Homeಅಂಕಣಗಳುರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

ರಾಜಕಾರಣವನ್ನು ಹೊಲಸು ಮಾಡಿದ ರಾಜಕೀಯ

- Advertisement -
- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವುದು ಹಕ್ಕು ಅಥವಾ ಕರ್ತವ್ಯವೆಂದು ಭಾವಿಸುತ್ತಲೇ ಬಂದದ್ದಾರೆ, ಇದಕ್ಕೆ ಅಪವಾದಗಳಿರಲೂ ಸಾಧ್ಯ. ಭಾರತೀಯ ನಾಗರರಿಕರೂ ಸಹ 1952ರಿಂದ ಇದೇ ರೀತಿಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅನುಭವವನ್ನು ಪಡೆದಿದ್ದಾರೆ ಮತ್ತು ಸಹಜವಾಗಿಯೇ ಈ ಪ್ರತಿನಿಧಿಗಳು ತಮ್ಮ ಜೀವನವನ್ನು ಹಸನುಗೊಳಿಸುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನಂಬುವ ಜನ ಇವರು ಎಂದು ಹೇಳಲಾಗಿದೆ. ಆದರೆ ಅಂದಿನಿಂದ ಇಂದಿನವರೆಗೆ ಅಧಿಕಾರದಲ್ಲಿ ಕುಳಿತಿರುವ ಪಕ್ಷಗಳು, ಅವುಗಳ ನಾಯಕರು ಜನರ ಇಂಥ ನಿರೀಕ್ಷೆಗಳನ್ನು ಎಷ್ಟರ ಮಟ್ಟಿಗೆ ನಿಜವಾಗಿಸಿದ್ದಾರೆ ಎಂಬ ಪ್ರಶ್ನೆ ಮುಖ್ಯವಾಗಿ ಚುನಾವಣೆಗಳು ಎದುರಾದಾಗ ನಮ್ಮ ಮುಂದೆ ನಿಲ್ಲುತ್ತದೆ.
ಆದರೆ ಚುನಾವಣೆ ಎಂಬ ಪ್ರಕ್ರಿಯೆಯೇ ಪ್ರಜಾತಂತ್ರದ ಅತ್ಯಂತ ಪ್ರಮುಖ ಅಂಶ ಎಂದಾಯಿತು. ಕೆಲವು ಬಾರಿ ಚುನಾವಣೆ ನಡೆಸುವುದೇ, ಅದರಲ್ಲಿ ಭಾಗವಹಿಸಿ ಮತ ‘ದಾನ’ ಮಾಡುವುದೇ ಪ್ರಜಾತಂತ್ರ ಎನ್ನುವ ಅತಿರೇಕದ ಮಾತುಗಳೂ ಕೇಳಿಬರುತ್ತಿವೆ. ಭಾರತ ಜಗತ್ತಿನ ಅತಿ ‘ದೊಡ್ಡ’ ಪ್ರಜಾಪ್ರಭುತ್ವ ರಾಷ್ಟ್ರ (ಜನಸಂಖ್ಯೆಯ ದೃಷ್ಟಿಯಿಂದ ಎನ್ನುವ ಮಾತಿನ ಹಿಂದಿನ ಪ್ರೇರಣೆ ಇದೆ) ಆದರೆ ಈ ಮಾತನ್ನು ಹೇಳುವವರು, ಅದನ್ನು ಪ್ರಶ್ನೆ ಮಾಡದೇ ಒಪ್ಪುವವರು ಮರೆಯುವ ಒಂದು ವಿಷಯವೇನೆಂದರೆ ಪ್ರಜಾತಂತ್ರವೆಂದರೆ ಕೇವಲ ಚುನಾವಣೆಗಳನ್ನು ನಡೆಸುವುದಲ್ಲ, ಮತ ಚಲಾಯಿಸುವುದಲ್ಲ, ಬದಲಿಗೆ ಅದು ಸಾಮಾಜಿಕ ಮೌಲ್ಯ ಎಂಬುದು. ನಮ್ಮ ಸಮಾಜ ಇನ್ನೂ ಉಳಿದುಕೊಂಡೇ ಬಂದಿರುವ ಸಾಮಾಜಿಕ, ಆರ್ಥಿಕ ಅಂತರಗಳು, ತಾರತಮ್ಯಗಳು, ಅವುಗಳ ಹೆಸರಿನಲ್ಲಿ ನಡೆಯುವ ದೌರ್ಜನ್ಯಗಳು ಭಾರತವನ್ನು ಒಂದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿ ಹೊರಟವರ ನಾಲಿಗೆಯನ್ನು ಕಟ್ಟಿಹಾಕುತ್ತವೆ. ಹೀಗಿದ್ದೂ, ಈ ಮಾತನ್ನು ಹೇಳಿದ್ದೇವೆಂದರೆ ನಮ್ಮನ್ನು ನಾವು ಮೋಸಗೊಳಿಸಿಕೊಳ್ಳುತ್ತಿದ್ದೇವೆಂದೇ ಹೇಳಬೇಕು.
ರಾಜಕಾರಣವು ‘ಸಾಧ್ಯತೆಗಳ ಕಲೆ’ (ಪಾಲಿಟಿಕ್ಸ್ ಇಸ್ ದ ಆರ್ಟ್ ಆಫ್ ಪಾಸಿಬಲ್) ಎಂದು ಜರ್ಮನಿಯ ಏಕೀಕರಣದ ರೂವಾರಿಯೆಂದೂ, ಉಕ್ಕಿನ ಮನುಷ್ಯನೆಂದೂ ಬಣ್ಣಿಸಲಾದ ಬಿಸ್ಮಾರ್ಕ್ ಹೇಳಿದನೆಂದು ಪ್ರಚಲಿತವಿದೆ. ಅಂದರೆ ರಾಜಕಾರಣದಲ್ಲಿ ತೊಡಗಿರುವವರು ಆದರ್ಶಗಳ ಬೆನ್ನು ಹತ್ತದೆ ತಮ್ಮ ಸಾಮಥ್ರ್ಯ ಹಾಗೂ ಮಿತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಧ್ಯತೆಗಳನ್ನು ಗುರುತಿಸಿ ಅವುಗಳನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ ಎಂಬ ಮಾತಿದು. ಆದರೆ ಆ ಸಾಧ್ಯತೆಗಳು ಎಂಥವು, ಯಾರಿಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಪ್ರಶ್ನೆ. ಈ ಆಚರಣಯೋಗ್ಯ ಯೋಜನೆಗಳಿಂದಾಗಿ ನಾಯಕರಿಗೆ ಮಾತ್ರ ಲಾಭ ಸಿಗುತ್ತದೋ, ಅಥವಾ ಸಮಾಜದಲ್ಲಿ ಈಗಾಗಲೇ ಸವಲತ್ತುಗಳನ್ನು ಅನುಭವಿಸುವವರು ಉಪಯುಕ್ತರಾಗುತ್ತಾರೋ, ಅಥವಾ ದುರ್ಭರ ಜೀವನವನ್ನು ನಡೆಸುವವರ ಬಾಳು ಹಸನಾಗುತ್ತದೋ ಎನ್ನುವುದರ ಮೇಲೆ ಆ ಸಾಧ್ಯತೆಗಳ ಗುಣಾವಗುಣಗಳನ್ನು ವಿಶ್ಲೇಷಿಸಬೇಕಾಗುತ್ತದೆ.
ಸಮಕಾಲೀನ ರಾಜಕಾರಣವು ರಾಜಕೀಯವಾಗಿರುವ ಬಗೆಯ ಹಿನ್ನೆಲೆಯಲ್ಲಿ ನಮ್ಮ ರಾಜಕೀಯ ಸನ್ನಿವೇಷವನ್ನು ಅರ್ಥಮಾಡಿಕೊಳ್ಳಬಹುದು. ದುರಂತವೆಂದರೆ ಭಾರತದ ಬಹುತೇಕ ರಾಜಕೀಯ ನಾಯಕರು ಈ ಸಾಧ್ಯತೆಗಳನ್ನು ತೀರಾ ವೈಯಕ್ತಿಕ ನೆಲೆಯಲ್ಲಿಯೇ ಸ್ವೀಕರಿಸುತ್ತಿದ್ದಾರೆ. ಹಾಗಾಗಿ ಧನಾತ್ಮಕ ಶಬ್ದವಾದ ‘ರಾಜಕಾರಣ’ ಇಂದು ಋಣಾತ್ಮಕವಾದ ‘ರಾಜಕೀಯ’ವಾಗಿದೆ. ಅದೆಷ್ಟರಮಟ್ಟಿಗೆಂದರೆ ಯಾವನಾದರು ಕುತಂತ್ರಿಯೆಂದರೆ ಅವನು ರಾಜಕೀಯ ಮಾಡುತ್ತಾನೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಅಧಿಕಾರವನ್ನು ಪಡೆಯಲು ಮತ್ತು ಸಿಕ್ಕ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಮಾಡಿದರೂ ಸರಿ ಎಂಬುದು ಇಂದು ರಾಜಕಾರಣಿಗಳ ನಡುವೆ ಮಾತ್ರವಲ್ಲ, ಅವರನ್ನು ಚುನಾಯಿಸುವ ಪ್ರಜೆಗಳ ನಡುವೆಯೂ ಒಪ್ಪಿತ ಮೌಲ್ಯವೇ ಆಗಿದೆ. ಹಣ ಸಂಪಾದನೆಗಾಗಿ ಬಂಡವಾಳ ಹೂಡುವಂತೆ ಅಧಿಕಾರ (ಆ ಮೂಲಕ ಹಣ) ಸಂಪಾದನೆಗಾಗಿ ಹಣದ ಹೊಳೆ ಹರಿಸುವುದು ನಮಗೆ ಆಶ್ಚರ್ಯವನ್ನು ಉಂಟುಮಾಡುವುದೇ ಇಲ್ಲ. ಯಾರಾದರೂ ಕೆಲವರು ಹಣವನ್ನು ಖರ್ಚುಮಾಡದೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟರೆ ಅಂಥವರನ್ನು ತಲೆಕೆಟ್ಟವರೆಂದೇ ಕರೆಯಲಾಗುವ ಹಂತಕ್ಕೆ ಸಮಾಜ ತಲುಪಿದೆ. ಇಂಥ ಅವನತಿಗೆ ಕಾರಣವೇನು? ಒಂದು ಓಟಿಗೆ ನಿಗಿದಿತ ಮೊತ್ತವನ್ನೋ, ಬೆಳೆ ಬಾಳುವ ವಸ್ತುವನ್ನೋ ನೀಡದಿದ್ದರೆ ಮತ‘ದಾನ’ ಮಾಡುವ ಗೋಜಿಗೆ ಹೋಗದ ಜನರಿದ್ದಾರೆ. ಮತ‘ದಾನ’ಯೆಂಬುದು ವ್ಯವಹಾರವಾಗಿ ‘ಮತ’ವು ಒಂದು ಸರಕಿನ ಸ್ಥಿತಿಯನ್ನು ತಲುಪುವಂತೆ ಮಾಡುವಲ್ಲಿ ಜನನಾಯಕರೆನ್ನಿಸಿಕೊಳ್ಳುವವರ ಪಾತ್ರವೇ ದೊಡ್ಡದು. ಆಗ ಮತ ಪವಿತ್ರವೆಂದೂ ಮತ‘ದಾನ’ ಕರ್ತವ್ಯವೆಂದೂ, ಆ ಕರ್ತವ್ಯವನ್ನೇ ಮಾಡದಿರುವವರು ಪ್ರಭುತ್ವವನ್ನು ಪ್ರಶ್ನಿಸುವ ಹಕ್ಕನ್ನೇ ಕಳೆದುಕೊಳ್ಳುತ್ತಾರೆಂದೂ ಹೇಳುವುದು ಹುಂಬತನದ ಮಾತುಗಳು ಮಾತ್ರವಾಗುತ್ತವೆ.
ಇನ್ನು ಈ ದೇಶದ ಹಲವು ಮೂಲೆಗಳಲ್ಲಿ ನಡೆಯುವ ಚಳವಳಿಗಳು ಪ್ರಜಾತಂತ್ರವೆಂಬ ಮೌಲ್ಯವನ್ನು ಜನರಲ್ಲಿ ಅರ್ಥಪೂರಿತವಾಗಿ ನೆಡುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಮತ್ತೊಂದು ಪ್ರಶ್ನೆ. ಚುನಾವಣೆಗಳೇ ಪ್ರಜಾತಂತ್ರ ಎಂಬ ಭ್ರಮೆಯಲ್ಲಿ ಜನ ತೇಲುವಂತೆ ಮಾಡಲು ಜನನಾಯಕರೆನಿಸಿಕೊಳ್ಳುವವರು ಯಾವಾಗಲೂ ಪ್ರಯತ್ನಿಸುತ್ತಲೇ ಇರುವುದರಿಂದ ಈ ಚಳವಳಿಗಳು ಜನರನ್ನು ಆಕರ್ಷಿಸುವುದು ಅಸಾಧ್ಯವಲ್ಲದಿದ್ದರೂ ಕಷ್ಟದ ಮಾತು.
2019ನೇ ಇಸವಿಯಲ್ಲಿ ನಡೆಯುತ್ತಿರುವ ಚುನಾವಣೆಗಳಿಗೆ ಈ ಎಲ್ಲ ಮಾತುಗಳು ಅನ್ವಯವಾಗುತ್ತವೆ. ಇದುವರೆಗೂ ಜನರ ಹೆಸರಿನಲ್ಲಿಯೇ ಸಂವಿಧಾನದ ಸಾಕ್ಷಿಯಾಗಿ ಅಧಿಕಾರವನ್ನು ಅನುಭವಿಸಿದ ಸರ್ಕಾರಗಳ ಸೋಲನ್ನೇ ತನ್ನ ಚಿಮ್ಮುವ ಹಲಗೆಯನ್ನಾಗಿ ಮಾಡಿಕೊಂಡು ಯಶಸ್ಸನ್ನು ಗಳಿಸಿದ ಭಾರತೀಯ ಜನತಾ ಪಕ್ಷ ತನ್ನ ಒಬ್ಬ ನಾಯಕನನ್ನು ಅತಿಮಾನುಷನಂತೆ ಚಿತ್ರಿಸುತ್ತಾ ಇಲ್ಲಿಯವರೆಗೂ ತೋರಿಕೆಗಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದ ಪ್ರಜಾತಂತ್ರವನ್ನು ಹಾಳುಮಾಡಲು ಹೊರಟಿದೆ. ಸಂಸದೀಯ ಪ್ರಜಾಪ್ರಭುತ್ವ ನಮ್ಮದು ಎಂಬ ಮಾತನ್ನೇ ಮರೆಮಾಚಿ, ಈ ದೇಶದ ಪ್ರಧಾನಿಯನ್ನು ನೇರವಾಗಿ ಚುನಾಯಿಸುತ್ತೇವೆಂದು ಅಥವಾ ಸೋಲಿಸುತ್ತೇವೆಂದು ಜನರು ನಂಬುವಂತೆ, ಹೇಳುವಂತೆ ಆಗಿದೆ. ಆ ಪಕ್ಷ ನಾಯಕರು ತಮ್ಮ ಸೇನಾಪತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಭಾಷೆಯಲ್ಲಿ ಸಮರಕ್ಕೇ ಹೊರಟಿದ್ದಾರೆ. ಇದೆಲ್ಲಾ ಒಂದು ಮಹಾಯುದ್ಧವೇನೊ ಎಂಬಂತೆ ಇಲ್ಲಿನ ಜನ ಪ್ರೇಕ್ಷಕರಾಗಿದ್ದಾರೆ. ಇನ್ನು ಪ್ರಜಾತಂತ್ರಕ್ಕೇ ಇಲ್ಲಿ ಜಾಗವೆಲ್ಲಿದೆ? ಇಬ್ಬರು ಯೋಧರ ನಡುವೆ ನಡೆಯುವ ಯುದ್ಧದೋಪಾದಿಯಲ್ಲಿ ಈ ಚುನಾವಣೆಗಳು ನಮ್ಮ ಮುಂದೆ ವಿಜೃಂಭಿಸುತ್ತಿವೆ.
ಸರ್ಕಾರದ ಹಲವು ವೈಫಲ್ಯಗಳು, ಸುಳ್ಳುಗಳು, ಅವರ ಕೃಪಾಪೋಷಿತ ಪುಂಡರುಗಳ ದಾಂಧಲೆಗಳು ಢಾಳಾಗಿ ಕಾಣಿಸಿಕೊಳ್ಳುತ್ತಿದ್ದರೂ ಇಲ್ಲಿನ ಮಾಧ್ಯಮ, ಮೇಲ್ವರ್ಗದ ಜನ ಮತ್ತು ನವಉದಾರವಾದಿ ವ್ಯವಸ್ಥೆಯ ಫಲಾನುಭವಿಗಳು ಈ ಎಲ್ಲಾ ವಾಸ್ತವಗಳಿಗೆ ಕಣ್ಣು ಮುಚ್ಚಿದ್ದಾರೆ. ತಮ್ಮ ಎದುರಾಳಿಗಳನ್ನು ಅಂದರೆ ತಮ್ಮ ಮಾತುಗಳನ್ನು ಒಪ್ಪದವರನ್ನು ‘ನಗರದ ನಕ್ಸಲರು’, ದೇಶದ್ರೋಹಿಗಳು, ‘ತುಕಡೆ ತುಕಡೆ’ ಗುಂಪುಗಳು ಮುಂತಾದ ಹೆಸರುಗಳಿಂದ ಕರೆದು, ಅಶ್ಲೀಲ ಭಾಷೆಯಲ್ಲಿ ಟೀಕಿಸಿ ವಿಚಿತ್ರ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಇಂಥವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ಇತರರ ದನಿ ಅಡಗಿ ಹೋಗುವಷ್ಟು ಗಲಾಟೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹಲವರು ಮೌನಕ್ಕೆ ಶರಣು ಹೋಗಿದ್ದಾರೆ. ಅಸಡ್ಡೆಯಿಂದ, ಹೆದರಿಕೆಯಿಂದ, ನಿರಾಸಕ್ತಿಯಿಂದ.
ಇನ್ನು, ಇಲ್ಲಿನ ವಿರೋಧ ಪಕ್ಷಗಳ ನಡವಳಿಕೆ ಏನು ಪ್ರಶ್ನಾತೀತವಾಗಿ ಉಳಿದಿಲ್ಲ. ತಮ್ಮ ಸಣ್ಣತನಗಳು, ಒಳಜಗಳಗಳು, ಪ್ರತಿಷ್ಠೆಗಳು, ಅಧಿಕಾರದಾಹ ಇವುಗಳಿಂದಲೂ ಸಂಪೂರ್ಣವಾಗಿ ಮುಕ್ತರಾಗದ ಇವರು ಯಾವ ಕ್ಷಣದಲ್ಲಿ ಯಾವ ನಿಲುವು ತಾಳುತ್ತಾರೆ ಎಂಬುದು ಉತ್ತರವಿಲ್ಲದ ಪ್ರಶ್ನೆ. ಇಂಥವರನ್ನು ನಂಬಿ ಇವರ ಕೈಗೆ ಅಧಿಕಾರವನ್ನು ಕೊಡುವುದು ಹೇಗೆ ಎನ್ನುವುದು ಜನಸಾಮಾನ್ಯರ, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವವರ ಚಿಂತೆ
ಚುನಾವಣೆಗಳೂ ಪ್ರಜಾತಂತ್ರದ ಒಂದು ಪ್ರಕ್ರಿಯೆ, ಮುಖ್ಯವಾದ ಪ್ರಕ್ರಿಯೆ ಎಂದು ಅರ್ಥಮಾಡಿಕೊಂಡು, ಪ್ರಜಾತಂತ್ರವೆಂದರೆ ಜನರೆಲ್ಲರ ಸಾರ್ಥಕ ಪಾಲುಗೊಳ್ಳುವಿಕೆ ಎಂಬುದನ್ನು ಆಚರಣೆಗೆ ತರುವವರೆಗೂ ನಮ್ಮ ಅತಿ ದೊಡ್ಡ ಪ್ರಜಾತಂತ್ರದ ಈ ಗೊಂದಲಗಳು ಮುಂದುವರೆಯುವಂಥವೇ. ಚಳವಳಿಗಳ ಯಶಸ್ಸಿನ ಬಗ್ಗೆ ಎಷ್ಟೇ ಅನುಮಾಗಳಿರಲಿ, ಅಂತಿಮವಾಗಿ ಜನರನ್ನು ನಿಜವಾದ ಅರ್ಥದಲ್ಲಿ ಪ್ರಜಾತಂತ್ರವಾದಿಗಳನ್ನಾಗಿ ಮಾಡುವಂಥ ಶಕ್ತಿ ಇರುವುದು ಜನಪರ ಚಳವಳಿಗೆ ಮಾತ್ರ ಎನ್ನುವ ಮಾತನ್ನು ನಂಬಿ ಕಾರ್ಯಪ್ರವೃತ್ತರಾಗುವುದೊಂದೇ ಇಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳಿಗೆ ಉಳಿದಿರುವ ದಾರಿ. ರಾಜಕೀಯದ ಜಾಗದಲ್ಲಿ ರಾಜಕಾರಣವನ್ನು ನಮ್ಮದಾಗಿಸಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...