Homeಕರ್ನಾಟಕಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

ಮತಾಂಧ ಸರ್ವಾಧಿಕಾರದತ್ತ ಕರ್ನಾಟಕ: ವಿಧಾನಸಭೆಯ ಮುಂದೆ ‘ಧಾರ್ಮಿಕ ಬಂದೀಖಾನೆಯ ವಿಧೇಯಕ’

- Advertisement -
- Advertisement -
  • ನೂರ್‌ ಶ್ರೀಧರ್‌‌

ಭಾರತ ಕಂಡರಿಯದ ಕಠೋರ ವಿಧೇಯಕವೊಂದನ್ನು ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿದೆ. ಯುಎಪಿಎ ಕಾಯ್ದೆಗಳೂ ಸಹ ಇಷ್ಟೊಂದು ಕಠೋರ ಎಂಬುದನ್ನು ಗಮನಿಸಬೇಕು. ಈ ವಿಧೇಯಕದಲ್ಲಿ ಏನಿದೆ? ಯಾವ ಉದ್ದೇಶಕ್ಕೆ ಇದನ್ನು ತರಲಾಗಿದೆ? ಇದರ ಪರಣಾಮವೇನು? ಸಂಕ್ಷಿಪ್ತ ಟಿಪ್ಪಣಿ.

ವಿಧೇಯಕ ಏನು ಹೇಳುತ್ತಿದೆ?

  • ವಿಧೇಯಕಕ್ಕೆ “ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ” ಎಂಬ ಸುಂದರ ಹೆಸರನ್ನು ನೀಡಲಾಗಿದೆ.
  • ತಪ್ಪು ನಿರೂಪಣೆ, ಬಲವಂತ, ಅನುಚಿತ ಪ್ರಭಾವ, ವಂಚನೆ, ಒತ್ತಾಯ, ಆಮಿಷ, ಮದುವೆ, ಮದುವೆ ವಾಗ್ದಾನ ಅಥವಾ ಇನ್ನಾವುದೇ ವಂಚಕ ವಿಧಾನಗಳ ಮೂಲಕ ಮಾಡಲಾಗುವ ಮತಾಂತರವನ್ನು ತಡೆಯುವುದು ಮತ್ತು ಶಿಕ್ಷಿಸುವುದು ಇದರ ಉದ್ದೇಶವಾಗಿ ಹೇಳಲಾಗಿದೆ.
  • ಅಪರಾಧಿಗಳಿಗೆ 3 ರಿಂದ 5 ವರ್ಷಗಳ ತನಕ ಕಾರಾಗೃಹದ ಶಿಕ್ಷೆ.
  • ಅಪ್ರಾಪ್ತ, ಅಸ್ವಸ್ಥಚಿತ್ತ, ಮಹಿಳೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಕಠಿಣ ಶಿಕ್ಷೆ.
  • ಸಾಮೂಹಿಕ ಮತದಾನ ಮಾಡಿದರೆ ಮತ್ತಷ್ಟು ಕಠಿಣ ಶಿಕ್ಷೆ.
  • ಈ ಶಿಕ್ಷೆಗಳ ಪ್ರಮಾಣ ಏರುಗತಿಯಲ್ಲಿರುತ್ತದೆ. ಕನಿಷ್ಟ 3 ವರ್ಷದಿಂದ 10 ವರ್ಷಗಳವರೆಗಿನ ಕಾರಾಗೃಹ, 1 ಲಕ್ಷದವರೆಗೆ ಜುಲ್ಮಾನೆ ಮತ್ತು ಮತಾಂತರಗೊಂಡಿದ್ದವರಿಗೆ ಮತಾಂತರ ಮಾಡಿದವರು 5 ಲಕ್ಷದವರೆಗೆ ಪರಿಹಾರ ನೀಡಬೇಕು.
  • ಇದರಲ್ಲಿ ಯಾವುದಾದರೂ ಸಂಸ್ಥೆ ಒಳಗೊಂಡಿದ್ದರೆ ಅದರ ಮೇಲೂ ಕ್ರಮ ಕೈಗೊಳ್ಳಲಾಗುವುದು. ಅದು ಪಡೆಯುತ್ತಿರಬಹುದಾದ ಅನುದಾನಗಳನ್ನು ನಿಶೇಧಿಸಲಾಗುವುದು.
  • ಅಕ್ರಮ ಮತಾಂತರ ನಡೆದಿದೆ ಎಂಬ ದೂರನ್ನು ಮತಾಂತರಗೊಂಡವರನ್ನು ‘ಬಲ್ಲ’ ಯಾರು ಬೇಕಾದರೂ ದೂರು ನೀಡಬಹುದು.
  • ಈ ಅಪರಾಧವನ್ನು ಹೀನಾಯವಾದುದೆಂದು ಪರಿಗಣಿಸಲಾಗುವುದು ಮತ್ತು ಇದು ಜಾಮೀನು ರಹಿತವಾದದ್ದು.
  • ಆರೋಪ ಮಾಡಿದವರ ಮೇಲೆ ಅದನ್ನು ಸಾಬೀತು ಪಡಿಸುವ ಹೊಣೆ ಇರುವುದಿಲ್ಲ. ತಾನು ನಿರ್ದೂಷಿ ಎಂದು ಸಾಬೀತುಪಡಿಸುವ ಹೊಣೆ ಆರೋಪಕ್ಕೆ ಗುರಿಯಾದವರದು.
  • ಅಪರಾಧಕ್ಕೆ ಸಹಾಯ ಮಾಡಿದವರ ಮೇಲೂ ಮತ್ತು ಅವರ ಪರವಾಗಿ ನಿಲ್ಲುವವರ ಮೇಲೂ ಕ್ರಮ ಜರುಗಿಸಬಹುದು.
  • ಮತಾಂತರದ ಉದ್ದೇಶದಿಂದ ಮದುವೆಯಾಗಿದ್ದರೆ ಅಂತಹ ಅಂತರ್ ಧರ್ಮೀಯ ಮದುವೆಗಳನ್ನು ರದ್ದುಗೊಳಿಸಬಹುದು.
  • ಸಕ್ರಮವಾಗಿ ಮತಾಂತರವಾಗಲು ಬಯಸಿದಲ್ಲಿ ಅದಕ್ಕೆ ಸುದೀರ್ಘ ಪ್ರಕ್ರಿಯೆಯ ಮೂಲಕ ಹಾದು ಹೋಗಬೇಕು: 30 ದಿನಗಳ ಮೊದಲು ಮತಾಂತರವಾಗುವವರು ಮತ್ತು ಮತಾಂತರ ಮಾಡುವವರು ತಮ್ಮ ವಿವರ ಹಾಗೂ ಉದ್ದೇಶಗಳುಳ್ಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ಅದರ ಕುರಿತು ತಾಲ್ಲೂಕು ಹಾಗೂ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರಕಟಣೆ ಹಾಕಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು, ಬಂದ ಆಕ್ಷೇಪಣೆಗಳನ್ನು ವಿಚಾರಣೆಗೆ ಒಳಪಡಿಸಬೇಕು, ಅನುಮೋದನೆ ದೊರಕಿದಲ್ಲಿ ಅದರ ಪ್ರಕಟಣೆಯನ್ನು ಮತ್ತೆ ಜಿಲ್ಲಾಧಿಕಾರಿ ಕಛೇರಿಗಳಲ್ಲಿ ಹಾಕಬೇಕು. ಅದಕ್ಕೆ ಯಾವ ಆಕ್ಷೇಪಣೆಯೂ ಬರದಿದ್ದಲ್ಲಿ ಆಗ ಅದನ್ನು ಸಕ್ರಮಗೊಳಿಸಲಾಗುವುದು. ಆದರೆ ಈ ಪ್ರಕ್ರಿಯೆಯಲ್ಲಿ ದೋಷ ಅಥವ ದುರುದ್ದೇಶ ಕಂಡುಬಂದಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳು ಪೋಲೀಸರಿಗೆ ಸೂಚಿಸಬಹುದು. ಈ ಕ್ರಮವನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಬಹುದು.

ಇದನ್ನೂ ಓದಿ:ಮತಾಂತರ: ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಆರೋಪ ತಳ್ಳಿಹಾಕಿ ವರದಿ ನೀಡಿದ್ದ ತಹಸೀಲ್ದಾರ್ ವರ್ಗಾವಣೆ!

ಇದರ ಉದ್ದೇಶಗಳೇನು?

  • ಧಾರ್ಮಿಕ ದುರಭಿಮಾನ ಮತ್ತು ವಾಗ್ವಾದಗಳಲ್ಲಿ ರಾಜ್ಯವನ್ನು ಸಿಲುಕಿಸುವುದು ಮತ್ತು ಮುಂದಿನ ಚುನಾವಣೆಯಲ್ಲಿ ಅದರ ರಾಜಕೀಯ ಲಾಭ ಪಡೆಯುವುದು.
  • ದಲಿತ, ಆದಿವಾಸಿ, ಅಲೆಮಾರಿ ಸಮುದಾಯಗಳು ಜಾತಿ ಬಂಧನದಿಂದ ಮುಕ್ತಿ ಪಡೆಯದಂತೆ ಕಟ್ಟಿಡುವುದು.
  • ಅಂತರ್ ಧರ್ಮೀಯ ಮದುವೆಗಳನ್ನು ತಡೆಯುವುದು. ಮಹಳೆಯರನ್ನು ಹೊಸಿಲು ದಾಟದಂತೆ ಬಂಧಿಸುವುದು.
  • ಕ್ರೈಸ್ತ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳನ್ನು ಗುರಿಯಾಗಿಸಿ ಕಟಕಟೆಯಲ್ಲಿ ನಿಲ್ಲಿಸುವುದು. ಅವರ ಸಂಪನ್ಮೂಲಗಳನ್ನು ರದ್ದುಗೊಳಿಸಿ, ಅವು ಮಾಡುತ್ತಿದ್ದ ಸೇವಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಾಡುವುದು.
  • ಹೋರಾಟಗಾರರನ್ನು ಮತ್ತೊಮ್ಮೆ ಭಾವನಾತ್ಮಕ ವಾದ ವಿವಾದದಲ್ಲಿ ಮುಳುಗಿಸಿ ನಿಜವಾದ ವಿಚಾರಗಳ ಸುತ್ತ ಹೋರಾಟಗಳು ಬೆಳೆಯದಂತೆ ನೋಡಿಕೊಳ್ಳುವುದು.

ಇದನ್ನೂ ಓದಿ:ಮತಾಂತರ ನಿಷೇಧ ಕಾಯಿದೆ ಹಿಂದೆ ದೇಶದ ಕೋಮುಸೌಹಾರ್ದತೆ ಹಾಳುಗೆಡವುವ ದುರುದ್ದೇಶವಿದೆ- ಸಿದ್ದರಾಮಯ್ಯ

ಇದರ ಪರಿಣಾಮಗಳೇನು?

  • ಆಮಿಷ ಮತ್ತು ಅನುಚಿತ ಪ್ರಭಾವದ ಹೆಸರಿನಲ್ಲಿ ಸಲೀಸಾಗಿ ಅಲ್ಪಸಂಖ್ಯಾತ ಧರ್ಮದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ಕಟಕಟೆಯಲ್ಲಿ ನಿಲ್ಲಿಸಬಹುದು.
  • ಅವರಿಗೆ ಜಾಮೀನು ಸಿಗದಂತೆ, ಅವರ ಪರವಾಗಿ ಯಾರೂ ದನಿ ಎತ್ತದಂತೆ ಮಾಡಬಹುದು. ಅವರ ಆರ್ಥಿಕ ಸಂಪನ್ಮೂಲಗಳನ್ನೆಲ್ಲಾ ರದ್ದುಗೊಳಿಸಬಹುದು.
  • ಕೇಸರಿ ಪಡೆಗಳಿಗೆ, ಪೋಲೀಸ್ ಪಡೆಗಳಿಗೆ ಮತ್ತು ಅಧಿಕಾರಿಗಳಿಗೆ ಅಲ್ಪಸಂಖ್ಯಾತರನ್ನು ಕಾಡುವ ಅಪರಿಮಿತ ಅಧಿಕಾರವನ್ನು ನೀಡಲಾಗುತ್ತಿದೆ.
  • ಜಾತಿ ಮತ್ತು ಪುರುಷ ಮೇಲಾಧಿಪತ್ಯದಿಂದ ದೌರ್ಜನ್ಯಗಳಿಂದ ಮುಕ್ತಿ ಪಡೆಯಲು ದಲಿತರು, ಆದಿವಾಸಿಗಳು, ಅಲೆಮಾರಿಗಳು ಬೌದ್ಧ, ಕ್ರೈಸ್ತ, ಸಿಖ್ ಅಥವ ಮುಸ್ಲಿಂ ಧರ್ಮಕ್ಕೆ ಮತಾತಂತರಗೊಂಡ ಪರಿಪಾಠ ಇದ್ದದ್ದಿದೆ. ಸ್ವಯಂ ಇಚ್ಛೆ ಮಾತ್ರವಲ್ಲ ಮುಕ್ತಿಯ ಮಾರ್ಗಗಳಾಗಿಯೂ ದಮನಿತ ಜನ ಅದನ್ನು ಪರಿಗಣಿಸಿದ್ದಿದೆ. ಸ್ವಯಂ ಅಂಬೇಡ್ಕರ್ ಅವರು ಮುಂದೆ ನಿಂತು ಅದನ್ನು ಮಾಡಿಸಿದ್ದಾರೆ. ಸ್ವಧರ್ಮದಲ್ಲಿ ಸೂಕ್ತ ಗೌರವ ನೀಡಿ ಉಳಿಸಿಕೊಳ್ಳಲಾಗದ ಜಾತಿಗ್ರಸ್ಥ ಮನಸ್ಸುಗಳು ಈಗ ಬಲವಂತದ ಮೂಲಕ ದಮನಿತ ಸಮುದಾಯಗಳನ್ನು ಜಾತಿ ಮತ್ತು ಪುರುಷಾಧಿಪತ್ಯ ವ್ಯವಸ್ಥೆಯಡಿ ಕಟ್ಟಿಡಲು ಹೊರಟಿದ್ದಾರೆ.
  • ಅಲ್ಪಸಂಖ್ಯಾತ ಸಮುದಾಯಗಳು ದೇಶದ ಉದ್ದಗಲಕ್ಕೂ ಆಹಾರ, ಆರೋಗ್ಯ, ಶಿಕ್ಷಣವನ್ನು ನೀಡುವಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಫಲ ಈ ದೇಶದ ದಮನಿತ ಮತ್ತು ಶೋಷಿತ ಜನ ವರ್ಗಗಳು ಪಡೆದಿವೆ, ಪಡೆಯುತ್ತಿವೆ. ಈ ಎಲ್ಲಾ ಸಂಸ್ಥೆಗಳು ಶಂಕಿತ ಸ್ಥಾನದಲ್ಲಿ ನಿಲ್ಲಲಿವೆ ಮತ್ತು ನಿಂತು ಹೋಗುವ ಅಪಾಯವನ್ನು ಎದುರಿಸಲಿವೆ.
  • ಅಂತರ್ ಧರ್ಮೀಯ ಪ್ರೀತಿ ಮತ್ತು ಅಂತರ್ ಧರ್ಮೀಯ ಮದುವೆಗೆ ಶಾಶ್ವತವಾಗಿ ಮುಳ್ಳು ಬೇಲಿಯನ್ನು ಜಡಿಯಲಾಗುತ್ತಿದೆ.

ಮಾಡಬೇಕಾದುದೇನು?

ಮನುಷ್ಯರಾಗಿ ಪ್ರತಿರೋಧಿಸೋಣವೆ? ಗುಲಾಮತೆಯನ್ನು ಒಪ್ಪಿಕೊಳ್ಳೋಣವೆ? ಎಂಬ ತೀರ್ಮಾನಕ್ಕೆ ಬರಬೇಕಿರುವುದು. ಆಯ್ಕೆ ನಿಮ್ಮದು ನಮ್ಮದು.

ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸಂವಿಧಾನ ವಿರೋಧಿ ಕಾಯಿದೆಯನ್ನು ವಿರೋದಿ ಸುತ್ತನೆ. ವ್ಯಕ್ತಿಯ ಸ್ವಾತಂತ್ರ್ಯಕ್ಕೆ ದಕ್ಕೆ ತರುವ ಈ ಕಾಯಿದೆ ಕರ್ನಾಟಕ ಸರ್ಕಾರ ಕೈಬಿಡಬೇಕು

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...