲ್ಲಿ ಈಗಾಗಳೆ ಪೆಟ್ರೋಲ್ 100 ರೂಗಳ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ ರೂ. 105.58 ಮತ್ತು ಡೀಸೆಲ್‌ಗೆ. 96.91 ದರ ನಿಗದಿಪಡಿಸಿಲಾಗಿದೆ.

ರಾಜಸ್ಥಾನದ ಗಂಗನಗರದಲ್ಲಿ ಅತಿ ಹೆಚ್ಚು ಇಂಧನ ದರಗಳು ದಾಖಲಾಗಿದ್ದು, ಪೆಟ್ರೋಲ್ ಲೀಟರ್‌ಗೆ. 110.77 ರೂಪಾಯಿ ಮತ್ತು ಡೀಸೆಲ್ ಲೀಟರ್‌ಗೆ 102.60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ದೇಶದ ಮಹಾರಾಷ್ಟ್ರ, ರಾಜಸ್ಥಾನ, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ತೆಲಂಗಾಣ, ಒಡಿಶಾ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಂಜಾಬ್, ಬಿಹಾರ, ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಪೆಟ್ರೋಲ್ ದರಗಳು ಲೀಟರ್‌ಗೆ 100 ರೂಪಾಯಿ ದಾಟಿದೆ.


ಇದನ್ನೂ ಓದಿ: Explainer: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಗೆ ಆಯಿಲ್ ಬಾಂಡ್‌ಗಳು ಕಾರಣವೇ? GST ವ್ಯಾಪ್ತಿಗೆ ತರಲು ರಾಜ್ಯಗಳ ವಿರೋಧವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...