Homeಮುಖಪುಟವಿಕೃತ ಲೈಂಗಿಕ ಸಂತೃಪ್ತಿಗಾಗಿ ಮಕ್ಕಳ ದುರ್ಬಳಕೆ: ಒಂದೇ ವಾರದಲ್ಲಿ 41 ಮಂದಿ ಬಂಧನ!

ವಿಕೃತ ಲೈಂಗಿಕ ಸಂತೃಪ್ತಿಗಾಗಿ ಮಕ್ಕಳ ದುರ್ಬಳಕೆ: ಒಂದೇ ವಾರದಲ್ಲಿ 41 ಮಂದಿ ಬಂಧನ!

ಮಕ್ಕಳ ಲೈಂಗಿಕ ದುರ್ಬಳಕೆ ವಸ್ತುಗಳಿಗೆ (CSAM - child sexual abuse material) ಆನ್‌ಲೈನ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆ ನಮ್ಮ ಸಮಾಜದ ಕೊಳಕು ಮನಸ್ಥಿತಿಯ ವಾಸ್ತವದ ರೂಪವಾಗಿದೆ.

- Advertisement -
- Advertisement -

ವಿಕೃತ ಲೈಂಗಿಕ ಸಂತೃಪ್ತಿಗಾಗಿ ಮಕ್ಕಳ ಮುಗ್ಧತೆಯನ್ನು ಬಳಸಿಕೊಳ್ಳುವ ಉದ್ಯಮವು ದಿನೇ-ದಿನೇ ಅಭಿವೃದ್ಧಿ ಹೊಂದುತ್ತಿದ್ದು, ಕೇರಳದಲ್ಲಿ ಇತ್ತೀಚಿಗೆ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳು ಮತ್ತು ಪೊಲೀಸರು ಮಾಡಿರುವ ಬಂಧನಗಳು ಅದನ್ನು ಸಾಬೀತುಪಡಿಸುತ್ತಿವೆ.

ಕಳೆದ ವಾರದ ಆರಂಭದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ತೆಗೆದ ಆರೋಪದಲ್ಲಿ 41 ಜನರನ್ನು ಬಂಧಿಸಲಾಯಿತು. ಕಳೆದ ಜೂನ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆಯಿಂದಾಗಿ 47 ಜನರನ್ನು ಬಂಧಿಸಲಾಗಿತ್ತು.

ಮಕ್ಕಳ ಲೈಂಗಿಕ ದುರ್ಬಳಕೆ ವಸ್ತುಗಳಿಗೆ (CSAM – child sexual abuse material) ಆನ್‌ಲೈನ್‌ನಲ್ಲಿ ಹೆಚ್ಚುತ್ತಿರುವ ಬೇಡಿಕೆ ನಮ್ಮ ಸಮಾಜದ ಕೊಳಕು ಮನಸ್ಥಿತಿಯ ವಾಸ್ತವದ ರೂಪವಾಗಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಈ ಮನಸ್ಥಿತಿ ನಿರ್ಮಾಣಕ್ಕೆ ಸಾಂಕ್ರಾಮಿಕ ರೋಗವನ್ನು ಒಳಗೊಂಡಿರುವಂತೆ ಲಾಕ್‌ಡೌನ್ ಹೇರಿರುವುದು ಕೂಡ ಕಾರಣವಾಗಿದೆ.

ಇದನ್ನೂ ಓದಿ: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಏಪ್ರಿಲ್ 2019 ರಿಂದ, ಕೇರಳ ಪೊಲೀಸರು ಸೈಬರ್‌ಸ್ಪೇಸ್‌ನಲ್ಲಿ ಅಡಗಿದ್ದ ಶಿಶುಕಾಮಿಗಳನ್ನು ಪತ್ತೆಹಚ್ಚಿ ಬಂಧಿಸಲು ಆಪರೇಷನ್ ಪಿ-ಹಂಟ್ ಶುರುಮಾಡಿದ್ದರು. ಈ ಆಪರೇಷನ್ ಪಿ-ಹಂಟ್‌ ಮೂಲಕ 124 ಜನರನ್ನು ಬಂಧಿಸಲಾಗಿದೆ.

ಆದರೆ ಮಕ್ಕಳ ಅಶ್ಲೀಲತೆಯ ವ್ಯಾಪಕ ಬಳಕೆಯಿಂದಾಗಿ ತನಿಖಾಧಿಕಾರಿಗಳು ಈ ದುಷ್ಕೃತ್ಯದ ಮೇಲ್ಮೈಯನ್ನು ಮಾತ್ರ ತಾಕಿದ್ದಾರೆ. ಬಂಧಿಸಲ್ಪಟ್ಟವರಲ್ಲಿ ಕೆಲವರು ಜಾಗತಿಕ ಮಕ್ಕಳ ಅಶ್ಲೀಲ ದಂಧೆಯ ಭಾಗವೆಂದು ಕಂಡುಬಂದಿದೆ. ಇವರು ಅಶ್ಲೀಲ ವಿಷಯಗಳನ್ನು ರಚಿಸುತ್ತಿದ್ದರು ಮತ್ತು ಅವುಗಳನ್ನು ಪೂರೈಸುತ್ತಿದ್ದರು.

ಮಕ್ಕಳ ಅಶ್ಲೀಲತೆಯನ್ನು ರೂಪಿಸುವುದನ್ನು ವ್ಯಾಖ್ಯಾನಿಸುವ CSAM ಅನ್ನು ಐಟಿ ಆಕ್ಟ್ 2000 ಮತ್ತು ಪೋಕ್ಸೊ ಆಕ್ಟ್ 2012 ಎರಡನ್ನೂ ಬಳಸಿಕೊಂಡು ವ್ಯವಹರಿಸಲು ಭಾರತ ಕಾನೂನು ಅವಕಾಶ ನೀಡಿದೆ. ಇನ್ನು ಸೈಬರ್‌ ಅಪರಾಧಿಗಳಿಗೆ ಅರ್ಹವಾದ ಶಿಕ್ಷೆ ದೊರೆಯುವುದು ಬಹುತೇಕ ಕಡಿಮೆಯಾಗಿದೆ. ಅವರು ಜಾಮೀನಿನ ಮೇಲೆ ಹೊರಬರುತ್ತಾರೆ. ಹಾಗಾಗಿ ತಮ್ಮ ಚಟುವಟಿಕೆಗಳನ್ನು ಮತ್ತೆ ಮುಂದುವರಿಸುವುದು ಹೆಚ್ಚಾಗಿದೆ.

ಇದನ್ನೂ ಓದಿ:ಅಪರಾಧದ ಮರುವ್ಯಾಖ್ಯಾನ; ಪ್ರಭುತ್ವ, ಪ್ರತಿರೋಧ ಮತ್ತು ಪ್ರಜಾಪ್ರಭುತ್ವ

ಇಂತಹ ವಿಕೃತ ಕೃತ್ಯ ಎಸಗುವ ಜನರ ಬಗ್ಗೆ ಹೆಚ್ಚು ಎಚ್ಚರದಿಂದಿರುವುದು ಮಾತ್ರವಲ್ಲ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ. ಈ ಅಪರಾಧಗಳು ಹೆಚ್ಚು ಹೊರಬೀಳದ ಕಾರಣ ಸಂತ್ರಸ್ತರು ಭವಿಷ್ಯದಲ್ಲಿ ದೊಡ್ಡ ಅಪಾಯಗಳಿಗೆ ಒಳಗಾಗುವ ಸಂಭವವಿರುತ್ತದೆ.

ಅಪರಾಧಿಗಳನ್ನು ಅಪರಾಧಗಳಿಂದ ದೂರವಿರಿಸಲು ಕೇವಲ ಕಠಿಣ ಕಾನೂನುಗಳು ಮಾತ್ರ ಸಾಕಾಗುವುದಿಲ್ಲ. ಇಂತಹ ಘಟನೆಗಳನ್ನು ಪತ್ತೆಹಚ್ಚುವುದು, ಅದರ ದೂರು ದಾಖಲಿಸುವುದು ಮುಂತಾದವುಗಳ ಕುರಿತು  ಆಕ್ರಮಣಕಾರಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ತಜ್ಙರು.


ಇದನ್ನೂ ಓದಿ:ಅತ್ಯಾಚಾರಕ್ಕೊಳಗಾದ ಬಾಲಕಿ ಆತ್ಮಹತ್ಯೆ; ಎರಡು ತಿಂಗಳ ನಂತರ FIR!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...