Homeಚಳವಳಿಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಲಿಂಗತ್ವ ಕಂದರವನ್ನು ಹೆಚ್ಚಿಸಿದ ಲಾಕ್‌ಡೌನ್‌: ಮಹಿಳೆಯರನ್ನು ಮರೆತುಬಿಟ್ಟ ಸರ್ಕಾರ

ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ಆರೋಗ್ಯ ಶುಶ್ರೂಸೆ ಬೇಕಾಗುತ್ತದೆ.

- Advertisement -
- Advertisement -

ಭಾರತವು ಕೊರೋನ ಪಿಡುಗು ಮತ್ತು ನಂತರ ಹೇರಲಾದ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಕೆಲವು ತಿಂಗಳುಗಳಿಂದ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಅನುಭವಿಸುತ್ತಿದೆ. ಈ ನಿರ್ಧಾರದ ಅಯೋಜಿತ ಮತ್ತು ಕಠೋರ ಸ್ವರೂಪವು ಆರೋಗ್ಯ ಮತ್ತು ಶುಶ್ರೂಷೆಯ ಬಿಕ್ಕಟ್ಟಿನ ಹೊರತಾಗಿ ದೊಡ್ಡ ಪ್ರಮಾಣದ ಮಾನವೀಯ ದುರಂತಕ್ಕೆ ಕಾರಣವಾಯಿತು. ಅತ್ಯಂತ ಕಣ್ಣಿಗೆ ರಾಚುವ ದುಷ್ಪರಿಣಾಮವು ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲಾಯಿತು. ಅವರು ಹತಾಶರಾಗಿ ನಗರಗಳಿಂದ ನೂರಾರು ಮೈಲಿ ದೂರದಲ್ಲಿರುವ ತಮ್ಮ ಊರುಗಳಿಗೆ ಧಾವಿಸಬೇಕಾಯಿತು. ಇನ್ನೂ ಕೂಡಾ ಅವರು ಆದಾಯ ನಷ್ಟ, ಉಪವಾಸ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೆ, ಕಣ್ಣಿಗೆ ಬೀಳದ ಪರಿಣಾಮವು ಮಹಿಳೆಯರು, ಹೆಣ್ಣು ಮಕ್ಕಳು ಮತ್ತು ಅಸಮ ಲಿಂಗತ್ವವಿರುವ ವ್ಯಕ್ತಿಗಳ ಮೇಲಾಗಿದ್ದು, ಅವರು ಮೌನವಾಗಿ ತಮ್ಮ ನೋವನ್ನು ಅದುಮಿಕೊಂಡು ಕಷ್ಟಪಡುತ್ತಿದ್ದಾರೆ.

ಈ ಬಿಕ್ಕಟ್ಟಿನ ಮುಂಚೂಣಿಯಲ್ಲಿ ಆರೋಗ್ಯ ಕಾರ್ಯಕರ್ತೆಯರಾಗಿರುವ, ಆಯಾಗಳು, ದಾದಿಯರು ಮತ್ತು ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ನಮ್ಮ ಕಣ್ಣಿಗೆ ಬೀಳುತ್ತಿಲ್ಲ. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ 70 ಶೇಕಡಾದಷ್ಟು ಮಹಿಳೆಯರೇ ಇರುವುದೆಂದು ನಮಗೆಲ್ಲಾ ಗೊತ್ತಿದೆ. ಆದರೂ, ಅವರ ಸಹಜ ಹಕ್ಕುಗಳಿಗೆ ಯಾವುದೇ ಖಾತರಿಯಿಲ್ಲ. ಸಾಮಾನ್ಯವಾಗಿ ಆರೋಗ್ಯ ವ್ಯವಸ್ಥೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಗೆ ಇರುವವರೇ ಮಹಿಳೆಯರು. 10 ಲಕ್ಷಕ್ಕೂ ಹೆಚ್ಚು  ಹಲವಾರು ರಾಜ್ಯಗಳಲ್ಲಿ ಕನಿಷ್ಟ ವೇತನವನ್ನೂ ಪಡೆಯದೇ ಅತ್ಯಂತ ಹೆಚ್ಚು ಅಪಾಯವಿರುವ ಸಮುದಾಯ ಕಣ್ಗಾವಲಿನಲ್ಲಿ ತೊಡಗಿರುವುದು ನಮಗೆ ಕಾಣಿಸುತ್ತಿಲ್ಲ.

ದಾದಿಯರು ಹೇಗೆ ಆಸ್ಪತ್ರೆಗಳು ಸಂಬಳವಿಲ್ಲದೇ ಕೆಲಸ ಮಾಡಲು ಕೆಲವು ತಿಂಗಳುಗಳಿಂದ ಒತ್ತಾಯಿಸುತ್ತಿವೆ ಎಂಬ ಕುರಿತು ಗಮನ ಸೆಳೆಯಲು ಸಾಂಕೇತಿಕ ಮುಷ್ಕರವನ್ನೂ ನಡೆಸಿದ್ದಾರೆ. ವೈದ್ಯರುಗಳಿಗಿಂತ ಹೆಚ್ಚು ಸಮಯವನ್ನು ಕೊರೋನ ರೋಗಿಗಳ ಸಂಪರ್ಕದಲ್ಲಿ ಕಳೆಯುವ ಮಹಿಳಾ ಆರೋಗ್ಯ ಕಾರ್ಯಕರ್ತರಿಗೆ ಅಗತ್ಯವಾದ ಪಿಪಿಇ ಕಿಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಮಹಿಳಾ ದಾದಿಯರು ಅಶೌಚ ಮತ್ತು ಅಸುರಕ್ಷಿತ ತಾಣಗಳಲ್ಲಿ ರಾತ್ರಿ ಹೊತ್ತು ಉಳಿಯುವಂತೆ ಮಾಡಲಾಗಿದ್ದರೆ, ಹೆಚ್ಚಾಗಿ ಪುರುಷರೇ ಆಗಿರುವ ವೈದ್ಯರುಗಳನ್ನು ಹೊಟೇಲುಗಳಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ.

ಮನೆಯೊಳಗೂ ಮಹಿಳೆಯರು ಮಾಡುವ ಸಂಬಳವಿಲ್ಲದ ಕಾಯಕದ ಹೊರೆಯು ಹೆಚ್ಚಿದೆ.  ಏಕೆಂದರೆ, ಮನೆಯಲ್ಲಿ ಅಸ್ವಸ್ಥ ಕುಟುಂಬದ ಸದಸ್ಯರ ಆರೈಕೆ ಮಾಡುವವರೂ ಅವರೇ, ಕ್ವಾರಂಟೈನ್‌ನಲ್ಲಿರುವವರನ್ನು ನೋಡಿಕೊಳ್ಳುವವರೂ ಅವರೇ, ಮನೆಗಳಿಗೆ ಪಡಿತರ ತರುವವರು, ಕೆಲವು ಕಡೆಗಳಲ್ಲಿ ದೂರದೂರದಿಂದ ನೀರು ತರುವವರೂ ಅವರೇ. ಇವೆಲ್ಲವೂ ಅವರನ್ನು ಹೆಚ್ಚಿನ ಸೋಂಕು ಅಪಾಯಕ್ಕೆ ತಳ್ಳುತ್ತದೆ.

ಈ ಸಂದರ್ಭದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ ಮತ್ತು ಅಂಗನವಾಡಿಗಳ ಪೌಷ್ಠಿಕ ಪೂರಕ ಆಹಾರ ಲಭಿಸದೇ ಇರುವುದರಿಂದ ಮತ್ತು ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಪುರುಷರು ಮನೆಗೆ ಮರಳಿರುವುದರಿಂದ ಪ್ರತಿಯೊಂದು ಮನೆಯಲ್ಲಿ, ಮುಖ್ಯವಾಗಿ ಬಡವರ ಮನೆಗಳಲ್ಲಿ ಆಹಾರಕ್ಕಾಗಿ ಒತ್ತಡವು ಹೆಚ್ಚಿದೆ. ಸಾಮಾನ್ಯವಾಗಿ ಮಹಿಳೆಯರು ಕೊನೆಗೆ ಉಣ್ಣುತ್ತಾರೆ ಮತ್ತು ಪುರುಷರಿಗೆ ಹೋಲಿಸಿದರೆ ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಈಗ ಆಹಾರದ ಲಭ್ಯತೆ ಕಡಿಮೆಯಾಗಿರುವಾಗ, ಮುಖ್ಯವಾಗಿ ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರ ಪರಿಸ್ಥಿತಿ ಹದಗೆಡಲಿದೆ. ಇದು ಒಂದು ಆತಂಕಕಾರಿ ವಿಷಯವಾಗಿದೆ. ಯಾಕೆಂದರೆ, ಭಾರತವು ಈಗಾಗಲೇ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ದೈಹಿಕ ದೌರ್ಬಲ್ಯದ ಮಟ್ಟದಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದು, ನಾಚಿಕೆಗೇಡಿನ ಪರಿಸ್ಥಿತಿಯಲ್ಲಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ 2016 (NFHS-4) ತೋರಿಸಿರುವಂತೆ, ಗರ್ಭಿಣಿಯರು ಮತ್ತು ಮೊಲೆಯೂಡಿಸುವ ಮಹಿಳೆಯರೂ ಸೇರಿದಂತೆ ಒಟ್ಟಾರೆ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಮನೆಗಳ ಒಳಗೆಯೇ, ಅತ್ಯಂತ ಹೆಚ್ಚಿನ ಮಾನಸಿಕ ಒತ್ತಡದ ಸಂದರ್ಭದಲ್ಲಿ ಕೌಟುಂಬಿಕ ಹಿಂಸೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಲಾಕ್‌ಡೌನ್ ಸಮಯದಲ್ಲಿ ಹಿಂಸಾಚಾರದ ವರದಿ ಮಾಡುವುದು ಅಥವಾ ಔಷಧಾಲಯಗಳು ಮುಚ್ಚಿರುವುದರಿಂದ ಸೂಕ್ತವಾದ ಚಿಕಿತ್ಸೆ ಪಡೆಯುವುದು ಕೂಡಾ ಅತ್ಯಂತ ಕಷ್ಟಸಾಧ್ಯ ವಿಷಯವಾಗಿದೆ. ಅದಕ್ಕಿಂತ ಹೆಚ್ಚಾಗಿ ಹಿಂಸಾತ್ಮಕವಾಗಿ ಲಾಕ್‌ಡೌನ್ ಅನುಷ್ಟಾನಗೊಳಿಸುತ್ತಿರುವ ಪೊಲೀಸರನ್ನು ಸಂಪರ್ಕಿಸಿ ನೆರವು ಪಡೆಯುವುದೂ ಕೂಡಾ ತುಂಬಾ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ಮತ್ತು ಅಸಮ ಲಿಂಗತ್ವ ಹೊಂದಿರುವ ವ್ಯಕ್ತಿಗಳು ಹಾಗೂ ಲೈಂಗಿಕ ಕಾರ್ಮಿಕರು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಲೈಂಗಿಕ ಕಿರುಕುಳ ಹೊಂದಿರುವ ಸಾಧ್ಯತೆಗಳು ಇವೆ. ಅವರಿಗೆ ಈ ಬಲಾತ್ಕಾರದ ಲಾಕ್‌ಡೌನ್ ಸಂದರ್ಭದಲ್ಲಿ ರಕ್ಷಣೆ, ಸಂತಾನೋತ್ಪತ್ತಿ ನಿರೋಧಕ ಸಾಧನಗಳ ಲಭ್ಯತೆ ಇರುವುದು ಸಾಧ್ಯವಿಲ್ಲ. ಇದು ಎಚ್ಐವಿ ಮತ್ತಿತರ ಲೈಂಗಿಕವಾಗಿ ಹರಡುವ ರೋಗಗಳ, ಬಯಸದಿರುವ ಗರ್ಭ, ಗರ್ಭಪಾತ ಇತ್ಯಾದಿ ಅಪಾಯಗಳನ್ನು ಗಣನೀಯವಾಗಿ ಹೆಚ್ಚುಮಾಡುತ್ತದೆ.

ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳ ಪ್ರತಿಷ್ಠಾನ (FRHSI) ಅಧ್ಯಯನದ ಪ್ರಕಾರ ಈ ಲಾಕ್‌ಡೌನ್ ಎಂಟು ಲಕ್ಷಕ್ಕೂ ಹೆಚ್ಚು ಅಸುರಕ್ಷಿತ ಗರ್ಭಪಾತಕ್ಕೆ ಕಾರಣವಾಗಲಿದೆ. 23 ಲಕ್ಷ ಬಯಸದ ಗರ್ಭಗಳಿಂದ 1,750ರಷ್ಟು ತಾಯಂದಿರ ಮರಣವು (ಎಂಎಂಅರ್) ಸಂಭವಿಸಲಿವೆ. ಹೆಣ್ಣುಮಕ್ಕಳ ಋತುಕಾಲದ (ಮುಟ್ಟು ಕಾಲದ) ಸುರಕ್ಷಾ ಸಾಧನಗಳು ಸ್ಯಾನಿಟರಿ ಪ್ಯಾಡ್) ಇತ್ಯಾದಿ ಇಲ್ಲಿಯವರೆಗೆ ಶಾಲೆಯಿಂದ, ಅಂಗನವಾಡಿಯಿಂದ ಅಥವಾ ಆಶಾ ಕಾರ್ಯಕರ್ತೆಯರಿಂದ ದೊರಕುತ್ತಿದ್ದವು. ಈಗ ಅದೂ ಇಲ್ಲವಾಗಿದೆ. ದುಬಾರಿಯಾದ ಇಂತಹ ಉತ್ಪನ್ನಗಳನ್ನು ಖರೀದಿಸಲು ಎಷ್ಟು ಹೆಣ್ಣುಮಕ್ಕಳಿಗೆ ಸಾಧ್ಯವಿದೆ ಮತ್ತು ಎಷ್ಟು ಜನ ಈ ಲಾಕ್‌ಡೌನ್ ಸಂದರ್ಭದಲ್ಲಿ ಹೋಗಿ ಕೊಳ್ಳಲು ಸಾಧ್ಯ?

ಅವಸರದ ಲಾಕ್‌ಡೌನ್ ನಿರ್ಧಾರದ ಸಂದರ್ಭದಲ್ಲಿ ಭಾರತದಲ್ಲಿ ಪ್ರತಿನಿತ್ಯ 70,000 ಮಹಿಳೆಯರು ಹೆರುತ್ತಾರೆ, ಮತ್ತು 45,000 ಹೆಣ್ಣುಮಕ್ಕಳು ಗರ್ಭಪಾತ ಮಾಡಿಸುತ್ತಾರೆ ಎಂಬುದನ್ನು ಸರಕಾರ ಮರೆತುಬಿಟ್ಟಿದೆ. ಪ್ರತಿನಿತ್ಯ 10,000ದಷ್ಟು ಮಹಿಳೆಯರಿಗೆ ವಿಶೇಷ ಶುಶ್ರೂಷೆ ಬೇಕಾಗಿರುವ ಹೆರಿಗೆ ಸಂಬಂಧಿ ಕಷ್ಟಗಳು ಎದುರಾಗುತ್ತವೆ ಎಂಬುದೂ ಸರಕಾರಕ್ಕೆ ಮರೆತುಹೋದಂತಿದೆ. ಇಂತವರಿಗೆ ಸರಕಾರಿ ಆಗಲೀ, ಖಾಸಗಿಯಾಗಲೀ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

 

ಲಾಕ್‌ಡೌನ್‌ನ ಅವಸರದ ನಿರ್ಧಾರದ ಈ ಸಂದರ್ಭದಲ್ಲಿ ಹಲವಾರು ಗರ್ಭಿಣಿಯರು ಐದಾರು ಆಸ್ಪತ್ರೆಗಳಿಗೆ ಅಲೆದಾಡಿದ ಮಾಧ್ಯಮ ವರದಿಗಳಿವೆ. ಅವುಗಳು ರೋಗಿಗಳನ್ನು ದಾಖಲಿಸಲು ಹಿಂಜರಿಯುತ್ತಿರುವುದೇ ಇದಕ್ಕೆ ಕಾರಣ. ಮಹಿಳೆಯರು ಮನೆಗಳಲ್ಲಿ, ರೈಲುಗಳಲ್ಲಿ, ವಾಹನಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇಂತಹ ಪ್ರಕರಣಗಳ ಕುರಿತು ದೂರುಗಳು ತೆಲಂಗಾಣ, ಮುಂಬಯಿ ಮತ್ತು ದಿಲ್ಲಿ ಹೈಕೋರ್ಟ್‌ಗಳಲ್ಲಿ ದಾಖಲಾಗಿವೆ. ಹಲವಾರು ಮಹಿಳೆಯರು ಬಹಿರಂಗವಾಗಿ ತಮ್ಮ ಊರುಗಳಿಗೆ ನೂರಾರು ಮೈಲಿ ನಡೆಯುತ್ತಾ ರಸ್ತೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರ ಮಾಲಕರಾಗಲೀ, ಸರಕಾರವಾಗಲೀ ಅವರ ನೆರವಿಗೆ ಬಂದಿಲ್ಲ. ಇದಕ್ಕಿಂತ ನಾಚಿಕೆಗೆಡು ಬೇರೆ ಇದೆಯೇ ಒಂದು ದೇಶಕ್ಕೆ?

ಇದು ಭಾರತವು ಎದುರಿಸಬೇಕಾಗಿರುವ ಮೊದಲ ಬಿಕ್ಕಟ್ಟು ಏನೂ ಅಲ್ಲ. ಈ ದೇಶದಲ್ಲಿ ಮಹಿಳೆಯರು ಮತ್ತವರ ಆರೋಗ್ಯದ ಬಗ್ಗೆ ದಂಗುಬಡಿಸುವಂತಹ ಅಸಡ್ಡೆ ತೋರಲಾಗಿದೆ. ಯಾವುದೇ ಸಾಂಕ್ರಾಮಿಕ ರೋಗವು ಪುರುಷರು, ಮಹಿಳೆಯರು, ಅಸಮ ಲಿಂಗತ್ವ ಹೊಂದಿರುವವರು ಮತ್ತು ಮಕ್ಕಳ ಮೇಲೆ ಬೇರೆಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎಂಬ ಸೂಕ್ಷ್ಮತೆಯನ್ನು ನಮ್ಮ ಯೋಜಕರು ತಿಳಿದುಕೊಳ್ಳಬೇಕಾಗುತ್ತದೆ. ಜಾತಿ, ಧರ್ಮ, ಅಂತಸ್ತು, ಪ್ರಾದೇಶಿಕತೆ, ಸಂಪನ್ಮೂಲ ಮತ್ತು ಸೌಲಭ್ಯಗಳ ಲಭ್ಯತೆಯ ಆಧಾರದಲ್ಲೂ ಇವುಗಳು ಬದಲಾಗುತ್ತವೆ ಎಂಬುದನ್ನು ಕೂಡಾ ಅವರು ತಿಳಿದುಕೊಳ್ಳಬೇಕು. ಈ ಪಿಡುಗು ಈಗಾಗಲೇ ನಮ್ಮ ಸಮಾಜದಲ್ಲಿ ಇರುವ ಲಿಂಗತ್ವ ಸಂಬಂಧಿ ಕಂದರವನ್ನು ಇನ್ನಷ್ಟು ಆಲ, ಅಗಲ ಮಾಡದಂತೆ ತಡೆಯಬೇಕು.

  • ಜಶೋಧರ ದಾಸ್‌ಗುಪ್ತಾ

ಅನುವಾದ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ವರ್ಷಗಳ ಕಾಲ ವೇತನ ರಹಿತ ರಜೆ: ಸಂಕಷ್ಟದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...