Homeಮುಖಪುಟಪಿಯು ಪಠ್ಯ ಪರಿಶೀಲನೆಗೂ ಚಾಲನೆ; ಮತ್ತದೇ ಚಕ್ರತೀರ್ಥ ಸಮಿತಿಗೆ ಜವಾಬ್ದಾರಿ!

ಪಿಯು ಪಠ್ಯ ಪರಿಶೀಲನೆಗೂ ಚಾಲನೆ; ಮತ್ತದೇ ಚಕ್ರತೀರ್ಥ ಸಮಿತಿಗೆ ಜವಾಬ್ದಾರಿ!

- Advertisement -
- Advertisement -

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಠ್ಯಪುಸ್ತಕಗಳನ್ನು ಮನಸೋಇಚ್ಛೆ ಬದಲಾವಣೆ ಮಾಡಲಾಗಿದೆ ಎಂಬ ಕೂಗು ಕೇಳಿಬರುತ್ತಿರುವ ಹೊತ್ತಿನಲ್ಲೇ ಮತ್ತೊಂದು ಯಡವಟ್ಟನ್ನು ಸರ್ಕಾರ ಮಾಡಿದೆ. ದ್ವಿತೀಯ ಪಿಯು ಪಠ್ಯ ಪರಿಶೀಲನೆಗೆ ಮುಂದಾಗಿದ್ದು, ಮತ್ತದೇ ವಿವಾದಿತ ವ್ಯಕ್ತಿ, ಶಿಕ್ಷಣ ತಜ್ಞನಲ್ಲದ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಗೆ ಜವಾಬ್ದಾರಿ ವಹಿಸಲಾಗಿದೆ.

ಈ ಕುರಿತು ‘ದಿ ಫೈಲ್‌.ಇನ್‌’ನ ಜಿ.ಮಹಾಂತೇಶ್ ಅವರು ಬರೆದಿರುವ ವಿಶೇಷ ವರದಿಯನ್ನು ‘ವಾರ್ತಾಭಾರತಿ’ ಪ್ರಕಟಿಸಿದ್ದು, ನೂತನ ಪಠ್ಯಗಳಿಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಸರ್ಕಾರ ತನ್ನ ಧೋರಣೆಯನ್ನು ಮುಂದುವರಿಸಿರುವುದು ಸ್ಪಷ್ಟವಾಗುತ್ತಿದೆ.

ಕರ್ನಾಟಕದ ವಿಶೇಷ ಉಲ್ಲೇಖ ಹೊಂದಿರುವ ಭಾರತದ ಇತಿಹಾಸ ಪಠ್ಯಪುಸ್ತಕವನ್ನು ಪರಿಶೀಲಿಸಲು ಚಾಲನೆ ನೀಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4.2ರಲ್ಲಿ ಹೊಸಧರ್ಮಗಳ ಉದಯ ಪಠ್ಯಭಾಗವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸುವ ಹೊಣೆಗಾರಿಕೆಯನ್ನು ರೋಹಿತ್‌ ಚಕ್ರತೀರ್ಥ ಸಮಿತಿಗೆ ವಹಿಸಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು 2020ರ ಫೆ.17ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆಂಬ ಸಂಗತಿ ವರದಿಯಿಂದ ಬಯಲಾಗಿದೆ.

ನಿರ್ದಿಷ್ಟ ಸಮುದಾಯಗಳ ಭಾವನೆಗೆ ಧಕ್ಕೆ ಉಂಟಾಗಿದೆ ಎಂಬ ಕಾರಣವನ್ನೇ ಇಲ್ಲಿಯೂ ನೀಡಲಾಗಿದ್ದು, ಪಿಯು ಮಂಡಳಿಯ ನಿರ್ದೇಶಕರು ಇತಿಹಾಸ ಪಠ್ಯ ರಚನಾ ಸಮಿತಿಗೆ ಮಾಹಿತಿ ಸಲ್ಲಿಸಿ ಅಭಿಪ್ರಾಯ ಕೋರಿದ್ದರು. ಸಮಿತಿಯು ಪ್ರತಿಕ್ರಿಯೆ ನೀಡಿ, ಯಾವುದೇ ವಿವಾದಾತ್ಮಕ ವಿಷಯಗಳನ್ನು ಪಠ್ಯ ಒಳಗೊಂಡಿಲ್ಲ, ಪರಿಶೀಲನೆಗೆ ಅಭ್ಯಂತರವಿಲ್ಲ ಎಂದಿತ್ತು. ಇದನ್ನು ಮಂಡಳಿಯು ಸಚಿವರ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದು ತಿಳಿಸಿದೆ.

ಇದನ್ನೂ ಓದಿರಿ: RSS ಪ್ರೇರಿತ ಬ್ರಾಹ್ಮಣ್ಯ ಪಠ್ಯ ತಿರಸ್ಕರಿಸಿ: ಶಿಕ್ಷಣ ಸಚಿವ ನಾಗೇಶ್ ರಾಜೀನಾಮೆಗೆ ಒತ್ತಾಯಿಸಿ ಟ್ವಿಟರ್ ಟ್ರೆಂಡಿಂಗ್

ಇತಿಹಾಸ ಪಠ್ಯದಲ್ಲಿ ಹೇಳಿದ್ದೇನು?

ವೈದಿಕ ಧರ್ಮದಲ್ಲಿನ ಗೊಂದಲ, ಪುರೋಹಿತ ವರ್ಗದ ಪರಮಾಧಿಕಾರ, ಪ್ರಾಣಿಬಲಿ, ಮಂತ್ರಗಳ ಪಠಣ, ಜಾತಿಪದ್ಧತಿಯಿಂದ ಜರ್ಜರಿತವಾದ ಸಮಾಜದಲ್ಲಿ ಹೊಸಧರ್ಮಗಳು ಹುಟ್ಟಿದ್ದನ್ನು ಇತಿಹಾಸ ಪಠ್ಯದಲ್ಲಿ ಸೇರಿಸಲಾಗಿತ್ತು. ಇದರಿಂದ ಒಂದು ಸಮುದಾಯದ ಭಾವನೆಗೆ ಧಕ್ಕೆ ಎಂದು ಬಿಂಬಿಸಲಾಗಿದೆ.

“ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಠರಾದರು. ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸಧರ್ಮಗಳಲ್ಲಿ ಕಂಡುಕೊಂಡರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿಕೊಂಡರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಶೇಷ್ಠರೆಂದು ತಿಳಿದಿದ್ದರು.”

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾವೀರ, ಗೌತಮ ಬೌದ್ಧನಂತಹ ಮಹಾನಿಯರು ಜನಿಸಿ, ಜನರ ಮೇಲೆ ಪ್ರಭಾವ ಬೀರಿದ್ದನ್ನು ಪಾಠ ಒಳಗೊಂಡಿದೆ. ಇದನ್ನು ಕಿತ್ತುಹಾಕುವ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ.

ಹೊಸಧರ್ಮಗಳ ಉದಯದ ನೆಪದಲ್ಲಿ… 

ಪ್ರಾಥಮಿಕ ಶಾಲಾ ಪಠ್ಯದಲ್ಲಿನ ಹೊಸಧರ್ಮಗಳ ಉದಯ ಪಾಠದಲ್ಲಿ ಒಂದು ಸಮುದಾಯದ ಭಾವನೆಗೆ ಧಕ್ಕೆ ಬರುವಂತಹ ವಿಷಯಗಳಿವೆ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿಯನ್ನು ರಚಿಸಿತ್ತು. ಬಲಪಂಥೀಯ ಬರಹಗಾರ ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಯಿತು. ಹೊಸಧರ್ಮಗಳ ಉದಯ ಪಠ್ಯದ ನೆಪದಲ್ಲಿ ಬಂದ ಸಮಿತಿ ಒಂದರಿಂದ ಹತ್ತನೇ ತರಗತಿಯವರೆಗಿನ ಪಠ್ಯಗಳನ್ನು ಪರಿಶೀಲಿಸಿ ಹಲವಾರು ಬದಲಾವಣೆಗಳನ್ನು ಮಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಬ್ರಾಹ್ಮಣ ಜಾತಿಯ ಲೇಖಕರಿಗೆ ಹೆಚ್ಚಿನ ಅವಕಾಶವನ್ನು ನೀಡಲಾಗಿದೆ. ಹಲವಾರು ಲೇಖಕರ ಪಠ್ಯಗಳನ್ನು ಕೈ ಬಿಟ್ಟು ಸಂಘಪರಿವಾರದ ಹಿನ್ನೆಲೆಯ ಪಾಠಗಳನ್ನು ಸೇರಿಸಲಾಗಿದೆ. ಸುಳ್ಳು ಭಾಷಣಗಳಿಂದಲೇ ಟೀಕೆಗೆ ಒಳಗಾಗಿರುವ ಚಕ್ರವರ್ತಿ ಸೂಲಿಬೆಲೆ ಅವರ ಪಾಠವೊಂದನ್ನು ಹತ್ತನೇ ತರಗತಿಯ ಪಠ್ಯದಲ್ಲಿ ಸೇರಿಸಲಾಗಿದೆ. ಆರ್‌ಎಸ್‌ಎಸ್ ಸಂಸ್ಥಾಪಕ, ತ್ರಿವರ್ಣಧ್ವಜಕ್ಕೆ ಅಗೌರವ ಸೂಚಿಸಿದ್ದ ಕೇಶವ ಬಲಿರಾಮ ಹೆಡಗೇವಾರ್‌ ಭಾಷಣದ ಮೂಲ ಉದ್ದೇಶವನ್ನು ತಿರುಚಿ ಪಠ್ಯಕ್ಕೆ ಅಳವಡಿಸಲಾಗಿದೆ. ಆ ಮೂಲಕ ಆರ್‌ಎಸ್‌ಎಸ್‌ ಮಕ್ಕಳಿಗೆ ಆರ್‌ಎಸ್‌ಎಸ್‌ ಕುರಿತು ಪರಿಚಯಿಸಲಾಗುತ್ತಿದೆ” ಎಂಬ ಆರೋಪಗಳು ವ್ಯಕ್ತವಾಗಿವೆ.

ಇದನ್ನೂ ಓದಿರಿ: ಪಠ್ಯ ಸೇರುತ್ತಿರುವ ಹೆಡಗೇವಾರ್ ಯಾರು? ಅವರ ಸಿದ್ದಾಂತವೇನು?

ಇತಿಹಾಸ ಪಠ್ಯದಲ್ಲಿ ‘ಯಜ್ಞ’ದ ಕುರಿತು ಇರುವ ವಿವರಣೆಗಳಿಗೆ ವಿರುದ್ಧವಾಗಿ ಯಜ್ಞವನ್ನು ಸಮರ್ಥಿಸುವಂತೆ ಬರೆದಿರುವ ಶವತಾಧಾನಿ ಆರ್‌.ಗಣೇಶ್‌ ಪಾಠವನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಸಮಾಜ ಸುಧಾರಕರಾದ ನಾರಾಯಣಗುರು, ಪೆರಿಯಾರ್‌ ಪಾಠಗಳಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಲಾಗಿಲ್ಲ. ಹೀಗೆ ಹಲವಾರು ಲೋಪಗಳನ್ನು ಎಸಗಲಾಗಿದೆ ಎಂಬ ಆರೋಪಗಳು ಬಂದಿವೆ. ಮುಖ್ಯವಾಗಿ ರೋಹಿತ್‌ ಚಕ್ರತೀರ್ಥ ಅವರು ಯಾವುದೇ ರೀತಿಯಲ್ಲೂ ಶಿಕ್ಷಣ ತಜ್ಞರಲ್ಲ ಎಂಬುದು ಚರ್ಚೆಯಾಗುತ್ತಿದೆ.

ಟ್ಟಿಟರ್‌ ಟ್ರೆಂಡ್‌

#RejectRSSTextBooks #RejectBrahminTextBooks ಹ್ಯಾಷ್‌ಟ್ಯಾಗ್‌ನಲ್ಲಿ ಭಾನುವಾರ ಸಾವಿರಾರು ಟ್ವೀಟ್‌ಗಳನ್ನು ಮಾಡಲಾಗಿದ್ದು ಭಾರತದ ಮಟ್ಟದಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಟ್ರೆಂಡ್ ಸೃಷ್ಟಿಯಾಗಿತ್ತು. ಬೆಂಗಳೂರಿನಲ್ಲಿ ಮೊದಲ ಟ್ರೆಂಡ್ ಆಗಿ ಹೊಮ್ಮಿತ್ತು. ನೂತನ ಪಠ್ಯಪುಸ್ತಕ ಸಮಿತಿಯನ್ನು ರದ್ದು ಮಾಡಬೇಕು ಹಾಗೂ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಸರ್ಕಾರ ತನ್ನ ಧೋರಣೆಯನ್ನು ಮುಂದುವರಿಸಿರುವುದು ಅನುಮಾನಗಳಿಗೆ ಆಸ್ಪದ ನೀಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಾರಾಷ್ಟ್ರ ಸರ್ಕಾರ

50ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ, ಬಹುಮತ ಸಾಬೀತುಪಡಿಸುತ್ತೇನೆ: ಬಂಡಾಯ ನಾಯಕ ಏಕನಾಥ್ ಶಿಂಧೆ

0
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್‌ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು...