Homeಮುಖಪುಟಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ...

ಚುನಾವಣಾ ಆಯೋಗವೆಂಬ ಬಿಜೆಪಿ ಕಚೇರಿ…

- Advertisement -
- Advertisement -

ಜುಲೈ 25 ಮತ್ತು 28ರಂದು ಅಂದಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ಕಾಂಗ್ರೆಸ್-ಜೆಡಿಎಸ್‍ಗಳನ್ನು ತೊರೆದು ಬಿಜೆಪಿ ಸೇರಬಯಸಿದ್ದ 17 ಶಾಸಕರನ್ನು ಅನರ್ಹರೆಂದು ತೀರ್ಪಿತ್ತರು. ಪಕ್ಷಾಂತರ ನಿಷೇಧ ಕಾಯ್ದೆ, ಜನಪ್ರತಿನಿಧಿಗಳ ಕಾಯ್ದೆ, ಸುಪ್ರೀಂಕೋರ್ಟಿನ ತೀರ್ಪುಗಳು ಮತ್ತು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸ್ಪೀಕರ್ ವೆಂಕಯ್ಯ ನಾಯ್ಡು ಅವರು ನೀಡಿದ ತೀರ್ಪುಗಳನ್ನು ಅವರು ಉಲ್ಲೇಖಿಸಿದ್ದರು. ಈ 17 ಶಾಸಕರು ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದು ಅದೇ ತೀರ್ಪಿನ ಭಾಗವಾಗಿತ್ತು.

ಈ ತೀರ್ಪು ಪ್ರಕಟಿಸಿದ ಪತ್ರಿಕಾಗೋಷ್ಠಿಯಲ್ಲೇ ಸ್ಪೀಕರ್ ಹೇಳಿದಂತೆ, ಈ ತೀರ್ಪಿನ ಪ್ರತಿಯನ್ನು ಚುನಾವಣಾ ಆಯೋಗಕ್ಕೂ ಕಳಿಸಲಾಯಿತು. ಯಾವುದೇ ಶಾಸನಸಭೆಯ ಸೀಟು, ಯಾವುದೇ ಕಾರಣಕ್ಕೆ ಖಾಲಿ ಬಿದ್ದರೆ, ಆರು ತಿಂಗಳೊಳಗೆ ಅದನ್ನು ತುಂಬಲು ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಏನು ಮಾಡಿತು ಎಂಬುದನ್ನು ಗಮನಿಸೋಣ.

ಸೆ.21 ರಂದು ಇತರ ರಾಜ್ಯಗಳ ವಿಧಾನಸಭಾ ಮತ್ತು ಉಪಚುನಾವಣೆಗಳ ವೇಳಾಪಟ್ಟಿ ಘೋಷಣೆ. ಅಕ್ಟೋಬರ್ 21ಕ್ಕೆ ಚುನಾವಣೆ. ಅದೇ ದಿನ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ.

ರಾಜ್ಯದ ಅನರ್ಹ ಶಾಸಕರು ಸ್ಪರ್ಧೆ ಮಾಡುವಂತಿಲ್ಲ – ರಾಜ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ಹೇಳಿಕೆ.

ಸೆ.23: ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದ್ದ ಅನರ್ಹ ಶಾಸಕರ ಅರ್ಜಿ ವಿಚಾರಣೆಯಲ್ಲಿ ಕೇಂದ್ರೀಯ ಚುನಾವಣಾ ಆಯೋಗದ ಸ್ವಯಂಪ್ರೇರಿತ ಹೇಳಿಕೆ – ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಬಹುದೇ ಹೊರತು, ಅವರ ಸ್ಪರ್ಧೆಯನ್ನು ತಡೆಯುವಂತಿಲ್ಲ. ಅವರ ಸ್ಪರ್ಧೆಗೆ ತನ್ನದೇನೂ ಅಭ್ಯಂತರವಿಲ್ಲ.

ಸೆ.25: ಚುನಾವಣೆ ಮುಂದೂಡುವ ಆಫರ್
ಸೆ.26: ಕೋರ್ಟಿನಿಂದ ತಡೆಯಾಜ್ಞೆ, ಮುಂದಿನ ವಿಚಾರಣೆ ಅಕ್ಟೋಬರ್ 22ಕ್ಕೆ.
ಸೆ.27: ಚುನಾವಣೆಗೆ ಮತ್ತೆ ದಿನ ನಿಗದಿ, ಡಿಸೆಂಬರ್ 5ಕ್ಕೆ ಚುನಾವಣೆ. ಆದರೆ ಮತ ಎಣಿಕೆ ದಿನ ಘೋಷಣೆಯಿಲ್ಲ; ನೀತಿಸಂಹಿತೆ ಘೋಷಣೆಯಿಲ್ಲ.
ಸೆ.29: ಮತ ಎಣಿಕೆಗೆ ದಿನ ನಿಗದಿ

ಈ ಎಲ್ಲಾ ಬೆಳವಣಿಗೆಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಕುರಿತು ಇದ್ದ ಅನುಮಾನಗಳನ್ನು ಖಾತರಿಗೊಳಿಸಿದೆ. ಸಾಕಷ್ಟು ಕಾಲದಿಂದ ಚುನಾವಣಾ ಆಯೋಗವು ಬಿಜೆಪಿ ಪಕ್ಷದ ಕಚೇರಿಯಂತೆ ವರ್ತಿಸುತ್ತಿದೆ ಎಂಬ ದೂರು ಇದ್ದೇ ಇತ್ತು. 2017ರಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳು ಒಟ್ಟಿಗೇ ಘೋಷಣೆಯಾಗಬೇಕಿತ್ತು. ಆದರೆ ಆಳುವ ಬಿಜೆಪಿ ಸರ್ಕಾರಕ್ಕೆ ಸಹಾಯ ಮಾಡಲು ಬೇಕೆಂದೇ ಗುಜರಾತ್ ಚುನಾವಣೆಗಳನ್ನು ತಡವಾಗಿ ಘೋಷಿಸಲಾಗಿತ್ತು. ಅಲ್ಲಿಂದ ಶುರುವಾದದ್ದು 2019ರ ಲೋಕಸಭಾ ಚುನಾವಣೆಯಲ್ಲಂತೂ ಹಲವು ರೀತಿಯಲ್ಲಿ ಏಕಪಕ್ಷೀಯ ವರ್ತನೆ ಎದ್ದು ಕಾಣುತ್ತಿತ್ತು.

ಈ ಪ್ರಕರಣಕ್ಕೆ ಬರುವುದಾದರೆ, ಸ್ಪೀಕರ್ ತೀರ್ಪಿನಲ್ಲಿ ಅನರ್ಹತೆ ಮತ್ತು ವಿಧಾನಸಭೆಯ ಈ ಅವಧಿ ಪೂರ್ಣವಾಗುವವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದಿತ್ತು. ಈ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ಅವರು ಅನರ್ಹರಾಗಿರುವುದರಿಂದಲೇ ಚುನಾವಣಾ ಆಯೋಗ ಉಪಚುನಾವಣೆಯನ್ನು ನಿಗದಿಪಡಿಸಿದೆ. ಅಂದರೆ ಸ್ಪೀಕರ್ ತೀರ್ಪಿನ ಕಾರಣಕ್ಕೇ ಉಪಚುನಾವಣೆ ನಿಗದಿಯಾಗಿದೆ. ಹೀಗಿದ್ದೂ, ಅದೇ ತೀರ್ಪಿನ ಇನ್ನೊಂದು ಭಾಗವನ್ನು ಮಾತ್ರ ತಾನು ಜಾರಿ ಮಾಡುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಲು ಹೇಗೆ ಸಾಧ್ಯ? ಒಂದುವೇಳೆ ಸ್ಪೀಕರ್ ಅವರ ತೀರ್ಪಿನ ಈ ಭಾಗದ ಕುರಿತು ತನಗೆ ಗೊಂದಲವಿದೆ;

ಸಾಂವಿಧಾನಿಕವಾಗಿ ಯಾರನ್ನೂ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂಬುದೇ ಚುನಾವಣಾ ಆಯೋಗದ ಅಭಿಪ್ರಾಯವಾಗಿದ್ದರೆ, ಈ ಕುರಿತು ಸ್ಪಷ್ಟೀಕರಣ ಕೋರಿ ಸುಪ್ರೀಂಕೋರ್ಟಿನ ಮೊರೆ ಹೋಗಬೇಕಾಗಿತ್ತು. ಅದನ್ನೂ ಮಾಡಲಿಲ್ಲ. ಬದಲಿಗೆ ಸುಪ್ರೀಂಕೋರ್ಟಿನಲ್ಲಿ ತನ್ನ ಅಭಿಪ್ರಾಯವನ್ನು ಮುಂದಿಟ್ಟು, ಚುನಾವಣೆಯನ್ನು ಮುಂದೂಡಲೂ ಸಿದ್ಧವೆಂದು ಹೇಳಿಬಿಟ್ಟಿತು.

ಈ ಕೇಸು ತೀರ್ಮಾನವಾಗುವವರೆಗೆ ಚುನಾವಣೆ ಬೇಡವೆಂದು ಮರುದಿನ ಕೋರ್ಟು ತೀರ್ಪಿತ್ತಿತು. ಕೇಸು ಯಾವಾಗ ಫೈಸಲ್ ಆಗುವುದೆಂಬ ಬಗ್ಗೆ ಯಾವ ಖಾತರಿ ಇಲ್ಲದಿದ್ದಾಗ್ಯೂ, ಮರುದಿನವೇ ಡಿಸೆಂಬರ್ 5ಕ್ಕೆ ಚುನಾವಣೆ ಎಂಬ ಪರಿಷ್ಕøತ ವೇಳಾಪಟ್ಟಿ ಪ್ರಕಟಿಸಲಾಯಿತು. ಸಾಮಾನ್ಯವಾಗಿ ಚುನಾವಣೆಯ ವೇಳಾಪಟ್ಟಿ ಘೋಷಣೆಯಾದ ದಿನದಿಂದಲೇ ನೀತಿಸಂಹಿತೆ ಸಹ ಲಾಗೂ ಆಗಬೇಕು. ಇದೂ ಆಗಲಿಲ್ಲ. ಬದಲಿಗೆ ನೀತಿ ಸಂಹಿತೆಯು ಚುನಾವಣಾ ಅಧಿಸೂಚನೆ ಹೊರಡಿಸುವ ನವೆಂಬರ್ 11ರಿಂದ ಚುನಾವಣೆ ನೀತಿಸಂಹಿತೆ ಜಾರಿ ಎಂದು ಹೇಳಲಾಗಿದೆ. ಅಂದರೆ ಈಗಿನಿಂದ ಸದರಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಯೋಜನೆಗಳನ್ನು ಕೈಗೊಳ್ಳಲು ಆಡಳಿತ ನಡೆಸುವ ಪಕ್ಷಕ್ಕೆ ಯಾವ ಅಡ್ಡಿಯೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಶನಿವಾರ ರಾಜ್ಯ ಚುನಾವಣಾ ಆಯುಕ್ತರು ‘ಅನರ್ಹರು ಸ್ಪರ್ಧೆ ಮಾಡುವಂತಿಲ್ಲ’ ಎಂದು ಹೇಳಿದನಂತರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಸ್ಪರ್ಧೆ ಮಾಡಬಹುದು ಎಂದು ಕೇಂದ್ರ ಆಯೋಗ ಹೇಳಿದ್ದೇಕೆ ಎಂಬ ಪ್ರಶ್ನೆ ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ. ಅದೇ ಶನಿವಾರದಂದು ಅನರ್ಹ ಶಾಸಕರು ತಾವು ಮಾಡುತ್ತಿದ್ದ ಕೆಲಸಗಳನ್ನು ಬಿಟ್ಟು (ಚಿಕ್ಕಬಳ್ಳಾಪುರದ ಮಾಜಿ ಶಾಸಕ ಸುಧಾಕರ್ ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆಯಲ್ಲಿ ವ್ಯಸ್ತರಾಗಿದ್ದವರು ಅಲ್ಲಿಂದ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಓಡಿದರು) ಯಡಿಯೂರಪ್ಪನವರನ್ನು ಅರಣ್ಯ ಇಲಾಖೆಯ ಗೆಸ್ಟ್‍ಹೌಸ್‍ನಲ್ಲಿ ಭೇಟಿಯಾದರು. ಯಡಿಯೂರಪ್ಪನವರು ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ದೆಹಲಿಗೆ ಓಡಿದರು.

ಅಲ್ಲಿ ಅಮಿತ್‍ಶಾರನ್ನು ಭೇಟಿಯಾಗಿ ಹೊರಬಂದನಂತರ ‘ನಾಳೆ ಸುಪ್ರೀಂಕೋರ್ಟಿನಲ್ಲಿ ನಮಗೆ ಒಳ್ಳೆಯ ಫಲಿತಾಂಶ ಬರುವುದೆಂಬ ವಿಶ್ವಾಸವಿದೆ’ ಎಂದು ಹೇಳಿದರು. ಮರುದಿನ ಕೋರ್ಟು ಅವರ ಪರವಾಗಿ ಏನನ್ನೂ ಹೇಳಲಿಲ್ಲವಾದರೂ, ಚುನಾವಣಾ ಆಯೋಗದ ವಕೀಲರು ಸದರಿ ಕೇಸಿನಲ್ಲಿ ವಾದಿ-ಪ್ರತಿವಾದಿ ಅಲ್ಲದಿದ್ದರೂ ‘ಅನರ್ಹರು ಸ್ಪರ್ಧಿಸಬಹುದು’ ಎಂದು ಹೇಳುತ್ತಾರೆಂಬ ವಿಶ್ವಾಸ ಯಡಿಯೂರಪ್ಪನವರಿಗೆ ಹೇಗೆ ಬಂದಿತು? ಅಲ್ಲಿಂದಾಚೆಗೆ ಆಯೋಗವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣವಾಗುವವರೆಗೆ ಚುನಾವಣೆ ನಡೆಸುವುದಿಲ್ಲ ಎಂದೂ ಹೇಳಿತು. ಚುನಾವಣೆಯನ್ನು ಮುಂದೂಡಿಯೂ ಬಿಟ್ಟಿತು.

ಹಾಗಾದರೆ ಒಂದುವೇಳೆ 6 ತಿಂಗಳೊಳಗೆ ವಿಚಾರಣೆ ಪೂರ್ಣವಾಗಿ ತೀರ್ಪು ಬಾರದಿದ್ದರೆ? ಸಾಂವಿಧಾನಿಕ ಕರ್ತವ್ಯವನ್ನು ಕೆಲವು ‘ಅನರ್ಹ’ ಶಾಸಕರಿಗಾಗಿ ಚುನಾವಣಾ ಆಯೋಗವು ಬದಿಗೊತ್ತಿಬಿಡುತ್ತದೆಯೇ? ಬಹುಶಃ ಈ ಪ್ರಶ್ನೆಗೆ ಉತ್ತರವಾಗಿ ಅದು ಮತ್ತೆ ತರಾತುರಿಯಲ್ಲಿ (ಸುಪ್ರೀಂಕೋರ್ಟಿನ ವಿಚಾರಣೆ ಯಾವಾಗ ಮುಗಿಯುತ್ತದೆಂಬ ಕುರಿತು ಯಾವ ಹೊಸ ಬೆಳವಣಿಗೆಯೂ ಆಗದಿದ್ದರೂ) ಮುಂದೂಡಿದ ಚುನಾವಣೆಯ ದಿನಗಳನ್ನು ಘೋಷಣೆ ಮಾಡಿತು. ಎಷ್ಟು ತರಾತುರಿಯಿತ್ತೆಂದರೆ, ಚುನಾವಣಾ ಫಲಿತಾಂಶದ ದಿನಗಳನ್ನೂ ಘೋಷಿಸಲಿಲ್ಲ. ಬಹುಶಃ ‘ಒಂದುವೇಳೆ ಸುಪ್ರೀಂಕೋರ್ಟು ಅಷ್ಟರಲ್ಲಿ ತೀರ್ಮಾನ ಮಾಡದೇ ಇದ್ದಲ್ಲಿ ಫಲಿತಾಂಶ ಘೋಷಣೆ ಮಾಡದೇ ಕಾಯೋಣ’ ಎಂಬ ಅಡ್ಡಕಸುಬಿ ಐಡಿಯಾ ಯಾರಾದರೂ ಕೊಟ್ಟಿರಬೇಕು ಎನಿಸುತ್ತದೆ. ಅದನ್ನು ಬಿಟ್ಟರೆ ಇದಕ್ಕೆ ಬೇರಾವ ಕಾರಣವೂ ಕಾಣುತ್ತಿಲ್ಲ. ಮತ್ತೆ ಒಂದುದಿನ ಬಿಟ್ಟು ಫಲಿತಾಂಶದ ದಿನವನ್ನೂ ಆಯೋಗವು ನಿಗದಿ ಮಾಡಿತು.

ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲಿ ಚುನಾವಣಾ ಆಯೋಗವು ಇಷ್ಟು ಎಡಬಿಡಂಗಿತನದಿಂದ ವರ್ತಿಸಿದ್ದನ್ನು ಯಾರೂ ಕಂಡಿಲ್ಲ. ಎಲ್ಲವೂ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಆಮಿಷ, ಬೆದರಿಕೆ, ಅಧಿಕಾರದಾಹದ ಕಾರಣಕ್ಕೆ ಪಕ್ಷಾಂತರ ಮಾಡಿದ ಜನದ್ರೋಹಿಗಳ ರಕ್ಷಣೆಗೆ!? ಹೀಗಿರುವಾಗ ಚುನಾವಣಾ ಆಯೋಗವು ಬಿಜೆಪಿ ಕಚೇರಿ ಎಂಬ ಆಪಾದನೆ ಯಾರಾದರೂ ಮಾಡಿದರೆ ಅದಕ್ಕೆ ಸಾಂದರ್ಭಿಕ ಸಾಕ್ಷ್ಯಗಳು ಮಾತ್ರವಲ್ಲದೇ, ಸಾಂವಿಧಾನಿಕ ಆಶಯಗಳ ಉಲ್ಲಂಘನೆಯ ಸ್ಪಷ್ಟ ನಿದರ್ಶನಗಳು ಸಿಗುತ್ತವೆ.

ಎಲ್ಲವೂ ಕೇಂದ್ರ ಆಯೋಗದ್ದೇ – ರಾಜ್ಯ ಚುನಾವಣಾ ಆಯುಕ್ತ

ಅನರ್ಹ ಶಾಸಕರು ಸ್ಪರ್ಧಿಸುವಂತಿಲ್ಲ ಎಂಬ ಹೇಳಿಕೆ ನೀಡಿದ್ದ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಈಗ ತಮ್ಮ ಮಾತುಗಳನ್ನು ತಾವೇ ನುಂಗಬೇಕಾಗಿ ಬಂದಿದೆ. ಎರಡೇ ದಿನಗಳಲ್ಲಿ ಅದನ್ನು ಬದಲಿಸಿ ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಆಯೋಗ ಹೇಳಿಕೆ ನೀಡಿತು. ಆ ನಂತರ ಚುನಾವಣೆಯನ್ನು ಮುಂದೂಡಿತು; ಮತ್ತೆ ಚುನಾವಣಾ ದಿನಾಂಕ ಘೋಷಣೆ ಮಾಡಿತು. ಫಲಿತಾಂಶ ನಿಗದಿಯ ಪೂರಕ ಪತ್ರವನ್ನೂ ತಾನೇ ಬರೆಯಿತು. ಇದರ ಬಗ್ಗೆ ಸಂಜೀವ್ ಕುಮಾರ್ ಅವರನ್ನು ಕೇಳಿದಾಗ ‘ಎಲ್ಲವೂ ಕೇಂದ್ರ ಚುನಾವಣಾ ಆಯೋಗದಿಂದಲೇ ಬಂದಿದೆ. ಪೂರಕ ಪತ್ರವನ್ನು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವುದೂ ಅವರೇ’ ಎಂದು ಹೇಳಿದ್ದು ವರದಿಯಾಗಿದೆ.
ರಾಜ್ಯಗಳಲ್ಲಿನ ಸಂಸ್ಥೆಗಳ ಮೇಲೂ ಕೇಂದ್ರದ ಕೂಟವೊಂದು ಹಿಡಿತ ಸಾಧಿಸಿ ಪ್ರಜಾತಂತ್ರವನ್ನು ಗಾಳಿಗೆ ತೂರಲು ಸಾಂವಿಧಾನಿಕ ಅಧಿಕಾರದಿಂದಲೇ ಸಾಧ್ಯವಾಗುವ ರೀತಿಯಲ್ಲಿ ನಮ್ಮ ರಚನೆಗಳಿವೆ. ಅದನ್ನು ಮೋದಿ-ಶಾ ನಿರ್ಲಜ್ಜವಾಗಿ ಬಳಸುತ್ತಿದ್ದಾರೆ. ಚುನಾವಣಾ ಆಯೋಗವು ಅವರ ಕೈಯ್ಯಲ್ಲಿನ ಅಂತಹ ಒಂದು ಅಸ್ತ್ರವಷ್ಟೇ ಆಗಿದೆ.

ಸುಪ್ರೀಂಕೋರ್ಟೂ ಅನುಮಾನಾತೀತವಲ್ಲ
ಈಕೇಸಿನಲ್ಲಿ ಚುನಾವಣಾ ಆಯೋಗವು ಇದ್ದಕ್ಕಿದ್ದಂತೆ ವಿಶೇಷ ಆಸ್ಥೆ ವಹಿಸಿದ ಕುರಿತು ಸುಪ್ರೀಂಕೋರ್ಟಿಗೆ ಯಾವ ತಕರಾರೂ ಇರಲಿಲ್ಲ. ಅನರ್ಹ ಶಾಸಕರ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ಅಗತ್ಯವಿದೆ ಮತ್ತು ತಾತ್ಕಾಲಿಕ ಪರಿಹಾರ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ತ್ರಿಸದಸ್ಯಪೀಠ ತಿಳಿಸಿತ್ತು. ಅದು ಸಮಂಜಸವೂ ಆಗಿತ್ತು. ಏಕೆಂದರೆ ಪಕ್ಷಾಂತರ ನಿಷೇಧ ಕಾಯ್ದೆಯ ಸ್ಪಿರಿಟ್, ಶಾಸಕಾಂಗ ಪರಮಾಧಿಕಾರದಲ್ಲಿ ನ್ಯಾಯಾಂಗ ಹೇಗೆ ಮಧ್ಯೆ ಪ್ರವೇಶಿಸಬಹುದು ಇತ್ಯಾದಿಗಳ ವಿಚಾರದಲ್ಲಿ ಸಂವಿಧಾನದ ಸೂಕ್ತ ವ್ಯಾಖ್ಯಾನದ ಅಗತ್ಯವಿತ್ತು. ಹೀಗಾಗಿ ಹಿರಿಯ ವಕೀಲರುಗಳ ಅಭಿಪ್ರಾಯ, ವಿಚಾರಣೆ, ರಾಜಕೀಯ ಪಕ್ಷಗಳ ಅನಿಸಿಕೆ ಇವೆಲ್ಲವನ್ನೂ ತೆಗೆದುಕೊಂಡು ಕೂಲಂಕಷವಾಗಿ ನೀಡಲಾಗುವ ತೀರ್ಪು ಮುಂದಿನ ದಿನಗಳಲ್ಲಿ ದಾರಿದೀಪವಾಗಿರುತ್ತದೆ. ಆದರೆ ಅದು ಆಯೋಗದ ಏಕಪಕ್ಷೀಯ ನಿಲುವಿಗೆ ಸೊಪ್ಪು ಹಾಕಿಬಿಟ್ಟಿತು. ತಾನೇ ತಾನಾಗಿ ಚುನಾವಣೆ ಮುಂದೂಡಿಕೆಯ ಮಾತನ್ನು ಆಡಲಿಲ್ಲ ಎಂಬುದನ್ನು ತಪ್ಪಿಸಿಕೊಂಡಂತೆಯೂ ಆಯಿತು. ಅನರ್ಹ ಶಾಸಕರಿಗಾಗಿ ಚುನಾವಣಾ ಪ್ರಕ್ರಿಯೆಯನ್ನೇ ಮುಂದೂಡಲು ಅನುವು ಮಾಡಿಕೊಟ್ಟಂತೆಯೂ ಆಯಿತು ಎಂಬಂತೆ ಸುಪ್ರೀಂಕೋರ್ಟು ವರ್ತಿಸಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...