Homeಕರ್ನಾಟಕಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ'ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರೀತಿ, ಕಾಳಜಿ, ಹೊಣೆಗಾರಿಕೆಯ ‘ಸಂಪ್ರೀತಿ ಕಲಾ ಬಳಗ’ದ ಶಿಕ್ಷಕಿ-ಶಿಕ್ಷಕರಿಗೊಂದು ಸಲಾಂ

ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

ಎಲೆಮರೆ-44

-ಅರುಣ್ ಜೋಳದಕೂಡ್ಲಿಗಿ

ಜನವರಿ 9, 10, 2020 ರಂದು ಆನೆಗುಂದಿ ಉತ್ಸವವಿತ್ತು. ಅಂದು ನಾನು ಕುಮಾರರಾಮನ ಬಗ್ಗೆ ವಿಷಯ ಮಂಡಿಸಿ, ಹಂಪಿಗೆ ಹೋಗಲೆಂದು ಬೈಕ್ ಏರಿದೆ. ಎದುರಿಗೆ ಹಸಿರು ನೀಲಿಯ ಟೀಶರ್ಟ್ ತೊಟ್ಟು ‘ಸರಕಾರಿ ಶಾಲೆ ನಮ್ಮ ಹೆಮ್ಮೆ, ನಮ್ಮ ಶಾಲೆ ನಮಗೆ ಹೆಮ್ಮೆ ಎಂದು ಸ್ಲೋಗನ್ ಬರೆದುಕೊಂಡ ಎಂಟತ್ತು ಜನರ ತಂಡವೊಂದು ಬೈಕ್ ಏರಿ ನಿಂತಿದ್ದರು. ಅವರು ಉತ್ಸವದ ವೇದಿಕೆಯಲ್ಲಿ ರೈತಗೀತೆ ನಾಡಗೀತೆ ಹಾಡಿ ಬಂದಿದ್ದರು. ನಾನು ಕುತೂಹಲದಿಂದ ‘ಯಾರು ನೀವು? ಏನಿದು ಕ್ಯಾಂಪೇನ್ ಎಂದು ಕೇಳಿದೆ. ಅದರಲ್ಲೊಬ್ಬರು ‘ನಾವು ಸರಕಾರಿ ಶಾಲೆಗಳ ಶಿಕ್ಷಕರು ಸರ್, ಉತ್ಸವದಲ್ಲಿ ಒಂದು ಮಳಿಗೆ ಹಾಕಿದಿವಿ, ಬಂದು ನೋಡಿ ಎಲ್ಲಾ ಅರ್ಥ ಆಗುತ್ತೆ ಎಂದರು. ಅಷ್ಟು ಮಾತನಾಡುವ ಹೊತ್ತಿಗೆ ನನಗೆ ಪರಿಚಯವಿದ್ದ ಕವಿ ಸೋಮು ಕುದ್ರಿಹಾಳ ಬಂದರು. ಅವರೂ ಈ ತಂಡದ ಒಬ್ಬ ಸದಸ್ಯರು. ನಾನು ಅವರ ಜೊತೆಗೂಡಿ ಆನೆಗುಂದಿ ಉತ್ಸವದ ಮುಖ್ಯ ವೇದಿಕೆಯ ಬಳಿಗೆ ಹೋದೆ. ಅಲ್ಲೊಂದು ಅಪರೂಪದ ‘ಸರಕಾರಿ ಶಾಲೆ ನಮ್ಮ ಹೆಮ್ಮೆ ಎನ್ನುವ ಮಳಿಗೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ತಾಲೂಕಿನ ಅತ್ಯುತ್ತಮ ಸರಕಾರಿ ಶಾಲೆಗಳ ಪರಿಚಯವಿತ್ತು. ಸರಕಾರಿ ಶಾಲೆಗಳ ವಿನೂತನ ಪ್ರಯೋಗಗಳ ಪ್ರದರ್ಶನವಿತ್ತು. ಈ ಒಂದೊಂದನ್ನು ರಸವತ್ತಾಗಿ ಅತ್ಯುತ್ಸಾಹದಲ್ಲಿ ವಿವರಿಸುವ ಶಿಕ್ಷಕ ಶಿಕ್ಷಕಿಯರ ಬಳಗವಿತ್ತು. ಈ ಬಳಗವೇ ಗಂಗಾವತಿಯ ‘ಸಂಪ್ರೀತಿ ಶಿಕ್ಷಕರ ಕಲಾ ಬಳಗ’.

ಈ ಮಳಿಗೆ ಹಾಕುವ ಮುನ್ನ ಹದಿನೈದು ದಿನಗಳ ಕಾಲ ಈ ಸಂಪ್ರೀತಿ ಬಳಗ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಹದಿನೈದಕ್ಕೂ ಹೆಚ್ಚು ಅತ್ಯುತ್ತಮ ಶಾಲೆಗಳಿಗೆ ಭೇಟಿ ನೀಡಿತ್ತು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ’ ಎಂಬ ಆಶಯದಲ್ಲಿ ಶಾಲೆಯ ಮಕ್ಕಳು, ಪಾಲಕರು, ಶಿಕ್ಷಕರೊಂದಿಗೆ ‘ಸರಕಾರಿ ಶಾಲೆ ನಮಗೇಕೆ ಬೇಕು?’ ಎಂಬ ಮಾತುಕತೆ ನಡೆಸಿ ಶಾಲೆಯನ್ನು ಅಭಿವೃದ್ಧಿಪಡಿಸಿದ ಕಾರಣ, ಪ್ರೇರಣೆ, ಮುಂದಿನ ಕನಸುಗಳ ಮಾಹಿತಿ ಸಂಗ್ರಹಿಸಿದ್ದರು. ಈ ಚಟುವಟಿಕೆಗಳ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿದ್ದರು. ಈ ಎಲ್ಲವೂ ಮಳಿಗೆಯಲ್ಲಿ ಪ್ರದರ್ಶನಗೊಂಡಿದ್ದವು. ‘ಇಂತಹದ್ದೊಂದು ಪ್ರಯತ್ನ ಕರ್ನಾಟಕದಲ್ಲಿಯೇ ಮೊದಲನೆಯದು, ಶಿಕ್ಷಣ ಇಲಾಖೆ ಮಾದರಿಯಾಗಿ ಪರಿಗಣಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳುತ್ತಾರೆ.

ನಾನು ಈ ಮಳಿಗೆಯಲ್ಲಿರುವ ಶಿಕ್ಷಕ ಶಿಕ್ಷಕಿಯರನ್ನು ಮಾತನಾಡಿಸಿದಾಗ ನನ್ನ ಗಮನಸೆಳೆದದ್ದು ಈ ಎಲ್ಲರ ಕಣ್ಣುಗಳಲ್ಲಿ ಸರಕಾರಿ ಶಾಲೆಗಳ ಬಗೆಗಿನ ಪ್ರೀತಿ, ಕಾಳಜಿ ಎದ್ದು ಕಾಣುತ್ತಿತ್ತು. ಇದರ ಫಲವಾಗಿಯೇ ಸರಕಾರಿ ಶಾಲೆಗಳನ್ನು ಸದೃಢಗೊಳಿಸಬೇಕು, ಎಲ್ಲರೂ ಮೆಚ್ಚುವಂತೆ ಮಾಡಬೇಕು ಎನ್ನುವ ಹೊಣೆಗಾರಿಕೆ ಇವರಲ್ಲಿ ಕುಡಿಯೊಡೆದಿರಬೇಕು. ಈ ಹೊಣೆಗಾರಿಕೆಯ ಫಲವಾಗಿಯೇ ಸಂಪ್ರೀತಿ ಕಲಾ ಬಳಗ ತಮ್ಮ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿಕೊಂಡರು.

2019 ರ ಸೆಪ್ಟಂಬರ್ ತಿಂಗಳಲ್ಲಿ ಗಂಗಾವತಿಯಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಪ್ತ ಹದಿನೈದು ಶಿಕ್ಷಕಿ ಶಿಕ್ಷಕರ ‘ಸಂಪ್ರೀತಿ ಕಲಾ ಬಳಗ’ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಆರಂಭವಾಗುತ್ತದೆ. ಅಂದು ಈ ಬಳಗ ರೈತ ಗೀತೆಯನ್ನು ಹಾಡಿ ಚಾಲನೆಗೊಳ್ಳುತ್ತದೆ. ಆ ದಿನ ಬಳಗದ ಎಲ್ಲರೂ ಬಿಳಿ ಕಚ್ಚೆ, ಹಸಿರು ಪೈಜಾಮು, ತಲೆಗೆ ಕೆಂಪು ಮುಂಡಾಸು, ಹಚ್ಚಹಸಿರ ಶಲ್ಲೇವಿನಿಂದ ಗಮನಸೆಳೆದಿತ್ತು. ಶಿಕ್ಷಕರ ಬಳಗವೊಂದು ಚಾಲನೆಗೆ ರೈತ ಗೀತೆ ಹಸಿರು ಉಡುಪಿನ ಸಾಂಕೇತಿಕತೆ ಬಳಸಿದ್ದು ವಿಶೇಷವಾಗಿತ್ತು. ಇದು ಸರಕಾರಿ ಶಾಲೆ ಮತ್ತು ರೈತ ಸಮುದಾಯದ ನಂಟಿನ ಬೆಸುಗೆಯಂತೆಯೂ ಕಂಡಿತ್ತು. ಈ ತಂಡ ಆರಂಭಕ್ಕೆ ಕಾರಟಗಿ, ಕೊಪ್ಪಳ, ಆನೆಗುಂದಿ ಮೊದಲಾದ ಕಡೆಗಳಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಲ್ಲಿ ರೈತಗೀತೆ ಮತ್ತು ನಾಡಗೀತೆಗಳನ್ನು ಹಾಡುವುದರಲ್ಲಿ ಗಮನಸೆಳೆಯಿತು. ನಂತರ ಇದರ ಮುಂದುವರಿಕೆಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಶಾಲಾ ಶೈಕ್ಷಣಿಕ ವಾಸ್ತವ್ಯ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಈ ತಂಡ ‘ಕತ್ತಲನ್ನು ದಾಟಿತು ಬೆಳಕು ಎಂಬ ನಾಟಕ ಪ್ರದರ್ಶಿಸಿತು. ಈ ನಾಟಕದಲ್ಲಿ ಹಾಡುಕರ್ನಾಟಕ ಟಿವಿ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದ ಈ ತಂಡದ ಸದಸ್ಯ ಮೆಹಬೂಬ್ ಕಿಲ್ಲೇದಾರ್ ಅದ್ಭುತವಾಗಿ ಹಾಡಿ ಜನಮನಸೆಳೆದಿದ್ದರು. ಹೀಗೆ ತಂಡದ ಹಾಡಿಕೆ, ನಾಟಕಕ್ಕೆ ವಿಸ್ತರಿಸಿಕೊಂಡಿತು.

ಈ ತಂಡದ ಟೀಂ ಸ್ಪಿರಿಟ್ ದೃಢವಾದದ್ದು. ‘ಸರಕಾರಿ ಶಾಲೆಗಳ ಸಬಲೀಕರಣದತ್ತ ನಮ್ಮ ಚಿತ್ತ ಎನ್ನುವ ಆಶಯದೊಂದಿಗೆ ಶಾಲೆಗಳನ್ನು ಚಿತ್ರಕಲೆಗಳಿಂದ ಆಕರ್ಷಕಗೊಳಿಸಿದ್ದು ವಿಶೇಷ. ಕೆಲಸದ ಮಧ್ಯೆ ಬಿಡುವು ಎನ್ನುವಂತಿರುವ ಭಾನುವಾರ ಮತ್ತು ಇತರೆ ಸರಕಾರಿ ರಜೆಗಳನ್ನು ಈ ಟೀಂ ಶಾಲೆಗಳ ಪೇಂಟಿಂಗ್ ಮತ್ತು ಚಿತ್ರಕಲೆಗಾಗಿ ಬಳಸಿಕೊಂಡರು. ಮೊದಲು ಪ್ರಯೋಗವಾಗಿ ಗಂಗಾವತಿಗೆ ಸಮೀಪವಿರುವ ಕುಂಟೋಜಿ ಕ್ಯಾಂಪ್ ಶಾಲೆಯನ್ನು ಸತತ ಒಂಭತ್ತು ಭಾನುವಾರಗಳಂದು ಚಿತ್ತಾಕರ್ಷಕಗೊಳಿಸಿದರು. ನಂತರದಲ್ಲಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಬ್ಬಿನಕಣವಿ, ಯಲಬುರ್ಗಾ ತಾಲೂಕು ವಡ್ಡರಕಲ್ಲು ಒಳಗೊಂಡಂತೆ ಗಂಗಾವತಿ ತಾಲೂಕಿನ ಈ ತನಕ ಹನ್ನೆರಡು ಶಾಲೆಗಳನ್ನು ಹೀಗೆ ಚಿತ್ತಾಕರ್ಶಕಗೊಳಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿದ್ದಾರೆ. ಆಹ್ವಾನಿಸಿದ ಶಾಲೆಗಳಲ್ಲಿ ಆಯಾ ಶಾಲೆಯ ಶಿಕ್ಷಕರು ಬಣ್ಣವನ್ನು ತಂದುಕೊಡುತ್ತಾರೆ. ಊರಿನ ಹಿರಿಯ ವಿದ್ಯಾರ್ಥಿಗಳು ಜೊತೆಗೂಡುತ್ತಾರೆ. ಆಯಾ ಶಾಲಾ ಶಿಕ್ಷಕರು ಇಷ್ಟಪಟ್ಟಂತೆ ಚಿತ್ರಗಳನ್ನು ಬಿಡಿಸಲಾಗುತ್ತದೆ. ಶಿವರಾತ್ರಿ ಸಂಕ್ರಾಂತಿಯಂತಹ ಹಬ್ಬಗಳನ್ನೂ ಶಾಲೆಯಲ್ಲಿ ಚಿತ್ರಕಲೆ ಬಿಡಿಸುವ ಮೂಲಕ ಈ ಟೀಂ ಆಚರಿಸಿದೆ. ಈಗ ಚಿತ್ರಕಲೆಯ ಜತೆ ಆಯಾ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡನೆಡುವ ಕಾರ್ಯಕ್ರಮವನ್ನೂ ಮಾಡುತ್ತಿದೆ. ವಿಶೇಷವೆಂದರೆ ಈ ತಂಡದ ಯಾವ ಶಿಕ್ಷಕರೂ ಚಿತ್ರಕಲಾ ಶಿಕ್ಷಕರಲ್ಲ, ಇವರೆಲ್ಲಾ ಹವ್ಯಾಸಿ ಕಲಾವಿದರು.

ಈ ಸಂಪ್ರೀತಿಯ ಬಳಗದಲ್ಲಿ ನಾಲ್ಕು ಸಂಗಾತಿ ಜೋಡಿಗಳಿವೆ. ರಂಗನಾಥ ಕುಲಕರ್ಣಿ, ಆರಾಳ ಮತ್ತು ಶ್ವೇತಾ ಕುಲಕರ್ಣಿ, ವೆಂಕಟಗಿರಿ. ಸೋಮು ಕುದ್ರಿಹಾಳ, ಲಕ್ಷ್ಮೀಕ್ಯಾಂಪ್ ಕುಂಟೋಜಿ ಮತ್ತು ರೇಖಾ.ಜೆ.ಎಸ್, ಗುಂಡೂರು. ಯೋಗೀಶ್ ಎನ್, ಹಣವಾಳಕ್ಯಾಂಪ್ ಮತ್ತು ಇಂದು ವೈ ಎಂ, ಮರಳಿ ಬಸವಣ್ಣ ಕ್ಯಾಂಪ್. ರಮೇಶ್ ಬಾಳಿಕಾಯಿ, ವಡ್ಡರಹಟ್ಟಿ ಕ್ಯಾಂಪ್, ಮತ್ತು ಅನ್ನಪೂರ್ಣ ಚೌಹಾಣ್ ಉಪ್ಪಿನಮಾಳಿ ಕ್ಯಾಂಪ್ ಗಂಗಾವತಿ. ಉಳಿದಂತೆ ಮಧುಕುಮಾರ್, ಯರಡೋಣ, ಶಂಭುಲಿಂಗಯ್ಯ, ಶ್ರೀರಾಮನಗರ, ಸುರೇಶ್.ಜಿ.ಎಸ್, ಭಟ್ಟರ ನರಸಾಪುರ, ಷಡಕ್ಷರಿ ಕರ್ಕಿಹಳ್ಳಿ, ವಿವೇಕ ಭಾರತಿ ಶಾಲೆ ಗಂಗಾವತಿ, ಮಂಜುನಾಥ್ ತಾವರಗಿ, ಆನೆಗುಂದಿ, ಪರಶುರಾಮ್ ಗಡ್ಡಿ, ಈಳಿಗನೂರು, ಮೆಹಬೂಬ್ ಕಿಲ್ಲೇದಾರ, ಕಾರಟಗಿ. ಇಲ್ಲಿನ ನಾಲ್ಕು ಜೋಡಿಗಳ ಪ್ರೀತಿಯ ಬೆಸುಗೆಯೂ ಈ ಸಂಪ್ರೀತಿಯಲ್ಲಿ ಬೆಸೆದಿದೆ. ಜೊತೆಗೆ ಈ ಎಲ್ಲರೂ ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ತತ್ವವನ್ನು ಪಾಲಿಸಿದ ಕಾರಣ ಈ ಬಳಗವನ್ನು ‘ಪ್ರೀತಿ ‘ಸ್ನೇಹದ ಒತ್ತಾಸೆ ಕಟ್ಟಿಹಾಕಿದೆ.

ಈ ತಂಡದ ಬೆನ್ನಿಗೆ ನಿಂತವರು ಗಂಗಾವತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ. ಇವರ ಪ್ರೋತ್ಸಾಹ ಈ ಬಳಗದ ಉತ್ಸಾಹವನ್ನು ಹೆಚ್ಚಿಸಿದೆ. ಈ ಬಳಗದ ಶಿಕ್ಷಕಿ ಶಿಕ್ಷಕರ ಯೌವನದ ಚೈತನ್ಯ ಹೊಸ ಆಲೋಚನೆಗೆ ಪ್ರೇರೇಪಿಸಿದೆ. ಹೀಗೆ ಪ್ರತಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಯುವ ಶಿಕ್ಷಕ ಶಿಕ್ಷಕಿಯರು ಜಡತೆಯನ್ನು ಕೊಡವಿ ಕ್ರಿಯಾಶೀಲವಾದರೆ ಸರಕಾರಿ ಶಾಲೆಗಳನ್ನು ಅತ್ತುತ್ತಮ ಮಾದರಿಗಳನ್ನಾಗಿ ರೂಪಿಸಬಹುದು ಎನ್ನುವುದನ್ನು ಈ ತಂಡ ತೋರಿಸಿಕೊಟ್ಟಿದೆ. ಈ ತಂಡದ ಪ್ರೀತಿ ಸ್ನೇಹ ಉತ್ಸಾಹ ಮತ್ತಷ್ಟು ಗಟ್ಟಿಯಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.


ಇದನ್ನೂ ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...