Homeನಿಜವೋ ಸುಳ್ಳೋ‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ.....

‘ರಿಪಬ್ಲಿಕ್’ ಆಫ್ ಮೋದಿ, ಮೀಡಿಯಾ ಆ್ಯಂಡ್ ಪಿಆರ್‍ಒಸ್:  ಓಟು, ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ…..

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ.

- Advertisement -
- Advertisement -

ಚುನಾವಣಾ ಪ್ರಚಾರ ಅಂತ್ಯವಾದ ನಂತರವೂ, ಮತದಾರರ ಮೇಲೆ ಪ್ರಭಾವ ಬೀರಲು ‘ಭಕ್ತಿ’ಯನ್ನೂ ಒಂದು ಸರಕಾಗಿಸಿದ ಮೋದಿ, ಮೀಡಿಯಾ ಮತ್ತು ಪಿಆರ್‍ಒಗಳ ರಿಪಬ್ಲಿಕ್ ಕಳೆದ ಐದು ವರ್ಷ ಇಂತಹ ಜನದ್ರೋಹ ಕೆಲಸದಲ್ಲೇ ನಿರತವಾಗಿತ್ತಲ್ಲವೇ?

ಆಯ್ತು, ಪ್ರಧಾನಿ ನರೇಂದ್ರ ಮೋದಿಯವರಿಗೆ ಭಕ್ತಿ ಉಕ್ಕಿ ಬಂದಿತ್ತು, ಅವರು ಕೇದಾರನಾಥಕ್ಕೆ ಹೋದರು. ಆದರೆ ಇದಿಷ್ಟನ್ನು ಜನರಿಗೆ ತಿಳಿಸಿಬಿಟ್ಟಿದ್ದರೆ ಮೀಡಿಯಾ ಕೆಲಸ ಮುಗಿದಿರೋದು. ಆದರೆ, ಬಹುಪಾಲು ದೃಶ್ಯ ಮಾಧ್ಯಮಗಳು ಇದನ್ನೊಂದು ತಪ್ಪಸ್ಸಿನಂತೆ ಬಿಂಬಿಸಿ, ಜನರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಅಸಹ್ಯವಾಗಿತ್ತು. ಪ್ರಧಾನಿ ಸಾಹೇಬರ ಪಿಆರ್‍ಒ ಟೀಮ್ ಅಂತೂ ಪ್ರಧಾನಿಯನ್ನು ಫ್ಯಾನ್ಸಿ ಡ್ರೆಸ್ ಮಾಡೆಲ್ ಮಟ್ಟಕ್ಕೆ ಇಳಿಸಿದೆ. ಮೋದಿ-ಮೀಡಿಯಾ-ಪಿಆರ್‍ಒ ‘ರಿಪಬ್ಲಿಕ್’ ಓಟು ಮತ್ತು ಟಿಆರ್‍ಪಿಗಾಗಿ ಯಾವ ಮಟ್ಟಕ್ಕೂ ಇಳಿಯಬಲ್ಲದು. ಆದರೆ, ಪಾಪ, ಈ ಸಲ ಏರಿದ್ದಾರೆ, ಕೇದಾರ ಬೆಟ್ಟ ಏರಿದ್ದಾರೆ! ಸೋ, ಯಾವ ಮಟ್ಟಕ್ಕಾದರೂ ಏರಬಲ್ಲರು ಅಂತ ಬೇಕಾದರೆ ಓದಿಕೊಳ್ಳಿ!

‘ಮುಂಜಾನೆಯೇ ಮೋದಿ ‘ಪರಿಕ್ರಮ’ ಮುಗಿಸಿ, 16 ಪೂಜಾವಿಧಾನಗಳನ್ನೂ ಮುಗಿಸಿ 2 ಕಿ.ಮೀ ಟ್ರೆಕ್ಕಿಂಗ್ ಮಾಡಿ ಗುಹೆ ತಲುಪಿ ಧ್ಯಾನಾಸಕ್ತರಾದರು. ಈ ವಯಸ್ಸಲ್ಲಿ ಇದೆಂತಹ ಶೃದ್ಧೆ, ಭಕ್ತಿ …ಅವರ ದೇಹಕ್ಕೆ ಸುಸ್ತೇ ಇಲ್ಲವೇನೋ?’ –ರಿಪಬ್ಲಿಕ್ ಟಿವಿಯ ನ್ಯೂಸ್ ಎಡಿಟರ್ ವಿವೇಕ್ ಶಾಂಡಿಲ್ಯನ ಸ್ಪಾಟ್ ವರದಿಯಿದು. ಪ್ರೈಮ್ ನ್ಯೂಸ್ ವರದಿ. ರಾತ್ರಿನೂ ಇತ್ತು. ಅದು ಅಲ್ಲದೇ ಇವತ್ತು ಸ್ಪೇಷಲ್ ಸ್ಟೋರಿ ಬೇರೆ ಐತಂತೆ!

‘ಮೋದಿ ಅಧಿಕಾರಿಗಳೊಂದಿಗೆ ಕೇದಾರನಾಥ ಪುನರ್‍ನಿರ್ಮಾಣದ ಕಾಮಗಾರಿ ಕುರಿತು ಚರ್ಚಿಸಿದರು.. ದುರ್ಗಮ ಹಾದಿಯಲ್ಲಿ ಕೋಲು ಹಿಡಿದು ಬೆಟ್ಟ ಏರಿದರು. ಆಗ ಅವರ ಮುಖದಲ್ಲಿ ಬೆವರಿತ್ತು’…-ಸೂಪರ್ ಇದಪ್ಪ ರಿಪೋರ್ಟಿಂಗ್ ಅಂದ್ರೆ!

ನ್ಯೂಸ್ 18 ಕನ್ನಡ ಹಿನ್ನೆಲೆಯಲ್ಲಿ ಒಂದು ಭಕ್ತಿಯ ಹಾಡಿನ ಸಂಗೀತ ತೇಲಿಬಿಟ್ಟು ಪಾವನವಾಯಿತು. ಸಕಲ ಸೌಲಭ್ಯಗಳ ಆ ಕೃತಕ ಗುಹೆಯಲ್ಲಿ ಮೋದಿಯ ಕೃತಕ ಧ್ಯಾನದ ಬಗ್ಗೆ ಇವರಾರೂ ಚಕಾರ ಎತ್ತಲಿಲ್ಲ. ಇದನ್ನು ಗೋದಿ ಮೀಡಿಯಾ ಎನ್ನದೆ ಬೇರೆ ಎನನ್ನಬೇಕು.

ಇದಕ್ಕೆ ವ್ಯತಿರಿಕ್ತವಾಗಿ ನೀವು ಸೋಷಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದರೆ ಬರೀ ಮೋದಿ ಮೇಲಿನ ಟ್ರೋಲ್ ಗಳೇ ಕಾಣುತ್ತಿವೆ. ಕಳೆದೊಂದು ವಾರದಿಂದ ರಾಡಾರ್ ಮೋಡ, ಕವನ, ಸ್ಕ್ರಿಪ್ಟೆಡ್ ಸಂದರ್ಶನ, ಪ್ರಶ್ನೆಗಳಿಲ್ಲದ ಪತ್ರಿಕಾಗೋಷ್ಟಿ, ಈಗ ಐಟೆಕ್ ಧ್ಯಾನ ಸೇರಿದಂತೆ ಎಲ್ಲವೂ ವ್ಯಾಪಕ ಟೀಕೆಗೆ ಟ್ರೋಲ್ ಗೆ ಒಳಗಾಗಿವೆ. ಕಾರ್ಟೂನ್‍ಗಳಂತೂ ಒಂದನ್ನೊಂದು ಮೀರಿಸುವಷ್ಟು ಸೃಜನಶೀಲತೆಯಿಂದ ಕೂಡಿವೆ. ಆಡಳಿತ ಪಕ್ಷದ ನೀತಿಗಳು ಕುರಿತು ಹೀಗೆ ನಡೆದುಕೊಳ್ಳುವುದೇ ಪ್ರಜಾತಂತ್ರ. ಇದರಲ್ಲಿ ಮಾಧ್ಯಮಗಳು ನಡೆ ಪ್ರಜಾತಂತ್ರ ವಿರೋಧಿಯಾಗಿದೆ. ಆದರೆ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಬಿಟ್ಟಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...