Homeಮುಖಪುಟಪಂಜಾಬ್‌: 65 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ BJP, ಅಮರಿಂದರ್ ಸಿಂಗ್‌ ಪಕ್ಷಕ್ಕೆ 37 ಕ್ಷೇತ್ರ

ಪಂಜಾಬ್‌: 65 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ BJP, ಅಮರಿಂದರ್ ಸಿಂಗ್‌ ಪಕ್ಷಕ್ಕೆ 37 ಕ್ಷೇತ್ರ

- Advertisement -
- Advertisement -

ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಹೊಸ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ 37 ಮತ್ತು ಮೈತ್ರಿಯ ಮತ್ತೊಂದು ಪಕ್ಷ ಶಿರೋಮಣಿ ಅಕಾಲಿ ದಳ (ಸಂಯುಕ್ತ) 15 ಸ್ಥಾನಗಳನ್ನು ಪಡೆದುಕೊಂಡಿದೆ.

117 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 20 ರಂದು ನಡೆಯಲಿರುವ ರಾಜ್ಯ ಚುನಾವಣೆಗೆ 22 ಕ್ಷೇತ್ರಗಳಿಂದ ತನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕ್ಯಾಪ್ಟನ್ ಅಮರಿಂದರ್‌‌ ಸಿಂಗ್ ಭಾನುವಾರ ಪ್ರಕಟಿಸಿದ್ದು, ಭಾರತೀಯ ಹಾಕಿ ತಂಡದ ಮಾಜಿ ನಾಯಕ ಅಜಿತ್ ಪಾಲ್ ಸಿಂಗ್ ಅವರು ಈ ಪಟ್ಟಿಯ ಪ್ರಮುಖ ಹೆಸರಾಗಿದೆ.

ಇದನ್ನೂ ಓದಿ:ರೈತ ಚಳವಳಿಯ ಕಣ ಪಂಜಾಬ್‌ನಲ್ಲಿ ಚುನಾವಣೆ: ಯಾರಿಗೆ ಲಾಭ?

“ನಾವು ಸಮಾಜದ ವಿವಿಧ ವರ್ಗ ಮತ್ತು ಪ್ರದೇಶದ ಸರಿಯಾದ ಪ್ರಾತಿನಿಧ್ಯವನ್ನು ಖಚಿತಪಡಿಸಿ, ಗೆಲುವಿನ ಮೇಲೆ ಸ್ಪಷ್ಟವಾದ ಗಮನವನ್ನು ಹೊಂದಿರುವ ಉತ್ತಮ ಅಭ್ಯರ್ಥಿಗಳನ್ನು ನೀಡಿದ್ದೇವೆ” ಎಂದು ಪಟಿಯಾಲ ನಗರ ಕ್ಷೇತ್ರದಿಂದ ಸ್ಪರ್ಧಿಸಲಿರುವ ಕ್ಯಾಪ್ಟನ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ತಮ್ಮ ಪಕ್ಷದ ಪಾಲಿನ 37 ಕ್ಷೇತ್ರದಲ್ಲಿ, 26 ಅಭ್ಯರ್ಥಿಗಳು ರಾಜ್ಯದ ಮಾಲ್ವಾ ಪ್ರದೇಶದಲ್ಲಿ ಸ್ಪರ್ದಿಸಲಿದ್ದಾರೆ. ಇಲ್ಲಿ ಕ್ಯಾಪ್ಟನ್‌ ಸಿಂಗ್‌‌ ಅವರು ಕುಟುಂಬ ಸಂಬಂಧಿಗಳನ್ನು ಹೊಂದಿದ್ದಾರೆ. ಈ ಪ್ರದೇಶವು ಕ್ಯಾಪ್ಟನ್ ಸಿಂಗ್ ಅವರ ಕೃಷಿ ಸುಧಾರಣೆಗಳೊಂದಿಗೆ 2007 ರ ಚುನಾವಣೆಯನ್ನು ಗೆಲ್ಲುವಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಿತ್ತು. ಈ ಬಾರಿ ಕೂಡಾ ಈ ಪ್ರದೇಶವು ತನ್ನ ಪರವಾಗಿ ಇರಲಿದೆ ಎಂಬ ನಿರೀಕ್ಷೆಯಲ್ಲಿ ಅವರಿದ್ದಾರೆ.

ಇದನ್ನೂ ಓದಿ:ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ ಎಂದ ಪಂಜಾಬ್ ಸಿಎಂ

ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಅವರು, ಪಟ್ಟಿಯಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳು ಪ್ರಬಲ ರಾಜಕೀಯ ಅರ್ಹತೆಗಳನ್ನು ಹೊಂದಿದ್ದು, ಆಯಾ ಕ್ಷೇತ್ರಗಳಲ್ಲಿ ಚಿರಪರಿಚಿತ ಮುಖಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಬಿಡುಗಡೆಗೊಂಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇವಲ ಒಬ್ಬ ಮಹಿಳೆ ಮಾತ್ರ ಇದ್ದಾರೆ. ಶಿರೋಮಣಿ ಅಕಾಲಿದಳದ ಮಾಜಿ ಶಾಸಕಿ ಮತ್ತು ದಿವಂಗತ ಪೊಲೀಸ್ ಮುಖ್ಯಸ್ಥ ಇಝರ್ ಆಲಂ ಖಾನ್ ಅವರ ಪತ್ನಿ ಫರ್ಜಾನಾ ಆಲಂ ಖಾನ್ ಅವಪಂಜಾಬ್‌ನಲ್ಲಿ ಬಿಜೆಪಿ 65 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ, ಮಿತ್ರ ಅಮರಿಂದರ್ ಸಿಂಗ್ ಅವರ ಪಕ್ಷ 37 ಮಾಲ್ವಾ ಪ್ರದೇಶದ ಮಲೇರ್ಕೋಟ್ಲಾದಿಂದ ಸ್ಪರ್ಧಿಸಲಿದ್ದಾರೆ.

ಅಮರಿಂದರ್ ಸಿಂಗ್ ತನ್ನ ತವರು ಕ್ಷೇತ್ರವಾದ ಪಟಿಯಾಲ ನಗರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಶನಿವಾರ ಘೋಷಿಸಿದ್ದಾರೆ.

ಇದನ್ನೂ ಓದಿ:ಪಂಜಾಬ್: ಸೋದರಳಿಯನ ಮನೆ ಮೇಲೆ ಇಡಿ ದಾಳಿ, ಪ್ರಜಾಪ್ರಭುತ್ವಕ್ಕೆ ಮಾರಕ ಎಂದ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...