ಸೇಲಂ ಜಿಲ್ಲೆಯ ದೇವಾಲಯದಲ್ಲಿರುವ ಮುಖ್ಯ ದೇವತೆಯ ವಿಗ್ರಹ ಬುದ್ಧನದೇ ಹೊರತು ಹಿಂದೂ ದೇವತೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೇವಾಲಯದಲ್ಲಿರುವ ವಿಗ್ರಹವನ್ನು ಈಗ ‘ತಲೈವೆಟ್ಟಿ ಮುನಿಯಪ್ಪನ್’ ಎಂದು ಪೂಜಿಸಲಾಗುತ್ತಿದೆ. ಸೇಲಂ ಮೂಲದ ಬುದ್ಧ ಟ್ರಸ್ಟ್‌ನ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಈ ವಿಗ್ರಹವು ಬುದ್ಧನ ವಿಗ್ರಹವಾಗಿದೆ ಎಂದು 2017ರಲ್ಲಿ ಅರ್ಜಿ ಸಲ್ಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ರಾಜ್ಯ ಪುರಾತತ್ವ ಇಲಾಖೆ ಸಲ್ಲಿಸಿದ ವರದಿಯನ್ನು ಆಧಾರಿಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಏನಿದು ವಿವಾದ?
ಸೇಲಂ ಜಿಲ್ಲೆಯ ಪೆರಿಯೇರಿ ಗ್ರಾಮದ ಕೊಟ್ಟೈ ರಸ್ತೆಯಲ್ಲಿರುವ ದೇವಾಲಯದೊಳಗಿನ ವಿಗ್ರಹ ಬುದ್ಧನದ್ದಾಗಿದೆ. ಇದನ್ನು ಹಲವು ವರ್ಷಗಳಿಂದ ಬೌದ್ಧ ಧರ್ಮದ ಅನುಯಾಯಿಗಳು ಪೂಜಿಸುತ್ತಿದ್ದಾರೆ ಎಂದು ಸೇಲಂನ ಬುದ್ಧ ಟ್ರಸ್ಟ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.
ಕಾಲ ನಂತರದಲ್ಲಿ ಈ ವಿಗ್ರಹವನ್ನು ಹಿಂದೂ ದೇವತೆಯಾಗಿ ಪರಿವರ್ತಿಸಲಾಗಿದೆ. ಈಗ ಹಿಂದೂಗಳು ಪೂಜಿಸುತ್ತಿದ್ದಾರೆ ಎಂದು ಟ್ರಸ್ಟ್ ಮನವಿಯಲ್ಲಿ ಉಲ್ಲೇಖಿಸಿತ್ತು.
ದೇವಾಲಯದಲ್ಲಿನ ವಿಗ್ರಹದ ಸಮೀಕ್ಷೆ ಮತ್ತು ಪರಿಶೀಲನೆ ನಡೆಸುವಂತೆ ತಮಿಳುನಾಡು ಪುರಾತತ್ವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಹೈಕೋರ್ಟ್ ಸೂಚಿಸಿತ್ತು.
ವರದಿ ನೀಡಿರುವ ಪುರಾತತ್ವ ಇಲಾಖೆಯು, ‘ಈ ವಿಗ್ರಹ ಬುದ್ಧನದ್ದಾಗಿದೆ’ ಎಂದು ಸ್ಪಷ್ಟಪಡಿಸಿರುವುದಾಗಿ ಹೈಕೋರ್ಟ್ ಜುಲೈ 19ರಂದು ನೀಡಿರುವ ಆದೇಶದಲ್ಲಿ ಉಲ್ಲೇಖಿಸಿದೆ. ಈ ಆದೇಶವು ಆಗಸ್ಟ್ 1 ರಂದು ಲಭ್ಯವಾಗಿದೆ.
ಪುರಾತತ್ವ ಇಲಾಖೆ ನೀಡಿದ ಆಧಾರಗಳೇನು?
ಜುಲೈ 28, 2021ರಂದು ಪುರಾತತ್ತ್ವ ಶಾಸ್ತ್ರದ ತಂಡವು ವಿಗ್ರಹವನ್ನು ಪರಿಶೀಲಿಸಿತು. ವಿಗ್ರಹವನ್ನು ಕುಂಕುಮ ಮತ್ತು ಶ್ರೀಗಂಧದ ಮೂಲಕ ಸ್ವಚ್ಛಗೊಳಿಸಿದ ನಂತರ ವಿಗ್ರಹದ ಮೇಲಿನ ಹಲವು ಚಿಹ್ನೆಗಳು ಕಂಡುಬಂದವು.
“ಕಮಲದ ಪೀಠದ ಮೇಲೆ ಅರ್ಧಪದ್ಮಾಸನದಲ್ಲಿ ಕುಳಿತಿರುವಂತೆ ಈ ವಿಗ್ರಹವನ್ನು ಕೆತ್ತಲಾಗಿದೆ. ಕೈಗಳನ್ನು ‘ಧ್ಯಾನ ಮುದ್ರೆ’ಯಲ್ಲಿ ಇರಿಸಲಾಗಿದೆ. ತಲೆಯು ಬುದ್ಧ ವಿಗ್ರಹದ ಲಕ್ಷಣಗಳಾದ ಗುಂಗುರು ಕೂದಲು, ಉದ್ದನೆಯ ಕಿವಿಯೋಲೆಗಳನ್ನು ಹೊಂದಿದೆ. ಈ ವಿಗ್ರಹವು ಬುದ್ಧನ ಹಲವಾರು ಮಹಾಲಕ್ಷಣಗಳನ್ನು (“ಶ್ರೇಷ್ಠ ಲಕ್ಷಣಗಳು”) ಸೂಚಿಸುತ್ತದೆ” ಎಂದು ತಿಳಿಸಿದೆ.
ಮದ್ರಾಸ್ ಹೈಕೋರ್ಟ್ ಹೇಳಿದ್ದೇನು?
“ಶಿಲ್ಪವನ್ನು ಪರಿಶೀಲಿಸಿದ ನಂತರ, ತಮ್ಮ ಕಡತಗಳಲ್ಲಿ ಲಭ್ಯವಿರುವ ಪುರಾತತ್ವ ಮತ್ತು ಐತಿಹಾಸಿಕ ಪುರಾವೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ, ಈ ಶಿಲ್ಪವು ಬುದ್ಧನ ಹಲವಾರು ಮಹಾಲಕ್ಷಣಗಳನ್ನು (ಶ್ರೇಷ್ಠ ಲಕ್ಷಣಗಳು) ಚಿತ್ರಿಸುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ” ಎಂದು ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
“ಇದು ದೇವಾಲಯವಾಗಿದೆ ಎಂಬ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಊಹೆಯು ಇನ್ನು ಮುಂದೆ ಸಮರ್ಥನೀಯವಲ್ಲ. ಇದರ ನಿಯಂತ್ರಣವನ್ನು ಬೇರೆಯ ಅಧಿಕಾರಿಗಳ ಕೈಗೆ ಕಡ್ಡಾಯವಾಗಿ ನೀಡಬೇಕು” ಎಂದು ಕೋರ್ಟ್ ನಿರ್ದೇಶಿಸಿದೆ.
ಇದನ್ನೂ ಓದಿರಿ: ಬುದ್ಧ ಗುರು ವಿಷ್ಣುವಿನ ಅವತಾರವಲ್ಲ, ಏಕೆ?
“ಅಂತಹ ವರದಿಯನ್ನು ಸ್ವೀಕರಿಸಿದ ನಂತರ, ಈ ಶಿಲ್ಪವನ್ನು ತಲೈವೆಟ್ಟಿ ಮುನಿಯಪ್ಪನ್ ಎಂದು ಪರಿಗಣಿಸಲು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಅನುಮತಿ ನೀಡುವುದು ಸೂಕ್ತವಲ್ಲ” ಎಂದು ನ್ಯಾಯಮೂರ್ತಿ ವೆಂಕಟೇಶ್ ಆದೇಶದಲ್ಲಿ ಬರೆದಿದ್ದಾರೆ. “ಶಿಲ್ಪವು ಬುದ್ಧನದು ಎಂಬ ತೀರ್ಮಾನಕ್ಕೆ ಬಂದ ನಂತರವೂ ಇದು ಹಿಂದೂ ದೇವರೆಂದು ಮುಂದುವರಿಯಲು ಅನುಮತಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ವಿಗ್ರಹವನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ಹೈಕೋರ್ಟ್ ಆದೇಶಿಸಿದ್ದು, ಈ ದೇವಾಲಯದ ಒಳಗೆ ಬುದ್ಧನ ವಿಗ್ರಹ ಎಂದು ಬೋರ್ಡ್ ಹಾಕಬೇಕು ಎಂದು ಸೂಚಿಸಿದೆ.
“ಸ್ಥಳಕ್ಕೆ ಭೇಟಿ ನೀಡಲು ಸಾರ್ವಜನಿಕರಿಗೆ ಅನುಮತಿ ನೀಡಬಹುದು. ಆದರೆ ಬುದ್ಧನ ಶಿಲ್ಪಕ್ಕೆ ಯಾವುದೇ ಪೂಜೆ ಅಥವಾ ಇತರ ವಿಧಿವಿಧಾನ ನಡೆಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಆದೇಶವು ನಿರ್ದೇಶಿಸಿದೆ.



ಸೇಲಂ ದೇವಾಲಯದಲ್ಲಿ ಹಿಂದೂದೇವರೆಂದೂ ಪೂಜೆ ಮಾಡುತ್ತಿರುವುದೂ ವಿಗ್ರಹ ಬುದ್ದನ ವಿಗ್ರಹವಲ್ಲ; ಹಿಂದೂ ವಿಗ್ರಹವಲ್ಲ; ಬುದ್ದನ ವಿಗ್ರಹವೆಂದೂ ನ್ಯಾಯಾಲಯಕ್ಕೆ ಬುದ್ದ ಟ್ರಸ್ಟ್ ನವರದು ತಪ್ಪು ಗ್ರಹಿಕೆ; ಪುರಾತನ ಇಲಾಖೆಯವರು ಮೂರ್ತಿ ಕಮಲ (ತಾವರೆ ) ಮೇಲೆ ಕುಳಿತಿದೆಂದೂ ಇಲಾಖೆ ಹೇಳಿದೆ. ತಾವರೆ ಮೇಲೆ ಕುಳಿತಿದೆಂದರೆ, ಬುದ್ದನ ಮೂರ್ತಿ ಹೇಳುವುದು ನ್ಯಾಯಾಲಯದ ತೀರ್ಪು ತಪ್ಪು. ಬುದ್ದನ ಅವತಾರದಲ್ಲಿ ಇದೊಂದು ಹೇಳುವುದು ತಪ್ಪು. ಜೈನ ಧರ್ಮದಲ್ಲಿ ಸಮವಸರಣವಿದೆ. ಜೈನ ತೀರ್ಥಂಕರ ಸಮವಸರಣದಲ್ಲಿ ಕಮಲದ ಮೇಲೆ ಕುಳಿತು ಧರ್ಮ ಭೋದನೆ ಮಾಡುವ ಸನ್ನಿವೇಶ. ಹಾಗಾಗಿ ಅದು ಜೈನ ತೀರ್ಥಂಕರ ಮೂರ್ತಿ. ಮದ್ರಾಸ್ ಹೈಕೋರ್ಟು ನಲ್ಲಿ ಜೈನಧರ್ಮದ ಪರವಾಗಿ ಯಾರೂ ವಾದಿಸುವವರು ಇಲ್ಲದಿರುವುದರಿಂದ ತೀರ್ಪು ಕೊಟ್ಟಿರಬೇಕು…!
ಆದರೆ, ಹಿಂದೂ ದೇವರಂತೂ ಅಲ್ಲ .ಇದು ಮುಖ್ಯವಾದ ವಿಷಯವಾಗಿರುವುದು.ಪುರಾತತ್ವ ಇಲಾಖೆಯವರು ಪರಿಶೀಲಿಸಿ ನೀಡಿರುವ ಮಾಹಿತಿ ಆಗಿರುವುದರಿಂದ ಅದು ಬುದ್ಧನ ಮೂರ್ತಿ ಎಂಬುದು ಸತ್ಯ
It’s really curreckt ,thise is buddhas temple
All the Hindu God temples in the country have made some temple a Hindu temple for the idol of Buddha. This is the idol of Satya Buddha.