HomeಮುಖಪುಟSC/ST ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ನಿಲ್ಲುವ ಅಪಾಯ!

SC/ST ವಿದ್ಯಾರ್ಥಿಗಳ ಮೆಟ್ರಿಕ್ ನಂತರದ ಸ್ಕಾಲರ್‌ಶಿಪ್ ನಿಲ್ಲುವ ಅಪಾಯ!

ಈಗಿರುವ ಎಲ್ಲಾ ಬಗೆಯ ಸ್ಕಾಲರ್ಶಿಪ್ ಯೋಜನೆಗಳನ್ನು ರದ್ದುಗೊಳಿಸಿ, ಎಲ್ಲಾ ಜಾತಿ ಸಮುದಾಯಗಳನ್ನು 'Pradhan Mantri Young Achievers Scholarship Award Scheme for Vibrant India (PM-YASASVI)' ಅಡಿಯಲ್ಲಿ ತರಲು ನಿರ್ದರಿಸಲಾಗಿದೆ.

- Advertisement -
- Advertisement -

1944ರಿಂದ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳಿಗಾಗಿ ಜಾರಿಯಲ್ಲಿರುವ “ಮೆಟ್ರಿಕ್ ನಂತರದ ಸ್ಕಾಲರ್ಶಿಪ್” (ಪಿಎಂಎಸ್)” ಅಂಬೇಡ್ಕರ್ ಅವರ ಪ್ರಿಯವಾದ ಯೋಜನೆಯಾಗಿತ್ತು. ಈ ‘ಪಿಎಂಎಸ್’ ಅಡಿಯಲ್ಲಿ ವಾರ್ಶಿಕ ವರಮಾನ 2.5 ಲಕ್ಷಕ್ಕಿಂತ ಕಡಿಮೆ ಇರುವ ಪ.ಜಾತಿ/ಪ.ಪಂಗಡದ ಕುಟುಂಬದ ಮಕ್ಕಳಿಗೆ ಸ್ಕಾಲರ್ಶಿಪ್ ದೊರಕುತ್ತಿತ್ತು. (ಇಂದಿಗೂ ಆದಾಯದ ಮಿತಿಯನ್ನು ಹೆಚ್ಚಿಸಿಲ್ಲ ಮತ್ತು 2013 ರಿಂದ ಸ್ಕಾಲರ್ಶಿಪ್ ಮೊತ್ತವನ್ನು ಹೆಚ್ಚಿಸಿಲ್ಲ)

ಕೇಂದ್ರದಿಂದ ಶೇ. 100 ಪ್ರಮಾಣದಲ್ಲಿ ಆರ್ಥಿಕ ಅನುದಾನ ಬರುವ, ಶೋಷಿತ ಸಮುದಾಯಗಳಿಗೆ ಆರ್ಥಿಕ ನೆರವನ್ನು ಕೊಡುವ, ಶೈಕ್ಷಣಿಕ ನ್ಯಾಯ ಒದಗಿಸುವ ಈ ಸ್ಕಾಲರ್ಶಿಪನ್ನು ಮೋದಿ ಸರಕಾರ ನಿಲ್ಲಿಸುವ ಎಲ್ಲಾ ಸೂಚನೆಗಳಿವೆ.

ಎರಡನೇ ಬಾರಿ ಗೆದ್ದ ನಂತರ ಜುಲೈ 2019ರಲ್ಲಿ ಈ ‘ಪಿಎಂಎಸ್’ ಗೆ ತಿದ್ದುಪಡಿ ಮಾಡಿ ಸಂಪೂರ್ಣ ಕೇಂದ್ರದ ಯೋಜನೆಯಾಗಿದ್ದ (national scheme) ಇದರ ಸ್ವರೂಪವನ್ನು ಕೇಂದ್ರ-ರಾಜ್ಯಗಳ 60:40 ಅನುಪಾತಕ್ಕೆ ಬದಲಿಸಿದೆ. ಅಂದರೆ ಶೇ. 60 ರಶ್ಟು ಕೇಂದ್ರ, ಶೇ. 40 ರಶ್ಟು ರಾಜ್ಯಗಳು ಆರ್ಥಿಕ ಅನುದಾನವನ್ನು ಹಂಚಿಕೊಳ್ಳಬೇಕು.

ಇದನ್ನೂ ಓದಿ: ಉತ್ತರಪ್ರದೇಶ: ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡದ ಕಾರಣಕ್ಕೆ ದಲಿತ ಬಾಲಕಿಗೆ ಬೆಂಕಿಹಚ್ಚಿದ ಕ್ರೂರಿ!

ದಿಢೀರನೆ ಮೇಲೆರಗಿದ ಈ ಜವಬ್ದಾರಿಯನ್ನು ಹೊರಲು ರಾಜ್ಯ ಸರಕಾರಗಳು ತಯಾರಿಲ್ಲ. ಅಲ್ಲದೆ ಕಳೆದ ಎರಡು ವರ್ಶಗಳಿಂದ ಕೇಂದ್ರ ಸರಕಾರವು ಈ ‘ಪಿಎಂಎಸ್’ ಸ್ಕಾಲರ್ಶಿಪ್ ಗೆ ಆರ್ಥಿಕ ಅನುದಾನವನ್ನೂ ಕೊಡುತ್ತಿಲ್ಲ.

2019-20 ರಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 7,150 ಕೋಟಿ ಕೇಳಿದ್ದಕ್ಕೆ ಕೇಂದ್ರ ಹಣಕಾಸು ಇಲಾಖೆಯು ಕೇವಲ 2,927 ಕೋಟಿ ನೀಡಿದೆ. 4,198 ಕೋಟಿ ಮೊತ್ತದ ಕೊರತೆಯ ದುಶ್ಪರಿಣಾಮ ದಲಿತ ಮಕ್ಕಳ ಮೇಲಾಗಿದೆ. ಈ ಹಿಂದೆ 5.8 ಮಿಲಿಯನ್ ಮಕ್ಕಳು ಇದರ ಅನುಕೂಲ ಪಡೆದುಕೊಂಡಿದ್ದರೆ, 2019 ರಲ್ಲಿ ಆ ಸಂಖ್ಯೆ 3 ಮಿಲಿಯನ್ ಗೆ ಕುಸಿದಿದೆ. ಇನ್ನು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಹಣವನ್ನು ಕೊಡದೇ ಇರುವುದರಿಂದ ದಲಿತ ಮಕ್ಕಳಿಗೆ ಸ್ಕಾಲರ್ಶಿಪ್ ಸಿಗುವ ಸಾಧ್ಯತೆಗಳಿಲ್ಲ.

ಇದೆಲ್ಲದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಮಾರ್ಚ್ 2020ರಲ್ಲಿ ಈಗಿರುವ ಎಲ್ಲಾ ಬಗೆಯ ಸ್ಕಾಲರ್ಶಿಪ್ ಯೋಜನೆಗಳನ್ನು ರದ್ದುಗೊಳಿಸಿ, ಎಲ್ಲಾ ಜಾತಿ ಸಮುದಾಯಗಳನ್ನು ‘Pradhan Mantri Young Achievers Scholarship Award Scheme for Vibrant India (PM-YASASVI)’ ಅಡಿಯಲ್ಲಿ ತರಲು ನಿರ್ದರಿಸಲಾಗಿದೆ.

ಇದನ್ನೂ ಓದಿ:ಮೊದಲ ದಲಿತ ರಾಷ್ಟ್ರಪತಿ ಕೆ.ಆರ್ ನಾರಾಯಣನ್ ಸ್ಮರಣೆ: ಡಾ.ಬಿ.ಪಿ.ಮಹೇಶ ಚಂದ್ರ ಗುರು

ಈ ಯೋಜನೆಯ ಅನುಕೂಲ ಪಡೆದುಕೊಳ್ಳಲು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಅಂದರೆ ಸಾಮಾಜಿಕ-ಆರ್ಥಿಕ -ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸದೆ ಕೇವಲ ಮೆರಿಟ್ ಆದಾರದಲ್ಲಿ ಸ್ಕಾಲರ್ಶಿಪ್ ಕೊಡಲು ಮೋದಿ ಸರಕಾರ ನಿರ್ದರಿಸಿದೆ.

ಆದರೆ ಭಾರತದಂತಹ ಜಾತಿ ಅಸಮಾನತೆ ದೇಶದಲ್ಲಿ ಮೆರಿಟ್ ಎನ್ನುವ ಪರಿಕಲ್ಪನೆಯು ‘leagalises the exclusion’ ಉಳ್ಳವರು ಮಾತ್ರ ಮುಂದುವರೆಯುತ್ತಾರೆ. ಮೋದಿ ಸರಕಾರದ ಈ ನಿರ್ದಾರದಿಂದ ಶೋಷಿತ ಸಮುದಾಯಗಳು ಶಿಕ್ಷಣದಿಂದ ವಂಚಿತಗೊಳ್ಳಲಿವೆ. ಜಾತಿ ತಾರತಮ್ಯದ ಈ ದೇಶದಲ್ಲಿ ಓಬಿಸಿ, ಪ. ಜಾತಿ, ಪ. ಪಂಗಡಗಳನ್ನು ಒಂದೇ ತಕ್ಕಡಿಯಲ್ಲಿಡುವುದು ದಲಿತ ಮಕ್ಕಳ ಶಿಕ್ಷಣಕ್ಕೆ ಮಾರಕವಾಗಲಿದೆ.

ಆದರೆ ಈ ಕುರಿತು ಯಾರೂ ತಲೆಕೆಡಿಸಿಕೊಂಡಂತಿಲ್ಲ. ಸಾಮಾಜಿಕ ನ್ಯಾಯದ ಆರಂಬಿಕ ಮೆಟ್ಟಿಲಾದ ಸ್ಕಾಲರ್ಶಿಪ್, ಹಾಸ್ಟೆಲ್ ವ್ಯವಸ್ಥೆಯನ್ನು ಕಳೆದುಕೊಳ್ಳಬಾರದು. ಸಾಮಾಜಿಕ ಸಂಘಟನೆಗಳು ಈ ಕುರಿತು ಗಂಬೀರವಾಗಿ ಆಲೋಚಿಸಬೇಕು.

(ಈ ಬರಹದಲ್ಲಿ ಕನ್ನಡ ನುಡಿಗೆ ಹೊಂದದ ಮಹಾಪ್ರಾಣಗಳನ್ನು ಕೈಬಿಡಲಾಗಿದೆ ಅಥವಾ ಮಿತವಾಗಿ ಬಳಸಲಾಗಿದೆ)

ಇದನ್ನೂ ಓದಿ: ಉತ್ತರಪ್ರದೇಶ: ಮೂತ್ರ ಕುಡಿಸಿ ದಲಿತ ತಂದೆ-ಮಗನ ಮೇಲೆ ಹಲ್ಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

6 COMMENTS

  1. If you stop the scholarship I think soo many people we’re not able to continue their education. Bcz of only scholarship many students are still studying including me..if this is the case we will going to spoil our life’s.

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...