ಬಿಜೆಪಿಯ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು, 500 ಮತ್ತು 1000 ರೂ. ಮುಖಬೆಲೆ ನೋಟ್ ಬ್ಯಾನ್ ಮಾಡಿ ಐದು ವರ್ಷ ತುಂಬಿದೆ. ಈ ವೇಳೆ ಬಿಡುಗಡೆಯಾದ 2000 ರೂ. ಮುಖಬೆಲೆ ನೋಟಿನಲ್ಲಿ ‘ಮೈಕ್ರೋ ನ್ಯಾನೋ’ ಚಿಪ್ ಇದ್ದು, ಅದನ್ನು ಎಲ್ಲಿ ಬಚ್ಚಿಟ್ಟರೂ ಉಪಗ್ರಹದ ಮೂಲಕ ಕಂಡು ಹಿಡಿಯಬಹುದು ಎಂಬ ಸುಳ್ಳು ಸುದ್ದಿಯನ್ನು ಕೆಲವು ರಾಷ್ಟ್ರೀಯ ವಾಹಿನಿ ಸಹಿತ ರಾಜ್ಯದ ‘ಪಬ್ಲಿಕ್ ಟಿವಿ’ ಕೂಡಾ ವರದಿ ಮಾಡಿತ್ತು.
2000 ರೂ. ನೋಟಿನಲ್ಲಿ ಚಿಪ್ ಇರುವ ವರದಿಯ ಬಗ್ಗೆ ಸ್ವತಃ ಆರ್‌ಬಿಐ ಸ್ಪಷ್ಟನೆ ನೀಡಿ ಈ ರೀತಿ ಯಾವುದೆ ಚಿಪ್ 2000 ರೂ ನೋಟಿನಲ್ಲಿ ಇಲ್ಲ ಎಂದು ಹೇಳಿತ್ತು. ಇದರ ನಂತರವು ಮಾಧ್ಯಮಗಳು ಚಿಪ್ ಇರುವುನ್ನೇ ವರದಿ ಮಾಡಿ ಜನರ ದಿಕ್ಕು ತಪ್ಪಿಸಿದ್ದವು.
ಇದನ್ನೂ ಓದಿ: ನೋಟ್ ಬ್ಯಾನ್ ದುರಂತಕ್ಕೆ 5 ವರ್ಷ: ದೇಶ ಮರೆಯಬಾರದ ಚಿತ್ರಗಳಿವು!
ಕನ್ನಡದ ಸುದ್ದಿ ವಾಹಿನಿಯಾದ ‘ಪಬ್ಲಿಕ್ ಟಿವಿ’ ಕೂಡಾ ಈ ಸುಳ್ಳು ಸುದ್ದಿಯನ್ನು ವರದಿ ಮಾಡಿತ್ತು. ಅದರಲ್ಲೂ ಈ ಸುದ್ದಿಯನ್ನು ವಾಹಿನಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರೇ ಮಾಡಿದ್ದರು. ಈ ವರದಿಯ ನಂತರ ಪ್ರತಿ ವರ್ಷ ನವೆಂಬರ್ ಎರಡನೆ ವಾರ ಈ ವಿಡಿಯೊ ಸಾಮಾಜಿಕ ಜಾಲತಾಣದಗಳಲ್ಲಿ ಹರಿದಾಡಿ ಪಬ್ಲಿಕ್ ಟಿವಿ ಮತ್ತು ಅದರ ಮುಖ್ಯಸ್ಥ ರಂಗನಾಥ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ರಾಷ್ಟೀಯ "ಚಿಪ್" ದಿನದ ಶುಭಾಶಯಗಳು!#ಚಿಪ್ಪುದಿನpic.twitter.com/VpRBdxz6X2
— Prathap ಕಣಗಾಲ್ (@Kanagalogy) November 8, 2020
ಆದರೆ ಈ ಬಾರಿ ಪಬ್ಲಿಕ್ ಟಿವಿಯ ನಿರೂಪಕ ‘ಅರುಣ್ ಸಿ ಬಡಿಗೇರ್’ ಅವರ ಹೆಸರಿನ ಟ್ವಿಟರ್ ಖಾತೆಯೊಂದರ ಟ್ವೀಟ್ ಭಾರಿ ಸದ್ದು ಮಾಡಿದೆ. ಅದರಲ್ಲಿ, ಐದು ವರ್ಷಗಳ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ 2000 ರೂ ಮುಖಬೆಲೆ ನೋಟಿನಲ್ಲಿನ ‘ಚಿಪ್’ ವಿಚಾರಗಳನ್ನು ಬರೆಯಲಾಗಿದೆ.
ಇದನ್ನೂ ಓದಿ: ನೋಟ್ ಬ್ಯಾನ್‌ಗೆ 5 ವರ್ಷ: ಮೋದಿ ನೇತೃತ್ವದ BJP ಸರ್ಕಾರ ಅಂದು ಹೇಳಿದ್ದೇನು? ಈಗ ಆಗಿದ್ದೇನು?
ನವೆಂಬರ್ 8 ರಂದು ಮಾಡಲಾಗಿರುವ ಟ್ವೀಟ್‌ನಲ್ಲಿ, “ಇಂದು ಡಿಮಾನಟೈಜ್ ದಿನ ನನ್ನ ಹಿರಿಯ ಸಹೋದ್ಯೋಗಿ ರಂಗಣ್ಣನವರ ಚಿಪ್ ವೀಡಿಯೋ ಬಗ್ಗೆ ವಿವರಣೆ ನೀಡಲು ಬಯಸುತ್ತೇನೆ. ವಾಸ್ತವವಾಗಿ ಚಿಪ್ ಹುಟ್ಟುಕೊಂಡಿದ್ದು ಒಂದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪಲ್ಲಿ. ಅದರಲ್ಲಿ ಸಂಸದರು, ಹಿರಿಯ ಪತ್ರಕರ್ತ ಮಿತ್ರರು ಎಲ್ಲರೂ ಇದ್ದರು. ರಾಜೀವ್ ಚಂದ್ರಶೇಖರ್ ಮೊದಲು ಈ ವಿಷಯ ಪ್ರಸ್ತಾಪ ಮಾಡಿದರು ತದನಂತರ ವಿಶ್ವೇಶ್ವರಭಟ್ ಇದನ್ನು ಪುಷ್ಟಿಕರಿಸಿ ನ್ಯಾಷನಲ್ ಮೀಡಿಯಾ ಬಿತ್ತರಿಸಲಾಗಿದೆ ಎಂದರು.”
“ಮೊದಲು ಇದನ್ನು ಅಜಿತ್ ಹನುಮಕ್ಕನವರ್ ಹೇಳಲಿ ಎಂದು ಚರ್ಚೆ ಆಯಿತು. ಆದರೆ ಅವರ ಕಾರ್ಯಕ್ರಮ ಎಡಿಟಿಂಗ್ ಮುಗಿದಿತ್ತು. ಹಾಗಾಗಿ ರಂಗಣ್ಣನವರ ಹೆಗಲಿಗೆ ಈ ಜವಾಬ್ದಾರಿ ಕೊಡಲಾಯಿತು. ಆಡಳಿತ ಪಕ್ಷದ ನಂಬಲಾರ್ಹ ಮೂಲಗಳಿಂದ ಬಂದಿದ್ದರಿಂದ ರಂಗಣ್ಣ ಸುದ್ದಿ ಆಳಕ್ಕೆ ಹೋಗದೆ ಎಡವಟ್ಟು ಮಾಡಿಕೊಂಡರು!!” ಎಂದು ಟ್ವೀಟ್ ಮಾಡಲಾಗಿದೆ.
ಇದನ್ನು ಪುಷ್ಟಿಕರಿಸಿ ನ್ಯಾಷನಲ್ ಮೀಡಿಯಾ ಬಿತ್ತರಿಸಲಾಗಿದೆ ಎಂದರು ಮೊದಲು ಇದನ್ನು @JurnoAjit ಹೇಳಲಿ ಎಂದು ಚರ್ಚೆ ಆಯಿತು ಆದರೆ ಅವರ ಕಾರ್ಯಕ್ರಮ ಎಡಿಟಿಂಗ್ ಮುಗಿದಿತ್ತು ಹಾಗಾಗಿ ರಂಗಣ್ಣನವರ ಹೆಗಲಿಗೆ ಈ ಜವಾಬ್ದಾರಿ ಕೊಡಲಾಯಿತು ಆಡಳಿತ ಪಕ್ಷದ ನಂಬಲಾರ್ಹ ಮೂಲಗಳಿಂದ ಬಂದಿದ್ದರಿಂದ ರಂಗಣ್ಣ ಸುದ್ದಿ ಆಳಕ್ಕೆ ಹೋಗದೆ ಎಡವಟ್ಟು ಮಾಡಿಕೊಂಡರು!!?
— Arun C badiger (@badiger_aruna) November 8, 2021
ಈ ಟ್ವೀಟ್ ಆಗುತ್ತಿದ್ದಂತೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದು, ವೈರಲ್ ಆಗಿದೆ. ಹಲವಾರು ಜನರು ಪಬ್ಲಿಕ್ ಟಿವಿ ಮತ್ತು ಅರುಣ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಚಿಕೆಗೇಡಿನ ವಿವೇಕ ರಹಿತ
ಸಮಜಾಯಿಷಿ…. https://t.co/e93kEi6ZRC— ಮಂಜುನಾಥ್ ಜವರನಹಳ್ಳಿ (@manjujb1) November 9, 2021
ತಪ್ಪಿಲ್ಲಾ ಬಿಡಿ…ಈಗ ದೇಶ ನಡೆಯುತ್ತಿರುವುದೇ WhatsApp University ಪದವೀಧರರಿಂದಲೇ ಅಲ್ಲವೆ ? https://t.co/9EjnPcM1m0
— ಸುರೇಶ್ ಬನ್ವೆ | Suresh Banve (@Iamsureshmysuru) November 9, 2021
ಇದನ್ನೂ ಓದಿ: ನೋಟ್‌ಬ್ಯಾನ್ ಪರಿಣಾಮ ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ: ಮನಮೋಹನ್ ಸಿಂಗ್
ಸರಿ ನಿಮ್ಮ ವಿವೇಚನೆ ಎಲ್ಲಿ ಹೋಗಿತ್ತು. ಒಂದು ಪಕ್ಷದ whatsapp ಗ್ರೂಪಲ್ಲಿ ನಿಮಿಗೇನು ಕೆಲಸ. BJP agent. https://t.co/PQ09p2Arci
— ನಿರುತ್ತರ (@niruttaraVK) November 9, 2021
ಅಮಾಯಕ ಬಡಿಗೇರ ಎರಡು ವಿಷಯಗಳನ್ನು ಒಪ್ಪಿಕೊಂಡಿದ್ದಾನೆ. ಮೊದಲನೆಯದ್ದು ಇವರೆಲ್ಲರ ಸುದ್ದಿಯ ಮೂಲ ವಾಟ್ಸಾಪ್ ಹಾಗೂ ಆಡಳಿತ ಪಕ್ಷವೆಂದು. ಎರಡನೆಯದೆಂದರೆ ಈ ಪತ್ರ-ಕುತ್ತರು ಬಿಜೆಪಿ ಪಕ್ಷದ ವಾಟ್ಸಾಪ್ ಗ್ರೂಪ್ ನ ಸಕ್ರಿಯ ಸದಸ್ಯರೆನ್ನುವುದು. https://t.co/o05XWctRFW
— Ajay Raj (@AjayByrathi) November 9, 2021
ಟೊಳ್ಳು ಪೊಳ್ಳು ಕಾರಣ ಕೊಡಬೇಡಿ ಸಾರ್ ಆಡಳಿತ ಪಕ್ಷವನ್ನು ಮೆಚ್ಚಿಸಲು ಹೀಗೆ ಮಾಡಿದ್ವಿ ಅಂತ ನೇರವಾಗಿ ಹೇಳಿ https://t.co/5ikpBX0U6u
— Lingaraj Savajji (@Lsavajji) November 8, 2021
ಎಲ್ಲಿಂದ ನಗಬೇಕೋ ಗೊತ್ತಾಗ್ತಿಲ್ಲ…
ನೀವೋ ನಿಮ್ಮ ಸುದ್ದಿ ಸುದ್ದಿ ಮೂಲ ವಾಟ್ಸಪ್ಪ್ ಗ್ರೂಪ್ , ಅದಕ್ ಒಂದು ಪಕ್ಷ ಚಲೋ ಐತ್ರಿ ಸಾರ್ ಎಲ್ಲಾ ಮಾರ್ಕೊಂಡು ಬರೇ ಬೆತ್ತಲೆ ಆಗಿದ್ದೀರಾ 2014 ರಿಂದ್ ಸುದ್ದಿ ಮಾಧ್ಯಮ ಅಯ್ಯೋ ಕರ್ಮ ವೇ. ನಿಮಗ್ ಒಂದು ದೊಡ್ಡ ದೊಡ್ಡ, ? https://t.co/9mAwY9pVcY— ಸಿದ್ದು (@ReachPSM) November 8, 2021
ಈ ಟ್ವೀಟ್ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಪಬ್ಲಿಕ್ ಟಿವಿ ನಿರೂಪಕ ಅರಣ್ ಸಿ ಬಡಿಗೇರ್, “ಪ್ರಸ್ತುತ ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಟ್ವೀಟ್ ನನ್ನದಲ್ಲ. ಅದರ ಬಗ್ಗೆ ದೂರು ನೀಡಿದ್ದೇನೆ. ಬೇರೆ ಯಾರೋ ನಕಲಿ ಖಾತೆಯಲ್ಲಿ ಇದನ್ನು ಮಾಡಿದ್ದಾರೆ” ಎಂದು ಹೇಳಿದ್ದಾರೆ.
‘Arun C badiger’ ಎಂಬ ಹೆಸರಿನಲ್ಲಿ ಒಟ್ಟು ಮೂರು ಟ್ವಿಟರ್ ಖಾತೆಗಳಿವೆ. ಅವುಗಳಲ್ಲಿ ‘@BadigerArun’ ಎಂಬ ಹೆಸರಿನ ಪ್ರೋಫಲ್ ಇರುವ, ‘‘ಧಾರವಾಡ ಹುಡ್ಗ.. ಅನ್ಸಿದ್ದನ್ನ ನೇರವಾಗಿ ಹೇಳೋನು” ಎಂಬ ಬಯೋ ಇರುವ ಖಾತೆ ತನ್ನದು ಎಂದು ಅವರು ನಾನುಗೌರಿ.ಕಾಂಗೆ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅವರ ಅಸಲಿ ಟ್ವಿಟರ್ ಖಾತೆಯಲ್ಲೂ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.
ನನ್ನದೇ ಫೋಟೋ ಹಾಕಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ಇಂಥವರನ್ನ ಸುಮ್ನೆ ಬಿಡಬಾರದು. ಇವರ ಮೇಲೆ ಕ್ರಮ ಆಗಬೇಕು @BlrCityPolice @TwitterIndia @kspfactcheck pic.twitter.com/U55kEzw4Ea
— Arun C Badiger (@BadigerArun) November 9, 2021
ಇದನ್ನೂ ಓದಿ: ಏರುತ್ತ ಇಳಿಯುತ್ತ ಸಾಗುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ ಹಿಂದಿನ ಕಾರಣಗಳು


