Homeಮುಖಪುಟಪ್ರಧಾನಿಯ ದಕ್ಷಿಣ ಭಾರತ ಭೇಟಿ: ‘ಗೋ ಬ್ಯಾಕ್ ಫ್ಯಾಸಿಸ್ಟ್‌ ಮೋದಿ’ ಟ್ವಿಟರ್‌ ಟ್ರೆಂಡ್!

ಪ್ರಧಾನಿಯ ದಕ್ಷಿಣ ಭಾರತ ಭೇಟಿ: ‘ಗೋ ಬ್ಯಾಕ್ ಫ್ಯಾಸಿಸ್ಟ್‌ ಮೋದಿ’ ಟ್ವಿಟರ್‌ ಟ್ರೆಂಡ್!

ಮೋದಿ ಅಮೇರಿಕಾಕ್ಕೆ ಹೋಗಿ ಟ್ರಂಪ್‌ಗೂ ಪ್ರಚಾರ ಮಾಡಬಹುದು,ಆದರೆ ಅವರು ತಮಿಳುನಾಡಿನಲ್ಲಿ ಪ್ರಚಾರ ಮಾಡಲು ಆಗಲ್ಲ. ಯಾಕೆಂದರೆ ಮೋದಿ ಹೆಸರನ್ನು ಸ್ವತಃ ಬಿಜೆಪಿ ಸದಸ್ಯರೇ ಕಡೆಗಣಿಸಿದ್ದಾರೆ ಎಂದು ಟ್ವಿಟರ್‌ ಬಳಕೆದಾರರು ಹೇಳಿದ್ದಾರೆ.

- Advertisement -
- Advertisement -

ಕೇರಳದಲ್ಲಿ ಎಪ್ರಿಲ್ 6 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತರೂಢ ಎಡಪಕ್ಷಗಳ ಮೈತ್ರಿಕೂಟವಾದ ಎಲ್‌ಡಿಎಫ್‌, ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಹಾಗೂ ಬಿಜೆಪಿ ನೇತತ್ವದ ಎನ್‌ಡಿಎ ಈಗಾಗಲೇ ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ನಡೆಸುತ್ತಿದೆ. ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಕೇರಳಕ್ಕೆ ತೆರಳಿದ್ದು ಪಾಲಕ್ಕಾಡ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಕೇರಳದಿಂದ, ತಮಿಳುನಾಡಿಗೆ ತೆರಳುತ್ತಿದ್ದು, ಟ್ವಿಟ್ಟರ್‌ನಲ್ಲಿ ‘ವಾಪಾಸು ಹೋಗಿ ಮೋದಿ’, ‘ವಾಪಾಸು ಹೋಗಿ ಸ್ಯಾಡಿಸ್ಟ್‌ ಮೋದಿ’, ‘ವಾಪಾಸು ಹೋಗಿ ಫ್ಯಾಸಿಸ್ಟ್‌ ಮೋದಿ’ ಎಂದು ಟ್ರೆಂಡ್ ಪ್ರಾರಂಭವಾಗಿದೆ. #GoBackSadistModi,#GoBackFascistModi, #GoBackModi ಎಂದು ಟ್ವಿಟರ್‌‌ನಲ್ಲಿ ಟ್ರೆಂಡ್ ಆಗಿದೆ. #GoBackModi ಟ್ವಿಟರ್‌ನ ಟ್ರೆಂಡ್‌ನ ಒಂದನೆ ಸ್ಥಾನದಲ್ಲಿದೆ.

ಇದನ್ನೂ ಓದಿ: ಕೇರಳದಲ್ಲಿನ ಏಕೈಕ ಬಿಜೆಪಿ ಖಾತೆಯನ್ನೂ ಕ್ಲೋಸ್ ಮಾಡುತ್ತೇವೆ: ಪಿಣರಾಯಿ ವಿಜಯನ್

ಪ್ರಧಾನಿ ಮೋದಿ ಕೇರಳದ ಪಾಲಕ್ಕಾಡ್‌‌ನಲ್ಲಿ ಮಾತನಾಡಿ, “ಯುಡಿಎಫ್ ಮತ್ತು ಎಲ್‌ಡಿಎಫ್‌‌ ಮ್ಯಾಚ್‌ ಪಿಕ್ಸ್‌‌ಅನ್ನು ಕೇರಳ ಈ ಬಾರಿ ತಿರಸ್ಕರಿಸಲಿದೆ” ಎಂದು ಹೇಳಿದ್ದಾರೆ. ಇದೀಗ ಅವರು ತಮಿಳುನಾಡಿಗೆ ತೆರಳಲಿದ್ದಾರೆ.

ಚಿನ್ನಸರವಣ ಅವರು, “ಅಮೇರಿಕಾದಲ್ಲಿ ಟ್ರಂಪ್‌ಗೂ ಮೋದಿ ಪ್ರಚಾರ ಮಾಡಬಹುದು. ಆದರೆ ಅವರು ತಮಿಳುನಾಡಿನಲ್ಲಿ ಪ್ರಚಾರ ಮಾಡಲು ಸಾಧ್ಯವಿಲ್ಲ. ಮೋದಿ ಹೆಸರನ್ನು ಸ್ವತಃ ಬಿಜೆಪಿ ಸದಸ್ಯರೇ ಕಡೆಗಣಿಸಿದ್ದಾರೆ. ಕಾರಣ ತಮಿಳುನಾಡಿನ ಜನರು ಮೋದಿಯ ಮೇಲೆ ಕೋಪಗೊಂಡಿದ್ದಾರೆ. ಅದು ಅವರು ನೀಡುವ ಮತಗಳ ಮೇಲೆ ಪರಿಣಾಮ ಬೀರುತ್ತಾರೆ. 56 ಇಂಚು ವ್ಯರ್ಥವಾಯಿತು” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಮುಖ್ಯಮಂತ್ರಿ ಮತ್ತು ಪ್ರಧಾನಿ ರಹಸ್ಯ ಹೊಂದಾಣಿಕೆ ಮಾಡಿಕೊಂಡಿದ್ದಾರೆ: ಕಾಂಗ್ರೆಸ್

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಯಾವುದೆ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಬರಿಕಾಲಲ್ಲೇ ಸಾವಿರಾರು ಕಿ.ಮೀ ವರೆಗೂ ನಡೆದುಕೊಂಡು ಹೊರಟಿದ್ದ ವಲಸೆ ಕಾರ್ಮಿಕರು ರೈಲು ಅಫಘಾತಕ್ಕೀಡಾಗಿ ಮೃತಪಟ್ಟಿದ್ದರು. ಈ ಸಮಯದಲ್ಲಿ ಮೃತಪಟ್ಟ ಕಾರ್ಮಿಕರು ದಾರಿಯಲ್ಲಿ ತಿನ್ನಲು ಕೊಂಡೊಯ್ದಿದ್ದ ರೊಟ್ಟಿಗಳು ರೈಲಿನ ಹಳಿಗಳಲ್ಲಿ ಅನಾಥವಾಗಿ ಬಿದ್ದಿರುವ ಹೃದಯ ವಿದ್ರಾವಕ ಚಿತ್ರವೊಂದು ಭಾರಿ ಆಕ್ರೋಶವನ್ನು ಹುಟ್ಟುಹಾಕಿತ್ತು. ಆ ಚಿತ್ರವನ್ನು ಸರಣಿ ಎಂಬವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, “ಯಾವತ್ತೂ ಮರೆಯುವುದಿಲ್ಲ, ಯಾವತ್ತೂ ಕ್ಷಮಿಸಲ್ಲ” ಎಂದು ಬರೆದಿದ್ದಾರೆ.

ಬೃಜ್ ಮೋಹನ್‌ ಅವರು, “ಪ್ರತಿ ಬಾರಿಯೂ ಮೋದಿ ತಮಿಳುನಾಡಿಗೆ ಕಾಲಿಡಲು ಯೋಜಿಸಿದಾಗ, ಜನರು #GoBackModi ಹೇಳುವ ಪ್ರವೃತ್ತಿಯನ್ನು ಕಡ್ಡಾಯಗೊಳಿಸಿದ್ದಾರೆ. ಒಂದು ವಿಷಯ ಸ್ಪಷ್ಟವಾಗಿದೆ, ಬಿಜೆಪಿ ಮತ್ತು ಮೋದಿಗೆ ತಮಿಳುನಾಡಿ‌ನಲ್ಲಿ ಸ್ಥಾನವಿಲ್ಲ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ‘ಬಿಜೆಪಿ ಸರ್ಕಾರದ ಸಚಿವನಾಗಿ ಕೇಂದ್ರವನ್ನು ಟೀಕಿಸುತ್ತೇನಾ’ – ಉಲ್ಟಾ ಹೊಡೆದ ಮಾಧುಸ್ವಾಮಿ ಹೇಳಿದ್ದೇನು?

ನಿತ್ಯಾ ಶ್ರೀ ಅವರು, “ತಮಿಳುನಾಡು ಇನ್ನೊಂದು ಉತ್ತರ ಪ್ರದೇಶ ಆಗುವುದು ನಮಗೆ ಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಅಬ್ದುಲ್ ಬಾಸಿತ್ ಅವರು, “ಫ್ಯಾಸಿಸ್ಟರು ತಮ್ಮ ತಲೆಯ ಮೇಲೆ ಕೊಂಬುಗಳನ್ನು ಹೊಂದಿಲ್ಲ!” ಎಂದು ಹಿಟ್ಲರ್‌ ಪ್ರಧಾನಿ ಮೋದಿಯನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.

ಸೈಮನ್ ರಾಜ್ ಅವರು, ‘ಹಿಂದಿ ಬೇಕಿಲ್ಲ, ಹೊಸ ಶಿಕ್ಷಣ ನೀತಿ ಬೇಕಿಲ್ಲ, ನೀಟ್ ಬೇಕಿಲ್ಲ, ಸಿಎಎ ಬೇಕಿಲ್ಲ, ಅದೇ ರೀತಿ ಬಿಜೆಪಿಯು ಬೇಕಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪರ ಪ್ರಚಾರ: 8 ಪತ್ರಿಕೆಗಳಿಗೆ ಚುನಾವಣಾ ಆಯೋಗ ನೋಟಿಸ್

ಇದನ್ನೂ ಓದಿ: ಮಸ್ಕಿ ಬೆವರು ಬೆಂಗಳೂರಿನಲ್ಲಿ: ಬಸವಕಲ್ಯಾಣದಲ್ಲಿ ನಾರಾಯಣರಾವ್ ಸರಳತೆ ಉಳಿಯುವುದೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಶಿವಸೇನೆಯನ್ನು ವಿಭಜಿಸಿ, ಇಲ್ಲವೇ ಬಂಧನ ಎದುರಿಸಿ ಎಂದು ಏಕನಾಥ್ ಶಿಂದೆಗೆ ಕೇಂದ್ರ ಸರ್ಕಾರ ಬೆದರಿಕೆ...

0
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ಏಕನಾಥ್ ಶಿಂದೆ ಸಚಿವರಾಗಿದ್ದಾಗ, ಅವರನ್ನು ಬಂಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯೋಜಿಸಿತ್ತು ಎಂದು ಮಂಗಳವಾರ ಶಿವಸೇನೆ (ಯುಬಿಟಿ) ನಾಯಕ...