Homeಮುಖಪುಟರೋಹಿತ್‌ ಚಕ್ರತೀರ್ಥ ಐಐಟಿ, ಸಿಇಟಿ ಪ್ರೊಫೆಸರ್‌‌: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ರೋಹಿತ್‌ ಚಕ್ರತೀರ್ಥ ಐಐಟಿ, ಸಿಇಟಿ ಪ್ರೊಫೆಸರ್‌‌: ಶಿಕ್ಷಣ ಸಚಿವ ಬಿ.ಸಿ ನಾಗೇಶ್

ನಾವು ಚಕ್ರವರ್ತಿ ಸೂಲಿಬೆಲೆಯವರ ಪಾಠವನ್ನು ಸಹ ಸೇರಿಸುತ್ತೇವೆ. ಈ ದೇಶದ ಯಾವುದೇ ದೇಶಪ್ರೇಮಿಯನ್ನು ನಾವು ಮರೆಯುವುದಿಲ್ಲ. ಒಂದು ವಿಚಾರದವರ ಪಠ್ಯಗಳು ಮಾತ್ರ ಇರಬೇಕೆ? ಎಂದಿದ್ದಾರೆ.

- Advertisement -
- Advertisement -

ರೋಹಿತ್ ಚಕ್ರತೀರ್ಥ ಯಾರು? ಅವರ ಅರ್ಹತೆಯೇನು? ಅವರು ಶಿಕ್ಷಣ ತಜ್ಞರಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ ನಾಗೇಶ್, “ರೋಹಿತ್ ಚಕ್ರತೀರ್ಥ ಐಐಟಿ ಮತ್ತು ಸಿಇಟಿಗೆ ಪ್ರೊಫೆಸರ್ ಆಗಿದ್ದರು” ಎಂದಿದ್ದಾರೆ. ಶಿಕ್ಷಣ ತಜ್ಞ ಎಂಬುದಕ್ಕೆ ಸರ್ಟಿಫಿಕೇಟ್ ಕೊಡುವವರು ಯಾರು? ಎಂದಿದ್ದಾರೆ.

ಬೆಂಗಳೂರಿನಲ್ಲಿ ಪಠ್ಯ ಪರಷ್ಕರಣೆ ಕುರಿತು ಎದ್ದಿರುವ ವಿವಾದಗಳಿಗೆ ಸ್ಪಷ್ಟೀಕರಣ ನೀಡಿದ ಅವರು, “ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಹಲವಾರು ಪಠ್ಯಗಳನ್ನು ಕೈಬಿಟ್ಟಿದೆ. ಆಗ ಏಕೆ ಯಾರು ಪ್ರಶ್ನಿಸಲಿಲ್ಲ? ಮೈಸೂರು ಮಹರಾಜರ ಬಗ್ಗೆ 5 ಪುಟಗಳ ಪಾಠ ಇತ್ತು, ಅದನ್ನು ತೆಗೆದು ಸಾಲುಗಳಿಗೆ ಇಳಿಸಿತ್ತು. ಅದರ ಬದಲು ಟಿಪ್ಪು ಸುಲ್ತಾನ್ ಪಾಠ ಹಾಕಿದ್ದರು. ಟಿಪ್ಪು ಸುಲ್ತಾನ್ ಒಬ್ಬರೆ ಬ್ರೀಟಿಷರ ವಿರುದ್ಧ ಮಾತನಾಡಿದರೆ?” ಎಂದಿದ್ದಾರೆ.

ನಾವು ಪೆರಿಯಾರ್ ಬಗ್ಗೆ ಇದ್ದ ಪಠ್ಯ ತೆಗೆದಿದ್ದೇವೆ. ಈ ದೇಶದಲ್ಲಿ ರಾಮ ಆದರ್ಶವಾಗಬೇಕೊ, ರಾವಣ ಆದರ್ಶವಾಗಬೇಕೊ? ರಾಮನ ಫೋಟೊಗೆ ಚಪ್ಪಲಿಯಲ್ಲಿ ಹೊಡೆದು, ರಾವಣನನ್ನು ಪೂಜಿಸುವವರ ಬಗ್ಗೆ ನಾವು ನಮ್ಮ ಮಕ್ಕಳಿಗೆ ಓದಿಸಬೇಕಾ? ರಾಮ ವೈದಿಕ ಸಂಸ್ಕೃತಿಯನ್ನು ರಾವಣ ದ್ರಾವಿಡ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ ಎಂದು ಬರೆದಿದ್ದಾರೆ. ಇದನ್ನು ನಾವು ಬೋಧಿಸಬೇಕಾ? ಆದರ್ಶ ಪುರುಷ ರಾಮ ಎಂದಿದ್ದು, ರಾಮರಾಜ್ಯ ಬರಬೇಕು ಎಂದಿದ್ದು ನಾವಲ್ಲ ಗಾಂಧೀಜಿ ಹೇಳಿದ್ದರು ಎಂದರು.

ನಮ್ಮ ಈ ಪಠ್ಯಗಳನ್ನು ಬುದ್ದಿಜೀವಿಗಳು ವಿರೋಧಿಸುತ್ತಾರೆ. ಅವರು ರಾವಣ ವಂಶಸ್ಥರಿಗೆ ಸೇರಿರಬೇಕು. ಕುವೆಂಪು ಬಗ್ಗೆ ಪಾಠ ತೆಗೆದಿಲ್ಲ, ಹಿಂದಿನ ಸರ್ಕಾರ ತೆಗೆದಿತ್ತು. ನಾವು ಸೇರಿಸಿದ್ದೇವೆ ಎಂದರು. ಅಲ್ಲದೆ ಸಾಹಿತಿಗಳ ಜಾತಿ ಹುಡಕಬೇಡಿ, ದಯವಿಟ್ಟು ವಿಷಯದ ಕುರಿತು ಮಾತನಾಡಿ ಎಂದು ಹೇಳಿದ್ದಾರೆ.

ದೇಶಕ್ಕೆ ಹೆಡಗೇವಾರ್ ಕೊಡುಗೆಯೇನು? ಮಕ್ಕಳಿಗೆ ಆರ್‌ಎಸ್‌ಎಸ್‌ ಮನಸ್ಥಿತಿ ತುಂಬುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹೆಡಗೇವಾರ್ ವೈದ್ಯರಾದ ನಂತರ ಕ್ರಾಂತಿಕಾರಿಯಾಗಿದ್ದರು. ಅವರು ದೇಶಕ್ಕೆ ವೈದ್ಯನಂತೆ ಕೆಲಸ ಮಾಡಿದರು. ಕೊಲ್ಕತ್ತಾದಲ್ಲಿ ಹೋರಾಟ ಮಾಡಿದ್ದರು. ಕಾಂಗ್ರೆಸ್ ಸಮಿತಿಯಲ್ಲಿದ್ದರು. ಆದರೆ ಯಾವಾಗ ಖಿಲಾಫತ್ ಚಳವಳಿ ಶುರುವಾಯಿತೊ ಆಗ ಹೆಡಗೇವಾರ್ ಹೊರಬಂದರು. ಆಗ ಭಾರತ ಧ್ವಜ ಇಲ್ಲ ಕಾರಣ ಭಗವಾಧ್ವಜವನ್ನು ಬೆಂಬಲಿಸಿದ್ದರು” ಎಂದರು.

ಇದನ್ನೂ ಓದಿ: ಬ್ರಾಹ್ಮಣರ ಪಠ್ಯಗಳನ್ನು ಕನ್ನಡ ಮಕ್ಕಳು ಏಕೆ ಓದಬೇಕು?

ನಾವು ಚಕ್ರವರ್ತಿ ಸೂಲಿಬೆಲೆಯವರ ಪಾಠವನ್ನು ಸಹ ಸೇರಿಸುತ್ತೇವೆ. ಈ ದೇಶದ ಯಾವುದೇ ದೇಶಪ್ರೇಮಿಯನ್ನು ನಾವು ಮರೆಯುವುದಿಲ್ಲ. ಒಂದು ವಿಚಾರದವರ ಪಠ್ಯಗಳು ಮಾತ್ರ ಇರಬೇಕೆ? ನಾವು ಎಲ್ಲಿಯೂ ಮಕ್ಕಳಿಗೆ ಜಾತಿ ಪರಿಚಯ ಮಾಡಿಕೊಡುತ್ತಿಲ್ಲ ಎಂದರು.

ಪ್ರತಿ ದಿನ ಪಿಡಿಎಫ್‌ ಪುಸ್ತಕ ಬದಲಿಸುತ್ತಿದ್ದೇವೆ. ಪಿಡಿಎಫ್‌ ಅನ್ನು ಯಾರು ಬೇಕಾದರೂ ಮಾಡಬಹುದು. ಪ್ರಿಂಟ್ ಆದಮೇಲಷ್ಟೆ ಅದು ಫೈನಲ್ ಆಗಿರುತ್ತದೆ. 78% ಪುಸ್ತಕ ಎಲ್ಲರಿಗೂ ತಲುಪಿದೆ. ಪರಿಷ್ಕರಣೆ ಆಗಿರುವುದನ್ನು ಓದಿ, ತಪ್ಪಿದ್ದರೆ ನಮಗೆ ತಿಳಿಸಿ. ಮುಂದಿ ವರ್ಷದಿಂದ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

5 COMMENTS

  1. ಸೂಲಿಬೆಲೆ ಮಾತ್ರವಲ್ಲ, ಕಲ್ಲಡ್ಕ ಭಟ್ಟ, ಹೋರಿ ಸ್ವಾಮಿ, ಮಧುಗಿರಿ ಮೋದಿ, ಸೀಟಿ ರವಿ ಮುಂತಾದವರ ಭಾಷಣಗಳನ್ನೂ ಸೇರಿಸಿ. ಅದು ನಿಮ್ಮ ಯೋಗ್ಯತೆಗೆ ತಕ್ಕಂತಿದೆ. ಆದರೆ ಅದನ್ನು ನಿಮ್ಮ ಮನೆ ಮಕ್ಕಳಿಗೆ ಮಾತ್ರ ಓದಿಸಿ.

  2. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವವರು ಹೊಣೆ ಗರಿಕೆಯಿಂದ ಮಾತನಾಡುವುದು .ಆದರೆ ಇವರ ಮಾತು ಕೇಳಿದರೆ ಟೀಕೆಗಳಿಗೆ ಅವಕಾಶ ಇಲ್ಲ
    ಇದು ಒಂದು ದೊಡ್ಡ ಸಮಸ್ಯೆಯೇ ಸರಿ.

  3. ಸ್ವಾಮೀ.. ತಾವು ಆರ್ ಎಸ್ ಎಸ್ ಭಕ್ತ ಅನ್ನುವುದು ಜಗತ್ತಿಗೆ ಗೊತ್ತಿದೆ… ಹೆಡ್ಗೆವಾರ್ ಅವರನ್ನ ನೀವು ಬೆಂಬಲಿಸದೆ ಇರ್ತೀರಾ… ಬೈಠಕ್ ನಲ್ಲಿ ಯಾವ್ ಯಾವ ತರಹ ಭೋದನೆ ಮಾಡ್ತೀರಾ ಅದನ್ನೂ ಮಕ್ಕಳಿಗೆ ಹೇಳಿಬಿಡಿ… ಶಿವಾಜಿ ಆಟದಲ್ಲಿ ಒಬ್ಬನನ್ನ ಔರಂಗಜೇಬನನ್ನ ಮಾಡಿ. ಎಲ್ಲರೂ ಕೂಡಿ ಹೊಡಿಯೋ ಆಟ ಆಡಿಸಿ… ಥೂ ನಿಮ್ಮ ….. ನೀವೂ ಒಬ್ಬ ಶಿಕ್ಷಣ ಸಚಿವರಾ…

  4. ಎಳೆಯ ವಯಸ್ಸಿನ ಮಕ್ಕಳ ಮೆದುಳನ್ನು ತೊಳೆಯಬೇಡಿ ಸ್ವಾಮಿ, ಪುನಃ ಸಮಾಜವನ್ನು ಇಬ್ಭಾಗ ಮಾಡಬೇಡಿ, ಜನರ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಕೋಮುವಾದಿ ಘರ್ಷಣೆಗೆ ಎಡೆ ಮಾಡಿಕೊಡುವಂತಹ ಹಲವಾರು ಪ್ರಸಂಗ ನಿರ್ವಹಣೆಯಲ್ಲಿ ವಿಫಲ ಆಯಿತು. ಇವರ ಯಜ್ಞ ಯಾಗಾದಿಗಳ ಬಗ್ಗೆ ಕಲಿತು ಮಕ್ಕಳು ಮಾಡುವುದಾದ್ರೂ ಏನು, ಅದರ ಬದಲಿಗೆ ಸಮಾಜಕ್ಕೆ ಒಳಿತಾಗುವ, ಧರ್ಮ ಜಾತಿಗಳನ್ನು ಮೀರಿ ಭಾವೈಕ್ಯತೆ ಬೆಳೆಸುವಂತ ಪಠ್ಯಕ್ರಮ ತರಲಿ,

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...