Homeಮುಖಪುಟರಾಖಿಗರಿ: ಸಂಶೋಧನೆಗಳನ್ನೇ ಹತ್ತಿಕ್ಕುವ ಸಾಂಸ್ಕೃತಿಕ ರಾಜಕಾರಣ..

ರಾಖಿಗರಿ: ಸಂಶೋಧನೆಗಳನ್ನೇ ಹತ್ತಿಕ್ಕುವ ಸಾಂಸ್ಕೃತಿಕ ರಾಜಕಾರಣ..

- Advertisement -
- Advertisement -

ಭಾರತದಲ್ಲಿ ಬ್ರಾಹ್ಮಣಶಾಹಿ ಸಾಂಸ್ಕೃತಿಕ ರಾಜಕಾರಣ ಯಾವ ಮಟ್ಟಕ್ಕೂ ಹೋಗಬಲ್ಲದು ಎಂಬುದನ್ನು ಮೊನ್ನೆಯಷ್ಟೇ ನಡೆದ ವಿದ್ಯಮಾನಗಳು ತೋರಿಸಿದವು. ಹರಪ್ಪ ನಾಗರಿಕತೆಗೆ ಸಂಬಂಧಪಟ್ಟ ವಂಶವಾಹಿ ಸಂಶೋಧನಾ ವರದಿಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿಕೊಂಡು ಹಸಿ ಹಸಿ ಸುಳ್ಳುಗಳನ್ನು ಭಿತ್ತರಿಸಿದ ಪತ್ರಿಕೆಗಳ ದುಷ್ಟತನ ಒಂದು ಕಡೆಯಾದರೆ ಈ ಸಂಶೋಧನೆಯಲ್ಲಿ ಖುದ್ದಾಗಿ ಭಾಗವಹಿಸಿರುವ ಕೆಲವು ವ್ಯಕ್ತಿಗಳ ದುರುಳತನವೂ ಬಯಲಾಯಿತು.

ಪುಣೆಯ ಡೆಕನ್‍ ಕಾಲೇಜಿನ ಉಪಕುಲಪತಿ ವಸಂತ್‍ ಎಸ್ ಶಿಂಧೆಯವರು ಪ್ರಾಕ್ತನ ಶಾಸ್ತ್ರಜ್ಞರೂ ಹೌದು. 2015ರಲ್ಲಿ ರಾಖಿಗರಿಯಲ್ಲಿ ಸಿಕ್ಕಿದ ಮಾನವ ಶರೀರಗಳ ಪಳೆಯುಳಿಕೆಯನ್ನು ಇವರ ನೇತೃತ್ವದ ತಂಡವೇ ಪತ್ತೆಹಚ್ಚಿತ್ತು. ಹೀಗಾಗಿ ಮೊನ್ನೆ ಬಿಡುಗಡೆಯಾದ ಸೈನ್ಸ್ ಮತ್ತು ಸೆಲ್ ಪತ್ರಿಕೆ ಎರಡರ ವರದಿಯಲ್ಲೂ ಶಿಂಧೆಗೆ ಒಂದು ಪಾತ್ರವಿತ್ತು. ವಿಪರ್ಯಾಸವೇನೆಂದರೆ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಲ್ಲಿ ಎರಡೂ ವರದಿಗಳು ಬಿಡುಗಡೆಯಾದ ಬಳಿಕ ವಸಂತ್ ಶಿಂಧೆ ಮತ್ತು ಇನ್ನೊಬ್ಬ ಸಹವಿಜ್ಞಾನಿ ನೀರಜ್‍ರಾಯ್ ಈ ಸಂಶೋಧನೆಗಳ ಕುರಿತು ಒಂದು ಪತ್ರಿಕಾಗೋಷ್ಟಿ ನಡೆಸಿದರು. ಈ ಪತ್ರಿಕಾಗೋಷ್ಟಿಗಳಲ್ಲಿ ಇಬ್ಬರೂ ಸಂಶೋಧನಾ ವರದಿಯಲ್ಲಿಯಾವ ಸಂಗತಿಗಳು ತಿಳಿದು ಬಂದಿವೆ, ಯಾವ ವಿಷಯಗಳು ಸ್ಪಷ್ಟವಾಗಿ ಸಾಬೀತಾಗಿವೆ ಎಂಬುದನ್ನು ಒತ್ತಿಹೇಳಬೇಕಾಗಿತ್ತು. ಆದರೆ ಅವರು ಅದನ್ನು ಮಾಡದೇ ತಾವೂ ಭಾಗಿಯಾಗಿರುವ ಸಂಶೋಧನೆಯಲ್ಲಿ ಕಂಡುಕೊಂಡಿರುವ ಸತ್ಯಗಳಿಗೆ ವ್ಯತಿರಿಕ್ತ ದಾಟಿಯಲ್ಲಿ ಮಾತಾಡಿದ್ದಾರೆ!

ಶಿಂಧೆಯವರು ಮಾತನಾಡುತ್ತಾ, “ಭಾರತದಲ್ಲಿರುವ ಯಾವ ವಂಶಾವಳಿಯ ಮೇಲೆಯೂ ಹೊರಗಿನವರ ದಾಳಿ ನಡೆದಿಲ್ಲ” “ವೈದಿಕ ಸಂಸ್ಕೃತಿ ಭಾರತದ ಮೂಲದ್ದು” ಎಂದು ಹೇಳಿದ್ದರೆ ನೀರಜ್‍ರಾಯ್, ಹೊರಗಿನಿಂದ ಭಾರತಕ್ಕೆ ವಲಸೆಗಳು ನಡೆದಿರುವ ಸಂಗತಿಯನ್ನು ಮರೆಮಾಚುವ ರೀತಿಯಲ್ಲಿ “ಭಾರತದಿಂದಲೇ ಹೊರಕ್ಕೆ ವಲಸೆಯಾಗಿದೆ” ಎಂದು ಹೇಳಿ ಗೊಂದಲ ಮೂಡಿಸಿದ್ದಾರೆ.

ರಾಖಿಗರಿ ವಂಶವಾಹಿ ಸಂಶೋಧನೆಗಳಲ್ಲಿ ಭಾಗವಹಿಸಿದ್ದ ಈ ಇಬ್ಬರ ಹೇಳಿಕೆಗಳು ಸಹ ಪತ್ರಕರ್ತರು ದಿಕ್ಕು ತಪ್ಪಲು ಕಾರಣವಾಗಿದೆ. ಹಾಗಂತ ವರದಿಗಳಲ್ಲಿ ಏನಿದೆ ಎಂದು ಕನಿಷ್ಟ ಕಣ್ಣಾಡಿಸದೇ ಸಂಶೋಧನೆಗಳ ಕುರಿತು ವರದಿ ಮಾಡಿದ ಪತ್ರಕರ್ತರ ನಡವಳಿಕೆ ಸರಿ ಎನ್ನಲಾದೀತೇ? ಇವರೇನೇ ಹೇಳಲಿ ಸಂಶೋಧನೆಗಳನ್ನಂತೂ ಯಾರೂ ಬದಲಿಸಲು ಸಾಧ್ಯವಿಲ್ಲ. ಅದರಲ್ಲೂ ಸೈನ್ಸ್ ನಂತರ ಅಂತರರಾಷ್ಟ್ರೀಯ ಪತ್ರಿಕೆಯಲ್ಲಿ ಒಂದು ಸಂಶೋಧನೆಯ ಫಲಿತಗಳು ಪ್ರಕಟವಾದ ಮೇಲೆ ಅದಕ್ಕೆ ತಂತಾನೇ ಅಧಿಕೃತತೆ ಪ್ರಾಪ್ತ ವಾಗುತ್ತದೆ. ಸತ್ಯ ಎಂದಿಗೂ ಸತ್ಯವಾಗಿರುತ್ತದೆ ಎಂಬುದು ಎಲ್ಲರ ಅರಿವಿಗೆ ಬಂದಿದ್ದರೂ ಈ ವಂಶವಾಹಿ ಸಂಶೋಧನೆಗಳು ಹೇಗೆ ನಡೆದವು ಎಂಬ ಬಗ್ಗೆ ಕೆಲವು ಅಂಶಗಳನ್ನು ತಿಳಿಯುವ ಅಗತ್ಯವಿದೆ.

ಮೊನ್ನೆ ಪ್ರಕಟಗೊಂಡಿರುವ ಎರಡು ಪ್ರತ್ಯೇಕ ವರದಿಗಳಿಗೆ ಒಬ್ಬಿಬ್ಬರು ವಿಜ್ಞಾನಿಗಳು ಸೇರಿ ಮಾಡಿದ ಕೆಲಸವಲ್ಲ. ರಾಖಿಗರಿಯಲ್ಲಿ ದೊರೆತ ಮಹಿಳೆಯ ವಂಶವಾಹಿಯ ಸಂಶೋಧನೆಗೆ ಭಾರತ ಮತ್ತು ವಿದೇಶಗಳ 28 ಪ್ರತಿಷ್ಟಿತ ವಿಜ್ಞಾನಿಗಳು, ಪರಿಣಿತರು ಕೆಲಸ ಮಾಡಿದ್ದಾರೆ. ಹಾಗೆಯೇ“ಸೈನ್ಸ್” ಪತ್ರಿಕೆಯಲ್ಲಿ ವರದಿಯಾದ “ದಕ್ಷಿಣ ಮತ್ತು ಮಧ್ಯ ಏಷಿಯಾಗಳಲ್ಲಿ ಜನಸಮೂಹಗಳು ರಚನೆಯಾದ ಬಗೆ” ಎಂಬ ಪ್ರಬಂಧಕ್ಕೆ ಈ ಹರಪ್ಪದಿಂದ ಇರಾನಿನನ ವರೆಗೆ ದೊರೆತ 523 ಪ್ರಾಚೀನ ವಂಶವಾಹಿಗಳ ಸಂಶೋಧನೆಯಲ್ಲಿ ದೇಶ ವಿದೇಶಗಳ 117 ವಿಜ್ಞಾನಿಗಳು, ಪರಿಣಿತರು ಪಾಲ್ಗೊಂಡಿದ್ದಾರೆ. ಈ ಸಂಶೋಧನೆ ಹಾರ್ವರ್ಡ್‍ ಕಾಲೇಜಿನ ತಳಿವಿಜ್ಞಾನಿ ವಾಗೀಶ್ ನರಸಿಂಹನ್ ಮತ್ತಿತರ ಹೆಸರಿನಲ್ಲಿ ಪ್ರಕಟವಾಗಿದೆ. ಈ ಎರಡೂ ಸಂಶೋಧನೆಗಳಲ್ಲಿ ಮುಖ್ಯ ಪಾತ್ರ ವಹಿಸಿರುವುದು ಅಮೆರಿಕದಲ್ಲಿರುವ ತಳಿವಿಜ್ಞಾನಿ ಡೇವಿಡ್‍ರೀಚ್‍ ಅವರ ಜೆನೆಟಿಕ್‍ ಪ್ರಯೋಗಾಲಯ. ಇಂದು ಪ್ರಪಂಚ ಮಟ್ಟದಲ್ಲಿ ನಡೆದಿರುವ ಬಹುತೇಕ ವಂಶವಾಹಿ ಅಧ್ಯಯನಗಳ ಸಂಶೋಧನೆ ಮತ್ತು ವಿಶ್ಲೇಷಣೆ ನಡೆದಿರುವುದು ಡೇವಿಡ್‍ರೀಚ್‍ ಅವರ ಅತ್ಯಂತ ಸುಸಜ್ಜಿತ ಪ್ರಯೋಗಾಲಯದಲ್ಲಿ. ಜಗತ್ತಿನ ಪ್ರಮುಖ ಪ್ರಾಚೀನ ವಂಶವಾಹಿ ಸಂಶೋಧನೆಗಳ ಕುರಿತು ಡೇವಿಡ್‍ ರೀಚ್ ವರ್ಷದ ಹಿಂದೆಯೇ ಕೃತಿಯೊಂದನ್ನು ಪ್ರಕಟಿಸಿದ್ದಾರೆ. “ಹೂ ವಿ ಆರ್‍ಅಂಡ್ ಹೌ ವಿ ಗಾಟ್ ಹಿಯರ್” ಎಂಬ ಈ ಕೃತಿಯಲ್ಲಿ ಇಡೀ ಜಗತ್ತಿನ ಪ್ರಾಚೀನ ವಲಸೆಗಳ ನೀಲನಕ್ಷೆಯನ್ನು ವಂಶವಾಹಿ ಸಂಶೋಧನೆಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಇದರಲ್ಲಿ ಅವರು ಭಾರತದ ಪ್ರಾಚೀನ ವಂಶವಾಹಿಗಳ ಅಧ್ಯಯನದ ಕುರಿತ ತಮ್ಮ ಅನುಭವಗಳನ್ನು ಸಹ ದಾಖಲಿಸಿದ್ದಾರೆ. ಅದರಲ್ಲಿ ಅವರು ದಾಖಲಿಸುವ ಕೆಲವು ಮಾತುಗಳು ಉಲ್ಲೇಖನೀಯವಾಗಿವೆ.

“ನನ್ನ ವೈಜ್ಞಾನಿಕ ಸಂಶೋಧನೆಯ ವೃತ್ತಿಜೀವನದಲ್ಲಿ ಅತ್ಯಂತ ಉದ್ವೇಗದ ಕ್ಷಣಗಳೆಂದರೆ 2008ರ ಅಕ್ಟೋಬರ್ 28ರಂದು ಕಳೆದ ಇಪ್ಪತ್ತನಾಲ್ಕು ತಾಸುಗಳು. ನನ್ನ ಸಹಭಾಗಿ ನಿಕ್ ಪ್ಯಾಟರ್‍ಸನ್ ಮತ್ತು ನಾನು ಇಬ್ಬರೂ CCMBಯ ತಳಿವಿಜ್ಞಾನಿಗಳಾದ ಸಿಂಗ್ ಮತ್ತು ತಂಗರಾಜ್‍ ಅವರನ್ನು ಭೇಟಿ ಮಾಡಿ ನಮ್ಮ ಡಿಎನ್‍ಎ ವಿಶ್ಲೇಷಣೆಯ ಆರಂಭಿಕ ಫಲಿತಗಳನ್ನು ಚರ್ಚಿಸಲು ಹೈದರಾಬಾದ್‍ಗೆ ಹೋದ ದಿನ ಅದು. ಸರಿಯಾದ ನಿರ್ಧಾರಕ್ಕೆ ಬರುವುದು ನಿಜಕ್ಕೂ ಸವಾಲಿನ ಸಂಗತಿಯಾಗಿತ್ತು. ಆ ಭೇಟಿಗೂ ಮುನ್ನ ನಮ್ಮೆದುರಿನ ಸಂಶೋಧನಾ ಫಲಿತಗಳು ಇಂದಿನ ಭಾರತೀಯರು ಮುಖ್ಯವಾಗಿ ಎರಡು ಅತ್ಯಂತ ಭಿನ್ನವಂಶಾವಳಿಗಳಿಂದ ಉಂಟಾದ ಜನಸಮುದಾಯಗಳು ಎಂಬುದನ್ನು ತಿಳಿಸಿದ್ದವು. ಪಶ್ಚಿಮದ ಯೂರೇಷಿಯನ್ನರು ಮತ್ತು ಭಾರತೀಯರ ಸಂಬಂಧವನ್ನು ಸೂಚಿಸಲು ‘ಜೆನೆಟಿಕ್ ಶೇರಿಂಗ್” ಎಂಬ ಪದವನ್ನು ಸಿಂಗ್ ಮತ್ತು ತಂಗರಾಜ್ ಬಳಸಿದ್ದರು. ಈ ಫಲಿತಾಂಶಗಳು ಭಾರತದ ರಾಜಕೀಯದ ಮೇಲೆ ಬೀರುವ ಅಗಾಧ ಪರಿಣಾಮದ ಬಗ್ಗೆ ಅವರಿಗೆ ಅರಿವಿತ್ತು. ನಾವು ಕಂಡುಕೊಂಡಿದ್ದ ವಂಶವಾಹಿ ಅಧ್ಯಯನ ಫಲಿತಾಂಶಗಳನ್ನು ಬಹಿರಂಗಪಡಿಸುವುದರಿಂದ ಆಗುವ ರಾಜಕೀಯ ಪರಿಣಾಮಗಳ ಲೆಕ್ಕಾಚಾರದಲ್ಲಿ ನಾವು ಮಾತಾಡದೇ ಸುಮ್ಮನಿರಬೇಕಾಗಿದೆ ಎಂಬುದು ಆಗ ನನ್ನ ಅರಿವಿಗೆ ಆಗ ಬಂತು. ಅಕ್ಟೋಬರ್ 28ರ ಆ ದೀಪಾವಳಿಯ ದಿನದಂದು ನಾವೆಲ್ಲರೂ ಸೇರಿ ನಮ್ಮ ಸಂಶೋಧನೆಗಳ ವಿಶ್ಲೇಷಣೆಗಳನ್ನು ರೂಪಿಸುವುದು ಹೇಗೆ ಎಂದು ಚರ್ಚಿಸಲು ಕುಳಿತೆವು. ಮರುದಿನವೂ ಮುಂದುವರೆದ ಆ ಸಭೆಯಲ್ಲಿಯೇ ಪೂರ್ವಿಕ ಉತ್ತರ ಭಾರತೀಯರು (ANI)ಮತ್ತು ಪೂರ್ವಿಕದಕ್ಷಿಣ ಭಾರತೀಯರು (ASI) ಎಂಬ ಪರಿಕಲ್ಪನೆಗಳು ರೂಪುಗೊಂಡದ್ದು. ಈ ಎರಡೂ ವಂಶವಾಹಿ ಜನವಿಭಾಗಗಳು ಭಾರತದಲ್ಲಿ ನಾಟಕೀಯ ರೀತಿಯಲ್ಲಿ ಮಿಶ್ರಣಗೊಂಡ ಬಗೆಯನ್ನು ನಾವು ವಿವರಿಸಿಕೊಂಡೆವು”.

ರೀಚ್‍ ಅವರು ಮಾತುಗಳನ್ನು ನೋಡಿದಾಗ, ಭಾರತದ ವಂಶವಾಹಿ ಕುರಿತ ಸಂಶೋಧನೆಗಳು ಮುಕ್ತ ಮನಸ್ಸಿನಿಂದ ನಡೆಯದೇ ಸಂಶೋಧನೆ ಉಂಟು ಮಾಡಬಹುದಾದ ಪರಿಣಾಮಗಳ ಭಯದಲ್ಲಿಯೇ ನಡೆದಿವೆ ಎಂಬುದನ್ನು ನೋಡಬಹುದು. 2018ರಲ್ಲಿ ವಸಂತ ಶಿಂಧೆಯವರು ಪತ್ರಿಕೆಗಳಿಗೆ ಸಂದರ್ಶನ ನೀಡಿದ್ದಾಗಲೂ ರಾಖಿಗರಿ ಫಲಿತಾಂಶಗಳನ್ನು ಬಿಡುಗಡೆಗೊಳಿಸಲು ಇರುವ ಆತಂಕದ ಬಗ್ಗೆಯೂ ಸೂಚನೆ ನೀಡಿದ್ದರು. ಮಾತ್ರವಲ್ಲ ಈ ವಂಶವಾಹಿ ಸಂಶೋಧನೆಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ತಮಗೆ ಪೂರಕವಾಗಿ ಇರುವಂತೆ ತರಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರ ವಾಸನೆಯೂ ಬಂದಿತ್ತು. ಆದರೆ ಈ ವಂಶವಾಹಿಗಳ ಸಂಶೋಧನೆ ಜಾಗತಿಕ ಮಟ್ಟದಲ್ಲಿ ನಡೆದಿರುವ ಕಾರಣ ಅಂತಹ ಯಾವ ದುಷ್ಟಪ್ರಯತ್ನಗಳೂ ಫಲ ಕಾಣಲಿಲ್ಲ. ಇದಕ್ಕೆ ಹಚ್ಚಿನ ಶ್ರೇಯಸ್ಸು ಸಲ್ಲಬೇಕಿರುವುದು ಡೇವಿಡ್‍ ರೀಚ್‍ ಅವರಿಗೆ. ರೀಚ್‍ ಅವರು ಅಪ್ಪಟ ಸಂಶೋಧಕ. ಅವರು ಯಾವುದೇ ಸೈದ್ಧಾಂತಿಕ ಪೂರ್ವಗ್ರಹವನ್ನಾಗಲೀ, ಯಾರನ್ನೋ ಓಲೈಸಬೇಕು ಎಂಬ ಉದ್ದೇಶವನ್ನಾಗಲೀ ಇಟ್ಟುಕೊಂಡವರಲ್ಲ. ಸಂಶೋಧನೆಗಳು ಯಾವುದೇ ಫಲಿತಾಂಶ ನೀಡಿದರೂ ಅದನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬಲ್ಲ ಬದ್ಧತೆ ಇರುವ ತಳಿ ವಿಜ್ಞಾನಿ. ವಂಶವಾಹಿಗಳ ವಿಶ್ಲೇಷಣೆಯನ್ನು ಇನ್ನಿತರ ಜ್ಞಾನಶಿಸ್ತುಗಳಾದ ಪ್ರಾಕ್ತನಶಾಸ್ತ್ರ, ಭಾಷಾಶಾಶ್ತ್ರಗಳ ಸಂಶೋಧನೆಗಳೊಂದಿಗೆ ತಾಳೆ ನೋಡಿ ವಿಶ್ಲೇಷಿಸಬಲ್ಲ ಮೇಧಾವಿ. ಇವರೊಂದಿಗೆ ಪ್ರಿಯಾ ಮೂರ್ಜಾನಿ, ವಾಗೀಶ್ ನರಸಿಂಹನ್‍ರಂತಹ ವಿಜ್ಞಾನಿಗಳು ಸಹ ಅಷ್ಟೇ ಪ್ರಮುಖ ಕೊಡುಗೆಗಳನ್ನು ಈ ಜೆನೆಟಿಕ್ ವಿಶ್ಲೇಷಣೆ-ಸಂಶೋಧನೆಗಳಿಗೆ ನೀಡಿದ್ದಾರೆ.

ಭಾರತದಿಂದಲೇ ಪಶ್ಚಿಮದ ದೇಶಗಳಿಗೆ ಆರ್ಯರ ವಲಸೆ ನಡೆದಿತ್ತು ಎಂಬುದು ಯಾವತ್ತಿನಿಂದಲೂ ಸಂಘಪರಿವಾರ-ಆರೆಸ್ಸೆಸ್ ನಡೆಸುತ್ತಿರುವ ಭಜನೆ. ಈ ವಾದವನ್ನು ಮೊನ್ನೆ ಪ್ರಕಟವಾಗಿರುವ ಎರಡೂ ವಂಶವಾಹಿ ಸಂಶೋಧನೆಗಳು ಸ್ಪಷ್ಟವಾಗಿ ಅಲ್ಲಗಳೆದಿವೆ. ರಾಖಿಗರಿಯಲ್ಲಿ ಮತ್ತು ಸಿಂಧೂ ನಾಗರಿಕತೆಗೆ ಸಂಬಂಧಿಸಿದ 12 ಜನರ 4000 ವರ್ಷಗಳ ಹಿಂದಿನ ಪ್ರಾಚೀನ ವಂಶವಾಹಿಗಳಲ್ಲಿ ಸ್ಟೆಪ್‍ಆರ್ಯರ ವಂಶಾವಳಿಯ ಯಾವುದೇ ಕುರುಹು ಇಲ್ಲ. ಆದರೆ ಇಂದು ಇರುವ ಭಾರತೀಯರಲ್ಲಿ ಶೇಕಡಾ 30 ಜನರಲ್ಲಿ ಈ ವಂಶವಾಹಿಗಳಿವೆ. ಈ ಇಂದಿನ ANI ಸಂಬಂಧಿ ವಂಶವಾಹಿಗಳು ಕ್ರಿ.ಪೂ 2000ದ ಸುಮಾರಿಗೆ ಮಧ್ಯಏಷಿಯಾ ಮತ್ತು ಕಾಕಸಸ್ ಪ್ರದೇಶಗಳಿಂದ ಪೂರ್ವಕ್ಕೆ ಹೊರಟ ಸ್ಟೆಪ್ ಪಶುಪಾಲಕರ R1a ವಂಶವಾಹಗಳಿಗೆ ಸಮಯದಲ್ಲಿ ಹೋಲಿಕೆಯಾಗುತ್ತದೆ. ಹೀಗಾಗಿ ಭಾರತಕ್ಕೆ ಆರ್ಯರ ವಲಸೆ ಎಂಬುದು ನಡೆದಿರುವುದು ಸಿಂಧೂ ನಾಗರಿಕತೆಯ ನಂತರದಲ್ಲಿ ಎಂದು ಸಂಶೋಧನೆಗಳು ಸ್ಪಷ್ಟವಾಗಿ ತಿಳಿಸಿವೆ.

ಈ ಕುರಿತು ತಮ್ಮಲ್ಲಿ ನಡೆದ ಚರ್ಚೆಗಳನ್ನು ಉಲ್ಲೇಖಿಸುತ್ತಾಡೇವಿಡ್‍ರೀಚ್ ಹೀಗೆ ಬರೆದುಕೊಂಡಿದ್ದಾರೆ.
“ನಮ್ಮ ವಿಶ್ಲೇಷಣೆಯ ಸಂದರ್ಭದಲ್ಲಿ ಸಿಂಗ್ ಮತ್ತು ತಂಗರಾಜ್‍ ಅವರು ‘ಭಾರತದಿಂದ ಹೊರಕ್ಕೆ’ ನಡೆದಿರಬಹುದಾದ ವಲಸೆಯ ಬಗ್ಗೆ ಅಂದಾಜಿಸಿದರೂ ಯೂರೋಪಿನ ಯಾವುದೇ ಸಮುದಾಯಗಳಲ್ಲಿ ASI ವಂಶವಾಹಿಗಳ ಲವಲೇಶವೂ ಇಲ್ಲದಿರುವುದು ಇಂತಹ ಒಂದು ಊಹೆಯನ್ನು ನಿರಾಧಾರವಾಗಿಸುತ್ತದೆ. ಭಾರತದ ಇಂದಿನ ಜನಸಂಖ್ಯಾ ಹಂಚಿಕೆಯ ಭೌಗೋಳಿಕ ಅಂಶಗಳನ್ನು ಗಮನಿಸಿದಾಗ ಪಶ್ಚಿಮ ಯೂರೇಶಿಯಾದ ಪೂರ್ವಜರೇ ಆಗ್ನೇಯ ದಿಕ್ಕಿನಿಂದ ದಕ್ಷಿಣ ಏಷಿಯಾ ಭಾಗಕ್ಕೆ ವಲಸೆ ಬಂದಿರುವುದು ತಿಳಿದು ಬರುತ್ತದೆ. ತಳಿಮಿಶ್ರಣಗಳ ಡೇಟಿಂಗ್ ನಡೆಸಿದಾಗ ಈ ಕುರಿತು ಮತ್ತಷ್ಟು ನಿಖರ ಮಾಹಿತಿ ನಮಗೆ ದೊರೆಯಿತು. ಈ ಸಮುದಾಯಗಳ ಹಿಂದಿನ ತಲೆಮಾರುಗಳ ಕಾಲಮಾನವನ್ನು ಅಂದಾಜಿಸುವಲ್ಲಿ ನನ್ನ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಸಂಶೋಧಕಿ ಪ್ರಿಯಾ ಮೂರ್ಜಾನಿ ಯಶಸ್ವಿಯಾಗಿದ್ದಾರೆ.

ಅವರ ಸಂಶೋಧನೆಯ ಮೂಲಕ ತಿಳಿದು ಬಂದ ಸಂಗತಿಯೇನೆಂದರೆ ಭಾರತದಲ್ಲಿ ನಡೆದ ಎಲ್ಲಾ ಜನಾಂಗೀಯ ಸಂಕರಗಳನ್ನು ವಿಶ್ಲೇಷಣೆ ನಡೆಸಿದಾಗ ಈ ಸಂಕರಗಳು ನಾಲ್ಕು ಸಾವಿರ ವರ್ಷಗಳ ಹಿಂದೆ ಶುರುವಾಗಿ ಎರಡು ಸಾವಿರ ವರ್ಷಗಳ ಹಿಂದಿನವರೆಗಿನ ಕಾಲಾವಧಿಯಲ್ಲಿ ನಡೆದಿರುವುದು ತಿಳಿದುಬರುತ್ತದೆ. ದ್ರಾವಿಡ ಭಾಷಿಕರ ನಡುವೆ ನಡೆದ ತಳಿ ಸಂಕರಗಳು ಮೊಟ್ಟಮೊದಲು ನಡೆದ ಸಂಕರಗಳು. ಇಲ್ಲಿ ಆರ್ಯರಿಗೂ ದ್ರಾವಿಡರಿಗೂ ಮಧ್ಯೆ ಆಗಿರುವ ಸಂಕರಗಳು ನಂತರ ನಡೆದ ಸಂಕರಗಳು. ನಾಲ್ಕು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿದ್ದ ಜನಸಂಖ್ಯೆಯ ಸ್ವರೂಪ ಸಂಪೂರ್ಣ ಬೇರೆಯದೇ ಆಗಿತ್ತೆಂಬುದು ನಮ್ಮ ಸಂಶೋಧನೆಗಳಿಂದ ತಿಳಿದು ಬರುತ್ತದೆ…. ಇಂದಿಗೆ ಹಿಂದಕ್ಕೆನಾಲ್ಕು ಸಾವಿರ ವರ್ಷಗಳ ನಂತರದ ಅವಧಿಯಲ್ಲಿ ಇಂಡೋ-ಯೂರೋಪಿಯನ್‍ ಭಾಷೆಯ ಜನರು ಒಂದು ಶ್ರೇಣೀಕರಣಗೊಂಡ ಸಮಾಜದಲ್ಲಿ ರಾಜಕೀಯ ಮತ್ತು ಸಾಮಾಜಿಕ ಅಧಿಕಾರಗಳನ್ನು ಪಡೆದುಕೊಂಡು ಸ್ಥಳೀಯರೊಂದಿಗೆ ಸಂಕರಗೊಂಡರು. ಆನಂತರ ಅಧಿಕಾರ ಸ್ಥಾನದಲ್ಲಿರುವ ಈ ಸಮುದಾಯಗಳ ಗಂಡಸರು ಕೆಳಸ್ತರಗಳ ಜನಸಮೂಹಗಳಲ್ಲಿ ತಮ್ಮ ಸಂಗಾತಿಗಳನ್ನು ಕಂಡುಕೊಳ್ಳುತ್ತಾ ಹೋಗುವಲ್ಲಿ ಯಶಸ್ವಿಗೊಂಡ ಚಾರಿತ್ರಿಕ ವಾಸ್ತವವನ್ನು ಈ ಸಂಗತಿಗಳು ತಿಳಿಸುತ್ತವೆ”

ತಳಿವಿಜ್ಞಾನಿ ಡೇವಿಡ್‍ರೀಚ್‍ ಅವರ ಈ ಮಾತುಗಳು ಹೊರಗಿನಿಂದ ಭಾರತಕ್ಕೆ ಆರ್ಯರು ವಲಸೆ ಬಂದ ಬಗ್ಗೆ ಮಾತ್ರ ಹೇಳುವುದಿಲ್ಲ. ಈ ಆರ್ಯರು ಅಧಿಕಾರ ಸ್ಥಾನದಲ್ಲಿದ್ದು ಬಹುಜನರನ್ನು ಅಧಿಕಾರದಿಂದ ವಂಚಿಸಿ ದಬ್ಬಾಳಿಕೆ ನಡೆಸಿಕೊಂಡು, ಹರಪ್ಪ ನಾಗರಿಕತೆ ಕಟ್ಟಿದ ಭಾರತದ ಮೂಲನಿವಾಸಿಗಳ ಮೇಲೆ ತಮ್ಮ ಜನಾಂಗೀಯ ದಬ್ಬಾಳಿಕೆ ನಡೆಸಿರುವ ಚಾರಿತ್ರಿಕೆ ಸತ್ಯವನ್ನೂ ತಿಳಿಸುತ್ತವೆ. ನಮ್ಮ ದೇಹದಲ್ಲಿರುವ ಒಂದೇ ಒಂದು ವಂಶವಾಹಿಯಿಂದ ನಮ್ಮ ಹಿಂದಿನ ಸಹಸ್ರಾರು ತಲೆಮಾರುಗಳ ಚರಿತ್ರೆಯನ್ನು ಹೇಳಲು ಸಾಧ್ಯವಾಗಿರುವುದು ವಿಜ್ಞಾನದ ಚಮತ್ಕಾರವೆಂದೇ ಹೇಳಬಹುದು. ಇದುವರೆಗೆ ಸಮಾಜಶಾಶ್ತ್ರಜ್ಞರು, ಇತಿಹಾಸಕಾರರು, ಪ್ರಾಕ್ತನಶಾಸ್ತ್ರಜ್ಞರು ಮತ್ತು ಭಾಷಾಶಾಶ್ತ್ರಜ್ಞರು ಹೇಳಿದ ಇದೇ ಸತ್ಯಗಳನ್ನು ವೈದಿಕಶಾಹಿ ಹಿಂದುತ್ವವಾದಿಗಳು ಸುಲಭವಾಗಿ ತಳ್ಳಿಹಾಕುತ್ತಾ ಬಂದಿದ್ದರು. ಅವರು ತಮ್ಮ ರಾಜಕೀಯ-ಸಾಂಸ್ಕøತಿಕ ಹಿತಾಸಕ್ತಿಗೆ ಪೂರಕವಾಗಿ ಸುಳ್ಳುಗಳ ಬುನಾದಿಯಲ್ಲಿ ಕಲ್ಪಿತ ಚರಿತ್ರೆಯನ್ನು ಭಾರತೀಯರಿಗೆ ಉಣಬಡಿಸಿ ಧರ್ಮದ್ವೇಷವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈಗಿನ ಈ ವಂಶವಾಹಿ ಸಂಶೋಧನೆಗಳು ಇವರ ಹುಸಿ ಸಿದ್ಧಾಂತದ ಬುಡಕ್ಕೇ ಅಗ್ನಿಸ್ಪರ್ಶ ಮಾಡಿದೆ. ಅದರ ಉರಿಗೆ ಹೆದರಿರುವ ವೈದಿಕಶಾಹಿ ಈಗ ವಸಂತ್ ಶಿಂಧೆಯಂತವರ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವ, ಇಲ್ಲವೇ ಗೊಂದಲಗೊಳಿಸುವ ಹತಾಶ ಪ್ರಯತ್ನಗಳಿಗೆ ಇಳಿದಿದೆ. ಇದುವರೆಗೆ ಭಾರತೀಯ ಹಿಂದೂಗಳಿಗೆ ಮುಸ್ಲಿಮರು ಬಂದವರು, ಅವರನ್ನು ಪಾಕಿಸ್ತಾನಕ್ಕೆ ಓಡಿಸೋಣ ಎನ್ನುತ್ತಿದ್ದವರಿಗೆ ಈಗ ಋಗ್ವೇದಿ ಆರ್ಯರೂ ಕೊಂಚ ಹಿಂದೆಯಷ್ಟೇ ಭಾರತದ ನೆಲಕ್ಕೆ ವಲಸೆ ಬಂದವರು ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಸುಲಭವಲ್ಲ. ಆದರೂ ಶಿಂಧೆ, ನೀರಜ್‍ರಾಯ್‍ ಅಂಥವರು ತಾವೂ ಸೇರಿಯೇ ನಡೆಸಿದ ಸಂಶೋಧನೆಯ ಸತ್ಯವನ್ನೂ ಜನತೆಗೆ ಹೇಳದೇ ಬೇರೆಯದೇ ಕತೆ ಹೊಡೆಯುತ್ತಿದ್ದಾರೆ ಎಂದರೆ ಒಂದೋ ಇವರೂ ವೈದಿಕ ಶಾಹಿಯ ಸಂಚಿನ ಭಾಗೀದರರಾಗಿರಬೇಕು ಇಲ್ಲವೇ ವೈದಿಕಶಾಹಿಯ ಒತ್ತಡ ಇವರ ಮೇಲೆ ಇರಬೇಕು. ಇಲ್ಲವಾದರೆ ಹೀಗೆ ಹಸಿ ಸುಳ್ಳುಗಳನ್ನು ಹೇಳುವುದು ಸಾಧ್ಯವಿರಲಿಲ್ಲ.

ಒಂದಂತೂ ನಿಜ. ಭಾರತದಲ್ಲಿರುವ ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ವಲಸಿಗರು, ಇಡೀ ಭಾರತವೇ ಬಹುತ್ವದ ನೆಲೆಯಲ್ಲಿ ಜೈವಿಕವಾಗಿಯೂ ಸಾಂಸ್ಕೃತಿಕವಾಗಿಯೂ ರೂಪುಗೊಂಡ ದೇಶ. ಇಲ್ಲಿ ಹರಪ್ಪ ನಾಗರಿಕತೆ ಜನರು ಹುಟ್ಟು ಹಾಕಿದ್ದ ಕೃಷಿ, ಸಂಸ್ಕೃತಿ, ಧರ್ಮಗಳನ್ನು ಹೊರತುಪಡಿಸಿದರೆ ವೈದಿಕ, ಪಾರ್ಸಿ, ಇಸ್ಲಾಂ, ಕ್ರೈಸ್ತ ಮೊದಲಾದ ಹಳೆಯ ಕಾಲದ ಧರ್ಮಗಳೆಲ್ಲವೂ ಹೊರಗಿನವೇ. ಆದರೆ ಈ ಎಲ್ಲ ಧರ್ಮ-ಜಾತಿಗಳ ಜನರ ನಡುವೆ ಸಹಬಾಳ್ವೆಯೊಂದೇ ದೇಶದ ಏಳಿಗೆಗೆ ಪೂರಕ.
ನಾವೀಗ ಗಟ್ಟಿಯಾಗಿ ಹೇಳಬೇಕಾಗಿದೆ- ಸತ್ಯಮೇವಜಯತೇ! ಸತ್ಯಕ್ಕೆ ಸಾವಿಲ್ಲ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಈ ಲೇಖಕರು ತಾನೆ ಬೃಹಸ್ಪತಿ ಎಂದು ತಿಳಿದಂತಿದೆ. ಸಂಶೋಧಕರು ಹಲವಾರು ವರ್ಷಗಳ ತಲ ಸ್ಪರ್ಷಿ ಶೋಧನೆಗಳಿಂದ ಬ್ರೀಟೀಷರು ತಮ್ಮ ಒಡೆದಾಳುವ ನೀತಿಗೆ ಅನುಗುಣವಾಗಿ ಸೃಷ್ಟಿಸಿದ್ದ ಹಸೀ ಸುಳ್ಳುಗಳನ್ನ ಬಯಲಿಗೆಳೆದು , ನಿಜವಾದ ಪುರಾವೆಗಳಿಂದ ಈ ದೇಶದ ಇತಿಹಾಸದ ಮರುಸಂಶೋಧನೆ ಮಾಡಿರವುದನ್ನು ಶ್ಲಾಘಿಸದೆ, ಮೊಸರಲ್ಲಿ ಕಲ್ಲು ಹುಡುಕುವ ಹುಂಬತನ ತೋರಿದ್ದಾರೆ. ನಾಲ್ಕು ಅಕ್ಷರ ಬರೆಯಲು ಬರುತ್ತದೆ ಎಂದಾಕ್ಷಣಕ್ಕೆ ಇವರೇನು ಸಕಲ ಶಾಸ್ತ್ರ್ರ ಪಂಡಿತ ರೇ? ಜನರನ್ನು ತಪ್ಪು ಹಾದಿ ಗೆಳೆಯುವದನ್ನ ನಿಲ್ಲಿಸಲಿ.

  2. ಇತಿಹಾಸದಲ್ಲಿ ಹೂತುಹೋಗಿ ಕೊಳೆತುನಾರುತ್ತಿರುವ ಸುಳ್ಳಿನ ಕಂತೆಗಳಿಂದೊಡಗೂಡಿದ ಕಳಪೆ ಲೇಖನ ಗಳಿಂದ ಜನ ಜನರ ನಡುವೆ ಸುಖಾಸುಮ್ನೆ ದ್ವೆಷದ ದಳ್ಳುರಿ ಹತ್ತಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಚಾಳಿ ಪುನರಾಂಭವಾಗಿದೆ.ಇಂಥಹ ಕೆಟ್ಟ ಚಾಳಿಯಿಂದ ಈಗಾಗಲೇ ಅದೆಷ್ಟೋ ಅನಾಹುತಗಳಾಗಿವೆ. ಇವಗಳಿಂದ ಜನರಿಗೆ ಸಮಾಜಕ್ಕೆ ಮೂರುಕಾಸಿನ ಪ್ರಯೋಜನವಿಲ್ಲ.

  3. ಇತಿಹಾಸದಲ್ಲಿ ಹೂತುಹೋಗಿ ಕೊಳೆತುನಾರುತ್ತಿರುವ ಸುಳ್ಳಿನ ಕಂತೆಗಳಿಂದೊಡಗೂಡಿದ ಕಳಪೆ ಲೇಖನ ಗಳಿಂದ ಜನ ಜನರ ನಡುವೆ ಸುಖಾಸುಮ್ನೆ ದ್ವೆಷದ ದಳ್ಳುರಿ ಹತ್ತಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಚಾಳಿ ಪುನರಾಂಭವಾಗಿದೆ.ಇಂಥಹ ಕೆಟ್ಟ ಚಾಳಿಯಿಂದ ಈಗಾಗಲೇ ಅದೆಷ್ಟೋ ಅನಾಹುತಗಳಾಗಿವೆ. ಇವಗಳಿಂದ ಜನರಿಗೆ ಸಮಾಜಕ್ಕೆ ಮೂರುಕಾಸಿನ ಪ್ರಯೋಜನವಿಲ್ಲ. ಬರೀ ದ್ವೇಷ ದಳ್ಳುರಿ ಪ್ರಚೋದನೆ.

  4. ಕುಗ್ವೆಯವರ ವಿಶ್ಲೇಷಣೆ ಚೆನ್ನಾಗಿದೆ. ಅವರ ಮಾಂಗ್ ಗಾರುಡಿ ಕುರಿತ ಪುಸ್ತಕ ಓದುತ್ತಿದ್ದೇನೆ. ಅನಿಸಿಕೆಗಳನ್ನು ಮುಂದೆ ಬರೆಯುವೆ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...