Homeಚಳವಳಿರಾಮನಗರ ಅರವಿಂದ್ ಫ್ಯಾಶನ್ ಲಿಮಿಟೆಡ್ ಕಾರ್ಖಾನೆ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು

ರಾಮನಗರ ಅರವಿಂದ್ ಫ್ಯಾಶನ್ ಲಿಮಿಟೆಡ್ ಕಾರ್ಖಾನೆ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು

ಈ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ 66 ಕಾರ್ಮಿಕರು ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟ್‌ಟೈಲ್ಸ್‌ ವರ್ಕರ್ಸ್‌ ಯೂನಿಯನ್‌ ನೇತೃತ್ವದಲ್ಲಿ ಧರಣಿ ಆರಂಭಿಸಿದ್ದಾರೆ.

- Advertisement -
- Advertisement -

ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹೇರಿರುವ ಲಾಕೌಟ್‌ ವಿರುದ್ಧ ಅಲ್ಲಿನ ಸಾವಿರಾರು ಕಾರ್ಮಿಕರು ಬೀದಿಗಿಳಿದು ಹೋರಾಡುತ್ತಿರುವ ಸಂದರ್ಭದಲ್ಲಿಯೇ ರಾಮನಗರದ ಮತ್ತೊಂದು ಕಂಪನಿ ಲಾಕೌಟ್ ಘೋಷಿಸುವ ಮೂಲಕ ಅಲ್ಲಿನ ಕಾರ್ಮಿಕರನ್ನು ಬೀದಿಗೆ ತಳ್ಳಿದೆ.

ರಾಮನಗರದ ಅರವಿಂದ್ ಬ್ರಾಂಡ್‌ ಲೈಫ್‌ಸ್ಟೈಲ್‌ ಲಿಮಿಟೆಡ್ ಕಾರ್ಖಾನೆ ಲಾಕೌಟ್ ಘೋಷಿಸಿದೆ. ಈ ವೇರ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ 66 ಕಾರ್ಮಿಕರು ಏನು ಮಾಡಬೇಕೆಂದು ದಿಕ್ಕುತೋಚದೆ ಕಾರ್ಖಾನೆಯ ಹೊರಗೆ ಧರಣಿ ಆರಂಭಿಸಿದ್ದಾರೆ. 12-13 ವರ್ಷಗಳಿಂದ ಅಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಏಕಾಏಕಿ ಬೀದಿಗೆ ತಳ್ಳಿದೆ ಕಾರ್ಖಾನೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆಯಿಂದ ಆರಂಭವಾಗಿರುವ ಕಾರ್ಮಿಕರ ಧರಣಿ ಇಂದು ಎರಡನೆ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕ ಇಲಾಖೆಯು ಲಾಕೌಟ್‌ ತೆರವುಗೊಳಿಸಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಆದೇಶ ನೀಡಿದ್ದರೂ ಸಹ ಕಂಪನಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ ಎಂದು ಆರೋಪಿಸಿದ್ದಾರೆ.

ಹೋರಾಟಕ್ಕೆ ಕೈಜೋಡಿಸಿರುವ ಗಾರ್ಮೆಂಟ್ಸ್ ಅಂಡ್ ಟೆಕ್ಸ್ಟ್‌ಟೈಲ್ಸ್‌ ವರ್ಕರ್ಸ್‌ ಯೂನಿಯನ್‌ನ ಪದಾಧಿಕಾರಿ ಜಯರಾಮ್ ಮಾತನಾಡಿ “ಅರವಿಂದ್ ಕಾರ್ಖಾನೆಯಲ್ಲಿ 66 ಕಾರ್ಮಿಕರು ಹಲವು ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ನಮ್ಮನ್ನು ಖಾಯಂ ಮಾಡಬೇಕೆಂದು ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದ್ದೇವೆ. ಹಾಗಾಗಿ ಕಂಪನಿಯು ನಮ್ಮನ್ನು ಖಾಯಂ ಮಾಡುವ ಬದಲು ನಷ್ಟದ ನೆಪ ಹೇಳಿ ಕಾನೂನುಬಾಹಿರವಾಗಿ ಲಾಕೌಟ್ ಘೋಷಿಸಿದೆ. ಆದರೆ ಅದೇ ಸಮಯದಲ್ಲಿ ಅದು ಹೊಸಕೋಟೆ ಬಳಿಯ ಸೂಲಿಬೆಲೆಯಲ್ಲಿ ಹೊಸ ಘಟಕೆ ಆರಂಭಿಸಿದೆ. ಇದು ಅನ್ಯಾಯವಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ನಾವು ಕಾರ್ಮಿಕ ಇಲಾಖೆಯ ಅಪರ ಕಾರ್ಮಿಕ ಆಯುಕ್ತರ (ADLC) ಬಳಿ ಕೇಸು ದಾಖಲಿಸಿ ಸಂಧಾನ ನಡೆಸುತ್ತಿರುವ ಸಂದರ್ಭದಲ್ಲಿಯೇ ಕಾನೂನು ಬಾಹಿರವಾಗಿ ಕಂಪನಿ ಬೀಗ ಹಾಕಿ ಕಾರ್ಮಿಕರನ್ನು ಬೀದಿಪಾಲು ಮಾಡಿದೆ. ಇದು ಐ.ಡಿ ಆಕ್ಟ್ ಸಕ್ಷನ್ 33 ರ ಸ್ಪಷ್ಟ ಉಲ್ಲಂಘನೆಯಾಗಿದೆ. ನಮಗೆ ಸೂಲಿಬೆಲೆ ಘಟಕದಲ್ಲಿ ಕೆಲಸ ನೀಡಬೇಕು ಅಥವಾ ನಾವು ಎಷ್ಟು ವರ್ಷ ದುಡಿದಿದ್ದೇವೆಯೋ ಅದರ ಅರ್ಧ ಸಂಬಳವನ್ನು ಪರಿಹಾರವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಲಾಕೌಟ್‌ ತೆರೆವುಗೊಳಿಸಬೇಕೆಂಬ ಸರ್ಕಾರದ ಆದೇಶ ಧಿಕ್ಕರಿಸುತ್ತಿರುವ ಟೊಯೋಟಾ ಕಂಪನಿ: ಕಾರ್ಮಿಕರ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...