ದೀಪಾವಳಿ ಹಬ್ಬಕ್ಕೆ ಇನ್ನೊಂದೆ ವಾರ ಉಳಿದಿದೆ. ಕೊರೊನಾ ಸಾಂಕ್ರಾಮಿಕ ಹಬ್ಬಗಳ ಖುಷಿಯ ಮೇಲೆ ಪ್ರಭಾವ ಬೀರಿದ್ದರೂ ಸಹ ಕೊರೊನಾ ಹೋಗಿ ಸ್ವಚ್ಛ, ನೆಮ್ಮದಿಯ ಜೀವನ ಆರಂಭವಾಗಲಿ ಎಂದು ಹಬ್ಬ ಆಚರಿಸಲು ಹಲವು ಮಂದಿ ಕಾಯುತ್ತಿದ್ದಾರೆ. ದೀಪಗಳ ಹಬ್ಬಕ್ಕಾಗಿ ವೈವಿಧ್ಯಮಯ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ, ಇಡುತ್ತಿವೆ.
ಛತ್ತೀಸ್‌ಗಢ ಮೂಲದ ಕುಂಬಾರರೊಬ್ಬರು ಇಡೀ ದಿನ ಬೆಳಗುವ ಮಣ್ಣಿನ ದೀಪವನ್ನು ವಿನ್ಯಾಸಗೊಳಿಸಿದ್ದಾರೆ. ಬಸ್ತರ್ ಜಿಲ್ಲೆಯ ಕೊಂಡಗಾಂವ್ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶೋಕ್ ಚಕ್ರಧಾರಿ ಈ ದೀಪಗಳನ್ನು ವಿನ್ಯಾಸಗೊಳಿಸಿದ್ದಾರೆ.
ದೀಪಾವಳಿಯ ಪ್ರಯುಕ್ತ ಈಗಾಗಲೇ ಈ ದೀಪಗಳಿಗೆ ಬೇಡಿಕೆಯ ಪ್ರವಾಹವೇ ಹರಿದು ಬಂದಿದೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ. 24 ರಿಂದ 40 ಗಂಟೆಗಳ ಕಾಲ ನಿರಂತರವಾಗಿ ಬೆಳಗಬಲ್ಲ ಈ ಸಾಂಪ್ರದಾಯಿಕ ದೀಪಗಳು ಮತ್ತು ಕುಂಬಾರ ಅಶೋಕ್ ಚಕ್ರಧಾರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದ್ದಾರೆ.
Chhattisgarh: Ashok Chakradhari, a potter in Kondagaon, has designed an earthen lamp in which flow of oil is circulated automatically.
He says, "I learnt making this lamp watching several techniques online. I've received a good number of orders for making more such lamps." pic.twitter.com/oIfwmSu1qA
— ANI (@ANI) October 30, 2020
ಇದನ್ನೂ ಓದಿ: ಕೊರೊನಾ: ದೀಪಾವಳಿ ಮಾರ್ಗಸೂಚಿಗಳನ್ನು ಪ್ರಕಟಿಸಿದ ರಾಜ್ಯ ಸರ್ಕಾರ
ಕುಂಬಾರ ಅಶೋಕ್ ಚಕ್ರಧಾರಿ ಮಾಡಿದ ದೀಪಗಳಲ್ಲಿ ತೈಲವು ಸ್ವಯಂಚಾಲಿತವಾಗಿ ಜಿನುಗುತ್ತದೆ ‘ಮ್ಯಾಜಿಕ್ ಲ್ಯಾಂಪ್ಸ್’ ಎಂದು ಲೇಬಲ್ ಮಾಡಲಾದ ದೀಪಗಳಲ್ಲಿ, ಎಣ್ಣೆಯನ್ನು ಹಿಡಿದಿಡಲು ಗುಮ್ಮಟದ ಆಕಾರ ಮತ್ತು ದೀಪದ ತಳದಲ್ಲಿ ಎಣ್ಣೆ ಹಿಡಿದಿಡಲು ಟ್ಯೂಬ್ ತರಹದ ರಚನೆ ಇರುತ್ತದೆ. ಇದನ್ನು ಅಶೋಕ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿದ ನಂತರ ಈ ರೀತಿಯ ದೀಪವನ್ನು ವಿನ್ಯಾಸಗೊಳಿಸುವ ಯೋಜನೆ ಬಂದಿದ್ದಾಗಿ ಅಶೋಕ್ ತಿಳಿಸಿದ್ದಾರೆ. “ನನ್ನ ಕುಂಬಾರಿಕೆ ಕೌಶಲ್ಯಗಳನ್ನು ಪ್ರಶ್ನಿಸುವಂತಹ ಹೊಸ ಆಲೋಚನೆಗಳನ್ನು ನಾನು ಯಾವಾಗಲೂ ಹುಡುಕುತ್ತಿದ್ದೇನೆ ಮತ್ತು ಅವು ನನ್ನ ಸುತ್ತಮುತ್ತಲಿನವರಿಗೆ ಉಪಯುಕ್ತವಾಗುವಗಬೇಕು ಅಂತಹ ಕೆಲಸಗಳನ್ನು ಮಾಡುತ್ತೇನೆ” ಎಂದು 62 ವರ್ಷದ ಅಶೋಕ್ ಹೇಳುತ್ತಾರೆ.
“ನಾನು ಈ ದೀಪವನ್ನು ತಯಾರಿಸಲು ನಾನು ಆನ್‌ಲೈನ್‌ನಲ್ಲಿ ಹಲವಾರು ತಂತ್ರಗಳನ್ನು, ವೀಡಿಯೋಗಳಳನ್ನು ವೀಕ್ಷಿಸಿದ್ದೇನೆ. ಈ ದೀಪಗಳನ್ನು ತಯಾರಿಸಿದ ನನಗೆ ಇನ್ನೂ ಹೆಚ್ಚಿನ ದೀಪಗಳನ್ನು ತಯಾರಿಸಲು ಬೇಡಿಕೆ ಬಮದಿವೆ” ಎಂದಿದ್ದಾರೆ. ಎಎನ್‌ಐ ಹಂಚಿಕೊಂಡ ಫೋಟೋಗಳು ಕುಂಬಾರ ಅಶೋಕ್ ವಿನ್ಯಾಸಗೊಳಿಸಿದ ‘ಮ್ಯಾಜಿಕ್ ಲ್ಯಾಂಪ್‌ಗಳ’ ಒಂದು ದೊಡ್ಡ ಸಂಗ್ರಹವನ್ನೇ ತೋರಿಸುತ್ತವೆ.

ಕೊರೊನಾ ಸಾಂಕ್ರಾಮಿಕ ಎಷ್ಟೋ ಉದ್ಯಮಗಳನ್ನು ನೆಲಕಚ್ಚುವಂತೆ ಮಾಡಿದೆ. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರೂ ಇನ್ನು ಚೇತರಿಸಿಕೊಳ್ಳುವ ನಿಟ್ಟಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ತೀವ್ರ ತೊಂದರೆಗೆ ಈಡಾಗಿರುವ ದೇಶದ ಕರಕುಶಲಕರ್ಮಿಗಳಿಗೆ ನೆರವಿನ ಅಗತ್ಯತೆ ಇದೆ. ದೇಶದಲ್ಲಿ ಹಲವು ರಾಜ್ಯಗಳು ಪಟಾಕಿಯನ್ನು ಬ್ಯಾನ್ ಮಾಡಿರುವ ಈ ಸಂದರ್ಭದಲ್ಲಿ ದೀಪಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹಲವು ಕರಕುಶಲಕರ್ಮಿಗಳಿಗೆ ಕೆಲಸ ಸಿಕ್ಕಂತಾಗಿದೆ.



ಇಂತಹ ಕುಶಲಕರ್ಮಿಗಳಿಗೆ ಸರ್ಕಾರ ಮತ್ತು ಸಮಾಜ ಪ್ರೋತ್ಸಾಹ ಕೊಡಬೇಕು.