Homeಅಂತರಾಷ್ಟ್ರೀಯಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!

ಬಿಬಿಸಿ ಸ್ಪೂರ್ತಿದಾಯಕ ಮಹಿಳೆಯರೆನಿಸಿಕೊಂಡ ಇಸೈವಾಣಿ, ಬಿಲ್ಕೀಸ್!

ಬಿಬಿಸಿ 2020 ರ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನಪಡೆದ ನಾಲ್ವರು ಭಾರತೀಯರು!

- Advertisement -
- Advertisement -

2020 ನೇ ಇಸವಿಯ ವಿಶ್ವದ 100 ಸ್ಪೂರ್ತಿದಾಯಕ ಮತ್ತು ಪ್ರಭಾವಶಾಲಿ  ಮಹಿಳೆಯರ ಪಟ್ಟಿಯನ್ನು ಬಿಬಿಸಿ ಬಹಿರಂಗಪಡಿಸಿದೆ. ಜ್ಞಾನ, ನಾಯಕತ್ವ, ಸೃಜನಶೀಲತೆ ಮತ್ತು ಅಸ್ಮಿತೆ ಸೇರಿದಂತೆ ಒಟ್ಟು ನಾಲ್ಕು ವಿಭಾಗದಲ್ಲಿ ಈ ಆಯ್ಕೆ ನಡೆದಿದ್ದು ಇದರಲ್ಲಿ ಭಾರತದ ನಾಲ್ವರು ಸ್ಥಾನ ಪಡೆದಿದ್ದಾರೆ.

ಸೃಜನಶೀಲತೆಯ ವಿಭಾಗದಲ್ಲಿ ತಮಿಳು ಸಿನಿಮಾ ನಿರ್ದೇಶಕ ಪಾ. ರಂಜಿತ್‌ ಅವರ ತಂಡವಾದ “ಕ್ಯಾಸ್ಟ್‌ಲೆಸ್ ಕಲೆಕ್ಟಿವ್” ನ ಹಾಡುಗಾರ್ತಿ “ಇಸೈವಾಣಿ” ಅವರು ಸ್ಥಾನ ಪಡೆದಿದ್ದರೆ. ನಾಯಕತ್ವ ವಿಭಾಗದಲ್ಲಿ “ಶಾಹಿನ್‌ಬಾಗ್ ಅಜ್ಜಿ” ಎಂದೇ ಪ್ರಸಿದ್ದರಾದ ಬಿಲ್ಕೀಸ್ ಬಾನು, ಕ್ರೀಡಾಪಟು ಮಾನಸಿ ಜೋಶಿ ಹಾಗೂ ಪರಿಸರ ಹೋರಾಟಗಾರ್ತಿ ರಿಧಿಮಾ ಪಾಂಡೆ ಅವರು ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಪಾ. ರಂಜಿತ್‍ನ ಐತಿಹಾಸಿಕ ಪ್ರಜ್ಞೆ ಮತ್ತು ಬೆದರಿಕೆಯ ಹುನ್ನಾರ

ಅಷ್ಟೇ ಅಲ್ಲದೆ ಈ ಸಂಧಿಗ್ಧ ವರ್ಷದಲ್ಲಿ ಪ್ರಪಂಚದಾದ್ಯಂತ ಅಸಂಖ್ಯಾತ ಮಹಿಳೆಯರು ಇತರರಿಗೆ ಸಹಾಯ ಮಾಡಲು ತ್ಯಾಗ ಮಾಡಿರುವ ಸಂಕೇತವಾಗಿ 100 ಮಹಿಳಾ ಪಟ್ಟಿಯಲ್ಲಿ ಒಂದು ಹೆಸರನ್ನು ಬಿಬಿಸಿ ಗೌರವಯುತವಾಗಿ ಖಾಲಿ ಬಿಟ್ಟಿದೆ.

ಇಸೈವಾಣಿ

ಇಸೈವಾಣಿ (PC: The Lede)

ಇಸೈವಾಣಿ ಭಾರತದ ವಿಶಿಷ್ಟ ಗಾನಾ ಗಾಯಕಿಯಾಗಿದ್ದು, ಕಾರ್ಮಿಕ ವರ್ಗವೆ ಹೆಚ್ಚಿರುವ ತಮಿಳುನಾಡಿನ ಉತ್ತರ ಚೆನ್ನೈನಿಂದ ಹೊರಹೊಮ್ಮಿದ್ದಾರೆ. ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಪಾ ರಂಜಿತ್ ಅವರ ’ನೀಲಂ ಪ್ರೊಡಕ್ಷನ್’ ಅಡಿಯಲ್ಲಿರುವ ’ಕ್ಯಾಸ್ಟ್‌ಲೆಸ್ ಕಲೆಕ್ಟಿವ್’ ತಂಡದ ಪ್ರಧಾನ ಗಾಯಕಿಯಾಗಿದ್ದಾರೆ. ಅವರು ಹಾಡಿರುವ ಟಿಕ್ ಟಿಕ್ ಮತ್ತು ಬೀಫ್ ಹಾಡುಗಳು ಲಕ್ಷಾಂತರ ವೀಕ್ಷಣೆ ಹೊಂದಿವೆ.

ಶೋಷಿತರ ಪರ ಮತ್ತು ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಭಾಷೆಯಲ್ಲಿ ಹಾಡು ಹಾಡುವುದರಲ್ಲಿ ಇವರು ನಿಸ್ಸೀಮರು. ಇವರ ಪ್ರತಿಭೆ ಗಮನಿಸಿ ಹಲವು ಸಿನಿಮಾ ಅವಕಾಶಗಳು ಅವರನ್ನು ಹುಡುಕಿ ಬಂದಿವೆ.

ಇದನ್ನೂ ಓದಿ: ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್

ಬಿಲ್ಕೀಸ್ ಬಾನು

ಸಿಎಎ ವಿರುದ್ದದ ಪ್ರತಿಭಟನೆಯ ಸಮಯದಲ್ಲಿ ’ಶಾಹಿನ್ ಬಾಗ್‌‌ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ 82 ವರ್ಷದ ಬಿಲ್ಕೀಸ್‌ ನಾಯಕತ್ವ ವಿಭಾಗದಲ್ಲಿ ಸ್ಥಾನಪಡೆದಿದ್ದಾರೆ. ಈ ಹಿಂದೆ ಅವರು , ’ಟೈಮ್’‌‌ ನಿಯತಕಾಲಿಕೆಯ ವರ್ಷದ ಅತ್ಯಂತ ಪ್ರಭಾವಶಾಲಿ 100 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಪತ್ರಕರ್ತೆ ರಾಣಾ ಅಯೂಬ್ ಇವರನ್ನು “ಅಂಚಿನಲ್ಲಿರುವವರ ಧ್ವನಿ” ಎಂದು ಬಣ್ಣಿಸಿದ್ದರು.

ಬಿಲ್ಕೀಸ್ ಬಾನು (PC: Times)

“ಒಂದು ಕೈಯಲ್ಲಿ ಜಪ ಮಣಿ, ಇನ್ನೊಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಕುಳಿತಿರುತ್ತಿದ್ದ ಬಿಲ್ಕಿಸ್ 82 ರ ವಯಸ್ಸಿನಲ್ಲಿಯೂ ಭಾರತದ ಧ್ವನಿಯಾದರು. ಬೆಳಿಗ್ಗೆ 8 ರಿಂದ ಮಧ್ಯರಾತ್ರಿಯವರೆಗೂ ಅವರು ಪ್ರತಿಭಟನಾ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದರು” ಎಂದು ಪತ್ರಕರ್ತೆ ಬರೆದಿದ್ದಾರೆ.

“ನನ್ನ ನರನಾಡಿಗಳಲ್ಲಿ ರಕ್ತ ಹರಿಯುವುದು ನಿಲ್ಲುವವರೆಗೂ ನಾನು ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಇದರಿಂದ, ಈ ದೇಶದ ಮತ್ತು ಜಗತ್ತಿನ ಜನರು ನ್ಯಾಯ ಮತ್ತು ಸಮಾನತೆಯ ಗಾಳಿಯನ್ನು ಉಸಿರಾಡುತ್ತಾರೆ” ಎಂದು ಬಿಲ್ಕೀಸ್ ಹೇಳಿದ್ದಾಗಿ ಪತ್ರಕರ್ತೆ ರಾಣಾ ಅಯೂಬ್ ಹೇಳಿದ್ದಾರೆ.

ಇದನ್ನೂ ಓದಿ: ’ಶಾಹಿನ್ ಬಾಗ್ ಅಜ್ಜಿ’ ಬಿಲ್ಕೀಸ್‌ 2020 ರ ಪ್ರಭಾವಶಾಲಿ ವ್ಯಕ್ತಿ

ಮಾನಸಿ ಜೋಶಿ

ಪ್ಯಾರಾ-ಅಥ್ಲೀಟ್ ಮಾನಸಿ ಜೋಶಿ ಪ್ರಸ್ತುತ ಪ್ಯಾರಾ-ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್. ಜೂನ್ 2020 ರಲ್ಲಿ, ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಎಸ್‌ಎಲ್ 3 ಸಿಂಗಲ್ಸ್‌ನಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿದೆ. ಎಂಜಿನಿಯರ್ ಕೂಡಾ ಆಗಿರುವ ಮಾನಸಿ, ಭಾರತದಲ್ಲಿ ಅಂಗವೈಕಲ್ಯ ಮತ್ತು ಪ್ಯಾರಾ-ಸ್ಪೋರ್ಟ್ಸ್ ಬಗೆಗಿನ ಗ್ರಹಿಕೆಯನ್ನು ಬದಲಾವಣೆ ಮಾಡಬೇಕು ಎಂದು ಅವರು ಆಶಿಸುತ್ತಾರೆ.

ಮಾನಸಿ ಜೋಶಿ (PC: huffingtonpost)

ರಿಧಿಮಾ ಪಾಂಡೆ

ರಿಧಿಮಾ ಪಾಂಡೆ

ರಿಧಿಮಾ ಪಾಂಡೆ ಪರಿಸರ ಕಾರ್ಯಕರ್ತೆಯಾಗಿದ್ದು, ಹವಾಮಾನ ಬದಲಾವಣೆಯನ್ನು ತಗ್ಗಿಸುವುದಕ್ಕಾಗಿ ಭಾರತ ಸರ್ಕಾರದ ವಿರುದ್ಧ ತನ್ನ ಒಂಬತ್ತನೇ ವಯಸ್ಸಿನಲ್ಲಿ ಅರ್ಜಿ ಸಲ್ಲಿಸಿದ್ದರು. 2019 ರಲ್ಲಿ, ಇತರ 15 ಮಕ್ಕಳ ಅರ್ಜಿದಾರರೊಂದಿಗೆ, ರಿಧಿಮಾ ವಿಶ್ವಸಂಸ್ಥೆಯಲ್ಲಿ ಐದು ದೇಶಗಳ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ರಿಧಿಮಾ ಪ್ರಸ್ತುತ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದು, ಇತರ ವಿದ್ಯಾರ್ಥಿಗಳಿಗೆ, ಎಲ್ಲಾ ಹಂತಗಳಲ್ಲಿ, ಅವರ ಭವಿಷ್ಯಕ್ಕಾಗಿ ಮತ್ತು ವಿಶ್ವದ ಜೀವವೈವಿಧ್ಯತೆಗಾಗಿ ಹೋರಾಡಲು ಸಹಾಯ ಮಾಡುತ್ತಿದ್ದಾರೆ. ರಿಧಿಮಾ ತನ್ನ ಭವಿಷ್ಯವನ್ನು ಮತ್ತು ಮುಂಬರುವ ಪೀಳಿಗೆಗಳನ್ನು ಉಳಿಸಲು ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನ ಮತ ಉಳಿಸಿ ಎಂದು ಜನ ಬೇಡಿಕೊಳ್ಳುವಂತೆ ಮಾಡಬೇಡಿ’: ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ, ಇಡೀ ದೇಶದ ಸಮಸ್ಯೆ: ಬಹುಭಾಷಾ ನಟ ಪ್ರಕಾಶ್ ರಾಜ್

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿಧಾನದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕರೆದಿದ್ದ ಮಹತ್ವದ ಪತ್ರಿಕಾಗೋಷ್ಠಿ ಆಗಸ್ಟ್ 14, 2026ರಂದು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ...

‘ನಲ್ಸಾರ್’ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ಅಡ್ಡಬಂದ BCI ನಡೆಗೆ CJI ಗರಂ

ಹೈದರಾಬಾದ್‌ನ 'ನಲ್ಸಾರ್' (NALSAR) ಕಾನೂನು ವಿಶ್ವವಿದ್ಯಾಲಯದ ಪದವೀಧರರ ಸನ್ನದು (ಎನ್‌ರೋಲ್‌ಮೆಂಟ್) ನೋಂದಣಿಯನ್ನು ಅಮಾನತಿನಲ್ಲಿಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ನೀಡಿದ್ದ ವಿವಾದಾತ್ಮಕ ನಿರ್ದೇಶನದ ವಿರುದ್ಧ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್,...

ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ: ಯೋಗಿ ಆದಿತ್ಯನಾಥ್ ಸೇರಿ 8 ಅಧಿಕಾರಿಗಳ ನಿರ್ಬಂಧಕ್ಕೆ ಕೆನಡಾ ಮಾನವ ಹಕ್ಕುಗಳ ಸಂಸ್ಥೆ ಆಗ್ರಹ

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ನಡೆಸಲಾಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ರಾಜ್ಯ ಬೆಂಬಲಿತ ದೌರ್ಜನ್ಯಗಳನ್ನು ಖಂಡಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಎಂಟು ಪ್ರಮುಖ...

SIR: ಬೆಂಗಳೂರಿನ ಸರ್ವಜ್ಞನಗರದ ಒಂದೇ ಬೂತ್‌ನಲ್ಲಿ ಶೇ.93.71ರಷ್ಟು ಮತದಾರರ ಹೆಸರು ನಾಪತ್ತೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ರಾಜಧಾನಿ ಬೆಂಗಳೂರಿನ ಸರ್ವಜ್ಞನಗರ ಕ್ಷೇತ್ರದ ಒಂದೇ ಮತಗಟ್ಟೆಯಲ್ಲಿ ಬರೋಬ್ಬರಿ ಶೇ. 93.71ರಷ್ಟು ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆಯಲಾಗಿದೆ ಎಂಬ ಆಘಾತಕಾರಿ ಸಂಗತಿಯೊಂದು...

ASDDO ಪಟ್ಟಿ ಸಾರ್ವಜನಿಕ ಪ್ರಕಟಣೆ ಬಗ್ಗೆ ಚುನಾವಣಾ ಆಯೋಗ ನಿರ್ಲಕ್ಷ್ಯ! ಆರೋಪ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬರೋಬ್ಬರಿ 1.08 ಕೋಟಿ ಮತದಾರರ ಹೆಸರನ್ನು ಎಎಸ್‌ಡಿಡಿಒ (ASDDO) ಪಟ್ಟಿಗೆ ಸೇರಿಸಿ ಆತಂಕ ಸೃಷ್ಟಿಸಿದ್ದ ಚುನಾವಣಾ ಆಯೋಗ, ಈಗ ಆ ಪಟ್ಟಿಯ ಸಾರ್ವಜನಿಕ ಪ್ರಕಟಣೆಯ...

SIR: 62 ವರ್ಷದ ಜೀವಂತ ವ್ಯಕ್ತಿಯನ್ನು ‘ಮೃತ’ ಎಂದು ಪಟ್ಟಿ ಮಾಡಿದ ಆಯೋಗದ ಕುತಂತ್ರ ಬಯಲು

ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ ಆಶಯಕ್ಕೇ ಮಾರಕವಾಗಿ ಪರಿಣಮಿಸುತ್ತಿದೆ. ದೋಷಮುಕ್ತ ಪಟ್ಟಿ ಸಿದ್ಧಪಡಿಸುವ ನೆಪದಲ್ಲಿ ಚುನಾವಣಾ ಆಯೋಗವು ಬರೋಬ್ಬರಿ 1.08 ಕೋಟಿ ಮತದಾರರನ್ನು...

‘ಸಿದ್ದಾರ್ಥ ವಿಹಾರ ಟ್ರಸ್ಟ್’ ನ ದಾಖಲೆ ನೀಡುತ್ತೇನೆ: ಆರ್‌ಎಸ್‌ಎಸ್, ರಾಮಮಂದಿರದ ಲೆಕ್ಕ ನೀಡಲು ಸಿದ್ಧವಿದ್ದೀರಾ?: ಬಿಜೆಪಿ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಸವಾಲು

ಬೆಂಗಳೂರು: ‘ಸಿದ್ದಾರ್ಥ ವಿಹಾರ ಟ್ರಸ್ಟ್‌’ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ತಮ್ಮ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೇರ...

ಕ್ಯೂಬಾ ಎಂದರೆ ಫಿಡೆಲ್, ಅಮೆರಿಕದ ಕುತಂತ್ರದ ವಿರುದ್ಧ ಪುಟ್ಟ ರಾಷ್ಟ್ರ ಕ್ಯೂಬಾದ ಸುದೀರ್ಘ ಕ್ರಾಂತಿ

ಆಗಸ್ಟ್ 13, 2026 ರಂದು ಕ್ಯೂಬಾ ತನ್ನ ಕ್ರಾಂತಿಕಾರಿ ನಾಯಕ, ಕಮಾಂಡರ್-ಇನ್-ಚೀಫ್ ಫಿಡೆಲ್ ಕ್ಯಾಸ್ಟ್ರೋ ರೂಜ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದೆ. ಐದು ದಶಕಗಳ ಕಾಲ ದೇಶವನ್ನು ಮುನ್ನಡೆಸಿದ ನಾಯಕನ ಶಾಶ್ವತ ಸಿದ್ಧಾಂತಗಳು...

‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ: ಚಾಲ್ತಿಯಲ್ಲಿರುವ ಅಧಿವೇಶನದಲ್ಲೇ ವಿಧೇಯಕ ಮಂಡಿಸಲು ಸರ್ಕಾರಕ್ಕೆ ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆ ಒತ್ತಾಯ

ಬೆಂಗಳೂರು: ದೇಶದ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಾಂಸ್ಥಿಕ ಜಾತಿ ತಾರತಮ್ಯ, ಕಿರುಕುಳ ಹಾಗೂ ವಂಚನೆಯನ್ನು ತಡೆಗಟ್ಟಲು ಅತ್ಯಂತ ನಿರ್ಣಾಯಕವಾಗಿರುವ 'ಕರ್ನಾಟಕ ರೋಹಿತ್ ವೇಮುಲಾ...

SIR: ತೆಲಂಗಾಣ ಸರ್ಕಾರ ಮತದಾರರಿಗೆ ನೀಡಿದ್ದ FRC ಯನ್ನು , ನಿರಾಕರಿಸಿದ ಕೇಂದ್ರ ಚುನಾವಣಾ ಆಯೋಗ

ಮತದಾರರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ತೆಲಂಗಾಣ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ‘ಫ್ಯಾಮಿಲಿ ರಿಜಿಸ್ಟರ್ ಸರ್ಟಿಫಿಕೇಟ್’ (FRC) ಅನ್ನು ಮತದಾರರ ದಾಖಲೆಯನ್ನಾಗಿ ಸ್ವೀಕರಿಸಲು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ. FRC...