ಸ್ವತಂತ್ರ ಕನ್ನಡ ಸುದ್ದಿ ಪೋರ್ಟಲ್ ‘ಪ್ರತಿಧ್ವನಿ’ ವೆಬ್‌ಸೈಟ್‌ನ ಮಾತೃ ಸಂಸ್ಥೆಯಾದ ‘ಟ್ರುತ್ ಪ್ರೊ ಫೌಂಡೇಶನ್ ಇಂಡಿಯಾ (ಟಿಪಿಎಫ್‌ಐ)’ ಕೇಂದ್ರ ಸರ್ಕಾರದ ಪರಿಚಯಿಸಿದ ‘ಹೊಸ ಮಾಹಿತಿ ತಂತ್ರಜ್ಞಾನ ನಿಯಮ’ಗಳನ್ನು ಪ್ರಶ್ನಿಸಿ ಕರ್ನಾಟಕ ಹೈಕೋಟ್ ಮೆಟ್ಟಿಲೇರಿದೆ.
ಕೇಂದ್ರವು ಜಾರಿಗೆ ತಂದಿರುವ ‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳು-2021’, ಅಲ್ಟ್ರಾ ವೈರಸ್ ಐಟಿ ಆಕ್ಟ್ ಆಗಿದ್ದು ಇದನ್ನು ದುರುಪಯೋಗ ಪಡಿಸುವಂತೆ ರೂಪಿಸಲಾಗಿದೆ. ಈ ನಿಯಮಗಳು ಮಾಧ್ಯಮ ನಿಯಂತ್ರಣಕ್ಕೆ ರಹದಾರಿಯಾಗಿದೆ ಎಂದು ಪ್ರತಿಧ್ವನಿ ನೀಡಿರುವ ಅರ್ಜಿಯಲ್ಲಿ ಆರೋಪಿಸಿದೆ.
ಇದನ್ನೂ ಓದಿ: ಸ್ವತಂತ್ರ ಮಾಧ್ಯಮಗಳನ್ನು ನಿಯಂತ್ರಿಸುವುದು ಹೇಗೆ?: ಪತ್ರಕರ್ತರೊಂದಿಗಿನ ಕೇಂದ್ರ ಸರ್ಕಾರದ ಗುಪ್ತ ಸಭೆಗಳ ವರದಿ ಸೋರಿಕೆ!
ದಿ ವೈರ್, ಲೈವ್ ಲಾ ಮತ್ತು ದಿ ಕ್ವಿಂಟ್ ವೆಬ್‌ಸೈಟ್‌ಗಳು ಈಗಾಗಲೆ ಕೇಂದ್ರವು ಜಾರಿಗೆ ತಂದಿರುವ ಹೊಸ ಐಟಿ ನಿಯಮಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ‘ಪ್ರತಿಧ್ವನಿ’ ಯು ಕೇಂದ್ರದ ನಿಯಮಗಳನ್ನು ಪ್ರಶ್ನಿಸುತ್ತಿರುವ ನಾಲ್ಕನೆ ಹಾಗೂ ಕನ್ನಡದ ಮೊದಲ ವೆಬ್‌ಸೈಟ್ ಆಗಿದೆ.
ಹೊಸ ಐಟಿ ನಿಯಮಗಳು ಡಿಜಿಟಲ್ ನ್ಯೂಸ್ ಪೋರ್ಟಲ್‌ಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಪ್ರತಿಧ್ವನಿ ಹೇಳಿದ್ದು, “ಒಟಿಟಿ ಪ್ಲಾಟ್‌ಫಾರ್ಮ್‌ಗಳು ಅಥವಾ ಇತರ ಘಟಕಗಳ ಮೇಲಿನ ನಿಯಂತ್ರಣಗಳ ಬಗ್ಗೆ ಪ್ರಶ್ನಿಸುತ್ತಿಲ್ಲ” ಎಂದು ಅರ್ಜಿಯಲ್ಲಿ ತಿಳಿಸಿದೆ.
‘ದಿ ವೈರ್’ ವೆಬ್‌ಸೈಟ್ ಅನ್ನು ನಡೆಸುತ್ತಿರುವ ‘ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಮ್’ ಸ್ಥಾಪಕ ಸಂಪಾದಕ ಎಂ.ಕೆ. ವೇಣು ಮತ್ತು ‘ದಿ ನ್ಯೂಸ್ ಮಿನಿಟ್’ ಸಂಪಾದಕ ಧನ್ಯ ರಾಜೇಂದ್ರನ್ ಅವರು ಹೊಸ ಐಟಿ ನಿಯಮಗಳನ್ನು ವಿರೋಧಿಸಿ ಮಾರ್ಚ್ 9 ರಂದು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಮೊದಲ ಬಾರಿಗೆ ಕಾನೂನು ಹೋರಾಟಕ್ಕೆ ಇಳಿದಿದ್ದರು.
ಇದನ್ನೂ ಓದಿ: `ಡಿಜಿಟಲ್ ಕಂಟೆಂಟ್’ ನಿಯಂತ್ರಣಕ್ಕೆ ಕೇಂದ್ರದ ’ಭಯಾನಕ’ ನಿಯಮಗಳು!
ಇದನ್ನೂ ಓದಿ: ಕೇಂದ್ರದ ಇಂಟರ್ನೆಟ್ ನಿಯಂತ್ರಣ: ಮಾಧ್ಯಮ ಸ್ವಾತಂತ್ಯ್ರ & ಮಾಹಿತಿ ಹಕ್ಕಿಗೆ ಧಕ್ಕೆ
ಕಾನೂನು ಸುದ್ದಿ ವೆಬ್‌ಸೈಟ್ ‘ಲೈವ್‌ಲಾ’ ಕೇರಳ ಹೈಕೋರ್ಟ್‌ನಲ್ಲಿ ನಿಯಮಗಳನ್ನು ಪ್ರಶ್ನಿಸಿದ್ದು, ಕ್ವಿಂಟ್ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿಯ ಕುರಿತು ಮಾರ್ಚ್ 19 ರಂದು ನ್ಯಾಯಪೀಠವು ಕೇಂದ್ರಕ್ಕೆ ನೋಟಿಸ್ ನೀಡಿದೆ.
ಪ್ರತಿಧ್ವನಿ ಅವರ ಅರ್ಜಿಯ ಪೂರ್ಣ ಪಠ್ಯವನ್ನು ಕೆಳಗೆ ಓದಬಹುದಾಗಿದೆ.
ಇದನ್ನೂ ಓದಿ: ಜಗತ್ತಿನ ಎಲ್ಲ ಹೋರಾಟಗಳನ್ನು ಬೆಸೆಯುವ ಡಿಜಿಟಲ್ ಆಕ್ಟಿವಿಸಂ


