Homeಮುಖಪುಟಪಂಜಾಬ್‌: ಪಾರ್ಕ್‌ನಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿಯರಿಗೆ ಥಳಿಸಿದ ಮಹಿಳಾ ಪೊಲೀಸರು; ನೆಟ್ಟಿಗರ ಖಂಡನೆ

ಪಂಜಾಬ್‌: ಪಾರ್ಕ್‌ನಲ್ಲಿ ಕುಳಿತ್ತಿದ್ದ ವಿದ್ಯಾರ್ಥಿನಿಯರಿಗೆ ಥಳಿಸಿದ ಮಹಿಳಾ ಪೊಲೀಸರು; ನೆಟ್ಟಿಗರ ಖಂಡನೆ

- Advertisement -
- Advertisement -

ಪಂಜಾಬ್‌ನ ಇಬ್ಬರು ಮಹಿಳಾ ಪೊಲೀಸರು ಪಾರ್ಕ್‌ನಲ್ಲಿ ಕುಳಿತಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಥಳಿಸಿದ ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನ್‌ಸ್ಟೆಬಲ್‌ಗಳು ಕಪಾಳಮೋಕ್ಷ ಮಾಡುವುದು, ಗದರಿಸುವುದು ಮತ್ತು ವಿದ್ಯಾರ್ಥಿಗಳ ಫೋನ್‌ಗಳನ್ನು ಕಸಿದುಕೊಳ್ಳುವುದನ್ನು ವಿಡಿಯೊ ತುಣುಕಿನಲ್ಲಿ ಕಾಣಬಹುದು. ನಿಮ್ಮ ಪೋಷಕರಿಗೆ ಕರೆ ಮಾಡಿ ಎಂದು ಪೊಲೀಸರು ಹೆದರಿಸುವುದನ್ನು ನೋಡಬಹುದು.

ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ಪತ್ರಕರ್ತ ಗಗನ್‌ದೀಪ್ ಸಿಂಗ್ ಅವರು ಪೊಲೀಸರನ್ನು ಪ್ರಶ್ನಿಸಿದರು ಹಾಗೂ ಅವರ ಕ್ರಮಗಳನ್ನು ಟೀಕಿಸಿದರು.

ಅವರು ಅಪ್‌ಲೋಡ್ ಮಾಡಿದ ಮತ್ತೊಂದು ವೀಡಿಯೊದಲ್ಲಿ, ಸ್ಥಳೀಯ ನಿವಾಸಿಗಳಿಂದ ಬಂದ ದೂರುಗಳ ಆಧಾರದಲ್ಲಿ ಕಾರ್ಯನಿರ್ವಹಿಸಿರುವುದಾಗಿ ಪೊಲೀಸರು ತಮ್ಮ ಕ್ರಮಗಳನ್ನು ಸಮರ್ಥಿಸಿಕೊಳ್ಳುವುದನ್ನು ಕಾಣಬಹುದು.

‘“ವಿದ್ಯಾರ್ಥಿಗಳು ತಮ್ಮ ಪೋಷಕರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ, ಕಾಲೇಜಿಗೆ ಹೋಗುತ್ತಿಲ್ಲ. ತರಗತಿಗೆ ಗೈರು ಹಾಜರಾಗಿ ಪಾರ್ಕ್‌ಗಳಲ್ಲಿ ಕುಳಿತುಕೊಳ್ಳುತ್ತಾರೆ” ಎಂದು ಪೊಲೀಸರು ದೂರಿದ್ದಾರೆ.

“ಯುವಕರು ಉದ್ಯಾನವನಗಳಿಗೆ ಬಂದು ಕೆಟ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಹಾಗಾಗಿ ಪಾರ್ಕ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಕಂಡು ಮೊದಲು ಸಮಾಧಾನದಿಂದ ತಿಳಿಸಿ ಹೇಳಲು ಯತ್ನಿಸಿದರೂ ವಿದ್ಯಾರ್ಥಿಗಳು ಕಿವಿಗೊಡದೇ ಇದ್ದಾಗ ಈ ಕ್ರಮಕ್ಕೆ ಮುಂದಾಗಬೇಕಾಯಿತು” ಎಂದು ತಮ್ಮ ಮಾರಲ್‌ ಪೊಲೀಸಿಂಗ್ಅನ್ನು ಸಮರ್ಥಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿರುವ ಪೊಲೀಸ್ ಅಧಿಕಾರಿಗಳು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ವಿಡಿಯೋ ವೈರಲ್ ಆದ ನಂತರ ವಿವಾದ ಸೃಷ್ಟಿಸಿದ ಪೊಲೀಸರನ್ನು ಸರ್ಕಾರ ವರ್ಗಾಯಿಸಿದೆ ಮತ್ತು ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಯುವಜನರಿಗೆ ಪೊಲೀಸರು ಕಿರುಕುಳ ನೀಡಿದ್ದನ್ನು ಹಲವು ನೆಟ್ಟಿಗರು ಟೀಕಿಸಿದ್ದಾರೆ. ಸರಿಯಾದ ಕ್ರಮವನ್ನು ಅನುಸರಿಸುವ ಬದಲು ಮಾರಲ್ ಪೊಲೀಸಿಂಗ್ ಮಾಡಿರುವುದನ್ನು ಖಂಡಿಸಿದ್ದಾರೆ.

ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ, “ವಿಷಯದ ಕುರಿತು ಗಮನ ಹರಿಸಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಲಾಗಿದೆ” ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್: ಎನ್‌ಡಿಎ ಮೈತ್ರಿ ಪಕ್ಷದ ನಾಯಕ ರಾಜೀನಾಮೆ

0
ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬಿಜೆಪಿಯ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರ ಪುತ್ರನಿಗೆ ಟಿಕೆಟ್ ನೀಡಿದ ಬೆನ್ನಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿ ಎನ್‌ಡಿಎ ಮೈತ್ರಿ ಪಕ್ಷ ಆರ್‌ಎಲ್‌ಡಿಯ ರಾಷ್ಟ್ರೀಯ ವಕ್ತಾರ ರೋಹಿತ್...