ದೇಶಾದ್ಯಂತ ಹಿಂದಿ ಭಾಷೆಯನ್ನು ಹೇರುವ ಒಕ್ಕೂಟ ಸರ್ಕಾರದ ಪ್ರಯತ್ನಗಳ ವಿರುದ್ಧ ಪ್ರತಿಭಟಿಸಿ, ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತಮಿಳುನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಿದೆ. ಪಕ್ಷದ ಸಂಸದರು, ಶಾಸಕರು ಸೇರಿದಂತೆ ಪ್ರಮುಖ ನಾಯಕರು ಮತ್ತು ನೂರಾರು ಕಾರ್ಯಕರ್ತರು ರಾಜ್ಯಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ಉಪಸ್ಥಿತರಿದ್ದರು.
ವಳ್ಳುವರ್ ಕೊಟ್ಟಂನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಮತ್ತು ಚೆಪಾಕ್-ಟ್ರಿಪ್ಲಿಕೇನ್ ಶಾಸಕ ಉದಯನಿಧಿ ಸ್ಟಾಲಿನ್, ‘‘ಹಿಂದಿ ಹೇರುವ ಇಂತಹ ಪ್ರಯತ್ನಗಳು ಮುಂದುವರಿದರೆ, ನಾವು ದೆಹಲಿಯಲ್ಲಿ ಪ್ರಧಾನಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಿಜೆಪಿ ಸರ್ಕಾರದ ‘ಒಂದು ರಾಷ್ಟ್ರ ಒಂದು ಭಾಷೆ’ ಅಜೆಂಡಾದ ವಿರುದ್ಧ ಘೋಷಣೆಗಳನ್ನು ಕೂಗಿದ ಉದಯನಿಧಿ ಸ್ಟಾಲಿನ್, ಪ್ರತಿಭಟನೆಯನ್ನು 2024 ರ ಸಾರ್ವತ್ರಿಕ ಚುನಾವಣೆಯ ಆರಂಭ ಎಂದು ಕರೆದಿದ್ದಾರೆ.
ಇದನ್ನೂ ಓದಿ: ಬೋಧನಾ ಮಾಧ್ಯಮವಾಗಿ ಹಿಂದಿ ಹೇರಿಕೆ; ದಕ್ಷಿಣದ ರಾಜ್ಯಗಳು ಪ್ರತಿಭಟನೆ ನಡೆಸುತ್ತಿದ್ದರೂ ಒಕ್ಕೂಟ ಸರ್ಕಾರ ಮೌನ!
2019 ರ ಚುನಾವಣೆಯಲ್ಲಿ ತಮಿಳುನಾಡಿನ ಜನರು ಮಾಡಿದಂತೆಯೇ 2024 ರಲ್ಲಿ ಆಡಳಿತಾರೂಢ ಬಿಜೆಪಿಯನ್ನು ದೇಶದ ಜನರು ವಿಫಲಗೊಳಿಸುತ್ತಾರೆ ಎಂದು ಅವರು ಹೇಳಿದ್ದು, ಹಿಂದಿ ಹೇರಿಕೆಯ ವಿರುದ್ಧ ಡಿಎಂಕೆ ಯಾವಾಗಲೂ ಧ್ವನಿ ಎತ್ತುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ದೇಶಾದ್ಯಂತ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕಾಗಿ ಮೋದಿ ನೇತೃತ್ವದ ಸರ್ಕಾರ ಹಲವಾರು ಬಾರಿ ಟೀಕೆಗೆ ಒಳಗಾಗಿದೆ. ಇತ್ತೀಚೆಗೆ, ಅಧಿಕೃತ ಭಾಷೆಗಳ ಸಂಸತ್ತಿನ ಸಮಿತಿಯು ತನ್ನ 11 ನೇ ವರದಿಯಲ್ಲಿ, ದೇಶಾದ್ಯಂತ ಎಲ್ಲಾ ತಾಂತ್ರಿಕೇತರ ಮತ್ತು ತಾಂತ್ರಿಕ ಕಾಲೇಜುಗಳು ಮತ್ತು ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ಕಡ್ಡಾಯ ಬೋಧನಾ ಮಾಧ್ಯಮವನ್ನಾಗಿ ಮಾಡಬೇಕೆಂದು ಶಿಫಾರಸು ಮಾಡಿತ್ತು. ಅನೇಕ ಡಿಎಂಕೆ ನಾಯಕರು ಮತ್ತು ಸಚಿವರು ಈ ಕ್ರಮವನ್ನು ಖಂಡಿಸಿದ್ದರು.
நாங்கள் எப்போதும் சொல்லும் ஒரே வார்த்தை… #இந்தி_தெரியாது_போடா
தமிழ்நாடு முழங்க…
டெல்லி குலுங்க…தமிழையும் தமிழினத்தையும் காக்க; மீண்டுமொரு இந்தி எதிர்ப்பு போர்!
@Udhaystalin @TRBRajaa@EzhilarasanCvmp @DMKITwing@DMKITwing @dmk_youthwing#StopHindiImposition pic.twitter.com/lt6MJvdeLr— Dr A K Tharun (@drtharun) October 15, 2022
“ಭಾರತೀಯ ಒಕ್ಕೂಟದ ಸಾರ್ವಭೌಮತ್ವವು ಅದರ ಬಹುತ್ವದಲ್ಲಿ ಬೇರೂರಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರತಿಯೊಂದಕ್ಕೂ ಏಕತ್ವವನ್ನು ಹೇರಲು ಪ್ರಯತ್ನಿಸುವುದು ಪ್ರಜಾಪ್ರಭುತ್ವದ ಮನೋಭಾವಕ್ಕೆ ವಿರುದ್ಧವಾಗಿದೆ” ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಕನಿಮೊಳಿ ಅಕ್ಟೋಬರ್ 9 ರಂದು ಹೇಳಿದ್ದರು.
ಇದನ್ನೂ ಓದಿ: ಶಿಕ್ಷಣ ಮಾಧ್ಯಮದಲ್ಲಿ ಹಿಂದಿ ಹೇರಿಕೆ: ಕೇಂದ್ರದ ನಡೆ ವಿರೋಧಿಸಿದ ಸ್ಟಾಲಿನ್ ಜೊತೆಗೂಡಿದ ಕೇರಳ ಸಿಎಂ
ಅಕ್ಟೋಬರ್ 10 ರಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ ಎಂದು ಸೂಚಿಸಿದ್ದರು. “ಬಿಜೆಪಿ ಸರ್ಕಾರವು ‘ಒಂದು ರಾಷ್ಟ್ರ’ ಎಂಬ ನೆಪದಲ್ಲಿ ಜನರ ಮೇಲೆ ಒಂದು ಭಾಷೆ, ಒಂದು ಧರ್ಮ ಮತ್ತು ಒಂದು ಸಂಸ್ಕೃತಿಯನ್ನು ಹೇರುವ ಮೂಲಕ ವೈವಿಧ್ಯತೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಇದು ಭಾರತದ ವೈವಿಧ್ಯಮಯ ಸಂಸ್ಕೃತಿಗೆ ಅಪಾಯವಾಗಿದೆ” ಎಂದು ಅವರು ಹೇಳಿದ್ದರು.
ಸರ್ಕಾರಿ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡದಿದ್ದರೆ ಎಚ್ಚರಿಕೆ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ. ಇತರ ಭಾಷೆಗಳಿಗಿಂತ ಹಿಂದಿಗೆ ನೀಡಲಾದ ಈ ಆದ್ಯತೆಯು ಅಸಾಂವಿಧಾನಿಕವಾಗಿದೆ ಮತ್ತು ಅಂತಹ ಕ್ರಮವು ರಾಷ್ಟ್ರದ ಸಮಗ್ರತೆಗೆ ಬೆದರಿಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
இந்தி திணிப்பு-ஒரே தேர்வு என பாசிசம் விதைக்கும் ஒன்றிய அரசை கண்டித்து,தலைவர் @mkstalin உத்தரவில், @dmk_youthwing-மாணவரணி சார்பில் சென்னை வள்ளுவர் கோட்டம் அருகே இன்று நடைபெற்ற ஆர்ப்பாட்டத்தில் இளைஞர்கள் கூடி இந்தி திணிப்பை என்றும் எதிர்ப்போம் என முழங்கினோம். #StopHindiImposition pic.twitter.com/0G8zSgScXz
— Udhay (@Udhaystalin) October 15, 2022
ಹಿಂದಿ ಹೇರಿಕೆಯನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಡಿಎಂಕೆ ಪಕ್ಷದ ಯುವ ಮತ್ತು ವಿದ್ಯಾರ್ಥಿ ಘಟಕಗಳು, “ಐಐಟಿ, ಐಐಎಂ ಮತ್ತು ಎಐಐಎಂಎಸ್‌ನಂತಹ ಕೇಂದ್ರೀಯ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡುವ ನಿರ್ಧಾರವು ಹಿಂದಿಯೇತರ ರಾಜ್ಯಗಳ ಭಾವನೆಗೆ ವಿರುದ್ಧವಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ. ಸಾಮಾನ್ಯ ಪ್ರವೇಶ ಪರೀಕ್ಷೆಯು ಹಿಂದಿಯೇತರ ಅಭ್ಯರ್ಥಿಗಳ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂದು ಅದು ಆರೋಪಿಸಿವೆ.
ಇದನ್ನೂ ಓದಿ: ಹಿಂದಿಯೊಂದನ್ನೆ ರಾಷ್ಟ್ರಭಾಷೆ ಮಾಡಲು ಸಾಧ್ಯವಿಲ್ಲ: ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ರಾಹುಲ್ ಗಾಂಧಿ
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ, “ಪಕ್ಷವು ಹಿಂದಿ ಭಾಷೆಯ ಹೇರಿಕೆಯ ವಿರುದ್ಧ ಇದ್ದು, ಹಿಂದಿ ಭಾಷೆಯ ವಿರುದ್ಧ ಅಲ್ಲ. ಭಾಷಾ ಹೇರಿಕೆಯ ವಿರುದ್ಧ ಮಾತ್ರ ಪಕ್ಷ ಧ್ವನಿ ಎತ್ತುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
#StopHindiImposition 🔥 pic.twitter.com/xv39EecPvn
— Dr. T R B Rajaa (@TRBRajaa) October 15, 2022


