Homeಮುಖಪುಟಮತದಾರರ ವಿವರಗಳನ್ನು ಕಾನೂನುಬಾಹಿರವಾಗಿ ಹಂಚಿಕೊಂಡ ಚುನಾವಣಾ ಆಯೋಗ?

ಮತದಾರರ ವಿವರಗಳನ್ನು ಕಾನೂನುಬಾಹಿರವಾಗಿ ಹಂಚಿಕೊಂಡ ಚುನಾವಣಾ ಆಯೋಗ?

ಫೆಬ್ರವರಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹತ್ಯಾಕಾಂಡವು 53 ಜನರನ್ನು ಬಲಿ ತೆಗೆದುಕೊಂಡಿತ್ತು. ಇವರಲ್ಲಿ ಹೆಚ್ಚಿನವರು ಭಾರತದ ರಾಷ್ಟ್ರ ರಾಜಧಾನಿಯಲ್ಲಿನ ಮುಸ್ಲಿಮರಾಗಿದ್ದಾರೆ.

- Advertisement -
- Advertisement -

ಫೆಬ್ರವರಿ 2020 ರಲ್ಲಿ ನಡೆದ ದೆಹಲಿ ಗಲಭೆಯ ನಂತರ, ಭಾರತದ ಚುನಾವಣಾ ಆಯೋಗ ಈಶಾನ್ಯ ದೆಹಲಿಯ ಎಲ್ಲಾ ನಿವಾಸಿಗಳ ಫೋಟೋಗಳು ಮತ್ತು ವಿಳಾಸಗಳನ್ನು ಪೊಲೀಸರೊಂದಿಗೆ ಕಾನೂನುಬಾಹಿರವಾಗಿ ಹಂಚಿಕೊಂಡಿದೆ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಬಹಿರಂಗಗೊಳಿಸಿದ್ದಾರೆ.

ಚುನಾವಣಾ ಆಯೋಗದ ಪತ್ರವನ್ನು ಹಂಚಿಕೊಂಡ ಸಾಕೇತ್ ಗೋಖಲೆ, ಜನರ ಸಂಪೂರ್ಣ ಮತದಾರರ ಪಟ್ಟಿಯನ್ನು ದೆಹಲಿ ಪೊಲೀಸರಿಗೆ ಕಾನೂನುಬಾಹಿರವಾಗಿ ಹಸ್ತಾಂತರಿಸಲಾಗಿದೆ ಎಂದು ದೂರಿದ್ದಾರೆ.

“ಆದೇಶದ ಮೊದಲನೇ ಸಾಲು ಪೊಲೀಸರೊಂದಿಗೆ ಹಂಚಿಕೊಂಡ ಮತದಾರರ ಪಟ್ಟಿಗಳಲ್ಲಿ ಛಾಯಾಚಿತ್ರ ಇಲ್ಲ ಎಂದು ಹೇಳುತ್ತದೆ. ಆದರೂ ದೆಹಲಿ ಹತ್ಯಾಕಾಂಡದ ನಂತರ ಫೋಟೋಗಳೊಂದಿಗೆ ಈ ಪೂರ್ಣ ಮತದಾರರ ಪಟ್ಟಿಗಳನ್ನು ಪೊಲೀಸರಿಗೆ ಲಭ್ಯವಾಗುವಂತೆ ಮಾಡಿ, ಭಾರತದ ಚುನಾವಣಾ ಆಯೋಗ ತನ್ನದೇ ನಿಯಮಗಳನ್ನು ಮುರಿದಿದೆ. ಇದು ಯಾವುದೇ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರನ್ನು ಗುರುತಿಸಲು ಇದು ಸುಲಭವಾದ ಮಾರ್ಗವಾಗಿದೆ” ಎಂದು ಗೋಖಲೆ ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ವಕ್ತಾರ ಶೆಫಾಲಿ ಶರಣ್ ಅವರನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ ರಾಷ್ಟ್ರೀಯ ಚುನಾವಣಾ ಸಂಸ್ಥೆ ತನ್ನದೇ ಆದ ನಿಯಮಗಳನ್ನು ಏಕೆ ಉಲ್ಲಂಘಿಸಿದೆ ಎಂದು ಸ್ಪಷ್ಟಪಡಿಸುವಂತೆ ಕೇಳಿದ್ದಾರೆ.

“ಮುಗ್ಧ ಮುಸ್ಲಿಂ ಯುವಕನನ್ನು ಪೊಲೀಸರು ನಿರಂಕುಶವಾಗಿ ಎತ್ತಿಕೊಂಡರು. ಇತರ ಸ್ಥಳಗಳಲ್ಲಿಯೂ ಸಹ ಫೋಟೋಗಳನ್ನು ಹೊಂದಿರುವ ಮತದಾರರ ಪಟ್ಟಿಗಳನ್ನು ಹಂಚಿಕೊಳ್ಳಲಾಗಿದೆಯೇ? ಇದು ಗಂಭೀರವಾಗಿದೆ!” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚುನಾವಣಾ ಆಯೋಗವು ಈ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಗೋಖಲೆ ಹಂಚಿಕೊಂಡ ಚುನಾವಣಾ ಆಯೋಗದ ಉದ್ದೇಶಿತ ಪತ್ರದಲ್ಲಿ, ದೆಹಲಿ ಪೊಲೀಸರೊಂದಿಗೆ ‘ಈಶಾನ್ಯ ಸಂಸದೀಯ ಕ್ಷೇತ್ರದ ಮತದಾರರ ಚಿತ್ರಗಳ ಜೊತೆಗೆ ಮತದಾರರ ಪಟ್ಟಿಯನ್ನು ಪ್ರದರ್ಶಿಸುವಂತೆ’ ಮುಖ್ಯ ಕಾರ್ಯದರ್ಶಿ ಹಂತದ ಅಧಿಕಾರಿಗಳು, ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

“ದೆಹಲಿ ಪೊಲೀಸರ ಮನವಿಯನ್ನು ಗಮನದಲ್ಲಿಟ್ಟುಕೊಂಡು ಆಯೋಗವು, ದೆಹಲಿಯಲ್ಲಿ ಇತ್ತೀಚಿನ ಹಿಂಸಾಚಾರದ ತನಿಖಾ ತಂಡದೊಂದಿಗೆ ಸಿ.ಸಿ.ಟಿ.ವಿ ಮತ್ತು ಇತರ ವಿಡಿಯೋ ತುಣುಕಿನ ಮೂಲಕ ಸೆರೆಹಿಡಿಯಲಾದ ಅಪರಾಧಿಗಳ ಛಾಯಾಚಿತ್ರಗಳು, ದೆಹಲಿಯ ಈಶಾನ್ಯ ಸಂಸದೀಯ ಕ್ಷೇತ್ರದ ಮತದಾರರ ಚಿತ್ರಗಳೊಂದಿಗೆ ತನಿಖಾ ಅಧಿಕಾರಿಯ ಮುಂದೆ ಮತದಾರರ ಪಟ್ಟಿಯನ್ನು ಪ್ರದರ್ಶಿಸಲು ಸಲಹೆ ನೀಡುವಂತೆ ನಿರ್ದೇಶಿಸಿದೆ” ಎಂದು ಆಯೋಗದ ಪತ್ರದಲ್ಲಿ ಹೇಳಲಾಗಿದೆ.

ಫೆಬ್ರವರಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಹತ್ಯಾಕಾಂಡವು 53 ಜನರನ್ನು ಬಲಿ ತೆಗೆದುಕೊಂಡಿತ್ತು. ಇವರಲ್ಲಿ ಹೆಚ್ಚಿನವರು ಭಾರತದ ರಾಷ್ಟ್ರ ರಾಜಧಾನಿಯಲ್ಲಿನ ಮುಸ್ಲಿಮರಾಗಿದ್ದಾರೆ. ಬಿಜೆಪಿ ನಾಯಕರ ದ್ವೇಷದ ಭಾಷಣಗಳು ಸಹ ಈ ಹತ್ಯಾಕಾಂಡಕ್ಕೆ ಕಾರಣವಾಗಿದ್ದವು ಎಂಬ ಆರೋಪವಿದೆ.


ಇದನ್ನೂ ಓದಿ: ಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...