ಪಂಜಾಬಿನ ಮಂಡಿಗಳಲ್ಲಿ ರೈತರ ಬೆಳೆಗಳನ್ನು ತುಂಬಲು ಗೋಣಿ ಚೀಲಗಳು ಲಭ್ಯವಿಲ್ಲ ಎಂಬ ಸುದ್ದಿ ದುರುದ್ದೇಶಪೂರಿತ ಪ್ರಚಾರ, ಮಂಡಿಗಳಲ್ಲಿ ಯಾವುದೇ ಕೊರತೆ ಇಲ್ಲ ಎಂದು ಪಂಜಾಬಿನ ಆಹಾರ, ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಭಾರತ್ ಭೂಷಣ್ ಅಶು ಹೇಳಿದ್ದಾರೆ.
ಆದರೆ, ಪಂಜಾಬಿನ ಪರಿಸ್ಥಿತಿ ಮಾತ್ರ ವಿಭಿನ್ನವಾಗಿದೆ. ರೈತರು ಮಂಡಿಗಳಲ್ಲಿ ತಮ್ಮ ಬೆಳೆಯನ್ನು ಮಂಡಿ ಆವರಣದಲ್ಲಿ ಹರಡಿದ್ದಾರೆ. ಅವುಗಳನ್ನು ತುಂಬಿ ಒಂದು ಕಡೆ ಜೋಪಾನವಾಗಿಡಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಎಎನ್‌ಐ ವರದಿ ಮಾಡಿದೆ.
ಪಂಜಾಬಿನಲ್ಲಿ ಈಗ ಗೋದಿ ಬೆಳೆ ಕೊಯ್ಲು ಆರಂಭವಾಗಿದ್ದು, ರೈತರು ತಮ್ಮ ಬೆಳೆಯನ್ನು ಮಂಡಿಗೆ ತರುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳಿಂದ ಮಂಡಿಗಳಲ್ಲಿ ತಮ್ಮ ಬೆಳೆಯನ್ನು ಬೇಗ ಖರೀದಿಸುತ್ತಿಲ್ಲ ಮತ್ತು ಸುರಕ್ಷಿತವಾಗಿ ಇಡಲು ಯಾವುದೇ ವ್ಯವಸ್ಥೆ ಇಲ್ಲ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ: ಶಾಹಿನ್‌ಬಾಗ್ ಅನ್ನು ನಡೆಸಿಕೊಂಡಂತೆ ರೈತ ಹೋರಾಟಗಾರರನ್ನು ನಡೆಸದಿರಿ: ಕೇಂದ್ರಕ್ಕೆ ಟಿಕಾಯತ್
Ludhiana | Farmers fear crop damage due to delay in procurement.
My crop is lying in the open sky at mandi. There are no arrangements for preventing our produce from rain. Govt is lying. If rain comes, my crop will wash away: Sukhdev Singh, a farmer pic.twitter.com/GJH73VpHQZ
— ANI (@ANI) April 18, 2021
“ನನ್ನ ಬೆಳೆ ಮಂಡಿ ಆವರಣದಲ್ಲಿಇದೆ. ನಮ್ಮ ಉತ್ಪನ್ನಗಳನ್ನು ಮಳೆಯಿಂದ ತಡೆಯಲು ಯಾವುದೇ ವ್ಯವಸ್ಥೆಗಳಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ. ಮಳೆ ಬಂದರೆ ನನ್ನ ಬೆಳೆ ಹಾಳಾಗುತ್ತದೆ” ಎಂದು ಲೂದಿಯಾನದ ರೈತ ಸುಖದೇವ್ ಸಿಂಗ್ ಹೇಳಿದ್ದಾರೆ. ಉತ್ಪನ್ನ ಖರೀದಿ ವಿಳಂಬದಿಂದಾಗಿ, ಆವರಣದಲ್ಲಿರುವ ಬೆಳೆ ಗಾಳಿ, ಮಳೆಯಿಂದ ಹಾನಿಯಾಗುತ್ತದೆಂದು ರೈತರು ಭಯಪಡುತ್ತಿದ್ದಾರೆ.
ಗೋಣಿ ಚೀಲಗಳ ಟೆಂಡರಿಂಗ್ ಎನ್ನುವುದು ನಿರಂತರ ಪ್ರಕ್ರಿಯೆಯಾಗಿದ್ದು, ಇದು ಋತುವಿಗೆ ಮುಂಚೆಯೇ ಪ್ರಾರಂಭವಾಗುತ್ತದೆ ಮತ್ತು ಅಗತ್ಯವಿದ್ದಾಗ ಮುಂದುವರಿಯುತ್ತದೆ ಎಂದು ಸಚಿವರು ಹೇಳಿದ್ದಾರೆ. ಏಪ್ರಿಲ್ 12 ರಂದು ಕೊನೆಯ ಟೆಂಡರ್ ಕರೆಯಲಾಗಿದೆ. ಸದ್ಯಕ್ಕೆ ಬಳಸಿದ ಗೋಣಿ ಚೀಲಗಳನ್ನು ಬಳಸಲು ಸರ್ಕಾರ ಅನುಮತಿ ನೀಡಿದೆ ಎಂದಿದ್ದಾರೆ.
ಮಂಡೀಸ್‌ನಲ್ಲಿ ಸಂಗ್ರಹಣೆ ಮಾಡಲು ಯಾವುದೇ ಕೊರತೆಯಿಲ್ಲ. ಈಗಾಗಲೇ ಸುಮಾರು 25-28 ಲಕ್ಷ ಮೆಟ್ರಿಕ್ ಟನ್ ಬೆಳೆಗಳನ್ನು ಸಂಗ್ರಹಿಸಲಾಗಿದೆ. ನಾವು ಪ್ರತಿದಿನ 8-9 ಲಕ್ಷ ಮೆಟ್ರಿಕ್ ಟನ್ ಬೆಳೆಯನ್ನು ಖರೀದಿಸುತ್ತಿದ್ದೇವೆ ಎಂದು ಸಚಿವ ಭಾರತ್ ಭೂಷಣ್ ಅಶು ಹೇಳಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಕೇಂದ್ರದೊಂದಿಗೆ ಮಾತುಕತೆಗೆ ಸಿದ್ದವಿದ್ದೇವೆ, ಹಕ್ಕೊತ್ತಾಯಗಳು ಅವೆ ಇರಲಿವೆ- ರಾಕೇಶ್ ಟಿಕಾಯತ್


