Homeಕರ್ನಾಟಕರೋಹಿತ್‌ ಚಕ್ರತೀರ್ಥ ‘ಐಐಟಿ-ಸಿಇಟಿ’ ಪ್ರೊಫೆಸರ್‌ ಹೌದೆ? ‘ಐಐಟಿ-ಸಿಇಟಿ’ ಎಂದರೇನು?

ರೋಹಿತ್‌ ಚಕ್ರತೀರ್ಥ ‘ಐಐಟಿ-ಸಿಇಟಿ’ ಪ್ರೊಫೆಸರ್‌ ಹೌದೆ? ‘ಐಐಟಿ-ಸಿಇಟಿ’ ಎಂದರೇನು?

- Advertisement -
- Advertisement -

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ವಿವಾದ ಮತ್ತಷ್ಟು ತಾರಕಕ್ಕೇರಿದೆ. ಸಮಿತಿಗೆ ಬಲಪಂಥೀಯ ಟ್ರೋಲರ್‌‌ ರೋಹಿತ್‌ ಚಕ್ರತೀರ್ಥ ಅವರನ್ನು ಯಾವ ಮಾನದಂಡಗಳ ಅಡಿಯಲ್ಲಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು, “ರೋಹಿತ್‌ ಚಕ್ರತೀರ್ಥ ಹಿನ್ನೆಲೆ ಏನೆಂದು ತಿಳಿಯದೆ ಮಾತನಾಡಬಾರದು, ಅವರೊಬ್ಬ ಐಐಟಿ-ಸಿಇಟಿ ಪ್ರೊಫೆಸರ್” ಎಂದು ಹೇಳಿದ್ದರು.

ಸಚಿವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ದೇಶದಲ್ಲಿ ‘ಸಿಇಟಿ ಪ್ರೊಫೆಸರ್’ ಎಂಬ ಹುದ್ದೆ ಇದೆಯಾ?, ವಾಸ್ತವದಲ್ಲಿ ಚಕ್ರತೀರ್ಥ ಪಡೆದ ಶಿಕ್ಷಣ ಏನು? ಪ್ರೊಫೆಸರ್ ಆಗುವ ಪ್ರಕ್ರಿಯೆ ಅಷ್ಟು ಸುಲಭವೇ? ಎಂಬ ಪ್ರಶ್ನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಲಾಗುತ್ತಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೋಹಿತ್ ಚಕ್ರತೀರ್ಥ ಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ಹುದ್ದೆಗೆ ನೇಮಕವಾದ ದಿನದಿಂದಲೂ ಅವರ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಹಿನ್ನೆಲೆ ಸಾಕಷ್ಟು ಪ್ರಶ್ನೆಗೆ ಒಳಗಾಗಿತ್ತು. ಸೋಮವಾರ ಶಿಕ್ಷಣ ಸಚಿವರೇ ನಡೆಸಿದ ಪತ್ರಿಕಾಗೋಷ್ಠಿಯಲ್ಲೂ ಇದೇ ಪ್ರಶ್ನೆಗಳು ಪತ್ರಕರ್ತರು ಕೇಳಿದ್ದರು.

ಇದನ್ನೂ ಓದಿ: ರೋಹಿತ್‌ ಚಕ್ರತೀರ್ಥ ಐಐಟಿ, ಸಿಇಟಿ ಪ್ರೊಫೆಸರ್‌‌: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಸಚಿವ ಬಿ ಸಿ ನಾಗೇಶ್, “ಶಿಕ್ಷಣ ತಜ್ಞ ಎನ್ನುವುದಕ್ಕೆ ಎಲ್ಲಿಯಾದರೂ ಪ್ರಮಾಣ ಪತ್ರ ಇದೆಯಾ? ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡುತ್ತಿರುವವರು ಅವರ ಹಿನ್ನೆಲೆ ಹೇಳಲಿ ನೋಡೋಣ. ಚಕ್ರತೀರ್ಥ ಈ ಹಿಂದೆ ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಎಂಬುದನ್ನು ಮರೆಯಬಾರದು” ಎಂದು ರೋಹಿತ್‌ ಚಕ್ರತೀರ್ಥ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.

ಮುಂದುವರೆದು, “ವಿಷಯ ಗೊತ್ತಿಲ್ಲದೇ ಮಾತನಾಡಿ ಈ ದೇಶದ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಪ್ರೊಫೆಸರ್‌ ಎಂಬುದು ಶಿಕ್ಷಣ ತಜ್ಞರೋ ಅಥವಾ ರೈಲು ನೌಕರರೋ? ಚಕ್ರತೀರ್ಥ ಅವರ ಹಿನ್ನೆಲೆ ಗೊತ್ತಿಲ್ಲದೇ ಪ್ರಶ್ನೆ ಮಾಡಬಾರದು” ಎಂದು ಹೇಳಿದ್ದರು.

ಚಕ್ರತೀರ್ಥ ಪ್ರೊಫೆಸರ್ ಎಂಬುದು ನಿಜವೇ?

ರೋಹಿತ್‌ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ನೇಮಕ ಮಾಡುವಾಗ ಶಿಕ್ಷಣ ಇಲಾಖೆ ಅವರ ವಿದ್ಯಾರ್ಹತೆ ಏನು ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಅಲ್ಲದೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಚಿವ ನಾಗೇಶ್ ತಿಳಿಸಿದ ಮಾಹಿತಿಯೂ ಅಸಮರ್ಪಕವಾಗಿದೆ.

ಐಐಟಿ ಅಂದರೆ ‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ’ ಎಂಬುವುದು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ 23 ಐಐಟಿ ಸಂಸ್ಥೆಗಳಿವೆ. ಕರ್ನಾಟಕದ ಧಾರವಾಡದಲ್ಲೂ ಐಐಟಿ ಇದೆ.

ಇದನ್ನೂ ಓದಿ: ಪಠ್ಯ ಪರಿಶೀಲನೆಗೆ ಚಕ್ರತೀರ್ಥ: ನಾಡಗೀತೆಗೆ ಅವಮಾನ ಮಾಡಿದ್ದ ಪೋಸ್ಟ್‌ ಮತ್ತೆ ವೈರಲ್

ಆದರೆ ಸಿಇಟಿ ಎಂದರೆ ಕಾಮನ್ ಎಂಟ್ರನ್ಸ್‌ ಟೆಸ್ಟ್ (CET-Common Entrance Test) ಎಂದರ್ಥ. ಅಂದರೆ ಅದೊಂದು ಪ್ರವೇಶ ಪರೀಕ್ಷೆಯಾಗಿದೆ. ಅದೊಂದು ಸಂಸ್ಥೆಯಾಗಲಿ, ಹುದ್ದೆಯಾಗಲಿ ಅಲ್ಲ. ಈ ಪರೀಕ್ಷೆ ಬರೆಯಲು ಸಾಮಾನ್ಯವಾಗಿ ಟ್ಯೂಷನ್‌ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತದೆ. ಇಂತಹ ಟ್ಯೂಷನ್‌ ಕೇಂದ್ರಗಳಿಗೆ ಮಾನ್ಯತೆಯೂ ಇರುವುದಿಲ್ಲ.

ಪರಿಷ್ಕರಣೆ ಸಮಿತಿಗೆ ಆಯ್ಕೆ ಮಾಡಲು ನಿಮ್ಮ ಅರ್ಹತೆಗಳೇನು ಎಂದು ಈ ಹಿಂದೆ ನಾನುಗೌರಿ.ಕಾಂ ಕೇಳಿದ್ದ ಪ್ರಶ್ನೆಗೆ, ರೋಹಿತ್ ಚಕ್ರತೀರ್ಥ ಅವರು, ‘ಅದನ್ನು ಸರ್ಕಾರದ ಜೊತೆಗೆ ಕೇಳಬೇಕು’ ಎಂದು ಉತ್ತರಿಸಿದ್ದರು. ಆದರೆ ಸರ್ಕಾರ ಈಗ, ‘ಚಕ್ರತೀರ್ಥ ಅವರು ಐಐಟಿ-ಸಿಇಟಿ ಪ್ರೊಫೆಸರ್‌’ ಎಂದು ಹೇಳುತ್ತಿದೆ!. ಈ ಬಗ್ಗೆ ಪ್ರತಿಕ್ರಿಯೆಗೆ ನಾನುಗೌರಿ.ಕಾಂ ಚಕ್ರತೀರ್ಥ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಈ ಮಧ್ಯೆ, ಚಕ್ರತೀರ್ಥ ಅವರು ಯಾವುದಾದರೂ ವಿಷಯದಲ್ಲಿ ವಿಶೇಷ ಪರಿಣಿತಿ ಹೊಂದಿದವರೇ? ವಿದ್ವಾಂಸರೇ? ಎಂಬ ಪ್ರಶ್ನೆಗಳನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಹುಡುಕಿದಾಗಲೂ ಅವರೊಬ್ಬ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ, ಬರಹಗಾರ ಮತ್ತು ವಿಜ್ಞಾನ ಸಂಬಂಧಿ ವಿಚಾರಗಳ ಲೇಖಕ ಎಂದಷ್ಟೇ ಮಾಹಿತಿ ಇದೆ. ಸ್ವತಃ ರೋಹಿತ್ ಚಕ್ರತೀರ್ಥ ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಯಲ್ಲಿ ತಮ್ಮನ್ನು ಶಿಕ್ಷಕ ಎಂದಷ್ಟೇ ಪರಿಚಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಿಯು ಪಠ್ಯ ಪರಿಶೀಲನೆಗೂ ಚಾಲನೆ; ಮತ್ತದೇ ಚಕ್ರತೀರ್ಥ ಸಮಿತಿಗೆ ಜವಾಬ್ದಾರಿ!

ಅವರ ಬಗ್ಗೆ ತಿಳಿದಿದ್ದ ಕೆಲವರ ಬಳಿ ವಿಚಾರಿಸಲಾಗಿ, ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ರೋಹಿತ್ ಚಕ್ರತೀರ್ಥ ಗಣಿತ ಪಾಠ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ‘ಟೆಸ್ಲಾ ಎಜುಕೇಷನ್’ ಎಂಬ‌ ಆನ್‌ಲೈನ್‌ ಪಾಠ ಮಾಡುವ ಶಿಕ್ಷಣ ಸಂಸ್ಥೆ ಹೊಂದಿರುವ ರೋಹಿತ್ ಚಕ್ರತೀರ್ಥ ಯೂಟ್ಯೂಬ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮಾಡುವ ವಿಡಿಯೋ ಸಹ ಲಭ್ಯವಾಗಿದೆ.

ಗಣಿತ ಪಾಠ ಮಾಡುವವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರು ಎಲ್ಲಾ ವಿಷಯಗಳಲ್ಲಿ ತಜ್ಞರಾಗಿರುವುದಿಲ್ಲ. ಆದರೆ, ಅದಕ್ಕಾಗಿ ಅವರು ವಿಷಯ ತಜ್ಞರ ಸಮಿತಿಯನ್ನು ರಚಿಸುತ್ತಾರೆ. ಹಿಂದಿನ ಬರಗೂರು ರಾಮಚಂದ್ರಪ್ಪನವರ ಸಮಿತಿ ಅದನ್ನೇ ಮಾಡಿತ್ತು.

ಪ್ರೊಫೆಸರ್ ಗೌರವ ಅಷ್ಟು ಸುಲಭದ್ದೆ?

ಸಚಿವ ನಾಗೇಶ್‌ ಅವರು ಹೇಳಿದಂತೆ ಓರ್ವ ಶಿಕ್ಷಕ ಪ್ರೊಫೆಸರ್ ಸ್ಥಾನಕ್ಕೆ ಏರುವ ಪ್ರಕ್ರಿಯೆಯೂ ಅಷ್ಟು ಸುಲಭದ್ದಲ್ಲ. ಮೊದಲು ಆತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸಹಾಯಕ ಪ್ರಾಧ್ಯಾಪಕ (Assistant Professor) ಆಗಿ ಕೆಲಸಕ್ಕೆ ನಿಯುಕ್ತಿಯಾಗಬೇಕು. ನಂತರ ಅವರ ಅನುಭವದ ಆಧಾರದ ಮೇಲೆ ಸಹ ಪ್ರಾಧ್ಯಾಪಕ (Associate Professor ) ಆಗಿ ಬಡ್ತಿ ನೀಡಲಾಗುತ್ತದೆ. ಆನಂತರ, ಅವರ ಸೇವಾನುಭವ ಮತ್ತು ಪ್ರಕಟಿತ ಸಂಶೋಧನಾ ಬರಹಗಳ ಆಧಾರದಲ್ಲಿ ಪ್ರೊಫೆಸರ್ ಎಂಬ ಗೌರವವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿದ ಚಕ್ರತೀರ್ಥ ಸಮಿತಿ; ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆಗೆ ಆಗ್ರಹ

ದೇಶದಲ್ಲಿ 23 ಐಐಟಿ ಸಂಸ್ಥೆಗಳಿವೆ. ಕರ್ನಾಟಕದ ಧಾರವಾಡದಲ್ಲೂ ಇದೆ. ಒಂದು ವೇಳೆ ಸಚಿವ ನಾಗೇಶ್ ಹೇಳಿದಂತೆ ರೋಹಿತ್ ಚಕ್ರತೀರ್ಥ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದರೆ, ಅದು ಯಾವ ಐಐಟಿಯಲ್ಲಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ. ಅಥವಾ ಸ್ವತಃ ರೋಹಿತ್ ಚಕ್ರತೀರ್ಥ ಅವರೇ ತಮ್ಮ ವಿದ್ಯಾರ್ಹತೆಯನ್ನು ಬಹಿರಂಗಪಡಿಸಬೇಕಿದೆ. ಸಾರ್ವಜನಿಕವಾಗಿ ಶಿಕ್ಷಣ ಖಾತೆಯ ಸಚಿವರು ಸುಳ್ಳು ಹೇಳಿದ್ದರೆ ಅದು ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗುವ ತಪ್ಪಿನಷ್ಟೇ ದೊಡ್ಡ ಪ್ರಮಾದವಾದ್ದರಿಂದ ಸರ್ಕಾರವು ಮುಜುಗರಕ್ಕೆ ಸಿಲುಕುವ ವಾತಾವರಣ ಸೃಷ್ಟಿಯಾಗುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಹಹಹಾ ಸ ಇ ಟಿ ಒಂದು ಪರೀಕ್ಷೆ, ಐಐಟಿ ಒಂದು ಖಾಸಗಿ ಸಂಸ್ಥೆ ಇದರ ಪ್ರೊಫೇಸರ್ ಅಂದರೆ ನಗುವಿನ ಸಂಗತಿ, ಇಂತಹ ಮಾತುಗಳು ಅನಕ್ಷರಸ್ತರು ಅನಕ್ಷತಸ್ತರಿಗೆ ಮಾತ್ರ ಹೇಳಬಹುದು ನಂಬಿಸಲೂ ಬಹುದು, ಆದರೆ ಜ್ನಾನವಂತರಿಗೆ ಹಾಗೂ ಶಿಕ್ಷಣ, ವಿದ್ಯಾವಂತರಿಗೆ ನಗುವಿನ ಸಂಗತಿ,
    ಎಚ್ಚರಿಕೆ: ಇದು ಬುದ್ದಿವಂತರಿಗೆ ಮಾತ್ರ.

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...