“ಹರಿಯಾಣ ಸಿಎಂ ಖಟ್ಟರ್, ಕಾಶ್ಮೀರಿ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆಯು ತಿರಸ್ಕಾರಾರ್ಹ. ಇದು ಇಷ್ಟು ವರ್ಷಗಳ ಕಾಲ ಆರ್.ಎಸ್.ಎಸ್ ಹೇಗೆ ಒಬ್ಬ ವ್ಯಕ್ತಿಯನ್ನು ದುರ್ಬಲ, ಅಸುರಕ್ಷಿತ ಮತ್ತು ಕರುಣಾಜನಕ ಸ್ಥಿತಿಯವನಾಗುವಂತೆ ತರಬೇತಿ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ. ಮಹಿಳೆಯರು ಪುರುಷರ ಒಡೆತನದ ಆಸ್ತಿಯಲ್ಲ.” ಎಂದು ಫೇಸ್ ಬುಕ್ ನಲ್ಲಿ ಬರೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಪತೇಬಾದ್ ನಲ್ಲಿ ‘ದುರ್ಬಲ ಲಿಂಗಾನುಪಾತ’ದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಜಮ್ಮು ಕಾಶ್ಮೀರದ 370ನೇ ವಿಧಿ ರದ್ದಾಗಿರುವುದರಿಂದ ಇನ್ನು ಮುಂದೆ ಅಲ್ಲಿನ ಹೆಣ್ಣು ಮಕ್ಕಳನ್ನು ತಂದು ಇಲ್ಲಿ ಮದುವೆ ಮಾಡಬಹದು ಎಂದು ಜನ ಮಾತನಾಡುತ್ತಿದ್ದಾರೆ” ಎಂದಿದ್ದರು.
Here’s Haryana CM Khattar’s full video. Listen in and decide for yourselfpic.twitter.com/atGLOEm1jk
— Manak Gupta (@manakgupta) August 10, 2019
ಹರಿಯಾಣದಲ್ಲಿ ಇನ್ನು ಲಿಂಗಾನುಪಾತ ಸಮನಾಗಿಲ್ಲ. 1000 ಜನ ಪುರುಷರಿಗೆ ಕೇವಲ 950 ಮಹಿಳೆಯರಿದ್ದಾರೆ. ಅದಕ್ಕೆ ನಮ್ಮ ಸಚಿವ ಧನ್ಕುರ್ ರವರು ಬಿಹಾರದಿಂದ ಹೆಣ್ಣು ಮಕ್ಕಳನ್ನು ತಂದುಬಿಡೋಣ ಎನ್ನುತ್ತಿದ್ದರು. ಈಗ ಕಾಶ್ಮೀರದ ವಿಶೇಷ ಸ್ಥಾನಮಾನ ತೆರವಾಗಿರುವುದಿರಂದ ಅಲ್ಲಿಂದಲೂ ಹೆಣ್ಣು ಮಕ್ಕಳನ್ನು ತಂದು ಲಿಂಗಾನುಪಾತವನ್ನು ಸಮನಾಗಿ ಮಾಡುಬಹದು ಎಂದು ಜೋಕ್ ಮಾಡಿದ್ದಾರೆ.
ಇವರ ಈ ಅಸೂಕ್ಷ್ಮ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನ ಖಂಡನೆ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಸಹ “370 ನೇ ವಿಧಿ ರದ್ಧತಿ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗಾಣಿಸಿರುವುದರಿಂದ ಇನ್ನು ಮುಂದೆ ನಮ್ಮ ಪಕ್ಷದ ಕಾರ್ಯಕರ್ತರು ಕಾಶ್ಮೀರದ ಸುಂದರ ಮಹಿಳೆಯರನ್ನು ಮದುವೆಯಾಗಬಹುದು” ಎಂದು ವಿವಾದಕ್ಕೀಡಾಗಿದ್ದರು.
ಇದನ್ನೂ ಓದಿ: ನೀವೀಗ ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹದು: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ


