ಪೋಲೆಂಡ್‌ನಲ್ಲಿ ಪತ್ತೆಯಾಗಿದ್ದ 2ನೇ ಮಹಾಯುದ್ಧದ ಅತಿದೊಡ್ಡ ಬಾಂಬ್ ನೀರಿನಲ್ಲಿ ಸ್ಫೋಟಗೊಂಡಿದ್ದು, ನೌಕಾಪಡೆಯ ಅಧಿಕಾರಿಗಳು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುವಾಗ ಈ ಘಟನೆ ನಡೆದಿದೆ. ಬಾಂಬ್‌ನ ತೂಕ ಸುಮಾರು 5,400 ಕೆಜಿ ಇದ್ದು ಇದರಲ್ಲಿ 2,400 ಕೆಜಿ ಸ್ಪೋಟಕ ಇತ್ತು.
ಬ್ರಿಟನ್‌ನ ರಾಯಲ್ ಏರ್ ಫೋರ್ಸ್ (ಆರ್‌ಎಎಫ್) ಬಳಸಿದ ಟಾಲ್‌ಬಾಯ್ ಬಾಂಬ್ ಪತ್ತೆಯಾದ, ಪಿಯಾಸ್ಟ್ ಕಾಲುವೆಯ ಸಮೀಪವಿರುವ ಪ್ರದೇಶದಲ್ಲಿ ವಾಸವಿದ್ದ ಸುಮಾರು 750ಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.
“ಬಾಂಬ್ ಅನ್ನು ತಟಸ್ಥಗೊಳಿಸುವ ಪ್ರಕ್ರಿಯೆಯಲ್ಲಿ ಸ್ಫೋಟ ಉಂಟಾಗಿದೆ. ಈಗ ವಸ್ತುವನ್ನು ನಿಷ್ಕ್ರಿಯಗೊಳಿಸಲಾಗಿದೆ. ಅದು ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ” ಎಂದು 8ನೇ ಕರಾವಳಿ ರಕ್ಷಣಾ ಫ್ಲೋಟಿಲ್ಲಾದ ವಕ್ತಾರರು ಸುದ್ದಿ ಸಂಸ್ಥೆ ಪಿಎಪಿಗೆ ತಿಳಿಸಿದ್ದಾರೆ.
ಸ್ವಿನೌಜ್ಸಿ (Swinoujscie) ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಟರ್ಮಿನಲ್ ಅನ್ನು ಕೂಡ ಹೊಂದಿದೆ. ಆದರೆ ಸ್ವಿನೌಜ್ಸಿ ಮೇಯರ್, ’ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಯಾವುದೇ ಮೂಲಸೌಕರ್ಯಗಳಿಗೆ ಹಾನಿಯಾಗಿಲ್ಲ’ ಎಂದು ಪಿಪಿಎ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ಪಿಯಾಸ್ಟ್ ಕಾಲುವೆ ಬಾಲ್ಟಿಕ್ ಸಮುದ್ರವನ್ನು ಪೋಲೆಂಡ್‌ನ ಜರ್ಮನಿಯ ಗಡಿಯಲ್ಲಿರುವ ಓಡರ್ ನದಿಯೊಂದಿಗೆ ಸಂಪರ್ಕಿಸುತ್ತದೆ. 1945ರಲ್ಲಿ ಜರ್ಮನ್ ಕ್ರೂಸರ್ ಮೇಲೆ ನಡೆದ ದಾಳಿಯಲ್ಲಿ ಆರ್‌ಎಎಫ್ (Royal Air Force) ಈ ಬಾಂಬ್ ಎಸೆದಿತ್ತು.


