Homeರಾಜಕೀಯ1% ಕಮಿಷನ್‌‌‌ ಲಂಚ ಆರೋಪ: ಆರೋಗ್ಯ ಸಚಿವನನ್ನು ವಜಾಗೊಳಿಸಿದ ಪಂಜಾಬ್ ಸಿಎಂ!

1% ಕಮಿಷನ್‌‌‌ ಲಂಚ ಆರೋಪ: ಆರೋಗ್ಯ ಸಚಿವನನ್ನು ವಜಾಗೊಳಿಸಿದ ಪಂಜಾಬ್ ಸಿಎಂ!

- Advertisement -
- Advertisement -

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು 1% ಭ್ರಷ್ಟಾಚಾರ ಆರೋಪದ ಮೇಲೆ ಮಂಗಳವಾರದಂದು ಸಂಪುಟದಿಂದ ವಜಾಗೊಳಿಸಿದ್ದಾರೆ. ಸಚಿವರ ವಿರುದ್ದ ದೃಢವಾದ ಸಾಕ್ಷ್ಯಗಳು ಕಂಡುಬಂದಿದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ವಿಜಯ್‌ ಸಿಂಗ್ಲಾ ಅವರು ಟೆಂಡರ್‌ಗಳಲ್ಲಿ ಒಂದು ಶೇಕಡಾ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅವರನ್ನು ಪದಚ್ಯುತಗೊಳಿಸಿದ ಕೂಡಲೇ ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳವು ಅವರನ್ನು ಬಂಧಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸಚಿವರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಂಪುಟ ಸಹೋದ್ಯೋಗಿಯ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿಯಾಗಿದೆ ಎಂದು ಎಎಪಿ ಪ್ರತಿಪಾದಿಸಿದೆ.

ಇದನ್ನೂ ಓದಿ: ರೋಹಿತ್‌ ಚಕ್ರತೀರ್ಥ ‘ಐಐಟಿ-ಸಿಇಟಿ’ ಪ್ರೊಫೆಸರ್‌ ಹೌದೆ? ‘ಐಐಟಿ-ಸಿಇಟಿ’ ಎಂದರೇನು?

ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2015 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ಸಚಿವರಲ್ಲಿ ಒಬ್ಬರನ್ನು ವಜಾಗೊಳಿಸಿದ್ದರು.

“ಒಂದು ಶೇಕಡಾ ಭ್ರಷ್ಟಾಚಾರವನ್ನು ಸಹ ಸಹಿಸುವುದಿಲ್ಲ” ಎಂದು ಮುಖ್ಯಮಂತ್ರಿ ಭಗವಂತ್‌ ಮಾನ್ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

“ಜನರು ಎಎಪಿ ಸರ್ಕಾರಕ್ಕೆ ಸಾಕಷ್ಟು ಭರವಸೆಯೊಂದಿಗೆ ಮತ ಹಾಕಿದ್ದಾರೆ. ನಾವು ಅದನ್ನು ಹಾಗೆಯೆ ಉಳಿಸಿಕೊಳ್ಳಬೇಕು. ಭಾರತ ಮಾತೆಗೆ ಅರವಿಂದ್ ಕೇಜ್ರಿವಾಲ್ ಅವರಂತಹ ಮಗ ಮತ್ತು ಭಗವಂತ್ ಮಾನ್ ಅವರಂತಹ ಸೈನಿಕ ಇರುವವರೆಗೂ ಭ್ರಷ್ಟಾಚಾರದ ವಿರುದ್ಧದ ಮಹಾಯುದ್ಧ ಮುಂದುವರಿಯುತ್ತದೆ” ಅವರು ಹೇಳಿದ್ದಾರೆ.

ಸಚಿವ ವಿಜಯ್‌ ಸಿಂಗ್ಲಾ ಅವರು ತನ್ನ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

ಅರವಿಂದ್ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಎಎಪಿ ತನ್ನ ಮುಖ್ಯಮಂತ್ರಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

ಎಎಪಿ ಸಂಸದ ರಾಘವ್ ಚಡ್ಡಾ ಅವರು ಮುಖ್ಯಮಂತ್ರಿಯ ನಿರ್ಧಾರವನ್ನು ಶ್ಲಾಘಿಸಿದ್ದು, ತನ್ನದೇ ಆದ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಹೊಂದಿರುವ ಏಕೈಕ ಪಕ್ಷವಾಗಿದೆ ಎಂದು ಅವರು ಹೇಳಿದ್ದಾರೆ.

“ಭ್ರಷ್ಟಾಚಾರದ ಆಧಾರದ ಮೇಲೆ ತಮ್ಮ ವಿರುದ್ಧವೇ ಕ್ರಮ ಕೈಗೊಳ್ಳಲು ಪ್ರಾಮಾಣಿಕತೆ ಮತ್ತು ಧೈರ್ಯ ಹೊಂದಿರುವ ಏಕೈಕ ಪಕ್ಷ ಆಮ್ ಆದ್ಮಿ ಪಕ್ಷ. ನಾವು ಈ ಹಿಂದೆ ಅದನ್ನು ದೆಹಲಿಯಲ್ಲಿ ನೋಡಿದ್ದೆವು, ಈಗ ಪಂಜಾಬ್‌ನಲ್ಲಿ ಅದನ್ನು ನೋಡುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ. ಸಿಎಂ ಭಗವಂತಮಾನ್ ಅವರ ಶ್ಲಾಘನೀಯ ನಿರ್ಧಾರ” ಎಂದು ಅವರು ಟ್ವೀಟ್ ಮಾಡಿದ್ದಾರೆ.

“ನಾವೆಲ್ಲರೂ ಅರವಿಂದ್ ಕೇಜ್ರಿವಾಲ್ ಅವರ ಸೈನಿಕರು, ಅವರು ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತೊಗೆಯುತ್ತಾರೆ ಎಂದು ಪ್ರತಿಜ್ಞೆ ಮಾಡಿದರು. ಒಂದು ಶೇಕಡಾ ಭ್ರಷ್ಟಾಚಾರಕ್ಕೂ ಅವಕಾಶವಿಲ್ಲ” ಎಂದು ಭಗವಂತಮಾನ್ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ; ರಾಜ್ಯಪಾಲರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ; ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ರಾಜಭವನದ ಸಿಬ್ಬಂದಿಯನ್ನು ಅಕ್ರಮವಾಗಿ ತಡೆದ ಆರೋಪದ ಮೇಲೆ ರಾಜಭವನದ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು...