Homeಮುಖಪುಟಬಿಜೆಪಿ ಸೇರಿದ ಪ್ರಗ್ಯಾ ಸಿಂಗ್... ಮಲೆಗಾವ್ ಸ್ಪೋಟದ ಆರೋಪಿ ‘ಮರಳಿ ಮನೆಗೆ’!

ಬಿಜೆಪಿ ಸೇರಿದ ಪ್ರಗ್ಯಾ ಸಿಂಗ್… ಮಲೆಗಾವ್ ಸ್ಪೋಟದ ಆರೋಪಿ ‘ಮರಳಿ ಮನೆಗೆ’!

- Advertisement -
- Advertisement -

ಜೈಲೂಟದಿಂದ ಮುಕ್ತಿ ಹೊಂದಿದ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಮರಳಿ ‘ಮನೆಗೆ’ ಬಂದಿದ್ದಾರೆ. ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿರುವ ಅವರು ಮಧ್ಯಪ್ರದೇಶದಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ. ‘ಹಿಂದೂ ಅಥವಾ ಹಿಂದುತ್ವ ಭಯೋತ್ಪಾದನೆ’ ಎಂಬ ಪದ ಹೆಚ್ಚು ಚಾಲ್ತಿಗೆ ಬರಲು ಕಾರಣಾದವರಲ್ಲಿ ಪ್ರಗ್ಯಾ ಕೂಡ ಒಬ್ಬರು! 2008ರ ಮಲೆಗಾವ್ ಸ್ಫೋಟದ ಆರೋಪಿಗಳಲ್ಲಿ ಒಬ್ಬರಾಗಿದ್ದ ಸಾಧ್ವಿ ಪ್ರಜ್ಞಾ ಠಾಕೂರ್ ಮೋದಿ ಸರ್ಕಾರ ಬಂದ ನಂತರ ಅವರು ಜಾಮೀನು ಮೇಲೆ ಹೊರಗಿದ್ದು, ಇನ್ನೂ ಪ್ರಕರಣದ ತೀರ್ಪು ಹೊರಬಂದಿಲ್ಲ.

ಮಲೆಗಾವ್, ಸಂಜೋತಾ ಎಕ್ಸ್‍ಪ್ರೆಸ್ ಮತ್ತು ಮೆಕ್ಕಾ ಮದೀನಾ ಬಾಂಬ್ ಸ್ಫೋಟದಲ್ಲಿ ‘ಹಿಂದುತ್ವ’ ಪ್ರತಿಪಾದನೆಯ ಹಲವರು ಭಾಗಿಯಾಗಿರುವ ಆರೋಪಗಳಿದ್ದವು. ಮೋದಿ ಸರ್ಕಾರ ಬಂದ ನಂತರ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ತನಿಖೆಯಲ್ಲಿ ತೋರಿದ ‘ಜಾಣ ನಿರ್ಲಕ್ಷತನ’ದಿಂದಾಗಿ ಹಲವರ ವಿರುದ್ಧ ಸಾಕ್ಷ್ಯಗಳು ಉಲ್ಟಾ ಹೊಡೆದವು. ಪರಿಣಾಮವಾಗಿ ಅವರೆಲ್ಲ ಆರೋಪಮುಕ್ತರಾದರು ಎಂದು ಹಲವು ಹಿರಿಯ ವಕೀಲರೇ ಅಭಿಪ್ರಾಯ ಪಟ್ಟಿದ್ದನ್ನು ಇಲ್ಲಿ ನೆನೆಯಬಹುದು. ಸದ್ಯ ಪ್ರಗ್ಯಾ ಮಲೆಗಾವ್ ಸ್ಫೋಟದ ಪ್ರಕರಣದಲ್ಲಿ ಆರೋಪಿಯೇ.

‘ಕೇಸರಿ ಭಯೋತ್ಪಾದನೆಯಲ್ಲಿ ಆರೋಪಿಗಳಾಗಿದ್ದವರಿಗೆ ಬಿಜೆಪಿ ಮತ್ತು ಸಂಘ ಪರಿವಾರದ ನಂಟು ಇರುವುದು ಸ್ಪಷ್ಟವಾಗಿದೆ. ಅದಕ್ಕೆ ತಕ್ಕಂತೆಯೇ ಇವತ್ತು ಸಾಧ್ವಿ ಪ್ರಗ್ಯಾ ಬಿಜೆಪಿಗೆ ಅಧಿಕೃತವಾಗಿಯೇ ಪ್ರವೇಶ ಪಡೆದಿದ್ದಾರೆ. ಅವರು ಮಧ್ಯಪ್ರದೇಶದ ಭೂಪಾಲಿನಲ್ಲಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‍ಸಿಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಹಿಂದೆ ‘ಕೇಸರಿ ಭಯೋತ್ಪಾದನೆ’ ವಿರುದ್ಧ ದಿಗ್ವಿಜಯ್‍ಸಿಂಗ್ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಈಗ ದಿಗ್ವಿಜಯ್‍ಸಿಂಗ್ ಮತ್ತು ಪ್ರಜ್ಞಾ ನಡುವಿನ ಸ್ಪರ್ಧೆ ಕುತೂಹಲ ಹುಟ್ಟಿಸಿದೆ.

ಭೂಪಾಲಿನಲ್ಲಿ ಸ್ಪರ್ಧಿಸಲು ಬಿಜೆಪಿಯ ಹಿರಿಯ ನಾಯಕರಾದ ನರೇಂದ್ರ ಸಿಂಗ್ ತೋಮರ್, ಶಿವರಾಜಸಿಂಗ್ ಚೌಹಾಣ್ ಮತ್ತು ಉಮಾಭಾರತಿಯವರು ನಿರಾಕರಿಸಿದ್ದು ಪ್ರಗ್ಯಾರನ್ನು ಕಣಕ್ಕಿಳಿಸಲು ಬಿಜೆಪಿ ಯೋಚಿಸಿದೆ.

ಮೆಕ್ಕಾ ಮದೀನಾ ಸ್ಪೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದ ಮೊದಲಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಎನ್‍ಐಎ ತನಿಖೆಯ ದಾರಿ ತಪ್ಪಿಸಿದ ಪರಿಣಾಮ ಅಸೀಮಾನಂದ ಆರೋಪಮುಕ್ತರಾದರು. ಈಗ ಇಂಥದ್ದೇ ಸ್ಫೋಟ ಪ್ರಕರಣದಲ್ಲಿ ಆರೋಪಯಾಗಿರುವ ಪ್ರಗ್ಯಾ ಬಿಜೆಪಿಗೆ ಬರುವ ಮೂಲಕ, ‘ಕೇಸರಿ ಭಯೋತ್ಪದನೆ’ಯೊಂದಿಗೆ ಯಾವ ಸಂಘಟನೆಯ ತಳುಕಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗ

ಗಾಲ್ವಾನ್ ಘರ್ಷಣೆಯ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ನಿಯೋಗ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿದೆ ಎಂದು ವರದಿಯಾಗಿದೆ. ಸೋಮವಾರ (ಜ.12) ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ...

ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿಗೆ ಎರಡು ತಿಂಗಳ ಜೈಲು ಶಿಕ್ಷೆ: ಇದು ‘ಕಾನೂನುಬಾಹಿರ’ ಎಂದ ಪಾಟ್ನಾ ಹೈಕೋರ್ಟ್: 5 ಲಕ್ಷ ಪರಿಹಾರಕ್ಕೆ ಆದೇಶ

ಬಿಹಾರ ಪೊಲೀಸರು ಎರಡು ತಿಂಗಳಿಗೂ ಹೆಚ್ಚು ಕಾಲ ಮುಸ್ಲಿಂ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಬಂಧಿಸಿದ್ದು, ಕಾನೂನುಬಾಹಿರ ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ. ಇಂಥ ವಿಚಾರಗಳಲ್ಲಿ ರಾಜ್ಯ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದಿರುವ ಕೋರ್ಟ್...

ಒಳ ಮೀಸಲಾತಿ ಮಸೂದೆ ವಾಪಸ್ ಕಳಿಸಿದ ರಾಜ್ಯಪಾಲರು : ಹೋರಾಟಗಾರರು ಏನಂದ್ರು?

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ಮಸೂದೆಗೆ ಅಂಕಿತ ಹಾಕದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಕೆಲವು ಸ್ಪಷ್ಟನೆಗಳನ್ನು ಕೇಳಿರುವ ರಾಜ್ಯಪಾಲರು, ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು...

‘ಕೂಡಲೇ ಇರಾನ್‌ನಿಂದ ಹೊರಡಿ, ಸಹಾಯ ನಿರೀಕ್ಷಿಸಬೇಡಿ’: ತನ್ನ ಪ್ರಜೆಗಳಿಗೆ ಕರೆ ನೀಡಿದ ಅಮೆರಿಕ

ವಾಷಿಂಗ್ಟನ್: ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್‌ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ತಮ್ಮ ದೇಶದ ನಾಗರಿಕರಿಗೆ ಇರಾನ್ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ. ದೇಶಾದ್ಯಂತ ಪ್ರತಿಭಟನೆಗಳು,...

ಭಾರತ ಭೂದಾಳಿ ನಡೆಸಲು ಸಿದ್ಧವಾಗಿತ್ತು: ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ 

ಮಂಗಳವಾರ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದು ಹೇಳಿದ್ದು, ಯಾವುದೇ ದುಸ್ಸಾಹಸವನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುವುದು ಎಂದು ಹೇಳಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು...

ಕೊಪ್ಪಳ | ಸಂಪೂರ್ಣ ಮದ್ಯ ನಿಷೇಧಿಸಿ ತೀರ್ಮಾನ ತೆಗೆದುಕೊಂಡ ಗ್ರಾಮಸ್ಥರು : ಮದ್ಯದಂಗಡಿಗಳಿಗೆ ಶನಿವಾರದವರೆಗೆ ಗಡುವು

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಿ ಜನರು ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದು, ಮದ್ಯದ ಅಂಗಡಿಗಳಿಗೆ ಮಾರಾಟ ಸ್ಥಗಿತಗೊಳಿಸಲು ಶನಿವಾರದವರೆಗೆ ಗಡುವು ವಿಧಿಸಿದ್ದಾರೆ. ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಾಮಾಜಿಕ...

ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ

ನರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ವತಿಯಿಂದ ಮಂಗಳವಾರ (ಜ.13) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ...

ಪಶ್ಚಿಮ ಬಂಗಾಳ: ಸೋಮವಾರ ಪ್ರತ್ಯೇಕ ಸ್ಥಳಗಳಲ್ಲಿ ಎರಡು ಸಾವು: ಎಸ್‌ಐಆರ್ ಆತಂಕವೇ ಸಾವಿಗೆ ಕಾರಣ ಎಂದ ಕುಟುಂಬಗಳು 

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಇಬ್ಬರು ಸಾವನ್ನಪ್ಪಿದ್ದು, ಉತ್ತರ ದಿನಾಜ್‌ಪುರದಲ್ಲಿ ಒಬ್ಬರು ಮತ್ತು ಉತ್ತರ 24 ಪರಗಣದಲ್ಲಿ ಮತ್ತೊಬ್ಬರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಆತಂಕವೇ ಅವರ ಸಾವಿಗೆ...

ಮರ್ಯಾದೆಗೇಡು ಹತ್ಯೆ : ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಬಾಲಕಿಯನ್ನು ಕೊಂದು ಮೃತದೇಹ ಸುಟ್ಟು ಹಾಕಿದ ಕುಟುಂಬಸ್ಥರು

ಪ್ರೀತಿಸಿದ ಯುವಕನೊಂದಿಗೆ ತೆರಳಿದ 16 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ ಕೊಂದು, ಮೃತದೇಹವನ್ನು ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಕುಟುಂಬಸ್ಥರು ಪ್ರಸ್ತುತ ಪರಾರಿಯಾಗಿದ್ದಾರೆ. ಅವರ ಮನೆಗೆ...

ಚುನಾವಣಾ ಪ್ರಚಾರದ ವೇಳೆ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ: ಆರ್‌ಡಬ್ಲ್ಯೂಪಿಐ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಿದ ಮುಂಬೈ ಪೊಲೀಸರು

ಮುಂಬೈ: ಮುನ್ಸಿಪಲ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರ ಕಾರ್ಯಕರ್ತರ ಬಳಿ ಹೊತ್ತೊಯ್ದಿದ್ದ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ ಕಾಣಿಸಿಕೊಂಡಿದ್ದು, ಇದು ಮಾನವ ಹಕ್ಕುಗಳ...