Homeಚಳವಳಿದೆಹಲಿಯಲ್ಲಿ ದಲಿತರ ಪ್ರತಿಭಟನೆ: ನೀಲಿ ಸಮುದ್ರದ ಅಲೆಯಲ್ಲಿ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ...

ದೆಹಲಿಯಲ್ಲಿ ದಲಿತರ ಪ್ರತಿಭಟನೆ: ನೀಲಿ ಸಮುದ್ರದ ಅಲೆಯಲ್ಲಿ ಮುಗಿಲು ಮುಟ್ಟಿದ ಜೈಭೀಮ್ ಘೋಷಣೆ…

30 ವರ್ಷದ ಸೋನು ಮಾತನಾಡಿ "ಅವರು ದೇವಾಲಯವನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಿಸುತ್ತೀವೆ ಎನ್ನುತ್ತಿದ್ದಾರೆ. ಆದರೆ ಅವರು ರಾಮ ಮಂದಿರವನ್ನೇಕೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಿಲ್ಲ? ಎಲ್ಲವೂ ಕಣ್ಣು ಮಿಟುಕಿಸುವುದರಲ್ಲಿ ಸಂಭವಿಸಿದೆ. ನಾವು ಭಾರತದ ಪ್ರಜೆಗಳಲ್ಲವೇ?" ಎಂದು ಪ್ರಶ್ನಿಸಿದ್ದಾರೆ.

- Advertisement -
- Advertisement -

ದೆಹಲಿಯ ತುಘಲಕಾಬಾದ್‌ನ ರವಿದಾಸ್ ದೇವಾಲಯವನ್ನು ಧ್ವಂಸಗೊಳಿಸುವುದರ ವಿರುದ್ಧ ಇಂದು ದೆಹಲಿಯಲ್ಲಿ ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಸಾವಿರ ಸಾವಿರ ನೀಲಿ ಟೋಪಿಗಳು ಮತ್ತು ನೀಲಿ ಬಾವುಟಗಳು ಹಾರಾಡುವ ಮೂಲಕ ನೀಲಿ ಸಮುದ್ರದ ಅಲೆಯನ್ನು ಸೃಷ್ಠಿಸಿದ್ದವು. ಜೈಭೀಮ್ ಘೋಷಣೆ ಮುಗಿಲು ಮುಟ್ಟಿತ್ತು. ಆದರೆ ಅದಾದ ಕೆಲವೇ ಸಂದರ್ಭದಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ.

ಪ್ರತಿಭಟನಾಕಾರರಲ್ಲಿ ಒಬ್ಬರಿಗೆ ಗುಂಡು ಹಾರಿಸಲಾಗಿದೆ ಎಂಬ ವದಂತಿಯ ನಂತರ ಪ್ರತಿಭಟನಾಕಾರರು ಬಸ್‌ಗಳನ್ನು ಧ್ವಂಸಗೊಳಿಸಿದರು. ಆಗ ಪ್ರತಿಭಟನಾಕಾರರು ದೇವಾಲಯದ ಸ್ಥಳಕ್ಕೆ ಬರದಂತೆ ತಡೆಯಲು ಪೊಲೀಸರು ಲಾಠಿ ಚಾರ್ಜ್ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಸದ್ಯಕ್ಕೆ ದೇವಾಲಯದ ಬಳಿ ಭಾರಿ ಭದ್ರತಾ ಕಾರ್ಡನ್ ಸ್ಥಾಪಿಸಲಾಗಿದೆ.

ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಆಗಸ್ಟ್ 10 ರಂದು ರವಿದಾಸ್ ದೇವಾಲಯವನ್ನು ನೆಲಸಮ ಮಾಡಿತ್ತು. ಇದನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಿಂದ ಸಾವಿರಾರು ದಲಿತರು ಇಂದು ದೆಹಲಿಯಲ್ಲಿ ‘ಮಂದೀರ್ ವಹಿ ಬನೇಗಾ’(ಇಲ್ಲೇ ದೇವಸ್ಥಾನ ಕಟ್ಟಿ) ಎಂದು ಕೂಗುತ್ತಾ ರಾಮ್‌ಲೀಲಾ ಮೈದಾನದಿಂದ ತುಘಲಕಾಬಾದ್‌ಗೆ ಮೆರವಣಿಗೆ ನಡೆಸಿದರು.

ಪಂಜಾಬ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಿಂದ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರವು ಜಮೀನಿನ ಜಾಗವನ್ನು ಸಮುದಾಯಕ್ಕೆ ಹಸ್ತಾಂತರಿಸಿ ದೇವಾಲಯವನ್ನು ಪುನರ್ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.

ಇಂದಿನ ಈ ಪ್ರತಿಭಟನೆಯಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ್ ಭಾಗವಹಿಸಿ ಸ್ಫೂರ್ತಿ ತುಂಬಿದರೆ, ದೆಹಲಿಯ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್ ಸಹ ಪ್ರತಿಭಟನೆಯ ನೇತೃತ್ವ ವಹಿಸಿ ಅಚ್ಚರಿ ಮೂಡಿಸಿದ್ದಾರೆ.

ನಮ್ಮ ಹೋರಾಟವು ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧವಾಗಿದೆಯೆ ಹೊರತು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಲ್ಲ ಎಂದು ರಾಜೇಂದ್ರ ಪಾಲ್ ಗೌತಮ್ ಹೇಳಿದ್ದಾರೆ. “ನಾನು ಇಲ್ಲಿ ಸಮುದಾಯದ ಪ್ರತಿನಿಧಿಯಾಗಿರುತ್ತೇನೆ ಮತ್ತು ದೆಹಲಿ ಮಂತ್ರಿ ಅಥವಾ ರಾಜಕಾರಣಿಯಾಗಿ ಅಲ್ಲ. ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ, ಆದರೆ ದಲಿತ ಸಮುದಾಯದ ದೇವಾಲಯಗಳು ಮತ್ತು ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಮಾತ್ರ ದೇಶಾದ್ಯಂತ ಏಕೆ ನೆಲಸಮ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕು?” ಎಂದಿದ್ದಾರೆ.

ದೇವಸ್ಥಾನ ಉಳಿಸುವುದು ಪ್ರಧಾನಿಯವರ ಜವಾಬ್ದಾರಿ: ಚಂದ್ರಶೇಖರ್ ಅಜಾದ್ ರಾವಣ್

ತುಘಲಕಾಬಾದ್‌ನ 600 ವರ್ಷಗಳ ಹಿಂದಿನ ರಾಜ ಸಿಖಂದರ್ ಲೋಧಿ ಅವರು ದಲಿತ ಸಮುದಾಯಕ್ಕೆ ಸೇರಿದ ಭಕ್ತಿ ಚಳವಳಿಯಲ್ಲಿ ಹೆಸರು ಮಾಡಿರುವ ಗುರು ರವಿದಾಸ್ ಅವರಿಗೆ ಈ ಭೂಮಿಯನ್ನು ನೀಡಿದ್ದರು. ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರಿಂದ ಅದು ದಲಿತರ ಭೂಮಿ ಆಗಿತ್ತು. ಆದರೆ 2011 ರಲ್ಲಿ ಡಿಡಿಎ ಅವರು ಕೋರ್ಟ್‍ನಲ್ಲಿ ದಾವೆ ಹೂಡಿ ಕೇಸ್ ಗೆದ್ದು 2019 ರ ಆಗಸ್ಟ್ 10 ರಂದು ಆ ಜಾಗವನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಿದ್ದಾರೆ. ಅಲ್ಲಿದ್ದ ರವಿದಾಸ್ ದೇವಾಲಯವನ್ನು ಕೆಡವಿದ್ದಾರೆ. ದಲಿತರ ಭೂಮಿಯನ್ನು ಸರ್ಕಾರದ ಭೂಮಿ ಎಂದು ಹೇಳಿ ದಲಿತರ ಮೇಲೆ ದಮನವನ್ನು ಮಾಡಲಾಗುತ್ತಿದೆ. ದೇಶದ ಕೊನೆ ವ್ಯಕ್ತಿಯ ಘನತೆಯ ಜೀವನದ ಜವಾಬ್ದಾರಿಯು ಪ್ರಧಾನ ಮಂತ್ರಿಗಳ ಮೇಲೆ ಮತ್ತು ಮುಖ್ಯಮಂತ್ರಿಗಳ ಮೇಲೆ ಇರುತ್ತದೆ. ಈ ದೇವಾಸ್ಥಾನ ಉಳಿಸುವುದು ಪ್ರಧಾನಿಯವರ ಕರ್ತವ್ಯ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮತ್ತು ಕೇಂದ್ರ ಮಾಜಿ ಸಚಿವ ವಿಜಯ್ ಗೋಯೆಲ್ ಅವರು ಆಮ್ ಆದ್ಮಿ ಪಕ್ಷವು ಈ ವಿಷಯವನ್ನು ರಾಜಕೀಯಗೊಳಿಸಿದ್ದಾರೆ ಎಂದು ಟೀಕಿಸಿದ್ದಾರೆ. ‘ಇತ್ತೀಚೆಗೆ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಅವರಿಗೆ ಪರಿಹಾರವನ್ನು ನೀಡಿದ್ದೇನೆ ಎಂದಿದ್ದಾರೆ’. “ಸುಪ್ರೀಂ ಕೋರ್ಟ್ ಅನುಮೋದನೆಯ ನಂತರ ದೇವಾಲಯವನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಿಸಬೇಕೆಂದು ನಾನು ಪ್ರಸ್ತಾಪಿಸಿದ್ದೇನೆ. ಅವರು ಒಪ್ಪಿದರೆ, ನಾವು ಈ ವಿಷಯವನ್ನು ಡಿಡಿಎಯೊಂದಿಗೆ ಚರ್ಚಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.

ಈ ದೇವಾಲಯದ ಆಂದೋಲನಕ್ಕಾಗಿ ರೂಪುಗೊಂಡ ದಲಿತ ಗುಂಪುಗಳ ಸಂಸ್ಥೆಯಾದ ‘ಅಖಿಲ ಭಾರತೀಯ ಸಂತ ಶಿರೋಮಣಿ ಗುರು ರವಿದಾಸ್ ಮಂದಿರ ಸನ್ಯುಕ್ತಾ ಸನ್ರಕ್ಷಣ್ ಸಮಿತಿಯ ಬ್ಯಾನರ್ ಅಡಿಯಲ್ಲಿ ಒಟ್ಟುಗೂಡಿದ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದರು. ಕೆಲವರು ರಾಮ್‌ಲೀಲಾ ಮೈದಾನದಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಪಂಜಾಬ್‌ನ ಜಲಂಧರ್‌ನಿಂದ ದೆಹಲಿಗೆ ಪ್ರಯಾಣಿಸಿದ ಹನ್ಸರಾಜ್ ರಾಜ್, “ನಮ್ಮ ಬೇಡಿಕೆ ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಿಂತ ಹೇಗೆ ಭಿನ್ನವಾಗಿದೆ? ಆ ನಿರ್ದಿಷ್ಟ ಸಮುದಾಯಕ್ಕೆ ಅದು ತುಂಬಾ ಮುಖ್ಯವಾಗಿದ್ದರೆ, ಇದು ಸಹ ನಮಗೆ ಮುಖ್ಯವಾಗಿದೆ” ಎಂದಿದ್ದಾರೆ.

ಸರ್ಕಾರ ಮತ್ತು ಅರಣ್ಯ ಭೂಮಿಯಲ್ಲಿ ಹಲವು ಧರ್ಮದ ಸಾವಿರಾರು ದೇವಾಲಯಗಳಿವೆ. ಆದರೆ “ಸಂತ ರವಿದಾಸ್ ದೇವಾಲಯವನ್ನು ಮಾತ್ರ ಏಕೆ ಧ್ವಂಸಗೊಳಿಸಲಾಯಿತು? ಇದಕ್ಕೆ ಸರ್ಕಾರ ಉತ್ತರಿಸಬೇಕು” ಎಂದು ಎಂದು ಗಾಜಿಯಾಬಾದ್‌ನ ವಿ.ಪಿ.ಸಿಂಗ್ (60) ಹೇಳಿದ್ದಾರೆ.

30 ವರ್ಷದ ಸೋನು ಮಾತನಾಡಿ “ಅವರು ದೇವಾಲಯವನ್ನು ಪರ್ಯಾಯ ಸ್ಥಳದಲ್ಲಿ ನಿರ್ಮಿಸುತ್ತೀವೆ ಎನ್ನುತ್ತಿದ್ದಾರೆ. ಆದರೆ ಅವರು ರಾಮ ಮಂದಿರವನ್ನೇಕೆ ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದಿಲ್ಲ? ಎಲ್ಲವೂ ಕಣ್ಣು ಮಿಟುಕಿಸುವುದರಲ್ಲಿ ಸಂಭವಿಸಿದೆ. ನಾವು ಭಾರತದ ಪ್ರಜೆಗಳಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ದಲಿತರ ಅಭಿಪ್ರಾಯಗಳನ್ನು ಪರಿಗಣಿಸದೆ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ದುರ್ಬಲಗೊಳಿಸಿದೆ ಎಂದು ಮತ್ತೊಬ್ಬ ಪ್ರತಿಭಟನಾಕಾರ ಆರೋಪಿಸಿದರು.

ಸುಪ್ರೀಂ ಕೋರ್ಟ್ ಏನು ಹೇಳಿದೆ?
ರವಿದಾಸ್ ದೇವಾಲಯದ ವಿಷಯದಲ್ಲಿ ತನ್ನ ಆದೇಶಗಳಿಗೆ “ರಾಜಕೀಯ ಬಣ್ಣ” ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆಗಸ್ಟ್ 19 ರ ಸೋಮವಾರ ಹೇಳಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ನ್ಯಾಯಪೀಠವು ಪಂಜಾಬ್, ಹರಿಯಾಣ ಮತ್ತು ದೆಹಲಿ ಸರ್ಕಾರಗಳಿಗೆ, ಈ ವಿಚಾರವಾಗಿ ಯಾವುದೇ ಪ್ರತಿಭಟನೆ ನಡೆದರೆ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಡದಂತೆ ಮತ್ತು  ರಾಜಕೀಯ ಇರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಯಾರ ಭಕ್ತಿಗೂ ಯಾರಿಂದನೂ ಅಡ್ಡಿಯಾಗಬಾರದು ಅವರವರ ಹಕ್ಕು ಅವರವರಿಗೆ ದೊರಕಬೇಕು

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...