ಜಾಗತಿಕ ಸುದ್ದಿಸಂಸ್ಥೆಯಾಗಿರುವ ರಾಯ್ಟರ್ಸ್‌ನ 2020 ರ ವರ್ಷದ ಫೋಟೋ ಪಟ್ಟಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಗುಂಪೊಂದು ಅಮಾನವೀಯವಾಗಿ ಥಳಿಸುತ್ತಿರವ ಫೋಟೋ ಆಯ್ಕೆಯಾಗಿದೆ. ಈ ಚಿತ್ರವನ್ನು ದಾನಿಶ್ ಸಿದ್ದೀಕಿ ಕ್ಲಿಕ್ಕಿಸಿದ್ದರು.
ರಾಯ್ಟರ್ಸ್ ಆಯ್ಕೆ ಮಾಡಿರುವ 100 ಫೋಟೋಗಳ ಪಟ್ಟಿಯಲ್ಲಿ ಭಾರತದ ದಾನಿಶ್ ಸಿದ್ದೀಕಿ ಕ್ಲಿಕ್ಕಿಸಿರುವ ಮೂರು ಫೋಟೋಗಳು ಆಯ್ಕೆಯಾಗಿದೆ. ಅವಗಳು ಕೆಳಗಿನಂತಿವೆ…
ಇದನ್ನೂ ಓದಿ: 2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ
ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ದ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಜನರ ವಿರುದ್ದ ಕಾನೂನನ್ನು ಬೆಂಬಲಿಸುವ ಜನರು ಘರ್ಷಣೆ ಪ್ರಾರಂಭಿಸಿದಾಗ ಭುಗಿಲೆದ್ದ ಗಲಭೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಜನರ ಗುಂಪೊಂದು ಅಮಾನವೀಯವಗಿ ಥಳಿಸಿದ್ದರು.

ಇನ್ನೊಂದು ಚಿತ್ರ ಜನವರಿ 30, 2020 ರಂದು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಹೊರಗೆ ಪೌರತ್ವ ತಿದ್ದಪಡಿ ಕಾನೂನಿನ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದೂಕನ್ನು ಹಿಡಿದು ಫೈರ್ ಮಾಡಿದ್ದ.

ಇದನ್ನೂ ಓದಿ: 2020ರ ವರ್ಷದ ವ್ಯಕ್ತಿಯಾಗಿ ಚಿಂತಕ ಡಾ.ಆನಂದ್ ತೇಲ್ತುಂಬ್ಡೆ ಆಯ್ಕೆ
ಜುಲೈ 27, 2020 ರಂದು ಬಿಹಾರದ ಭಾಗಲ್ಪುರದ, ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ವಾರ್ಡ್ ಒಳಗೆ ರೋಗಿಗೆ ವೈದ್ಯಕೀಯ ಸಿಬ್ಬಂದಿಯಬ್ಬರು ಚಿಕಿತ್ಸೆ ನೀಡುತ್ತಿರುವುದು.

ಇದನ್ನೂ ಓದಿ: ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!


