- Advertisement -
- Advertisement -
ಹಿಂದಿ ಬ್ಯಾನರ್ ಹರಿದ ಕಾರಣಕ್ಕಾಗಿ ಕನ್ನಡ ಹೋರಾಟಗಾರರ ಬಂಧನ ವಿರೋಧಿಸಿ ನಾಳೆ ಬೆಂಗಳೂರಿನಲ್ಲಿ ಎರಡು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಕನ್ನಡಿಗರನ್ನು ರೌಡಿಗಳೆಂದು ಕರೆದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಸಂರಕ್ಷಣಾ ವೇದಿಕೆ ವತಿಯಿಂದ ಮಧ್ಯಾಹ್ನ 3 ಗಂಟೆಗೆ ನಗರದ ಮೈಸೂರು ವೃತ್ತದ ಬಳಿ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಇದನ್ನೂ ಓದಿ:ಕನ್ನಡ ಭಾಷೆಯ ಪ್ರಕರಣಕ್ಕೆ ಕೋಮು ಬಣ್ಣ ಕೊಟ್ಟ ಬಿಜೆಪಿ ಸಂಸದ: ತೇಜಸ್ವಿ ನಡೆಗೆ ವ್ಯಾಪಕ ಖಂಡನೆ

“ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಹಿಂದಿ ಹೇರಿಕೆ ಸಲ್ಲ ಎಂದು ಪ್ರತಿಭಟಿಸಿದ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಸಮಾನ ಮನಸ್ಕರು ತಿಳಿಸಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ನಗರದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಹಿಂದಿ ಬ್ಯಾನರ್ ಹರಿದ ಆರೋಪ: ಆರು ಕನ್ನಡ ಹೋರಾಟಗಾರರ ಬಂಧನ



Adu ondu Visha BIJA BEGA TEGEDU HAKI
KARNAKA FLOOD Bandidu Kanisila Ivalige Iga tweet madtane