Homeಮುಖಪುಟ‘ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಹತ್ಯೆ: ಯುಪಿಯಲ್ಲಿ ಮತ್ತೊಂದು ಲಿಂಚಿಂಗ್?

‘ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ಹತ್ಯೆ: ಯುಪಿಯಲ್ಲಿ ಮತ್ತೊಂದು ಲಿಂಚಿಂಗ್?

ಇವರ ಕೊಲೆಯು ಸ್ಪಷ್ವವಾಗಿ ಗುಂಪುಹತ್ಯೆಯಾಗಿದ್ದು, ಇದು ಧರ್ಮ ದ್ವೇಷದ ಅಪರಾಧಗಳನ್ನು ಸಂಕೇತಿಸುತ್ತದೆ. ಆದರೆ ಪೊಲೀಸರು ಕೇವಲ ದರೋಡೆ ಪ್ರಕರಣವನ್ನು ಮಾತ್ರ ದಾಖಲಿಸಿದ್ದಾರೆ ಎಂದು ಹಲವರು ದೂರಿದ್ದಾರೆ.

- Advertisement -
- Advertisement -

ಉತ್ತರಪ್ರದೇಶದಲ್ಲಿ ಅಫ್ತಾಬ್ ಆಲಮ್ ಎಂಬ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹಿಂದುತ್ವವಾದಿಗಳು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿ” ಎಂದು ಬರ್ಬರವಾಗಿ ಹಲ್ಲೆ ಮಾಡಿ ಹತ್ಯೆಗೈದಿರುವ ದುರ್ಘಟನೆ ಜರುಗಿದೆ.

ತಡವಾಗಿ ಬೆಳಕಿಗೆ ಬಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫ್ತಾಬ್ ಆಲಮ್ ಅವರ ಮಗ ಸಬೀರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

“ಭಾನುವಾರ ರಾತ್ರಿ ನನ್ನ ತಂದೆಯಿಂದ ನಿರೀಕ್ಷಿತವಲ್ಲದ ರೀತಿಯಲ್ಲಿ ಕರೆ ಬಂತು. ಆಗಲೇ ಏನೋ ಸಮಸ್ಯೆಯಾಗಿದೆ ಎಂದು ನನಗೆ ತಿಳಿಯಿತು. ಫೋನ್ ರಿಸೀವ್ ಮಾಡಿದ ನಂತರ, ನನ್ನ ತಂದೆ ಒಂದು ಮಾತನ್ನೂ ಆಡಲಿಲ್ಲ. ಆದರೆ ಅಲ್ಲಿ ಕುಡಿದಿದ್ದ ಜನರ ಗುಂಪೊಂದು ಮಾತನಾಡುತ್ತಿದ್ದುದು ನನಗೆ ಕೇಳಿಸುತ್ತಿತ್ತು. ಅವರು ನನ್ನ ತಂದೆಯನ್ನು ‘ಕುಡಿಯುತ್ತೀಯಾ ಎಂದಾಗ, ನನ್ನ ತಂದೆ ಇಲ್ಲಾ ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು” ಎಂದು 20 ವರ್ಷದ ಸಬೀರ್ ಪೊಲೀಸರಿಗೆ ತಿಳಿಸಿದ್ದಾನೆ.

ಸಬೀರ್ ತನ್ನ ತಂದೆಯ ಫೋನ್‌ ಕರೆಯನ್ನು ರೆಕಾರ್ಡ್ ಮಾಡಿದ್ದು, ಈ ರೆಕಾರ್ಡಿಂಗ್‌ನ ಸುಮಾರು 8 ನಿಮಿಷ 39 ಸೆಕೆಂಡ್ ನಲ್ಲಿ “ಜೈ ಶ್ರೀರಾಮ್ ಬೋಲ್, ಬೋಲ್ ಜೈ ಶ್ರೀರಾಮ್” ಎಂದು ಒತ್ತಾಯಿಸುತ್ತಿರುವುದು ದಾಖಲಾಗಿದೆ ಎಂದು ದಿ ವೈರ್ ವರದಿ ಮಾಡಿದೆ.

ಅದಾದ ನಂತರ ಯಾವುದೇ ಸಂಭಾಷಣೆ ಕೇಳಿಸಲಿಲ್ಲ. ಆದರೆ 11 ನಿಮಿಷಗಳ ನಂತರ, 19 ನಿಮಿಷ 41 ಸೆಕೆಂಡಿನಲ್ಲಿ ಆ ಗುಂಪಿನಲ್ಲಿದ್ದ ಒಬ್ಬ, “ಸಾನ್ಸ್ ರುಕ್ ಗೈ (ಅವನ ಉಸಿರಾಟ ನಿಂತಿದೆ)” ಎಂದು ಹೇಳಿರುವುದು ದಾಖಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೆಹಲಿಯಲ್ಲಿ ಮುಸ್ಲಿಂ ವೈದ್ಯೆಯ ಮೇಲೆ RSS ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಯೇ?

“ನನ್ನ ತಂದೆ, ನಿನ್ನೆ ಮಧ್ಯಾಹ್ನ 3 ಗಂಟೆಗೆ ಬುಲಂದ್‌ಶಹರ್‌ನಲ್ಲಿ ತನ್ನ ಹಳೆಯ ಗ್ರಾಹಕರೊಬ್ಬರನ್ನು ಬಿಡಲು ಹೋಗಿದ್ದರು. ಅವರು ಸುಮಾರು 7 ಗಂಟೆಗೆ ಅವರನ್ನು ಬಿಟ್ಟು ಮನೆಗೆ ತೆರಳಿದ್ದರು. ದಾರಿಯಲ್ಲಿ ಅವರು ನನಗೆ ಕರೆಮಾಡಿ, ತಮ್ಮ ಫಾಸ್ಟ್ ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಹೇಳಿದರು. ನಾನು ಸುಮಾರು 7:30ಕ್ಕೆ ರೀಚಾರ್ಜ್ ಮಾಡಿದ್ದೆ. ಆದರೆ, ಸ್ವಲ್ಪ ಸಮಯದ ನಂತರ ನನಗೆ ಮತ್ತೆ ಕರೆ ಬಂತು. ಇದು ಟೋಲ್ ಬೂತ್ ಬಳಿ ಎಂದು ನಾನು ಭಾವಿಸುತ್ತೇನೆ. ತನಗೆ ಎದುರಾದ ಕೆಲವು ಪುರುಷರ ಗುಂಪಿನ ಬಗ್ಗೆ ಅವರಿಗೆ ಅನುಮಾನ ಬಂದು, ಅವರು ನನಗೆ ಕರೆ ಮಾಡಿ, ಮೊಬೈಲ್ ಫೋನ್ ಅನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ” ಎಂದು ಸಬೀರ್ ಹೇಳಿದ್ದಾನೆ.

ಸಬೀರ್, ತನ್ನ ತಂದೆಯ ಫೋನ್ ಸ್ವಿಚ್ ಆಫ್ ಆಗುವವರೆಗೆ, ಅಂದರೆ ಕರೆ ಬಂದಿದ್ದ ಸಮಯದಿಂದ ಮುಂದಿನ 40 ನಿಮಿಷಗಳ ಕಾಲ ಈ ಕರೆಯನ್ನು ರೆಕಾರ್ಡ್ ಮಾಡಿದ್ದಾನೆ. ನಂತರ ತಕ್ಷಣ ಹತ್ತಿರದ ಪೊಲೀಸ್ ಠಾಣೆ ಮಯೂರ್ ವಿಹಾರ್ 1ನೇ ಹಂತಕ್ಕೆ ಹೋಗಿ ಪೊಲೀಸರಿಗೆ ದೂರು ನೀಡಿ, ರೆಕಾರ್ಡಿಂಗ್ ಸಲ್ಲಿಸಿದ್ದಾರೆ.

“ದೂರಿನ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ಸಂಜಯ್ ತಕ್ಷಣ ನನ್ನ ತಂದೆಯ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿ, ಅವರಿದ್ದ ಸ್ಥಳವನ್ನು ಪತ್ತೆಹಚ್ಚಿದರು. ಟ್ರಾಕ್ ಮಾಡಲಾದ ಕೊನೆಯ ಸ್ಥಳ ಬಾದಲ್‌ಪುರ ಪೊಲೀಸ್ ಠಾಣೆ ಬಳಿ ಇತ್ತು. ಅಲ್ಲಿ ಪೊಲೀಸರು ನಮ್ಮ ತಂದೆಯ ಶವವನ್ನು ಪತ್ತೆಹಚ್ಚಿದರು. ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಿ ಅವರು ಮೃತರಾಗಿದ್ದರು” ಎಂದು ಸಬೀರ್ ಹೇಳಿದ್ದಾರೆ.

ಇದನ್ನೂ ಓದಿ: ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

“ಸತ್ತ ತಂದೆಯನ್ನು ನೋಡಿದ ಸಬೀರ್ ಕುಸಿದುಬಿದ್ದ. ಅಫ್ತಾಬ್ ಆಲಮ್ ನಾಲಿಗೆ ಭಾಗಕ್ಕೆ ಬಲವಾದ ಏಟು ಬಿದ್ದಿತ್ತು. ಕಿವಿಗಳಿಂದ ರಕ್ತಸ್ರಾವವಾಗುತ್ತಿತ್ತು. ಅವನ ಮುಖದ ಮೇಲೆ ಕತ್ತರಿಸಿದ ಗುರುತು ಇತ್ತು. ಇದು ಸ್ಪಷ್ಟವಾಗಿ ಗುಂಪೊಂದು ಹತ್ಯೆ ಮಾಡಿರುವ ಪ್ರಕರಣವಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.

ಅದೇ ರಾತ್ರಿಯಲ್ಲಿ ನೋಂದಾಯಿಸಲಾದ ಎಫ್‌ಐಆರ್, ಅನಾಮಧೇಯ ಹಲ್ಲೆಕೋರರ ಮೇಲೆ ಐಪಿಸಿ ಸೆಕ್ಷನ್ 394 (ದರೋಡೆ ಮಾಡುವಲ್ಲಿ ಸ್ವಯಂಪ್ರೇರಣೆಯಿಂದ ಗಾಯವನ್ನುಂಟುಮಾಡುವುದು) 302 (ಕೊಲೆಗೆ ಶಿಕ್ಷೆ) ಮತ್ತು 201ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇವರ ಕೊಲೆಯು ಸ್ಪಷ್ವವಾಗಿ ಗುಂಪುಹತ್ಯೆಯಾಗಿದ್ದು, ಇದು ಧರ್ಮ ದ್ವೇಷದ ಅಪರಾಧಗಳನ್ನು ಸಂಕೇತಿಸುತ್ತದೆ. ಆದರೆ ಪೊಲೀಸರು ಕೇವಲ ದರೋಡೆ ಪ್ರಕರಣವನ್ನು ಮಾತ್ರ ದಾಖಲಿಸಿದ್ದಾರೆ ಎಂದು ಹಲವರು ದೂರಿದ್ದಾರೆ.

“ನಾವು ಮುಸ್ಲಿಮರು, ನಮಗೆ ಬದುಕುವ ಹಕ್ಕಿದೆ” ಎಂದು ಸಬೀರ್ ಹೇಳಿದ್ದಾನೆ.

ಅಫ್ತಾಬ್ ಆಲಮ್ ತ್ರಿಲೋಕ್ ಪುರಿಯ ನಿವಾಸಿಯಾಗಿದ್ದು, ನೋಯ್ಡಾದಲ್ಲಿ 1996 ರಿಂದ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಚಾಲನೆ ಅವನ ಮುಖ್ಯ ಜೀವನೋಪಾಯವಾಗಿತ್ತು. ಅವರಿಗೆ ಹೆಂಡತಿ, ಅವರ ಮೂವರು ಗಂಡು ಮಕ್ಕಳು, ಅನಾರೋಗ್ಯದ ಪೋಷಕರು ಮತ್ತು ಇಬ್ಬರು ಒಡಹುಟ್ಟಿದವರು ಇದ್ದಾರೆ. ಅವರೆಲ್ಲರೂ ಆಲಮ್ ಮತ್ತು ಸಬೀರ್ ಮೇಲೆ ಆರ್ಥಿಕವಾಗಿ ಅವಲಂಬಿಸಿದ್ದಾರೆ.

“ಲಾಕ್ ಡೌನ್ ಸಮಯದಲ್ಲಿ, ಕೊರೊನಾ ವೈರಸ್ ಹರಡಬಹುದೆಂಬ ಭಯದಿಂದ ಆಲಮ್ ಹೊರಬಂದಿರಲಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಆದರೆ ಕುಟುಂಬದ ಸ್ನೇಹಿತ ಮತ್ತು ತನ್ನ ಹಳೆಯ ಗ್ರಾಹಕರು, ‘ಗುರಗಾಂವ್ ನಿಂದ ಉತ್ತರ ಪ್ರದೇಶದ ಬುಲಂದ್‌ಶಹರ್‌ಗೆ ಬಿಡಬಹುದೇ’ ಎಂದು ಕೇಳಲು ಅವರನ್ನು ಕರೆದಾಗ, ಅವರು ನಿರಾಕರಿಸಲಾಗಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಆರ್ಥಿಕ ಸಮಸ್ಯೆಗೆ ಒಳಗಾಗಿದ್ದರಿಂದ ಈ ಪ್ರಸ್ತಾವವನ್ನು ಒಪ್ಪಿಕೊಂಡಿದ್ದರು” ಎಂದು ಕುಟುಂಬದವರು ಹೇಳಿದರು.

ಆಲಮ್ ಅವರ ತಂದೆ 65 ವರ್ಷದ ಮೊಹಮ್ಮದ್ ತಾಹಿರ್ ಪ್ರತಿಕ್ರಿಯಿಸಿ, “ಇದು ದರೋಡೆ ಪ್ರಕರಣವಾಗಿದ್ದರೆ, ಅವರು ಕಾರನ್ನು ಏಕೆ ತೆಗೆದುಕೊಂಡಿಲ್ಲ? ಅವರು ಕಾರನ್ನು ಕದ್ದು ಅವನ ದೇಹವನ್ನು ಬೀದಿಗೆ ಎಸೆಯುತ್ತಿದ್ದರು. ಇದು ಸ್ಪಷ್ಟವಾಗಿ ಗುಂಪು ಹತ್ಯೆಯ ಪ್ರಕರಣವಾಗಿದೆ. ಅವರು ಮೊಬೈಲ್ ಫೋನ್ ಮಾತ್ರ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಮೋದಿ ಜಿಂದಾಬಾದ್, ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ ಮುಸ್ಲಿಂ ಆಟೋ ಡ್ರೈವರ್ ಮೇಲೆ ಹಲ್ಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -