Homeಕರ್ನಾಟಕಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ 'ಪ್ರಗತಿಪರ ಸೌಹಾರ್ದ ಸಂಘಟನೆಗಳ' ಆಗ್ರಹ

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

- Advertisement -
- Advertisement -

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಸಂಪ್ರದಾಯದಂತೆ ಉರುಸ್ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ಕಳುಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ಸೌಹಾರ್ದ ತಾಣವಾದ ಬಾಬಾ ಬುಡನ್ ಗಿರಿ ಉಳಿವಿಗೋಸ್ಕರ ಕರ್ನಾಟಕದ ಎಲ್ಲಾ ಪ್ರಗತಿಪರ ಮನಸ್ಸುಗಳು ಅನೇಕ ದಶಕಗಳ ಕಾಲ ಹೋರಾಟ ಮಾಡಿದ್ದ ಇತಿಹಾಸ ನಮಗೆಲ್ಲರಿಗೂ ಗೊತ್ತೇ ಇದೆ. ಅದರಾಚೆಗೂ ಕೂಡ ಸಂಘಪರಿವಾರದ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ ಒಂದು ರಾಜಿ ಸೂತ್ರವನ್ನು ಮುಂದಿಟ್ಟಿತ್ತು. ಅದರ ಪ್ರಕಾರ ಉರುಸ್ ಹಾಗೂ ದತ್ತಪೂಜೆ ಎರಡನ್ನೂ ನಡೆಸಲು ಅವಕಾಶ ಇರಬೇಕು. ಎರಡನ್ನೂ ಕೂಡ ಜಿಲ್ಲಾಡಳಿತ ಮೇಲ್ವಿಚಾರಣೆ ಮಾಡಬೇಕು ಎನ್ನುವ ತೀರ್ಮಾನಕ್ಕೆ ಇದಾಗಿತ್ತು. ದತ್ತ ಪೂಜೆಯ ಹೆಸರಿನಲ್ಲಿ ಸಂಘಪರಿವಾರಕ್ಕೆ ಬ್ರಾಹ್ಮಣೀಯ ಆಚರಣೆಯನ್ನು ತುರುಕಲು ಇದು ಅವಕಾಶ ನೀಡುವುದಾಗಿದ್ದರೂ, ಒಂದು ರೀತಿಯಲ್ಲಿ ಈಗಾದರೂ ಈ ಸಂಘರ್ಷ ಮುಕ್ತಾಯಗೊಳ್ಳಲಿ ಎಂದು ಅದನ್ನು ಬೆಂಬಲಿಸಿದ ಜನರೂ ಇದ್ದರು. ಆದರೆ ಇದು ಇಬ್ಬರಿಗೂ ಅವಕಾಶ ಮಾಡಿಕೊಡುವ ಜಾತ್ಯಾತೀತ ನಿಲುವಲ್ಲ. ಸಂಘ ಪರಿವಾರಕ್ಕೆ ಮಣೆ ಹಾಕಿ, ಸೂಫಿ ಪರಂಪರೆಯನ್ನು ನಮ ನಿಶೇಧಿಸುವ ತಂತ್ರಗಾರಿಕೆ ಎಂಬುದು ಬಯಲಾಗಿದೆ” ಎಂದು ಬಹಿರಂಗ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬ್ರಾಹ್ಮಣೀಯ ರೀತಿಯಲ್ಲಿ ದತ್ತ ಜಯಂತಿ ನಡೆಸಲು ಜಿಲ್ಲಾಡಳಿತ ಸಂಪೂರ್ಣ ಅವಕಾಶ ನೀಡಿತ್ತು. ಬಾಬಾ ಬುಡನ್ ಗಿರಿಯನ್ನು ಕೇಸರಿಮಯಗೊಳಿಸಿ ಸಂಘಪರಿವಾರದ ನೇತೃತ್ವದಲ್ಲಿ ದತ್ತ ಜಯಂತಿ ನಡೆಯಿತು. ಆದರೆ, ಅದೇ ಸಂಧರ್ಭದಲ್ಲಿ ನೆನ್ನೆ(ಮಾರ್ಚ್4), ಇಂದು(ಮಾರ್ಚ್5) ಮತ್ತು ನಾಳೆ(ಮಾರ್ಚ್6) ದರ್ಗಾ ಸಮಿತಿ ಕಡೆಯಿಂದ ಉರುಸ್ ಆಯೋಜನೆಗೊಂಡಿತ್ತು. ಆದರೆ ಜಿಲ್ಲಾಡಳಿತ ಉರುಸ್ ನಡೆಯದಂತೆ ತಡೆಯೊಡ್ಡಿದೆ. ಸಜ್ಜಾದೆ ಅವರಿಗೆ ನಿಮಗೆ ಇಲ್ಲಿ ಸಂಪ್ರದಾಯದಂತೆ ಗಂಧ ಹಚ್ಚುವ, ಉರುಸ್ ಅನ್ನು ನಡೆಸಿಕೊಡುವ ಹಕ್ಕು ಇಲ್ಲ ಎಂದು ತಡೆ ಹಿಡಿದು, ಗೋರಿಯ ಮೇಲೆ ಹಸಿರು ಚಾದರ್ ಹಾಕುವುದಕ್ಕಾಗಲಿ, ಅವರ ಸಂಪ್ರದಾಯದಂತೆ ಉರುಸ್ ನಡೆಸಲಾಗಲಿ ಅವಕಾಶ ಕೊಡದೆ ಅವರನ್ನು ಹೊರಗಿಡಲಾಗಿದೆ” ಎಂದು ಆರೋಪಿಸಿದ್ದಾರೆ.

“ಈ ಅನ್ಯಾಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಆ ಪ್ರತಿಭಟನೆಗೂ ಅವಕಾಶ ಕೊಡದಂತೆ ಪೊಲೀಸರು ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಎಳೆದಾಡಿ ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ. ಇದು ಹುಸಿ ಜಾತ್ಯಾತೀತ ಹಾಗೂ ದ್ವಂದ್ವ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರದ ಈ ನಡವಳಿಕೆಯನ್ನು ನಾವು ಖಂಡಿಸುತ್ತಿದ್ದೇವೆ. ತಾವು ಈ ಕೂಡಲೇ ಮಧ್ಯಪ್ರವೇಶ ಮಾಡಿ ಬಾಬಾ ಬುಡನ್ ಗಿರಿಯಲ್ಲಿ ಸೌಹಾರ್ದ ಪರಂಪರೆಯನ್ನು ಸಂರಕ್ಷಿಸಬೇಕು, ಸುಪ್ರೀಂಕೋರ್ಟ್ ತೀರ್ಪಿನ ಆದೇಶದಂತೆ ನಡೆದುಕೊಳ್ಳಬೇಕು. ಉರುಸ್ ನಡೆಸಲು ಸಜ್ಜಾದೆ ಮತ್ತು ಭಕ್ತಾದಿಗಳಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸೂಕ್ತ ರೀತಿಯಲ್ಲಿ ನಿರ್ದೇಶನ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ” ಎಂದು ಆಗ್ರಹಿಸಿದ್ದಾರೆ.

ಪತ್ರದಲ್ಲಿ ಸಹಿ ಮಾಡಿದರವರು:

  1. ಡಾ.ವಿಜಯಮ್ಮ, ಹಿರಿಯ ಪತ್ರಕರ್ತರು.
  2. ತಾರಾರಾವ್, ಎದ್ದೇಳು ಕರ್ನಾಟಕ.
  3. ಬಂಜಗೆರೆ ಜಯಪ್ರಕಾಶ್‌
  4. ಪ್ರಕಾಶ್‌ ರಾಜ್
  5. ಕೆ.ಎಲ್.ಅಶೋಕ್, ಕಾರ್ಯದರ್ಶಿ, ಕರ್ನಾಟಕ ಜನಶಕ್ತಿ.
  6. ಗೌಸ್ ಮೊಹಿಯುದ್ಧೀನ್.
  7. ನಗರಗೆರೆ ರಮೇಶ್, ಶಾಂತಿಗಾಗಿ ನಾಗರಿಕರ ವೇದಿಕೆ.
  8. ಪ್ರೊ.ವಿ.ಎಸ್.ಶ್ರೀಧರ್, ಶಾಂತಿಗಾಗಿ ನಾಗರಿಕರ ವೇದಿಕೆ.
  9. ನೂರ್ ಶ್ರೀಧರ್ ರಾಜ್ಯಾಧ್ಯಕ್ಷರು, ಕರ್ನಾಟಕ ಜನಶಕ್ತಿ.
  10. ಶ್ರೀಪಾದ್ ಭಟ್, ಶಿಕ್ಷಣ ತಜ್ಞರು.
  11. ಬಸವರಾಜ್ ಕೌತಾಳ್, ಒಳ ಮೀಸಲಾತಿ ಹೋರಾಟ ಸಮಿತಿ.
  12. ಕರಿಯಪ್ಪ ಗುಡಿಮನಿ, ಒಳಮೀಸಲಾತಿ ಹೋರಾಟಗಾರರು.
  13. ನಿರಂಜನಾರಾಧ್ಯ ವಿ.ಪಿ., ಶಿಕ್ಷಣ ತಜ್ಞರು.
  14. ಸಿರಿಮನೆ ನಾಗರಾಜ್, ಗೌರವಾಧ್ಯಕ್ಷರು, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ.
  15. ಸಿದ್ಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜ.
  16. ಅನಂತ್, ಯುವಶಕ್ತಿ.
  17. ಮಲ್ಲು ಕುಂಬಾರ್ ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ.,
  18. ಬಸವರಾಜ್ ಸೂಳಿಭಾವಿ ಮೇ ಸಾಹಿತ್ಯ ಬಳಗ.,
  19. ಬಸವರಾಜ್, ಬಾದರ್ಲಿ.
  20. ಸಿದ್ಧರಾಜು ಮಂಡ್ಯ, ಕರ್ನಾಟಕ ಜನಶಕ್ತಿ
  21. ಕುಮಾರ್ ಸಮತಳ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ.
  22. ಲಕ್ಷ್ಮಣ ಮಂಡಲಗೇರಾ, ರಂಗಕರ್ಮಿ-ಪತ್ರಕರ್ತ
  23. ದುರ್ಗೇಶ್ ರಾಜ್ಯ ಸಂಚಾಲಕ ಕೆವಿಎಸ್,
  24. ರಘು ನಂದನ್, ರಂಗಕರ್ಮಿ.
  25. ಡಾ.ಕಿರಣ್ ಕಮಲ್ ಪ್ರಸಾದ್, ಜೀವಿಕ.
  26. ಎ.ಎಸ್.ಪ್ರಭಾಕರ್, ಪ್ರಾಧ್ಯಾಪಕರು.
  27. ಎಂ.ಆರ್.ನAದನ್ ನಿವೃತ್ತ ಪ್ರಾಧ್ಯಾಪಕರು.
  28. ಚೆನ್ನಮ್ಮ, ಮಹಿಳಾ ಮುನ್ನಡೆ.
  29. ಶಿವಣ್ಣ, ಪ್ರಾಧ್ಯಾಪಕ.
  30. ಫಾ.ಸಮೀರ್ ಮಿನ್ಜಿ, ಮೈನ್ ಇಂಡಿಯನ್ ಸೋಸಿಯಲ್ ಇನ್‌ಸ್ಟಿಟ್ಯೂಟ್.
  31. ಖಲೀಂಉಲ್ಲಾ, ಸ್ವರಾಜ್ ಇಂಡಿಯಾ.
  32. ರವಿ ಮೋಹನ್, ಕಾರ್ಮಿಕ ಮುಖಂಡ.
  33. ನಾಗೇಶ್ ಅರಳಕುಪ್ಪೆ
  34. ಪೂರ್ಣಿಮಾ, ಮಹಿಳಾ ಮುನ್ನಡೆ.
  35. ಚಂದ್ರು ತರಹುಣಿಸೆ – ಪತ್ರಕರ್ತ
  36. ಮಂಜುಳಾ ಹುಲಿಕುಂಟೆ – ಕವಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಂಧನ ಕೊರತೆ ವದಂತಿ; ಕಾಶ್ಮೀರದ ಪೆಟ್ರೋಲ್‌ ಬಂಕ್‌ಗಳಲ್ಲಿ ಖರೀದಿಗೆ ಮುಗಿಬಿದ್ದ ಜನ

ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಇಂಧನ ಕೊರತೆಯ ವದಂತಿಗಳು ಹರಡುತ್ತಿದ್ದಂತೆ ಗುರುವಾರ ಕಾಶ್ಮೀರದಾದ್ಯಂತ ಪೆಟ್ರೋಲ್ ಪಂಪ್‌ಗಳು ಭಾರಿ ಜನದಟ್ಟಣೆಯಾಯಿತು; ಭೀತಿಯಿಂದ ಜನ ಖರೀದಿಗೆ ಮುಗಿಬಿದ್ದರು. ಇಂಧನ ಸರಬರಾಜು ಸಾಕಷ್ಟು ಲಭ್ಯವಿದೆ ಎಂದು ಅಧಿಕಾರಿಗಳು...

ರಾಮ ಮಂದಿರವನ್ನು ಎಂದಿಗೂ ವಿರೋಧಿಸಿಲ್ಲ; ಅದಕ್ಕಾಗಿ ದೇಣಿಗೆ ನೀಡಿದ್ದೇನೆ: ದಿಗ್ವಿಜಯ ಸಿಂಗ್

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಗುರುವಾರ ಅಯೋಧ್ಯೆಗೆ ತೆರಳಿ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. "ನಾನು ರಾಮಮಂದಿರ ನಿರ್ಮಾಣವನ್ನು ಎಂದಿಗೂ ವಿರೋಧಿಸಿಲ್ಲ, ದೇವಾಲಯ ಟ್ರಸ್ಟ್‌ಗೆ ದೇಣಿಗೆ...

ಮೀಸಲಾತಿ ವಿರೋಧಿ ಹೇಳಿಕೆ: ಖಾಸಗಿ ಆಸ್ಪತ್ರೆಯಲ್ಲಿ ಸೋನಿಯಾ ಗಾಂಧಿ ಚಿಕಿತ್ಸೆ ಬಗ್ಗೆ ಪ್ರಶ್ನಿಸಿದ ಬಿಜೆಪಿ ಸಂಸದನಿಗೆ ಕಾಂಗ್ರೆಸ್ ತಿರುಗೇಟು

ಗುರುವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಯನ್ನು ಪ್ರಶ್ನಿಸುವ ಮೂಲಕ ತಮ್ಮ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಅವರ...

ಪಶ್ಚಿಮ ಬಂಗಾಳ ಎಸ್‌ಐಆರ್ : ಬಿಎಲ್‌ಒ ಸೇರಿದಂತೆ ಒಂದೇ ಬೂತ್‌ನ 340 ಮುಸ್ಲಿಂ ಮತದಾರರ ಹೆಸರು ಡಿಲೀಟ್!

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಬಳಿಕ ಪ್ರಕಟಗೊಂಡ ಮತದಾರರ ಪೂರಕ ಪಟ್ಟಿಯಲ್ಲಿ, ಒಂದೇ ಬೂತ್‌ನ 340 ಜನರ ಹೆಸರುಗಳನ್ನು ತೆಗೆದು ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಸಿರ್ಹತ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬೆಳವಣಿಗೆ...

ಹಾರ್ಮುಜ್ ಮಾರ್ಗದ ಅನುಮತಿ: ಭಾರತ ನಮ್ಮ ‘ಸ್ನೇಹಪರ ರಾಷ್ಟ್ರ’ಗಳ ಸಾಲಿನಲ್ಲಿ ಸೇರಿದೆ: ಇರಾನ್ ವಿದೇಶಾಂಗ ಸಚಿವ 

ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಇತರರಿಗೆ ನಿರ್ಬಂಧಗಳು ಮುಂದುವರಿದಿದ್ದರೂ, ಭಾರತ ಸೇರಿದಂತೆ ಆಯ್ದ "ಸ್ನೇಹಪರ ರಾಷ್ಟ್ರಗಳ" ಹಡಗುಗಳಿಗೆ ಆಯಕಟ್ಟಿನ ನಿರ್ಣಾಯಕ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡುತ್ತಿರುವುದಾಗಿ ಇರಾನ್ ಹೇಳಿದೆ. ಚೀನಾ, ರಷ್ಯಾ,...

ʼಜಾತಿ ಗೋಡೆʼ ವಿರುದ್ಧ ಕ್ರಮ ಕೈಗೊಳ್ಳದ ಆಡಳಿತ : ಚುನಾವಣೆ ಬಹಿಷ್ಕರಿಸಿದ ತಮಿಳುನಾಡಿನ ಶಂಕರಲಿಂಗಪುರಂನ ದಲಿತರು

ಗೋಡೆ ನಿರ್ಮಿಸಿ ಚರ್ಚ್‌ಗೆ ಹೋಗುವ ದಾರಿಯನ್ನು ತಡೆದಿರುವ ಭೂ ವಿವಾದದ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ತಮಿಳುನಾಡಿನ ಶಂಕರಲಿಂಗಪುರಂ ಗ್ರಾಮದ ಪರಿಶಿಷ್ಟ ಜಾತಿಯ ನಿವಾಸಿಗಳು, ಮುಂಬರುವ ವಿಧಾನಸಭಾ ಚುನಾವಣೆಯನ್ನು...

ಬಂಗಾಳ ಚುನಾವಣೆ : ಆರ್‌ಜಿ ಕರ್ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಿದ ಬಿಜೆಪಿ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಕೋಲ್ಕತ್ತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣದ ಸಂತ್ರಸ್ತೆಯ ತಾಯಿಯನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿದೆ. ಬುಧವಾರ (ಮಾ.25) ಬಿಜೆಪಿ...

ಆಂಧ್ರ ಪ್ರದೇಶ | ಟಿಪ್ಪರ್‌ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್ : 14 ಮಂದಿ ಸಜೀವ ದಹನ

ಖಾಸಗಿ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ 14 ಜನರು ಸಜೀವ ದಹನವಾದ ಘಟನೆ ಆಂಧ್ರ ಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಗುರುವಾರ (ಮಾ.26) ಸಂಭವಿಸಿದೆ ಎಂದು...

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...